- ದೇವನಹಳ್ಳಿ ಭೂಸ್ವಾಧೀನ ಅಧಿಸೂಚನೆ ಹಿಂಪಡೆದ ರಾಜ್ಯ ಸರ್ಕಾರ.
- ಏರೋಸ್ಪೇಸ್ ಕಂಪನಿಗಳಿಗೆ ಗಾಳ ಹಾಕಿದ ನಾಯ್ಡು ಪುತ್ರ! (Devanahalli land acquisition blocked)
- ಆಂಧ್ರಪ್ರದೇಶದಲ್ಲಿ ಕರ್ನಾಟಕಕ್ಕಿಂತ ಸದೃಢ ಕೈಗಾರಿಕೆ ನೀತಿ ಎಂದ ನಾಯ್ಡು ಪುತ್ರ.
Bengaluru: ಹಲವು ವರ್ಷಗಳಿಂದ ರೈತ ಮತ್ತು ನಾಗರಿಕ ಸಂಘಟನೆಗಳ(Civil organization) ಸುದೀರ್ಘ ಹೋರಾಟದ ಫಲವಾಗಿ,
ದೇವನಹಳ್ಳಿಯಲ್ಲಿ ಏರೋಸ್ಪೇಸ್ ಪಾರ್ಕ್(Aerospace Park in Devanahalli) ನಿರ್ಮಾಣಕ್ಕಾಗಿ ನಡೆಯುತ್ತಿದ್ದ ಭೂಸ್ವಾಧೀನ ಪ್ರಕ್ರಿಯೆಯನ್ನು(Land acquisition process), ಮುಖ್ಯಮಂತ್ರಿ ಸಿದ್ದರಾಮಯ್ಯ(CM Siddaramaiah) ನೇತೃತ್ವದ ರಾಜ್ಯ ಸರ್ಕಾರ ಶಾಶ್ವತವಾಗಿ ರದ್ದುಗೊಳಿಸಿದೆ.
ಸರ್ಕಾರದ ಈ ನಿರ್ಧಾರವನ್ನು ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ರೈತ ಸಂಘಟನೆಗಳು(Farmer’s Organization) ಸ್ವಾಗತಿಸಿವೆ.
ಆದರೆ ಇದೇ ಅವಕಾಶವನ್ನು ಬಳಸಿಕೊಂಡಿರುವ ನೆರೆಯ ಆಂಧ್ರಪ್ರದೇಶ, ಏರೋಸ್ಪೇಸ್ ಕಂಪನಿಗಳು ತನ್ನತ್ತ ಮುಖ ಮಾಡುವಂತೆ ಮನವಿ ಮಾಡಿದೆ.

ಅಲ್ಲದೇ ಈ ಕಂಪನಿಗಳಿಗೆ ಬೇಕಾದ ಅಗತ್ಯ ಮೂಲಸೌಕರ್ಯವನ್ನು ಒದಗಿಸುವ ಭರವಸೆಯನ್ನೂ ನೀಡಿದೆ.
ಇನ್ನು ಈ ಕುರಿತು ತಮ್ಮ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಆಂಧ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಮತ್ತು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು(N. Chandrababu Naidu) ಪುತ್ರ ನಾರಾ ಲೋಕೇಶ್(Nara Lokesh), ಏರೋಸ್ಪೇಸ್ ಕಂಪನಿಗಳಿಗೆ ಆಂಧ್ರ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಲು ಸಿದ್ಧವಿದೆ ಎಂದು ಭರವಸೆ ನೀಡಿದ್ದಾರೆ.
ಕರ್ನಾಟಕದಲ್ಲಿ ಏರೋಸ್ಪೇಸ್ ಪಾರ್ಕ್ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ ಎಂದು ಕೇಳಿ ವಿಷಾದವಾಯಿತು. ಪ್ರಿಯ ಏರೋಸ್ಪೇಸ್ ಉದ್ಯಮಿಗಳೇ ನಾನು ನಿಮಗಾಗಿ ಉತ್ತಮ ಯೋಕಜನೆಯೊಂದನ್ನು ಹೊಂದಿದ್ದೇನೆ.
ನೀವು ಆದಷ್ಟು ಬೇಗ ಆಂಧ್ರಪ್ರದೇಶದತ್ತ(Andhra Pradesh) ಮುಖ ಮಾಡಿ. ಅತ್ಯುತ್ತಮ ದರ್ಜೆಯ ಪ್ರೋತ್ಸಾಹಕಗಳು ಮತ್ತು 8,000 ಎಕರೆಗಳಿಗೂ ಹೆಚ್ಚು ಬಳಸಲು ಸಿದ್ಧವಾದ ಭೂಮಿ ಹೊಂದಿರುವ ಆಕರ್ಷಕ ಏರೋಸ್ಪೇಸ್ ನೀತಿಯನ್ನು(Aerospace policy) ನಾವು ಹೊಂದಿದ್ದೇವೆ.
ಶೀಘ್ರದಲ್ಲೇ ನಿಮ್ಮನ್ನು ಮಾತುಕತೆಯ ಮೇಜಿನ ಬಳಿ ನೋಡುವ ಭರವಸೆ ಇದೆ ಎಂದು ನಾರಾ ಲೋಕೇಶ್ ತಮ್ಮ ಎಕ್ಸ್ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ತಮ್ಮ ಪೋಸ್ಟ್‌ನಲ್ಲಿ ನಾರಾ ಲೋಕೇಶ್ ಅವರು ಬೆಂಗಳೂರಿನ(Bangalore) ಹೊರಗೆ ಎಂಬ ಪದ ಬಳಸಿದ್ದು, ಕರ್ನಾಟಕವು(Karnataka) ಸ್ವಾಧೀನಪಡಿಸಿಕೊಳ್ಳಲು ಆಶಿಸುತ್ತಿದ್ದ ಆದರೆ ರೈತರ ಬೃಹತ್ ಪ್ರತಿಭಟನೆಗಳ ನಂತರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈ ಬಿಡುವ ತೀರ್ಮಾನವನ್ನು ಅಪಹಾಸ್ಯ ಮಾಡಿದಂತಿದೆ.
ಈ ಜಾಗ ಬೆಂಗಳೂರು ಆಂಧ್ರಪ್ರದೇಶದ ಗಡಿಯ ಸಮೀಪದಲ್ಲಿರುವುದಿರಂದ ಈ ಭಾಗದಲ್ಲೇ ಏರೋಸ್ಪೇಸ್ ಉದ್ಯಮಗಳಿಗೆ ನೆಲೆ ನೀಡುವ ಮೂಲಕ ಲಾಭ ಮಾಡಿಕೊಳ್ಳಲು ಆಂಧ್ರ ಕುತಂತ್ರ ಹೆಣೆದಿದೆ.
ಈ ಆಹ್ವಾನವನ್ನು ಉದ್ಯಮಿಗಳು ಸ್ವೀಕರಿಸುತ್ತಾರಾ? ಅಥವಾ ಕರ್ನಾಟಕದಲ್ಲೇ ಬೇರೆ ಕಡೆ ಭೂಮಿ ಪಡೆಯುತ್ತಾರಾ ಎಂಬುದು ಸದ್ಯದ ಪ್ರಶ್ನೆಯಾಗಿದೆ.
ರಾಜ್ಯ ಸರ್ಕಾರ(State Govt) ಇದನ್ನು ಮನಗಂಡು ಬೆಂಗಳೂರಿಗೆ ಸಮೀಪವೇ ಏರೋಸ್ಪೇಸ್ ಪಾರ್ಕ್ ನಿರ್ಮಾಣಕ್ಕೆ ಬೇರೊಂದು ಜಾಗ ನೀಡುವ ಚಿಂತನೆಯಲ್ಲಿದೆಯೇ ಎಂಬುದು ಮುಂದೆ ತಿಳಿಯಲಿದೆ.
ಇದನ್ನು ಓದಿ : ಡ್ರಗ್ಸ್ ಜಾಲದ ಬೆನ್ನುಬಿದ್ದ ಮಂಗಳೂರು ಪೊಲೀಸರು: ಬೀದರ್ ಮೂಲದ ವೈದ್ಯನ ಬಂಧನ
ಇಲ್ಲದಿದ್ದರೆ ಇಬ್ಬರ ಜಗಳ ಮೂರನೇಯವರಿಗೆ ಲಾಭ ಎನ್ನುವಂತೆ ಆಂಧ್ರ ಸರ್ಕಾರ ಹೆಜ್ಜೆ ಇಡಲಿದೆ. (Devanahalli land acquisition blocked)