• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ರಾಜ್ಯ

ಧರ್ಮಸ್ಥಳ ವಿವಾದ: ಮಾಧ್ಯಮದ ಮೇಲೆ ಹೇರಿದ ತಡೆಗೆ ಹೈಕೋರ್ಟ್ ಬ್ರೇಕ್

Shwetha Mohan by Shwetha Mohan
in ರಾಜ್ಯ, ವಿಜಯ ಟೈಮ್ಸ್‌
ಧರ್ಮಸ್ಥಳ ವಿವಾದ: ಮಾಧ್ಯಮದ ಮೇಲೆ ಹೇರಿದ ತಡೆಗೆ ಹೈಕೋರ್ಟ್ ಬ್ರೇಕ್
0
SHARES
12
VIEWS
Share on FacebookShare on Twitter
  • ಸತ್ಯ ಹೊರಬರುವ ದಾರಿಗೆ ನ್ಯಾಯದ ಬೆಂಬಲ
  • ಧರ್ಮಸ್ಥಳ ಮತ್ತು ಹರ್ಷೇಂದ್ರ ಕುಮಾರ್ ವಿರುದ್ಧದ ಮಾಧ್ಯಮ ನಿರ್ಬಂಧ ತೆರವು
  • ಮಾಧ್ಯಮ ಸ್ವಾತಂತ್ರ್ಯವನ್ನು ಬಲಗೊಳಿಸಿದ ಹೈಕೋರ್ಟ್ ಆದೇಶ

Mangalore: ಇತ್ತೀಚೆಗೆ ಧರ್ಮಸ್ಥಳದಲ್ಲಿ ಶ*ಗಳನ್ನು ಹೂಳಲಾಗಿದೆ ಎಂಬ ಗಂಭೀರ ಆರೋಪದ ಬೆನ್ನಲ್ಲೆ, ಹಲವಾರು ಡಿಜಿಟಲ್ ಮಾಧ್ಯಮಗಳು(Digital media) ಈ ವಿಷಯವನ್ನು ವರದಿ ಮಾಡುತ್ತಿದ್ದವು.

ಈ ವರದಿಗಳ ನಡುವೆ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರ ಸಹೋದರ ಡಿ. ಹರ್ಷೇಂದ್ರ ಕುಮಾರ್ ಅವರ ಹೆಸರು ಕೂಡ ಹರಿದಾಡುತ್ತಿದೆ.

ಇದರಿಂದ ಆಕ್ರೋಶಗೊಂಡ ಹರ್ಷೇಂದ್ರ ಕುಮಾರ್ ಅವರು, ತಮ್ಮ ಮಾನಹಾನಿ(defamation) ನಡೆಯುತ್ತಿದೆ ಎಂಬ ಕಾರಣದಿಂದ ಕೆಲವು ಮಾಧ್ಯಮಗಳ ವಿರುದ್ಧ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದರು.

ಡಿ. ಹರ್ಷೇಂದ್ರ ಕುಮಾರ್ ಅವರು ಮಂಗಳೂರು ಸೆಷನ್ಸ್ ನ್ಯಾಯಾಲಯದಲ್ಲಿ ದಾವೆ ಹೂಡಿದ ನಂತರ, “ಕುಡ್ಲ ರ್ಯಾಂಪೇಜ್”(Kudla Raampage) ಎಂಬ ಡಿಜಿಟಲ್ ಮಾಧ್ಯಮ ಸೇರಿದಂತೆ

ಇತರ ಸಂಸ್ಥೆಗಳ ಮೇಲೆ ತಾತ್ಕಾಲಿಕ ತಡೆ (injunction) ಆದೇಶ ಹೊರಡಿಸಲಾಯಿತು.

