• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home Vijaya Time

ಇದೇ ರೀತಿ ಮುಂದುವರಿದ್ರೆ ದೇಶ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ. RSS ಮೂಲಕ ಬಿಜೆಪಿ ಸಂಘಟನೆ ಮಾಡ್ತಿದೆ : ಹೆಚ್ ಡಿ ಕುಮಾರಸ್ವಾಮಿ

padma by padma
in Vijaya Time, ರಾಜಕೀಯ, ರಾಜ್ಯ
ಇದೇ ರೀತಿ ಮುಂದುವರಿದ್ರೆ ದೇಶ ಸಂಪೂರ್ಣ ನಾಶವಾಗುವ ದಿನಗಳು ದೂರವಿಲ್ಲ. RSS ಮೂಲಕ ಬಿಜೆಪಿ ಸಂಘಟನೆ ಮಾಡ್ತಿದೆ :  ಹೆಚ್ ಡಿ ಕುಮಾರಸ್ವಾಮಿ
0
SHARES
0
VIEWS
Share on FacebookShare on Twitter

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮತ್ತೆ ಪಶ್ಚಾತ್ತಾಪದ ಮಾತುಗಳನ್ನ ಆಡಿದ್ದಾರೆ. ಪಕ್ಷ ಉಳಿಸಿಕೊಳ್ಳಲು ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು ಅಂದ್ರು ಕುಮಾರಸ್ವಾಮಿ.

ಬೆಂಗಳೂರು: ಆರ್ ಎಸ್ ಎಸ್ ಮೂಲಕ ಬಿಜೆಪಿ ಪಕ್ಷ ಸಂಘಟನೆ ಮಾಡ್ತಿದೆ. ನಾವೆಲ್ಲಾ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಈಗಲೇ ಎಚ್ಚೆತ್ತುಕೊಳ್ಳದೇ ಹೋದರೆ ಅಪಾಯ ಕಾದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಶಿವಾಜಿ ನಗರದಲ್ಲಿ ನಡೆದ ಪಕ್ಷ ಸಂಘಟನಾ ಕಾರ್ಯಕ್ರಮಲ್ಲಿ ಎಚ್ಚರಿಸಿದ್ರು.

ಪಕ್ಷವನ್ನು ಉಳಿಸಿಕೊಳ್ಳುವ ಸಲುವಾಗಿ ಅನಿವಾರ್ಯವಾಗಿ ಈ ಹಿಂದೆ ಬಿಜೆಪಿ ಜೊತೆ ಹೋಗಬೇಕಾಯಿತು. ಇಲ್ಲದಿದ್ರೆ ಜೆಡಿಎಸ್ ಪಕ್ಷ ಸರ್ವನಾಶವಾಗ್ತಿತ್ತು ಎಂದು ಕುಮಾರಸ್ವಾಮಿ ಅಂದಿನ ಬಿಜೆಪಿ ಜೊತೆಗಿನ ಮೈತ್ರಿಯ ರಹಸ್ಯ ಬಿಚ್ಚಿಟ್ರು.

ಕಳೆದ 2004ರಲ್ಲಿ ಯಾವ ಪಕ್ಷಕ್ಕೂ ಬಹುಮತ ಬಂದಿರಲಿಲ್ಲ. ಹಲವಾರು ರೀತಿಯ ಒತ್ತಡಗಳನ್ನು ಹಾಕಿದ್ರೂ ಬಿಜೆಪಿ ಜೊತೆ ಹೋಗಿರಲಿಲ್ಲ. ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಆಗಿತ್ತು. ಆದರೆ ಕಾಂಗ್ರೆಸ್ ಪಕ್ಷದ ನಾಯಕರನ್ನು ಬೇರ್ಪಡಿಸುವ ಕುತಂತ್ರಗಳನ್ನು ಕಾಂಗ್ರೆಸ್ ಮಾಡಿತು. ಹಾಗಾಗಿ ಪಕ್ಷವನ್ನು ಉಳಿಸಿಕೊಳ್ಳಲು ಬಿಜೆಪಿ ಜೊತೆ ಅನಿವಾರ್ಯವಾಗಿ ಹೋಗಬೇಕಾಯಿತು. ಇದೊಂದು ನಾವು ಮಾಡಿದ ತಪ್ಪು ಎಂದು ಹೇಳಿದ್ದಾರೆ.

ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ನವರೇ ಕಾರಣ.

 ಕರ್ನಾಟಕದಲ್ಲಿ ನಾವು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ನವರೇ ಕಾರಣ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಇದ್ದಾಗಲೂ ಅಲ್ಪಸಂಖ್ಯಾತರ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಿರಲಿಲ್ಲ. ದೇವೇಗೌಡರು ಪ್ರಧಾನಿ ಆಗಿದ್ದಾಗ ಅಲ್ಪಸಂಖ್ಯಾತರಿಗಾಗಿ ಅನೇಕ ಕಾರ್ಯಕ್ರಮಗಳನ್ನು ತಂದಿದ್ದರು. ಇಂದಿಗೂ ಕಾಂಗ್ರೆಸ್ ನಾಯಕರು ಜೆಡಿಎಸ್ ಅನ್ನು ಬಿಜೆಪಿಯ ಬಿ ಟೀಂ ಅಂತಾ ಅಪಪ್ರಚಾರ ಮಾಡಿದ್ದಾರೆ. ಹಾಗಾಗಿ ಮುಸಲ್ಮಾನರು ನಮ, ಪಕವನ ಅನುಮಾನದಿಂದ

ನೋಡುವಂತಾಯಿತು. ಹಾಗಾಗಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಲು ಕಾರಣವಾಯಿತು.

ನಾವೆಲ್ಲಾ ಎಚ್ಚರಿಕೆ ಹೆಜ್ಜೆ ಇಡಬೇಕು. ಎಚ್ಚೆತ್ತುಕೊಳ್ಳದೇ ಹೋದರೆ ಅಪಾಯ ಕಾದಿದೆ..

ಆರ್ ಎಸ್ ಎಸ್ ಮೂಲಕ ಬಿಜೆಪಿ ತಮ್ಮ ಸಂಘಟನೆ ಮಾಡ್ತಿದೆ. ನಾವೆಲ್ಲಾ ಎಚ್ಚರಿಕೆ ಹೆಜ್ಜೆ ಇಡಬೇಕು. ಎಚ್ಚೆತ್ತುಕೊಳ್ಳದೇ ಹೋದರೆ ಅಪಾಯ ಕಾದಿದೆ. ಕಾಂಗ್ರೆಸ್ ನಮಗೆ ಎಷ್ಟೆಲ್ಲಾ ತೊಂದರೆ ಕೊಟ್ಟರೂ ನಾವು ಅವರ ಜೊತೆಯೇ ಸರ್ಕಾರ ಮಾಡಬೇಕಾಯಿತು. ಆಗಲೂ ಸರ್ಕಾರ ಹೋಗಲು ಕಾರಣ ಯಾರು ? ಕಾಂಗ್ರೆಸ್ ನಾಯಕರ ಪಿತೂರಿಯಿಂದಲೇ ಮೈತ್ರಿ ಸರ್ಕಾರ ಪತನವಾಯ್ತು.

ಕಲಬುರಗಿ ಪಾಲಿಕೆಯಲ್ಲಿ ನಾವು ಗೆದ್ದಿದ್ದೇ ನಾಲ್ಕು ಸ್ಥಾನಗಳು. ನಮಗೆ ಹತ್ತರಿಂದ ಹನ್ನೆರಡು ಸ್ಥಾನಗಳು ಬರಬೇಕಿತ್ತು. ಆದರೆ ಕಾಂಗ್ರೆಸ್ ನಡವಳಿಕೆಯಿಂದ ನಮಗೆ ಹಿನ್ನಡೆ ಆಗಿದೆ. ನಾವು ಗೆದ್ದಿದ್ದು ನಾಲ್ಕೆಳ ಸ್ಥಾನ ಆದರೂ ನಿರ್ಣಾಯಕ ಸ್ಥಾನದಲ್ಲಿ ಇದ್ದೇವೆ. ಜೆಡಿಎಸ್ ಶಕ್ತಿ ಕುಂದಿಲ್ಲ. ಅಲ್ಪಸಂಖ್ಯಾತರು ನಮ್ಮ ಬೆಂಬಲಕ್ಕೆ ಇದ್ದರೆ ಬಿಜೆಪಿಯನ್ನು ಸಂಪೂರ್ಣ ಕಿತ್ತು ಹಾಕಲು ಸಿದ್ಧರಿದ್ದೇವೆ.

ನಾವೇನೂ ಬಿಜೆಪಿ ಪಕ್ಷದ ಅಡಿಯಾಳುಗಳಲ್ಲ.. ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ದೇವೇಗೌಡರ ಜೊತೆ ಮಾತಾಡಿದ್ದಾರೆ. ಬಿಜೆಪಿ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದು ಮಾತಾಡಿದ್ದಾರೆ. ಆದರೆ ಸಿದ್ದರಾಮಯ್ಯ ಆಗಲಿ, ಶಿವಕುಮಾರ್ ಆಗಲಿ ಮಾತಾಡಲು ಬರಲಿಲ್ಲ ಎಂದು ಹೇಳಿವ ಮೂಲಕ ಕಾಂಗ್ರೆಸ್ ನವರು ಕೇಳಿದ್ರೆ ನಾವು ಬೆಂಬಲ ಕೊಡಲು ಸಿದ್ಧ ಎಂಬ ಸಂದೇಶವನ್ನ ಈ ಮೂಲಕ ಹೆಚ್‌ಡಿ ಕುಮಾರಸ್ವಾಮಿ ರವಾನಿಸಿದ್ದಾರೆ.

ಜೆಡಿಎಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಸಹಕಾರ ಬಹಳ ಅಗತ್ಯವಿದೆ

ತಮಿಳುನಾಡಿನಲ್ಲಿ ಡಿಎಂಕೆ ಪಕ್ಷ ಅಧಿಕಾರಕ್ಕೆ ಬರಲು ಕಾರಣ ಅವರು ಬಿಜೆಪಿಯ ಓಟಕ್ಕೆ ಕಡಿವಾಣ ಹಾಕಿರೋದು. ಮುಂದೆ ಜೆಡಿಎಸ್ ಅಧಿಕಾರಕ್ಕೆ ಬರಲು ಅಲ್ಪಸಂಖ್ಯಾತರ ಸಹಕಾರ ಬಹಳ ಅಗತ್ಯವಿದೆ. ಪ್ರಾದೇಶಿಕ ಪಕ್ಷವಾಗಿ ನಾವು ಎರಡೂ ರಾಷ್ಟ್ರೀಯ ಪಕ್ಷಗಳ ಜೊತೆ ಮೈತ್ರಿ ಸರ್ಕಾರ ಮಾಡಿ ನೋಡಿದ್ದೇವೆ. ಯಾವುದೇ ಕಾರಣಕ್ಕೂ ಬಿಜೆಪಿ ಬೆಳೆಯಲು ಬಿಡಬಾರದು. 2023ರಲ್ಲಿ ಬಿಜೆಪಿಯನ್ನು ಕಟ್ಟಿ ಹಾಕಿದರೆ ಕೇಂದ್ರದಲ್ಲೂ ಕೂಡಾ ಕಟ್ಟಿ ಹಾಕಬಹುದು, ಕಾಂಗ್ರೆಸ್ ನಾಯಕರ ಕುತಂತ್ರದ ಮಾತುಗಳಿಗೂ ಬಲಿಯಾಗಬೇಡಿ ಎಂದರು.

ಇಡೀ ರಾಜ್ಯದಲ್ಲಿ ಜೆಡಿಎಸ್ ಪಕ್ಷದ ಪರವಾಗಿ ಜನರ ಭಾವನೆ ಬದಲಾಗುತ್ತಿದೆ. ನಮ್ಮ ಪಕ್ಷವನ್ನು ಮುಗಿಸಲು ಕಾಯುತ್ತಿರುವವರಿಗೆ ಜನತೆ ಮುಂದಿನ ಚುನಾವಣೆಯಲ್ಲಿ ಉತ್ತರ ಕೊಡಲಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ಸರ್ಕಾರದ ವೈಫಲಗಳ ಬಗ್ಗೆ ಅಧಿವೇಶನದಲ್ಲಿ ಹೋರಾಟ ನಡೆಸುತ್ತೇವೆ. ಸರ್ಕಾರ ಕೊರೊನಾ, ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲವಾಗಿದೆ. ಇದರ ಬಗ್ಗೆ ಸದನದಲ್ಲಿ ಗಗಗ ಗೊತೆ ಹೋರಾಡುತ್ತೇವೆ ಎಂದು ಹೆಚ್‌ಡಿಕೆ ಹೇಳಿದ್ರು.

ಸಿದ್ದರಾಮಯ್ಯ ಆಗಲಿ, ಶಿವಕುಮಾರ್ ಆಗಲಿ ಮಾತಾಡಲು ಬರಲಿಲ್ಲ

ನಮಗೆ ಕಲಬುರಗಿ ಮೇಯರ್ ಸ್ಥಾನ ಮುಖ್ಯ ಅಲ್ಲ

ಕಲಬುರಗಿ ಮೈತ್ರಿ ಬಗ್ಗೆ ನಾಳೆ ಸಭೆ ಕರೆದಿದ್ದೇವೆ. ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನಕ್ಕೆ ಬರುತ್ತೇವೆ, ಆರ್.ಅಶೋಕ್ ನಿನ್ನೆ ನನ್ನನ್ನ ಭೇಟಿ ಮಾಡಿದ್ದರು. ಅವರು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ಎಲ್ಲವನ್ನೂ ಗಮನದಲ್ಲಿಟ್ಟುಕೊಂಡಿದ್ದೇವೆ. ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಅಂತಿಮವಾಗಿ ಏನು ತೀರ್ಮಾನ ತೆಗೆದುಕೊಳ್ತಾರೋ ಅದಕ್ಕೆ ಬದ್ಧರಾಗಿ ಇರ್ತೇವೆ. ನಮಗೆ ಕಲಬುರಗಿ ಮೇಯರ್ ಸ್ಥಾನ ಮುಖ್ಯ ಅಲ್ಲ. ಅದಕ್ಕಿಂತ ಮುಂದಿನ ಚುನಾವಣೆಯಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದಷ್ಟೇ ಮುಖ್ಯ. 2023ರ ಚುನಾವಣೆಯನ್ನ ಗುರಿಯಾಗಿಟ್ಟುಕೊಂಡು ತೀರ್ಮಾನ ತೆಗೆದುಕೊಳ್ಳೇವೆ ಎಂದು ಇದೇ ವೇಳೆ ಹೆಚ್‌ಡಿಕೆ ಹೇಳಿದ್ದಾರೆ.

Related News

ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್
Vijaya Time

ಕೊಲ್ಹಾಪುರದಲ್ಲಿ ಭುಗಿಲೆದ್ದ ಹಿಂಸಾಚಾರ, ನಿಷೇಧಾಜ್ಞೆ ಜಾರಿ, ಬೆಳಗಾವಿಯಲ್ಲಿ ಹೈ ಅಲರ್ಟ್

June 8, 2023
ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್‌ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ
Vijaya Time

ಸರ್ಕಾರ ಮದ್ಯ ದರ ಹೆಚ್ಚಳ ಮಾಡಿಲ್ಲ, ಬಿಯರ್‌ ಕಂಪೆನಿಗಳಿಂದಲೇ ಬೆಲೆ ಏರಿಕೆ: ಅಬಕಾರಿ ಇಲಾಖೆ ಸ್ಪಷ್ಟನೆ

June 8, 2023
ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್
ರಾಜ್ಯ

ಸರಾಸರಿ ದಾಟಿದ್ರೆ ವಿದ್ಯುತ್ ಬಿಲ್ ಕಟ್ಟಲೇಬೇಕು : ಇಂಧನ ಸಚಿವ ಕೆ.ಜೆ.ಜಾರ್ಜ್

June 7, 2023
ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಖಚಿತ: ಯಾವೆಲ್ಲಾ ಪಠ್ಯಗಳಿಗೆ ಬಿಳಲಿದೆ ಕತ್ತರಿ?
ರಾಜ್ಯ

ಶಾಲಾ ಪಠ್ಯಪುಸ್ತಕ ಪರಿಷ್ಕರಣೆ ಖಚಿತ: ಯಾವೆಲ್ಲಾ ಪಠ್ಯಗಳಿಗೆ ಬಿಳಲಿದೆ ಕತ್ತರಿ?

June 7, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.