ಇತ್ತೀಚಿಗೆ ರಾಜ್ಯದಲ್ಲಿ ಡೆಂಗೀ -ಟೈಫಾಯ್ಡ್ (Dengue-Typhoid) ಅಬ್ಬರ ಜೋರಾಗಿರುವ ಬೆನ್ನಲ್ಲೆ ಕನಕಪುರ ಮುಖ್ಯರಸ್ತೆಯಲ್ಲಿರುವ ತುರಹಳ್ಳಿ ಫಾರೆಸ್ಟ್ ಹತ್ತಿರ ಗಾಣಿಗರ ಪಾಳ್ಯದಲ್ಲಿಇದರ ಹೆಸರಲ್ಲಿ ನಡೀತಾ ಇದೆ ಕರಾಳ ಮಾಫಿಯಾ. ಜ್ವರ ಇಲ್ಲದಿದ್ದರೂ ನಕಲಿ ಬ್ಲಡ್ ರಿಪೋರ್ಟ್ ಕೊಟ್ಟು ಪ್ರತಿಷ್ಠಿತ ಆಸ್ಪತ್ರೆಗೆ ದಾಖಲಿಸುತ್ತಿರುವುದನ್ನು ನಮ್ಮ ವಿಜಯಟೈಮ್ಸ್ ರಹಸ್ಯ ಕಾರ್ಯಾಚರಣೆಯಲ್ಲಿ ಕೆಲ ಕ್ಲಿನಿಕ್/ಲ್ಯಾಬ್ಗಳ (Clinic Lab) ಕರಾಳಮುಖ ಬಹಿರಂಗಪಡಿಸಿದೆ.
ಒಂದುಕಡೆ ರಾಜ್ಯದಲ್ಲಿ ಡೆಂಫೀ ಮತ್ತು ಟೈಫಾಯ್ಡ್ ಜ್ವರ ಜನರ ಪ್ರಾಣ ಹಿಂಡುತ್ತಿದ್ದರೆ, ಮತ್ತೊಂದೆಡೆ ಕೆಲ ಕ್ಲಿನಿಕ್ಗಳು ಹಾಗೂ ಲ್ಯಾಬ್ಗಳು ಜನರ ರಕ್ತ ಹೀರುತ್ತಿವೆ. ಕ್ಲಿನಿಕ್ಗಳಲ್ಲಿ ವೈದ್ಯರು ಹಣದ ಆಸೆಗೆ ಬೇಕಾ ಬಿಟ್ಟಿ ರಕ್ತದ ಪರೀಕ್ಷೆ ಮಾಡಲು ಲ್ಯಾಬ್ ಗೆ ಬರೆದು ಕೊಡುತ್ತಿದ್ದಾರೆ. ಪರೀಕ್ಷೆ ಮಾಡಲು ಲ್ಯಾಬ್ ಗೆ ಹೋದರೆ ಸುಳ್ಳು ಬ್ಲಡ್ ರಿಪೋರ್ಟ್ (Blood Report) ಕೊಟ್ಟು ಡೆಂಘೀ, ಟೈಫಾಯ್ಡ್ ಜ್ವರ ಬಂದಿದೆ ಅಂತ ಹೇಳಿ ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ದಾಖಲಿಸುತ್ತಿರುವ ದೊಡ್ಡ ದಂಧೆಯೊಂದು ಬೆಂಗಳೂರಿನಲ್ಲಿ ನಡೆಯುತ್ತಿದೆ.
ಸುಳ್ಳು ಸುಳ್ಳು ಬ್ಲಡ್ ರಿಪೋರ್ಟ್ ಕೊಟ್ಟು ಜನರ ಪ್ರಾಣದ ಜೊತೆ ಚಲ್ಲಾಟ ಆಡುತ್ತಿದ್ದಾರೆ ಎಂಬ ಮಾಹಿತಿಯ ಮೇರೆಗೆ ನಮ್ಮ ತಂಡರುವ ಅಶ್ವಿನಿ ಕ್ಲಿನಿಕ್ (Ashwini Clinic) ಮತ್ತು ವಿಸ್ಮಯ ಲ್ಯಾಬ್ನಲ್ಲಿ ರಹಸ್ಯ ಕಾರ್ಯಾಚರಣೆ ನಡೆಸಿತು. ಮೊದಲು ನಮ್ಮ ತಂಡದ ಆರೋಗ್ಯವಂತ ಸದಸ್ಯನನ್ನು ಜ್ವರ ಬಂದಿರುವಂತೆ ನಾಟಕ ಆಡಿಸಿ ಅಶ್ವಿನಿ ಕ್ಲಿನಿಕ್ಗೆ ಕಳುಹಿಸಿಲಾಯಿತು. ಅಲ್ಲಿ ಪ್ರವೀಣ್ ಕುಮಾರ್ ಪಾಟೀಲ್ (Praveen Kumar) ಅನ್ನೋ ವೈದ್ಯ ಓದಿದ್ದು ಆಯುರ್ವೇದಿಕ್ ಆದರೆ ಇಂಗ್ಲಿಷ್ ಮೆಡಿಸನ್ ಕೊಡುತ್ತಿರುವುದು ಬೆಳಕಿಗೆ ಬಂತು. ನಂತರ ಆ ಡಾಕ್ಟರ್ ಜ್ವರವೇ ಇಲ್ಲದ ನಮ್ಮ ಸಿಬ್ಬಂದಿಯನ್ನು ಪರೀಕ್ಷಿಸಿ ಬ್ಲಡ್ ರಿಪೋರ್ಟ್ ಮಾಡಿಸಲು ಬರೆದುಕೊಟ್ಟರು.
ಜ್ವರ ಇಲ್ಲದಿದ್ದರೂ ಪಾಸಿಟಿವ್
ತದ ಬಳಿಕ ಡಾಕ್ಟರ್ ಪ್ರಿಸ್ಕ್ರಿಪ್ಷನ್ (Doctor Prescription) ಹಿಡಿದುಕೊಂಡು ಸೀದಾ ವಿಸ್ಮಯ ಲ್ಯಾಬ್ಗೆ ಹೋಗಿ ಪರೀಕ್ಷೆಗಂದು ರಕ್ತ ಕೊಡಲಾಯಿತು. ಆ ಬಳಿಕ ನಾವು ಮರುಪರೀಕ್ಷೆಗಾಗಿ ಅಲ್ಲೇ ಪಕ್ಕದಲ್ಲಿದ್ದ ಮೆಡಲ್ ಡಯಾಗ್ನಸ್ಟಿಕ್ ಲ್ಯಾಬ್ಗೆ ಹೋಗಿ ಅದೇ ಡಾಕ್ಟರ್ ಕೊಟ್ಟ ಚೀಟಿಯನ್ನು ಕೊಟ್ಟು ಅಲ್ಲೂ ರಕ್ತದ ಮಾದರಿ ಕೊಡಲಾಯಿತು. ಒಂದು ಗಂಟೆ ನಂತರ ನಮಗೆ ಮೆಡಲ್ ಡಯಾಗ್ನಸ್ಟಿಕ್ (Diagnostics) ಲ್ಯಾಬ್ನಿಂದ ರಿಪೋರ್ಟ್ ಬಂತು. ಅದು ನೆಗೆಟಿವ್ ಆಗಿತ್ತು.