ಈ ತಡೆ ಆದೇಶದ ಅಡಿಯಲ್ಲಿ ಈ ಮಾಧ್ಯಮಗಳು ಧರ್ಮಸ್ಥಳ ಅಥವಾ ಅವರ ಬಗ್ಗೆ ಯಾವುದೇ ಸುದ್ದಿ ಪ್ರಸಾರ(News broadcast) ಮಾಡದಂತೆ ತಡೆ ಹೇರಲಾಯಿತು.

media freedom
High Court order strengthens media freedom
ಈ ತೀರ್ಪನ್ನು ಪ್ರಶ್ನಿಸಿ ‘ಕುಡ್ಲ ರ್ಯಾಂಪೇಜ್’ ಹೈಕೋರ್ಟ್ ಮೆಟ್ಟಿಲೇರಿದ ನಂತರ, ನ್ಯಾಯಮೂರ್ತಿ ಎಂ. ನಾಗಪ್ರಸನ್ನ(M. Nagaprasanna) ಅವರ ಏಕಸದಸ್ಯ ಪೀಠ ಸೆಷನ್ಸ್ ನ್ಯಾಯಾಲಯದ ತಡೆ ಆದೇಶವನ್ನು ರದ್ದುಗೊಳಿಸುವ ಮಹತ್ವದ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ “ವಿಚಾರಣಾ ನ್ಯಾಯಾಲಯದಲ್ಲಿ ಮುಂದಿನ ಹಂತದಲ್ಲಿ ಅರ್ಜಿದಾರರು ಹಾಗೂ ಇತರ ಎಲ್ಲಾ ಕಕ್ಷಿದಾರರಿಗೆ ಸಮಾನವಾಗಿ ವಾದ ಮಂಡನೆಗೆ ಅವಕಾಶ ನೀಡಬೇಕು” ಎಂದು ತಿಳಿಸಿದೆ.

ಎಲ್ಲಾ ವಾದಗಳು ಮುಕ್ತವಾಗಿರಬೇಕು ಮತ್ತು ಯಾವುದೇ ಪಕ್ಷದ ಹಕ್ಕುಗಳಿಗೆ ಧಕ್ಕೆಯಾಗಬಾರದು ಎಂಬುದು ನ್ಯಾಯಾಲಯ ಸೂಚನೆ ನೀಡಿದೆ.

ಈ ನಡುವೆ, ಡಿ. ಹರ್ಷೇಂದ್ರ ಕುಮಾರ್ ಅವರು ಬಿತ್ತರಿಸಲಾದ 8,842 ಆನ್‌ಲೈನ್ ಲಿಂಕ್‌ಗಳ ವಿರುದ್ಧ ನಿರ್ಬಂಧ ಕೋರಿ ಸಲ್ಲಿಸಿರುವ ದಾವೆ ಇನ್ನೂ ಸೆಷನ್ಸ್ ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿದೆ.

ಈ ಲಿಂಕ್‌ಗಳಲ್ಲಿ ಧರ್ಮಸ್ಥಳದ ಸಂಸ್ಥೆಗಳ ವಿರುದ್ಧ ಆಧಾರರಹಿತ ಮಾಹಿತಿ ಹರಡಲಾಗಿದೆ ಎಂಬ ಆರೋಪವಿದೆ.

ಒಟ್ಟು 338 ಪ್ರತಿವಾದಿಗಳ ಪೈಕಿ ‘ಕುಡ್ಲ ರ್ಯಾಂಪೇಜ್’ ಕೂಡ ಪ್ರಮುಖವಾಗಿ ಹೆಸರಾಗಿದ್ದ ಯೂಟ್ಯೂಬ್ ಮಾಧ್ಯಮವಾಗಿದೆ.

ಈ ಪ್ರಕರಣದಲ್ಲಿ “ಜಾನ್ ಡೋ”(John Doe) ಆದೇಶದ ಪರಿಕಲ್ಪನೆ ಪ್ರಯೋಗವಾಗಿದೆ. ಈ ತಾತ್ಕಾಲಿಕ ತಡೆ ಆದೇಶವು,

ಯಾರ ಹೆಸರು ತಿಳಿದಿಲ್ಲದಿದ್ದರೂ ಸಹ, ಪ್ರತಿಯೊಬ್ಬ ಅಪರಿಚಿತ ವ್ಯಕ್ತಿಗೆ ಸಹ ಅನ್ವಯಿಸುವಂತೆ ಮಾಡಬಹುದು.

