Bengaluru : ಡಾಲಿ ಧನಂಜಯ್ (Dhananjay Over Controversies) ಅಭಿನಯದ ‘ಹೆಡ್ ಬುಷ್’ (#HeadBush) ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಈ ಸಂದರ್ಭದಲ್ಲಿ, ಸಿನಿಮಾದಲ್ಲಿ ವೀರಭದ್ರ ದೇವರ ವೀರಗಾಸೆ ಕಲೆಗೆ ಅವಮಾನ ಮಾಡಲಾಗಿದೆ ಎನ್ನುವ ವಿವಾದವೊಂದು ಹುಟ್ಟಿಕೊಂಡಿದೆ.

ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಡಾಲಿ ಧನಂಜಯ್ ಮತ್ತು ಚಿತ್ರತಂಡದ ಬಗ್ಗೆ ಪರ-ವಿರೋಧ ಚರ್ಚೆಗಳು ವ್ಯಕ್ತವಾಗುತ್ತಿದೆ.
ಹೆಡ್ ಬುಷ್ ಚಿತ್ರದಲ್ಲಿ, ಜಯರಾಜ್ ಪಾತ್ರಧಾರಿಯಾಗಿ ನಟಿಸಿರುವ ಡಾಲಿ ಧನಂಜಯ್, ಫೈಟಿಂಗ್ ಸನ್ನಿವೇಶದಲ್ಲಿ ವೀರಗಾಸೆ ಕಲಾವಿದರಿಗೆ ಒದ್ದಿದ್ದಾರೆ.
ಇದು, ವೀರಗಾಸೆ ಎನ್ನುವ ಕಲೆಗೆ ಮತ್ತು ವೀರಭದ್ರ ದೇವರಿಗೆ ಮಾಡಿರುವ ಅಪಮಾನ (Dhananjay Over Controversies) ಎಂದು ವೀರಗಾಸೆ ಕಲಾವಿದರು ಮತ್ತು ಕೆಲವು ಸಾರ್ವಜನಿಕರು ಆಕ್ಷೇಪಿಸಿದ್ದಾರೆ.
ಇನ್ನು, “ಹೆಡ್ ಬುಷ್” ಸಿನಿಮಾದಲ್ಲಿ ವೀರಗಾಸೆಗೆ(Veeragase) ಅವಮಾನ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆ ಚಿತ್ರತಂಡ ಪ್ರೆಸ್ ಮೀಟ್ ಮಾಡಿ ಸ್ಪಷ್ಟನೆ ನೀಡಿದೆ.
ಡಾಲಿ ಧನಂಜಯ್ ನಿರ್ದೇಶಿಸಿ ಅಭಿನಯಿಸಿದ ಸಿನಿಮಾದಲ್ಲಿ ಕರ್ನಾಟಕದ ಹೆಮ್ಮೆಯ ಕಲೆ ವೀರಗಾಸೆಗೆ ಅವಮಾನ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.
ವಿವಾದ (Controversy) ಕುರಿತು ಚರ್ಚೆ ಹೆಚ್ಚಾಗುತ್ತಿದ್ದಂತೆ ನಟ ಡಾಲಿ ಧನಂಜಯ್ ಅವರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದರು.
ಇದೀಗ, ಮತ್ತೆ ಈ ವಿಚಾರದ ಬಗ್ಗೆ ಚಿತ್ರತಂಡ ಪ್ರೆಸ್ಮೀಟ್ ಮಾಡಿ ಸ್ಪಷ್ಟನೆ ಕೊಟ್ಟಿದೆ. ಈ ಸಂದರ್ಭದಲ್ಲಿ ಮಾತನಾಡಿದ ಡಾಲಿ ಧನಂಜಯ್, “ಕೆಲವು ಕಿಡಿಗೇಡಿ ಕಾಣದ ಕೈಗಳು ನನ್ನ ವಿರುದ್ದ ಕೆಲಸ ಮಾಡುತ್ತಿವೆ.
ನಾನು ಸಿನಿಮಾ ಮಾಡೋಕೆ ಬಂದಿದ್ದೇನೆ ಹೊರತು ರಾಜಕೀಯ ಮಾಡುವುದಕ್ಕೆ ಅಲ್ಲ”. ದಯವಿಟ್ಟು ಸಿನಿಮಾವನ್ನು ಸಿನಿಮಾ ರೀತಿ ನೋಡಿ, ರಾಜಕೀಯ ಮಾಡಬೇಡಿ.

