- ವರ್ಷದಿಂದ ವರ್ಷಕ್ಕೆ ಡೆಂಗ್ಯೂ ಹರಡುವ ಪ್ರಮಾಣ ಹೆಚ್ಚು
- ಮನೆಯ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿರಸಿದ್ದಲ್ಲಿ ದಂಡ
- ಕಳೆದೊಂದು ವಾರದಿಂದ 210 ಪ್ರಕರಣಗಳು ವರದಿ
Bengaluru: ಸಿಲಿಕಾನ್ ಸಿಟಿ ಬೆಂಗಳೂರು ನಗರದಲ್ಲಿ ಕಳೆದ ಕೆಲ ದಿನಗಳಿಂದ ಮಳೆ ಬರುತ್ತಿರುವ ಕಾರಣದಿಂದಾಗಿ ಸೊಳ್ಳೆಗಳ ಕಾಟ ಹೆಚ್ಚಾಗಿವೆ ಇದರಿಂದಾಗಿ ಡೆಂಗ್ಯೂ (Dengue) ಜ್ವರದ ಪ್ರಕರಣಗಳ ಸಂಖ್ಯೆಯಲ್ಲಿಯೂ ಗಣನೀಯ ಏರಿಕೆ ಆಗಿದೆ .
ಅದರಲ್ಲೂ ಕಳೆದ ಒಂದು ವಾರದಿಂದ 210 ಡೆಂಗ್ಯೂ ಜ್ವರದ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸರಿ ಸುಮಾರು 1582 ಸಕ್ರಿಯ ಡೆಂಗ್ಯೂ ಜ್ವರದ ಪ್ರಕರಣಗಳು ಪತ್ತೆಯಾಗಿವೆ.
ಅಲ್ಲಿಗೆ ಜನವರಿಯಿಂದ ಜುಲೈ ವರೆಗಿನ ಡೆಂಗ್ಯೂ ಪ್ರಕರಣಗಳ ಸಂಖ್ಯೆ 2800 ದಾಟಿದ್ದು .ಇದು ಬೆಂಗಳೂರು ನಗರವಾಸಿಗಳ ಕಳವಳಕ್ಕೆ ಮೂಲ ಕಾರಣವಾಗಿದೆ. ಡೆಂಗ್ಯೂ ಜ್ವರ ಬರುವುದನ್ನು ತಡೆಯಲು ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆಗಳು ಮುಂದಾಗಿದೆ.
ಬೆಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಇದೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಮತ್ತೆ ಕಠಿಣ ಕ್ರಮ ಕೈಗೊಳ್ಳಲು ಹಾಗೂ ದಂಡ ವಿಧಿಸಲು ಮುಂದಾಗಿದೆ.
ಮನೆ ಮುಂದಿರುವ ಗಿಡಗಳ ಕುಂಡಗಳಲ್ಲಿ.ಅಲಂಕಾರಿಕ ತೊಟ್ಟಿಗಳಲ್ಲಿ ಹಾಗೂ ಮನೆಯ ಸುತ್ತಮುತ್ತ ನೀರು ನಿಂತ ಕಡೆಗಳಲ್ಲಿ ಹಾಗೂ ಸ್ವಚ್ಛತೆ ಇಲ್ಲದ ಕಡೆಯಲ್ಲಿ ಡೆಂಗ್ಯೂ ರೋಗವನ್ನು ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದರಿಂದ

ಮನೆ, ಕಚೇರಿ, ಖಾಲಿ ನಿವೇಶನಗಳು ಹಾಗೂ ಪಬ್ಲಿಕ್ ಸ್ಥಳಗಳಲ್ಲಿ ಸ್ವಚ್ಛತೆ ಕಾಪಾಡದವರ ಹಾಗೂ ಕಂಡ ಕಂಡಲ್ಲಿ ಕಸ ಎಸೆಯುವವರ ವಿರುದ್ಧ ದಂಡ ವಿಧಿಸಲಾಗುತ್ತಿದೆ ಎಂದು ಸೂಚನೆ ನೀಡಿದೆ
ಇನ್ನು ನಗರ ಪ್ರದೇಶಗಳಲ್ಲಿ ಮನೆಯ ಮುಂದೆ ಕಸ, ನೀರು ನಿಂತಿರುವುದು ಕಂಡು ಬಂದಲ್ಲಿ 800 ರೂಪಾಯಿದಂಡ ವಿಧಿಸಲಾಗುತ್ತದೆ. ಇನ್ನು ಗ್ರಾಮೀಣ ಪ್ರದೇಶದಲ್ಲಿ 400 ರೂಪಾಯಿ ದಂಡ.