ಇದನ್ನು ಮೂಲತಃ ಅಮೆರಿಕದ ನ್ಯಾಯಾಂಗ ವ್ಯವಸ್ಥೆಯಲ್ಲಿ ಬಳಸಲಾಗುತ್ತಿದ್ದರೆ, ಭಾರತದಲ್ಲಿಯೂ “ಅಶೋಕ್ ಕುಮಾರ್” ಪ್ರಕರಣದಿಂದ ಪ್ರಾರಂಭವಾಗಿ ಪ್ರಚಲಿತಕ್ಕೆ ಬಂದಿದೆ.

ಆದರೆ, ಈ ಆದೇಶಗಳನ್ನು ನೀಡುವಾಗ ನ್ಯಾಯಾಲಯ ಹೆಚ್ಚು ಜವಾಬ್ದಾರಿಯುತವಾಗಿ ಮತ್ತು ವೈಚಾರಿಕವಾಗಿ ನಡೆದುಕೊಳ್ಳಬೇಕು,

ಏಕೆಂದರೆ ಇದು ಅಭಿವ್ಯಕ್ತಿ ಸ್ವಾತಂತ್ರ್ಯ(Freedom of expression) ಮತ್ತು ಸುದ್ದಿಯ ಹಕ್ಕಿಗೆ ಪಾರದರ್ಶಕ ತೊಂದರೆ ತರುತ್ತದೆ ಎಂಬುದಾಗಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ತೀರ್ಪು ಮಾಧ್ಯಮ ಸ್ವಾತಂತ್ರ್ಯವನ್ನು ಗಟ್ಟಿಯಾಗಿ ಸಮರ್ಥಿಸಿದಂತಾಗಿದೆ. ಆದರೆ ಇದೇ ವೇಳೆ,

ಹಕ್ಕುಗಳ ದುರುಪಯೋಗವಾಗದಂತೆ ಮಾಧ್ಯಮಗಳು(media) ನೈತಿಕವಾಗಿ ವರದಿ ಮಾಡಬೇಕೆಂಬ ಸೂಚನೆಯೂ ಹೈಕೋರ್ಟ್(High Court) ನೀಡಿದಂತಾಗಿದೆ.

ಕೇವಲ ಪ್ರಚಾರಕ್ಕಾಗಿ ವ್ಯಕ್ತಿಗತ ಗೌರವ ಹಾಗೂ ಸಂಸ್ಥೆಗಳ ಖ್ಯಾತಿಗೆ ಧಕ್ಕೆಯಾಗಬಾರದು ಎಂಬುದನ್ನು ಈ ತೀರ್ಪು ಎತ್ತಿ ಹಿಡಿದಿದೆ.

ಈ ತೀರ್ಪು ಪ್ರಜಾಪ್ರಭುತ್ವದ ಪ್ರಮುಖ ಅಂಶವಾದ ಮಾಧ್ಯಮ ಸ್ವಾತಂತ್ರ್ಯವನ್ನು(Media freedom) ಇನ್ನಷ್ಟು ಗಟ್ಟಿ ಮಾಡಿ, ಅಭಿವ್ಯಕ್ತಿಯ ಹಕ್ಕಿಗೆ ಮೌಲ್ಯ ನೀಡಿದ ತೀರ್ಮಾನವಾಗಿದೆ.

