ನಿಧಾನವಾಗಿ ಆರಂಭವಾದರೂ ಕ್ಲೈಮ್ಯಾಕ್ಸ್‌ನಲ್ಲಿ (Dhurandhar 2 release ) ಮೈಂಡ್ ