- ಬುರುಡೆ ಪ್ರಕರಣದ ಮುಖ್ಯ ಆರೋಪಿ ಚಿನ್ನಯ್ಯ ಶಿವಮೊಗ್ಗ ಹೈ-ಸಿಕ್ಯೂರಿಟಿ ಜೈಲಿಗೆ
- ಕಣ್ಣೀರು ಹಾಕುತ್ತ ಜೈಲಿಗೆ ಪ್ರವೇಶಿಸಿದ ಚಿನ್ನಯ್ಯ
- 11 ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿದ ಎಸ್‌ಐಟಿ
Shivmogga: ಧರ್ಮ** ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಚಿನ್ನಯ್ಯ ವಿರುದ್ಧ ನ್ಯಾಯಾಂಗ ಬಂಧನ ಜಾರಿಯಾಗಿದ್ದು, ಭದ್ರತಾ ಕಾರಣದಿಂದ ಅವನನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಲಾಗಿದೆ. (Dharmasthala case Chinnaiah to Shivamogga jail)
ಬೆಳ್ತಂಗಡಿ ಜೆಎಂಎಫ್‌ಸಿ (JMFC) ನ್ಯಾಯಾಲಯದಿಂದ ಬಂದ ಆದೇಶದಂತೆ, ಶನಿವಾರ ಮಧ್ಯರಾತ್ರಿ 1:20 ಗಂಟೆಗೆ ಚಿನ್ನಯ್ಯನನ್ನು ಶಿವಮೊಗ್ಗ ಜೈಲಿಗೆ ಕರೆತರಲಾಯಿತು.

ಪ್ರಸ್ತುತ ಆತ ಕಾವೇರಿ ಬ್ಯಾರೆಕ್‌ನಲ್ಲಿ ಇರಿಸಲಾಗಿದ್ದು, ಪ್ರಕರಣದ ಗಂಭೀರತೆ ಹಿನ್ನೆಲೆಯಲ್ಲಿ ವಿಶೇಷ ಭದ್ರತೆ ಒದಗಿಸಲಾಗಿದೆ.ಶಿವಮೊಗ್ಗ (Shivmogga) ಜೈಲು ರಾಜ್ಯದ ಪ್ರಮುಖ ಹೈ-ಸಿಕ್ಯೂರಿಟಿ (High-Security) ಕಾರಾಗೃಹಗಳಲ್ಲಿ ಒಂದಾಗಿದ್ದು, ಅಲ್ಲಿ ಈಗಾಗಲೇ 850 ಕ್ಕೂ ಹೆಚ್ಚು ಕೈದಿಗಳು ಬಂಧಿತರಾಗಿದ್ದಾರೆ.
ಚಿನ್ನಯ್ಯನನ್ನು ಅಲ್ಲಿಗೆ ಸಾಗಿಸುವ ವೇಳೆ ಆತ ಭಾವುಕರಾಗಿ ಕಣ್ಣೀರು ಹಾಕಿದ್ದಾನೆ. ಪೊಲೀಸರ ಸಹಕಾರಕ್ಕೆ ಧನ್ಯವಾದ ಹೇಳಿ, “ಎಲ್ಲರಿಗೂ ಧನ್ಯವಾದಗಳು” ಎಂದು ಹೇಳಿದ್ದಾನೆ.
ಇನ್ನು ಬಂಧನದ ನಂತರ ಚಿನ್ನಯ್ಯ ಅಚ್ಚರಿಯ ಹೇಳಿಕೆ ನೀಡಿದ್ದು ತನ್ನನ್ನು ಬಳಸಿಕೊಂಡು ಧರ್ಮ**ದ ವಿರುದ್ಧ ಕಳಂಕ ಹೆಚ್ಚಿಸುವ ಪ್ರಯತ್ನ ನಡೆದಿದೆ ಎಂದು ಆತ ಆರೋಪಿಸಿದ್ದಾನೆ.
ಕೆಲವರು ಧರ್ಮ**ದ ಗೌರವ ಹಾಳು ಮಾಡಲು ಗ್ಯಾಂಗ್ (Gang) ರಚಿಸಿ, ಷಡ್ಯಂತ್ರ ರೂಪಿಸಿದ್ದಾರೆ ಎಂಬ ಮಾಹಿತಿಯನ್ನು ಚಿನ್ನಯ್ಯ ಎಸ್‌ಐಟಿ (SIT) ಮುಂದೆ ಬಹಿರಂಗ ಪಡಿಸಿದ್ದಾನೆ.
ಗ್ಯಾಂಗ್‌ನಲ್ಲಿ ಭಾಗಿಯಾಗಿರುವವರ ಹೆಸರುಗಳನ್ನೂ ಆತ ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎಂದು ಮೂಲಗಳಿಂದ ತಿಳಿದುಬಂದಿದೆ. (Dharmasthala case Chinnaiah to Shivamogga jail)
ಈ ಹೇಳಿಕೆ ಪ್ರಕರಣದ ತೀವ್ರತೆಯನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ತನಿಖೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದರ ಬಗ್ಗೆ ಕುತೂಹಲ ಹೆಚ್ಚಿಸಿದೆ.