ಕರಗ ಹಾಗೂ ವೀರಗಾಸೆಯಂತಹ ಜಾನಪದ ಕಲೆಗಳಿಗೆ ನಾವು ಅವಮಾನ ಮಾಡಿಲ್ಲ. ಸಿನಿಮಾ ಬಗ್ಗೆ ಎರಡೂ ಸಮುದಾಯದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅದರೆ ಒಂದು ಡೈಲಾಗ್ ಬಗ್ಗೆ ಕರಗ ಸಮಿತಿ ಬೇಸರ ವ್ಯಕ್ತಪಡಿಸಿದ್ದಾರೆ, ಈ ಬಗ್ಗೆ ನಾನು ವೀರಭದ್ರ ಸ್ವಾಮಿ ಭಕ್ತರು ಹಾಗೂ ಕರಗ ಸಮಿತಿಯವರ ಜೊತೆಗೆ ಮಾತನಾಡುತ್ತೇನೆ.
ನಾನು ಕೂಡ ಸಂಪ್ರದಾಯಸ್ಥ ಕುಟುಂಬದಿಂದ ಬಂದಿದ್ದೇನೆ, ಹಾಗಾಗಿ ನನಗೆ ದೇವರು ಹಾಗೂ ಜಾನಪದ ಕಲೆಗಳ ಬಗ್ಗೆ ನಂಬಿಕೆ ಗೌರವವಿದೆ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಮಾತು ಮುಂದುವರಿಸಿದ ಧನಂಜಯ್ “ಸಿನಿಮಾದಲ್ಲಿ ಎದೆ ಮೇಲೆ ಲಿಂಗ ಇಲ್ಲದೇ, ಶೂ ಧರಿಸಿದವರ ಮೇಲೆ ದಾಳಿ ಮಾಡುವ ದೃಶ್ಯವಿದೆ.
ಇದನ್ನೂ ಓದಿ : https://vijayatimes.com/chethan-ahimsa-over-kantara/
ನಕಲಿಯಾಗಿ ಬಂದವರ ಮೇಲೆ ಅಟ್ಯಾಕ್ ಮಾಡಲಾಗುತ್ತದೆ ಎಂದಿದ್ದಾರೆ. ಆದರೂ, ಇದರಿಂದ ಯಾರಿಗಾದರೂ ಬೇಸರವಾಗಿದ್ದರೆ ಕ್ಷಮೆಯಾಚಿಸುವೆ. ನಮ್ಮ ಸಮಾಜ ಅವಮಾನ ಪಡುವಂತಹ ಕೆಲಸವನ್ನು ನಾವು ಮಾಡಿಲ್ಲ.
ಕೆಲವರು ಈಗ ವೀರಗಾಸೆಯ ಬಗ್ಗೆ ಮಾತನಾಡುತ್ತಿದ್ದಾರೆ, ಆದರೆ ಅವರು ವೀರಗಾಸೆ ಕಲಾವಿದರ ಬೆಂಬಲಕ್ಕೆ ನಿಂತಿದ್ದಾರಾ” ಎಂದು ಪ್ರಶ್ನೆ ಧನಂಜಯ್ ಪ್ರಶ್ನೆ ಮಾಡಿದರು.
ಅದೇ ರೀತಿ, ವಿವಾದದ ಬಗ್ಗೆ ಚಿತ್ರತಂಡ ಪ್ರತಿಕ್ರಿಯಿಸಿ, “ದಯವಿಟ್ಟು ಕನ್ನಡ ಸಿನಿಮಾಗಳನ್ನು ಪ್ರೋತ್ಸಾಹಿಸಿ, ಸಿನಿಮಾವನ್ನು ಸಿನಿಮಾವಾಗಿ ಮಾತ್ರ ನೋಡಿ.
ಸಿನಿಮಾದಲ್ಲಿ, ವೀರಗಾಸೆ ಹೆಸರು ಹೇಳಿಕೊಂಡು ಬಂದ ಕ್ರಿಮಿನಲ್ ಗಳ ಮೇಲೆ ದಾಳಿ ಮಾಡಲಾಗಿದೆ. ನಿಜವಾದ ವೀರಗಾಸೆ ಕಲಾವಿದರಿಗೆ ಅವಮಾನ ಆಗುವಂತಹ ಯಾವುದೇ ದೃಶ್ಯ ಸಿನಿಮಾದಲ್ಲಿಲ್ಲ.

ಸೂಕ್ಷ್ಮವಾಗಿ ಸಿನಿಮಾವನ್ನು ನೋಡಿದರೆ ವೀರಗಾಸೆಗೆ ಅವಮಾನ ಮಾಡಿಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಬೇಕಿದ್ದರೆ ಸಿನಿಮಾ ತೋರಿಸುತ್ತೇವೆ” ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಅದೇ ರೀತಿ, “ವೀರಗಾಸೆ ಕೂಡ ಉಳಿದ ಎಲ್ಲ ಜಾನಪದ ಕಲೆಗಳಂತಹದ್ದೇ ಒಂದು ಕಲೆ.
ಇದನ್ನೂ ಓದಿ : https://vijayatimes.com/rajnikanth-likes-kantara/
ನಮ್ಮ ಕರ್ನಾಟಕದ ಹೆಮ್ಮೆ, ಅದರ ಕಲಾವಿದರಿಗೆ ಕೂಡಾ ಮಾಸಾಶನ ಕೊಡಬೇಕು ಎಂದು ಸರ್ಕಾರವನ್ನು ಕೇಳಿಕೊಳ್ಳುತ್ತೇನೆ” ಎಂದು ಧನಂಜಯ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
- ಪವಿತ್ರ