Wayanad: ದೇವರ ನಾಡು ಎಂದೇ ಕರೆಸಿಕೊಳ್ಳುವ ಕೇರಳದ ವಯನಾಡಿನಲ್ಲಿ (Wayanad, Kerala) ಕಳೆದ ಜುಲೈ 13 ರಂದು ದೇಶ ಹಿಂದೆಂದೂ ಕಂಡು ಕೇಳರಿಯದ ಭೀಕರ ಭೂಕುಸಿತ (Terrible landslide) ಉಂಟಾಗಿತ್ತು. ಈ ಒಂದು ದುರ್ಘಟನೆಯಲ್ಲಿ ಸುಮಾರು 231 ಜನರು ದಾರುಣ ಅಂತ್ಯ ಕಂಡಿದ್ದರು. ಇಡೀ ದೇಶಕ್ಕೆ ದೇಶವೇ ವಯನಾಡಿನಲ್ಲಾದ (Wayanad) ದುರಂತ ಕಂಡು ಮಮ್ಮಲ ಮರುಗಿತ್ತು. ಹಲವಾರು ಸೆಲೆಬ್ರೆಟಿಗಳು, ಉದ್ಯಮಿಗಳು (Celebrities, Businessmen) ಕುಸಿದ ವಯನಾಡನ್ನು ಮತ್ತೆ ಹೊಸದಾಗಿ ಕಟ್ಟಲು ಹೆಗಲಾಗಿ ನಿಂತಿದ್ದರು. ಕೇರಳ ಸರ್ಕಾರ ಈ ಭೀಕರ ದುರಂತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಅಂತ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು. ದುರಂತ ನಡೆದು ಈಗಾಗಲೇ ನಾಲ್ಕು ತಿಂಗಳು ಕಳೆದಿದೆ. ಸದ್ಯ ಕೇಂದ್ರ ಗೃಹ ಸಚಿವಾಲಯ (Ministry of Home Affairs) ಕೇರಳದ ವಯನಾಡಿನಲ್ಲಿ ನಡೆದ ಭೀಕರ ದುರಂತವನ್ನು ರಾಷ್ಟ್ರೀಯ (National) ವಿಪತ್ತು ಎಂದು ಗುರುತಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಇನ್ನು ಈ ಕುರಿತಾಗಿ ಗೃಹ ಇಲಾಖೆಯ (Home Department) ರಾಜ್ಯ ಖಾತೆ ಸಚಿವರಾದ ಕೆ.ವಿ.ಥಾಮಸ್ (KV Thomas) ಪತ್ರ ಮುಖೇನ ಕೇರಳದ ಜನಪ್ರತಿನಿಧಿಗಳಿಗೆ ಸ್ಪಷ್ಟ ಪಡಿಸಿದ್ದಾರೆ. ವಯನಾಡಿನಲ್ಲಿ ನಡೆದ ವಿಪತ್ತನ್ನು ರಾಷ್ಟ್ರೀಯ ವಿಪತ್ತು (National disaster) ಎಂದು ಗುರುತಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ ಹಾಗೂ ಕೇಂದ್ರ ವಿಪತ್ತು (Central disaster) ಪ್ರತಿಕ್ರಿಯೆ ನಿಧಿಗಳ ಮಾರ್ಗಸೂಚಿಗಳ ಪ್ರಕಾರ, ಯಾವುದೇ ವಿಪತ್ತನ್ನು ರಾಷ್ಟ್ರೀಯ ವಿಪತ್ತು ಎಂದು ಅಧಿಕೃತವಾಗಿ ಘೋಷಿಸುವ ನಿಬಂಧನೆಗಳಿಲ್ಲ ಎಂದು ಹೇಳಿದ್ದಾರೆ. ಅವರು ಹೇಳುವ ಪ್ರಕಾರ ವಿಪತ್ತನ್ನು ನಿರ್ವಹಿಸುವ ಪ್ರಥಮ ಜವಾಬ್ದಾರಿ ರಾಜ್ಯ ಸರ್ಕಾರಗಳದ್ದಾಗಿರುತ್ತದೆ(State Governments.) . ಕೇಂದ್ರ ಸರ್ಕಾರವು ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ ಹಾಗೂ ಹಣಕಾಸಿನ ನೆರವಿಗೆ ಬರುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗಾಗಲೇ ಈ ಕುರಿತಾಗಿ ಗೃಹ ಇಲಾಖೆಯಿಂದ ನೀಡಲಾದ ಪತ್ರದಲ್ಲಿ ಮತ್ತೊಂದು ಪ್ರಮುಖ ಅಂಶವನ್ನು ಉಲ್ಲೇಖಿಸಲಾಗಿದೆ. ಈ ಹಿಂದೆ ಕೂಡ ಕೇರಳ ಸರ್ಕಾರ (Kerala Govt) ಕೇಂದ್ರ ಸರ್ಕಾರದಿಂದ ಸಾಕಷ್ಟು ಬೆಂಬಲವನ್ನು ಪಡೆದುಕೊಂಡಿದೆ. ಸುಮಾರು 386 ಕೋಟಿ ರೂಪಾಯಿ( 291 ಕೋಟಿ ರೂಪಾಯಿ ಕೇಂದ್ರ ಹಾಗೂ 96.80 ಕೋಟಿ ರೂಪಾಯಿ ರಾಜ್ಯದ ಪಾಲು) ಪರಿಹಾರವಾಗಿ ನೀಡಲಾಗಿದೆ. ಕೇರಳದ ಎಸ್ಡಿಆರ್ಎಫ್ (SDRF) ಜುಲೈ 31 2024-25 ರ ಸಾಲಿನನ್ವಯ ಮೊದಲ ಕಂತಾಗಿ ಸುಮಾರು 145.60 ಕೋಟಿ ರೂಪಾಯಿಯನ್ನು ಪರಿಹಾರ ರೂಪದಲ್ಲಿ ನೀಡಲಾಗಿದೆ. ಇವೆಲ್ಲವೂ ಕೂಡ ಮುಖ್ಯಮಂತ್ರಿ ಪರಿಹಾರ ನಿಧಿಗೆ ಹರಿದು ಬಂದ ಧನದ ಹೊರತಾಗಿ ನೀಡಲಾಗಿರುವ ಹಣಕಾಸಿನ ಸಹಾಯ ಹಾಗಾಗಿ ಮತ್ತೆ ಪರಿಹಾರ ನೀಡುವುದು ಅಸಾಧ್ಯ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.