Visit Channel

181 ರನ್ ಚೇಸ್‌ನಲ್ಲಿ ಧೋನಿ, ಶಿವಂ ದುಬೆಗೆ ಸಾಥ್ ನೀಡಲಿಲ್ಲ : ಸುನಿಲ್ ಗವಾಸ್ಕರ್!

Dhoni

ಮುಂಬೈನಲ್ಲಿ(Mumbai) ಭಾನುವಾರ(Sunday) ನಡೆದ ಪಂಜಾಬ್ ಕಿಂಗ್ಸ್(Punjab Kings) ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) 181 ರನ್‌ಗಳ ವಿಫಲ ಚೇಸಿಂಗ್‌ನಲ್ಲಿ ಯುವ ಆಲ್‌ರೌಂಡರ್ ಶಿವಂ ದುಬೆ ಅವರೊಂದಿಗೆ ಮಾಜಿ ನಾಯಕ(Former Captain) ಎಂಎಸ್ ಧೋನಿ(MS Dhoni) ಅವರು ಉತ್ತಮ ಪ್ರದರ್ಶನ ನೀಡದೆ ಇರುವುದು ಸಿಎಸ್ಕೆ(CSK) ಸೋಲಿಗೆ ಪ್ರಮುಖ ಕಾರಣ ಎಂದು ಸುನೀಲ್ ಗವಾಸ್ಕರ್(Sunil Gavaskar) ಅವರು ಹೇಳಿದ್ದಾರೆ.

mahendra singh dhoni

ಪಂಜಾಬ್ ಕೊಟ್ಟ ಸವಾಲನ್ನು ಎದುರಿಸುವಲ್ಲಿ ವಿಫಲಗೊಂಡಿದೆ. ಕೊಟ್ಟ ಗುರಿಯನ್ನು ತಲುಪಲು ಸಾಧ್ಯವಾಗದಿರುವುದು ದುರದೃಷ್ಟಕರ ಎಂದು ಸುನಿಲ್ ಗವಾಸ್ಕರ್ ಹೇಳಿದರು. ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಪಂಜಾಬ್ ವಿರುದ್ಧ 54 ರನ್‌ಗಳ ಸೋಲಿನ ನಂತರ, CSK ತನ್ನ 3ನೇ ಸತತ ಸೋಲನ್ನು ಅನುಭವಿಸಿತು. IPL 15ನೇ ಆವೃತ್ತಿಯಲ್ಲಿ ಸಿಎಸ್ಕೆ ಸೋಲಿನ ಆರಂಭವನ್ನು ಪ್ರಾರಂಭಿಸದೆ. 181 ರನ್‌ಗಳನ್ನು ಬೆನ್ನಟ್ಟಿದ ಚೆನ್ನೈ 8ನೇ ಓವರ್‌ನಲ್ಲಿ 36/5ಕ್ಕೆ ಕುಸಿದಿದ್ದರಿಂದ ಭಯಾನಕ ಆರಂಭವನ್ನು ಎದುರಿಸಿತು.

ಶಿವಂ ದುಬೆ(Shivam Dube) ಮತ್ತು ಎಂಎಸ್ ಧೋನಿ ಅವರು ಆಟವನ್ನು ಸ್ಥಿರಗೊಳಿಸಲು 62 ರನ್‌ಗಳ ಜೊತೆಯಾಟದಲ್ಲಿದ್ದರು. 3 ಸಿಕ್ಸರ್‌ಗಳು ಮತ್ತು 6 ಬೌಂಡರಿಗಳೊಂದಿಗೆ, ದುಬೆ ಕೇವಲ 30 ಎಸೆತಗಳಲ್ಲಿ 57 ರನ್ ಗಳಿಸುವ ಮೂಲಕ ಅರ್ಧ ಶತಕ ಭಾರಿಸಿ ತಂಡಕ್ಕೆ ಆಸರೆಯಾದರು. ಆದ್ರೆ ಅವರು 15 ನೇ ಓವರ್‌ನಲ್ಲಿ ಪಂಜಾಬ್ ಲೆಗ್-ಸ್ಪಿನ್ನರ್ ಲಿಯಾಮ್ ಲಿವಿಂಗ್‌ಸ್ಟೋನ್‌ ಅವರ ದಾಳಿಗೆ ವಿಕೆಟ್ ಅರ್ಪಿಸಿದರು. ಈ ಮೂಲಕ ಸಿಎಸ್ಕೆ ತಂಡಕ್ಕೆ ಸೋಲು ಹತ್ತಿರವಾಯಿತು.

dhoni

ದುಬೆ ಆಕರ್ಷಕ ಬ್ಯಾಟಿಂಗ್ ಮಾಡುವಾಗ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಸರಿಯಾದ ಸಾಥ್ ನೀಡಿದ್ದರೆ ಬಹುಶಃ ತಂಡ ಸೋಲನ್ನು ಕಾಣುತ್ತಿರಲಿಲ್ಲ. ಆ ಸಮಯದಲ್ಲಿ ಧೋನಿ ಅವರು ಸ್ಟ್ರೈಕ್ ಚಲಿಸುತ್ತಲೇ ಇದ್ದಿದ್ದರೆ ಉತ್ತಮವಾಗಿ ಕಮಾಲ್ ಮಾಡಬಹುದಿತ್ತು ಎಂದು ಹೈಲೈಟ್ ಮಾಡಿ ಹೇಳಿದರು ಸುನೀಲ್ ಗವಾಸ್ಕರ್.

Latest News

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!

Shivamogga
ಪ್ರಮುಖ ಸುದ್ದಿ

ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.

Lal singh Chadda
ಮನರಂಜನೆ

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.

Nithish Kumar
ದೇಶ-ವಿದೇಶ

ಬಿಹಾರ ಸಂಪುಟ ರಚನೆ ; 31 ಸಚಿವರ ಪಟ್ಟಿ ಬಿಡುಗಡೆ, ಆರ್ಜೆಡಿಗೆ ಹೆಚ್ಚು ಸ್ಥಾನ

ತೇಜಸ್ವಿ ಯಾದವ್‌(Tejaswi Yadav) ನೇತೃತ್ವದ ಆರ್ಜೆಡಿ(RJD) 16 ಸಚಿವ ಸ್ಥಾನಗಳನ್ನು ಮತ್ತು ಜೆಡಿಯು(JDU) 11 ಸ್ಥಾನಗಳನ್ನು ಪಡೆಯಲಿದ್ದು, ಕಾಂಗ್ರೆಸ್‌ ಪಕ್ಷಕ್ಕೆ(Congress Party) ಕೇವಲ 2 ಸಚಿವ ಸ್ಥಾನಗಳು ಲಭಿಸುವ ಸಾಧ್ಯತೆ ಇದೆ.