ನಗರ ಪ್ರದೇಶದಲ್ಲಿರುವ ವಾಣಿಜ್ಯ ಸಂಸ್ಥೆ, ಶಾಲಾ ಕಾಲೇಜು, ರೆಸ್ಟೋರೆಂಟ್ , ಹೋಟೆಲ್, ಸೂಪರ್ ಮಾರ್ಕೆಟ್ , ಅಂಗಡಿ , ಪಾರ್ಕ್ , ಥಿಯೇಟರ್ ಮುಂತಾದೆಡೆ ಕಸ ಇಲ್ಲವೇ ಗಲೀಜು ಕಂಡುಬಂದಲ್ಲಿ 2000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಅದೇ ಗ್ರಾಮೀಣ ಪ್ರದೇಶವಾಗಿದ್ದಲ್ಲಿ 1000 ರೂಪಾಯಿ ದಂಡ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ನಗರ ಪ್ರದೇಶದಖಾಲಿ ನಿವೇಶನ , ನಿರ್ಮಾಣ ಕಾರ್ಯ , ಜಮೀನು 4000 ರೂಪಾಯಿ ದಂಡ ವಿಧಿಸಲಾಗುತ್ತದೆ.
ಇನ್ನು ಗ್ರಾಮೀಣ ಪ್ರದೇಶವಾದಲ್ಲಿ 2000 ರೂಪಾಯಿ ದಂಡ ವಿಧಿಸಲಾಗುತ್ತದೆ. ಇನ್ನು ಈ ಕುರಿತಾಗಿ ಖಾಸಗಿ ನಿವೇಶನವಿದ್ದಲ್ಲಿ ಇಲ್ಲವೇ ಖಾಲಿ ಜಾಗ ಇರುವಲ್ಲಿ ಸೊಳ್ಳೆ ಉತ್ಪತ್ತಿ ಆಗುತ್ತಿರುವುದು ಕಂಡು ಬಂದಲ್ಲಿ ಅಲ್ಲಿ ಹತ್ತಿರವಿದ್ದವರಿಗೆ ಇಲ್ಲವೇ ಆ ಪ್ರದೇಶದ ಮಾಲೀಕರಿಗೆ ಮೊದಲಿಗೆ ಎಚ್ಚರಿಕೆ ನೀಡಿ,
ಮುಂದಿನ ದಿನಗಳಲ್ಲಿ ಅದೇ ಮುಂದುವರೆದಿದ್ದರೆ ಮೊದಲು 50 ರೂಪಾಯಿ ದಂಡ ವಿಧಿಸುವ ಕುರಿತು ಕಳೆದ ವರ್ಷ ಹೇಳಲಾಗಿತ್ತು. ನಂತರ ಆ ಸ್ಥಳಗಳು ಪೂರ್ತಿಯಾಗಿ ಸ್ವಚ್ಛವಾಗುವ ತನಕ ಪ್ರತಿ ದಿನವೂ 15 ರೂ. ದಂಡ ವಿಧಿಸಲು ತೀರ್ಮಾನಿಸಲಾಗಿತ್ತು.
ಆದರೆ, ಈ ಸಲ ಯಾವುದೇ ಮುಲಾಜಿಲ್ಲದೆ ದಂಡ ವಿಧಿಸಲು ಇಲಾಖೆ ಮುಂದಾಗಿದೆ.ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.