ಇದನ್ನು ಓದಿ :  ಧರ್ಮ** ಪತ್ರಿಕಾ ಪ್ರಕಟಣೆ: ಎಸ್‌ಐಟಿ ತನಿಖೆ ಸ್ವಾಗತಿಸಿದ ಧ**ಸ್ಥಳ ಕ್ಷೇತ್ರದ ವಕ್ತಾರ ಪಾರ್ಶ್ವನಾಥ್ ಜೈನ್

ನ್ಯಾಯಾಲಯಗಳು, ಮಾಧ್ಯಮಗಳು, ಮತ್ತು ಸಾರ್ವಜನಿಕರು ಎಲ್ಲರೂ ನೈತಿಕತೆ ಹಾಗೂ ಜವಾಬ್ದಾರಿಯೊಂದಿಗೆ ತಮ್ಮ ಪಾತ್ರ ನಿರ್ವಹಿಸಬೇಕಾದ ಸಮಯ ಇದು ಎಂದು ನ್ಯಾಯಾಲಯ ಹೇಳಿದೆ.

Tags: crimedharmastalaDigital mediahighcourtjusticemediavijayatimes

Related News

ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಎಐ ಕಣ್ಗಾವಲು: ರಸ್ತೆ ಗುಂಡಿ ಪತ್ತೆಗೆ NHAI ಹೊಸ ತಂತ್ರಜ್ಞಾನ ಜಾರಿ
ಪ್ರಮುಖ ಸುದ್ದಿ

ಇನ್ಮುಂದೆ ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಎಐ ಕಣ್ಗಾವಲು: ರಸ್ತೆ ಗುಂಡಿ ಪತ್ತೆಗೆ NHAI ಹೊಸ ತಂತ್ರಜ್ಞಾನ ಜಾರಿ

June 17, 2026
ಜೂನ್ 18 ರಿಂದ ಬೆಂಗಳೂರಿನಾದ್ಯಂತ ಪ್ರತಿಭಟನೆ: ಬೇಕರಿ ಸೇರಿದಂತೆ ಸಣ್ಣ ಅಂಗಡಿಗಳು ಬಂದ್
ಪ್ರಮುಖ ಸುದ್ದಿ

ಜೂನ್ 18 ರಿಂದ ಬೆಂಗಳೂರಿನಾದ್ಯಂತ ಪ್ರತಿಭಟನೆ: ಬೇಕರಿ ಸೇರಿದಂತೆ ಸಣ್ಣ ಅಂಗಡಿಗಳು ಬಂದ್

June 17, 2026
ದುಬಾರೆ ದುರಂತದ ಬಳಿಕ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಆನೆ ಶಿಬಿರಗಳಿಗೆ ಹೊಸ ಸುರಕ್ಷತಾ ನಿಯಮಗಳು ಜಾರಿ
ಪ್ರಮುಖ ಸುದ್ದಿ

ದುಬಾರೆ ದುರಂತದ ಬಳಿಕ ರಾಜ್ಯ ಸರ್ಕಾರದ ಕಟ್ಟುನಿಟ್ಟಿನ ಕ್ರಮ: ಆನೆ ಶಿಬಿರಗಳಿಗೆ ಹೊಸ ಸುರಕ್ಷತಾ ನಿಯಮಗಳು ಜಾರಿ

June 17, 2026
ಭಾರತದ ಟೆಕ್‌ ರಾಜಧಾನಿಯಾಗಿ ಹೊರಹೊಮ್ಮಿದ ಕರ್ನಾಟಕ: ₹19.7 ಲಕ್ಷ ಕೋಟಿ ರಫ್ತಿನೊಂದಿಗೆ ದೇಶದಲ್ಲೇ ನಂ.1 ಸ್ಥಾನ
ದೇಶ-ವಿದೇಶ

ಭಾರತದ ಟೆಕ್‌ ರಾಜಧಾನಿಯಾಗಿ ಹೊರಹೊಮ್ಮಿದ ಕರ್ನಾಟಕ: ₹19.7 ಲಕ್ಷ ಕೋಟಿ ರಫ್ತಿನೊಂದಿಗೆ ದೇಶದಲ್ಲೇ ನಂ.1 ಸ್ಥಾನ

June 17, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.