ಆ ಬಳಿಕ ನಾವು ವಿಸ್ಮಯ ಲ್ಯಾಬ್ (Vismaya Lab) ನಿಂದ ರಿಪೋರ್ಟ್ ಪಡೆದೆವು. ನಮಗೆ ಅಚ್ಚರಿಯೇ ಕಾದಿತ್ತು. ಜ್ವರವೇ ಇಲ್ಲದ ನಮ್ಮ ತಂಡದ ಸದಸ್ಯನಿಗೆ ಪಾಸಿಟಿವ್ ಅಂತ ರಿಪೋರ್ಟ್ ಬಂದಿದೆ. ಅದು ಕೂಡ ಟೈಫಾಯ್ಡ್ ಸೆಕೆಂಡ್ ಸ್ಟೇಜ್ ಅಂತ ವರದಿ ಬಂದಿದೆ. ಬಿಎಂಎಸ್ ಓದಿ ಆಲೋಪತಿ ಮೆಡಿಸಿನ್ನೇ ಕೊಡೋ ಡಾ.ಪ್ರವೀಣ್ ಕುಮಾರ್ ಪಾಟೀಲ್ಗೆ (Dr. Praveen Kumar Patil) ನಮ್ಮ ಬ್ಲಡ್ ರಿಪೋರ್ಟ್ ತಗೊಂಡು ಹೋಗಿ ಕೊಟ್ವಿ. ಆತ ಜ್ವರವೇ ಇಲ್ಲದ ನಮ್ಮ ತಂಡದ ಸದಸ್ಯನಿಗೆ ಟೈಫಾಯ್ಡ್ ಬಂದಿದೆ ತಕ್ಷಣ ಅಡ್ಮಿಟ್ ಮಾಡ್ಬೇಕು ಅಂತ ಹೇಳಿ ಪ್ರತಿಷ್ಠಿತ ಆಸ್ಪತ್ರೆಗೆ ರೆಫರ್ ಮಾಡಿದ್ರು.
ರೋಗವೇ ಇಲ್ಲದವರಿಗೆ ಡೆಂಘಿ ರಕ್ತ ಪರೀಕ್ಷೆ ಹೆಸರಲ್ಲಿ ಲ್ಯಾಬ್ ಗಳು ಜನರ ಸುಲಿಗೆಗೆ ಇಳಿದ ಕಾರಣ ರಾಜ್ಯ ಸರ್ಕಾರ ಇದಕ್ಕೆ ಕಡಿವಾಣ ಹಾಕಲು ರಕ್ತ ಪರೀಕ್ಷೆಯ ಫೀಸನ್ನು 250 ರಿಂದ 300 ರೂಪಾಯಿ ಗೆ ನಿಗದಿ ಮಾಡಿತ್ತು. ಆದರೆ ಡಾ.ಪ್ರವೀಣ್ ಅವರ ವಿಸ್ಮಯ ಲ್ಯಾಬ್ ನಲ್ಲಿ ರಕ್ತಪರೀಕ್ಷೆಗೆ ಬರೋಬ್ಬರಿ 800 ರೂಪಾಯಿ ತಗೋತಾರೆ. ಈ ಬಗ್ಗೆ ಪ್ರಶ್ನಿಸಿದ್ರೆ ನಾವು ಬಡವರ ಸೇವೆ ಮಾಡ್ತೇವೆ ಅಂತ ಸುಳ್ಳು ಹೇಳ್ತಾರೆ.
ಹೇಗಿದೆ ನೋಡಿ ಈ ವೈದ್ಯರ ಕಳ್ಳಾಟಗಳು. ಇವರಿಗೆ ರೋಗಿಗಳ ಪ್ರಾಣಕ್ಕಿಂತ ಹಣ ಕಮಿಷನ್ನೇ ಮುಖ್ಯ. ಆರೋಗ್ಯವಂತರಿಗೂ ಡೆಂಘಿ ಇದೆ, ಟೈಫಾಯ್ಡ್ ಇದೆ ಅಂತ ಬ್ಲಡ್ ರಿಪೋರ್ಟ್ ಕೊಟ್ಟು ಜನರ ಜೀವ ಹಾಗೂ ಜೀವನದ ಜೊತೆ ಚಲ್ಲಾಟ ಆಡೋ ಇಂಥ ಫೇಕ್ ಡಾಕ್ಟರ್ (Fake Doctors) ಗಳ ವಿರುದ್ಧ ಆರೋಗ್ಯ ಸಚಿವರು ಕಠಿಣ ಕ್ರಮ ಕೈಗೊಳ್ಳಬೇಕು. ಇಂಥಾ ನಕಲಿ ಲ್ಯಾಬ್ಗಳಿಗೆ ಬೀಗ ಹಾಕಬೇಕು ಅನ್ನೋದು ವಿಜಯಟೈಮ್ಸ್ (Vijayatimes) ಆಗ್ರಹವಾಗಿದೆ.