Kerala : ಮೇ 5ರಂದು ಬಿಡುಗಡೆ ಆಗಬೇಕಾಗಿರುವ, ವಿವಾದದ ಕಿಚ್ಚು ಹೊತ್ತಿಸಿರುವ ‘ಲವ್ ಜಿಹಾದ್’ ಕಥೆ ಆಧಾರಿತ ಸಿನಿಮಾ ಎಂಬ ಆಪಾದನೆಗೆ ಗುರಿಯಾಗಿರುವ ‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದ ಬಗ್ಗೆ ರಾಷ್ಟ್ರಮಟ್ಟದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆಯುತ್ತಿದೆ. ಒಂದು ವರ್ಗ ಸಿನಿಮಾವನ್ನು (Demand to ban The Kerala Story) ನಿಷೇಧಿಸಬೇಕು ಎಂದು ಆಗ್ರಹಿಸುತ್ತಿದ್ದರೆ, ಇನ್ನೊಂದು ವರ್ಗ ನಿಷೇಧವೇಕೆ? ಎಂದು ಪ್ರಶ್ನಿಸುತ್ತಿದೆ.

ಈ ಸಿನಿಮಾದಲ್ಲಿರುವ ವಿಷಯಗಳು ತುಂಬಾ ವಿವಾದವನ್ನು ಹುಟ್ಟುಹಾಕಿವೆ.
ಕೇರಳದಲ್ಲಿ (Kerala) ಸಾವಿರಾರು ಮಹಿಳೆಯರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ (conversion to islam) ಮಾಡಿ ನಂತರ
ಅವರನ್ನು ಐಸಿಸ್ ಉಗ್ರ ಸಂಘಟನೆಗೆ (ISIS terrorist organization) ಸೇರಿಸಲಾಗಿದೆ ಎಂಬ ವಿಷಯವನ್ನು ಈ ಚಿತ್ರದ ಟ್ರ್ಯೇಲರ್ನಲ್ಲಿ ತೋರಿಸಲಾಗಿದೆ.
‘ದಿ ಕೇರಳ ಸ್ಟೋರಿ’ ಸಿನಿಮಾ ಬಿಡುಗಡೆಯಗಬಾರದು, ಬಿಡುಗಡೆಗೆ ತಡೆ ನೀಡಬೇಕು ಎಂದು ಕೋರಿ ಸುಪ್ರೀಂ ಕೋರ್ಟ್ಗೆ (Supreme Court) ಮೊದಲೇ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಆ ಅರ್ಜಿಯನ್ನು ಕೋರ್ಟ್ ಆಗಲೇ ತಿರಸ್ಕರಿಸಿದೆ. ಇಷ್ಟೆಲ್ಲ ವಿವಾದಗಳನ್ನು ಎಬ್ಬಿಸಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ 32 ಸಾವಿರ ಹಿಂದೂ (Demand to ban The Kerala Story) ಹುಡುಗಿಯರನ್ನು ಇಸ್ಲಾಂಗೆ ಮತಾಂತರ ಮಡಲಾಗಿದೆ,
ಇದನ್ನೂ ಓದಿ : https://vijayatimes.com/photoshoot-of-divorced-woman/
ಅಲ್ಲದೆ ಬಳಿಕ ಐಸಿಸ್ ಸಂಘಟನೆ ಸೇರಿಸಲಾಗಿದೆ ಎಂಬ ಮಾಹಿತಿಯನ್ನು ಸಾಬೀತು ಮಾಡಿದರೆ ಅವರಿಗೆ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಒಂದು ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದೆ.
ಮುಸ್ಲಿಮರು ಈ ಚಿತ್ರದ ಟಾರ್ಗೆಟ್ ಅಲ್ಲ :
ಈ ‘‘ಸಿನಿಮಾದಲ್ಲಿ ನಾವು ಯಾವುದೇ ಸಮುದಾಯವನ್ನು ಅಥವಾ ಮುಸ್ಲಿಮರನ್ನು ಗುರಿ ಮಾಡಿಕೊಂಡು ಸಿನಿಮಾ ಮಾಡಿಲ್ಲ.
ನಮ್ಮ ಯುವ ಜನರನ್ನು ಭಯೋತ್ಪಾದನೆ ಹೇಗೆ ದಾರಿ ತಪ್ಪಿಸುತ್ತಿದೆ. ಯುವ ಜನರ ಬ್ರೈನ್ ವಾಶ್ ಮಾಡಿ ಅವರನ್ನು ಹೇಗೆ ಉಗ್ರರನ್ನಾಗಿ ಮಾಡಲಾಗುತ್ತಿದೆ.
ಹೆಣ್ಣು ಮಕ್ಕಳನ್ನು ಹೇಗೆಲ್ಲಾ ಬಳಸಿಕೊಳ್ಳಲಾಗಿದೆ ಎಂಬುದನ್ನು ಮಾತ್ರ ನಾವು ಸಿನಿಮಾದಲ್ಲಿ ತೋರಿಸಲಾಗಿದೆ ಎಂದು ‘ದಿ ಕೇರಳ ಸ್ಟೋರಿ’ ಚಿತ್ರ ತಂಡ ಸ್ಪಷ್ಟನೆ ನೀಡಿದೆ.

ನಾವು ಈಗಾಗಲೇ “ಐಸಿಸ್ ಸಂಘಟನೆಯಿಂದ ಹೊರ ಬಂದ ಅನೇಕ ಸಂತ್ರಸ್ತರ ಜತೆ ಮಾತುಕತೆ ನಡೆಸಿ,
ಅವರ ಬದುಕಿನ ಬಗ್ಗೆ ಸುದೀರ್ಘವಾದ ಸಂಶೋಧನೆ ನಡೆಸಿಈ ಸಿನಿಮಾ ಮಾದಿದ್ದೇವೆ,ಇದರಲ್ಲಿ ವಾಸ್ತವಾಂಶಗಳು ಅಡಗಿವೆ” ಎಂದು ಚಿತ್ರದ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಹೇಳಿದ್ದಾರೆ.
- ರಶ್ಮಿತಾ ಅನೀಶ್