ಈಗಾಗಲೇ ಧರ್ಮ** ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 39/2025ರಲ್ಲಿ ಒಟ್ಟು 11 ಸೆಕ್ಷನ್‌ಗಳ ಅಡಿ ಕೇಸ್ ದಾಖಲಿಸಲಾಗಿದೆ.
ತಲೆಬುರುಡೆ ಪ್ರಕರಣ ಸೇರಿ, ಇಡೀ ಪ್ರಕರಣವನ್ನು ಎಸ್‌ಐಟಿ ಪೊಲೀಸರು ಗಂಭೀರವಾಗಿ ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ದೊರೆತ ಮಾಹಿತಿಗಳ ಆಧಾರದ ಮೇಲೆ BNS (Bharatiya Nyaya Sanhita) ಕಾಯ್ದೆಯ ವಿವಿಧ ಸೆಕ್ಷನ್‌ಗಳನ್ನು (Section) ಅಳವಡಿಸಲಾಗಿದೆ.
- BNS 211(A): ಕಾನೂನು ಅಧಿಕಾರಿಗಳಿಗೆ ಕಡ್ಡಾಯವಾಗಿ ನೀಡಬೇಕಾದ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಡುವುದು.
- BNS 336: ನಕಲಿ ದಾಖಲೆಗಳನ್ನು ತಯಾರಿಸುವುದು.
- BNS 230: ಸುಳ್ಳು ಸಾಕ್ಷಿ ಸೃಷ್ಟಿಸುವುದು ಅಥವಾ ನೀಡಲು ಪ್ರಯತ್ನಿಸುವುದು.
- BNS 231: ಜೀವಾವಧಿ ಶಿಕ್ಷೆಗೆ ಕಾರಣವಾಗಬಹುದಾದ ಪ್ರಕರಣಕ್ಕೆ ಸಂಬಂಧಿಸಿ ಸುಳ್ಳು ಸಾಕ್ಷಿ ಸೃಷ್ಟಿಸುವುದು.
- BNS 229: ನ್ಯಾಯಾಂಗ ಪ್ರಕ್ರಿಯೆಯಲ್ಲಿ ಸುಳ್ಳು ಪುರಾವೆ ಒದಗಿಸುವುದು.
- BNS 227: ಸುಳ್ಳೆಂದು ತಿಳಿದಿದ್ದರೂ ಸಾಕ್ಷ್ಯವನ್ನು ಹೇಳುವುದು.
- BNS 228: ನ್ಯಾಯಾಂಗ ಪ್ರಕ್ರಿಯೆಯನ್ನು ತಪ್ಪುದಾರಿಗೆ ಒಯ್ಯುವ ಉದ್ದೇಶದಿಂದ ದಾಖಲೆಗಳಲ್ಲಿ ಸುಳ್ಳು ನಮೂದು ಮಾಡುವುದು.
- BNS 240: ಅಪರಾಧದ ಬಗ್ಗೆ ತಪ್ಪು ಮಾಹಿತಿ ನೀಡುವುದು.
- BNS 236: ಸುಳ್ಳು ಎಂದು ತಿಳಿದಿದ್ದರೂ ಅದನ್ನು ನಿಜವೆಂದು ನ್ಯಾಯಾಲಯಕ್ಕೆ ಹೇಳುವುದು.
- BNS 233: ಸುಳ್ಳು ಪುರಾವೆಯನ್ನು ನಿಜವೆಂದು ಬಳಸಲು ಯತ್ನಿಸುವುದು.
- BNS 248: ಯಾರನ್ನಾದರೂ ಹಾನಿಗೊಳಿಸಲು ಸುಳ್ಳು ಅಪರಾಧದ ಆರೋಪ ಹೊರಿಸುವುದು.
ಈ ಎಲ್ಲಾ ಸೆಕ್ಷನ್‌ಗಳನ್ನು ಸೇರಿಸಿ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಾಗಿದೆ.ಬೆಳ್ತಂಗಡಿ ನ್ಯಾಯಾಲಯದಲ್ಲಿ ಶೀಘ್ರದಲ್ಲೇ ಮುಂದಿನ ಹಂತದ ವಿಚಾರಣೆ ನಡೆಯಲಿದೆ. ಚಿನ್ನಯ್ಯ ನೀಡಿದ ಶಾಕಿಂಗ್ (Shocking) ಹೇಳಿಕೆ ಹಾಗೂ ಗ್ಯಾಂಗ್ ಕುರಿತು ಹೊರಬಿದ್ದ ಮಾಹಿತಿಗಳು ತನಿಖೆಯ ದಿಕ್ಕು ಬದಲಾಯಿಸುವ ಸಾಧ್ಯತೆ ಇದೆ. ಪೊಲೀಸರು ಹೆಚ್ಚಿನ ಸುಳಿವುಗಳನ್ನು ಪರಿಶೀಲಿಸುತ್ತಿದ್ದು, ಪ್ರಕರಣದ ಕುರಿತು ಇನ್ನಷ್ಟು ಮಾಹಿತಿ ಬಹಿರಂಗಗೊಳ್ಳುವ ನಿರೀಕ್ಷೆಯಿದೆ.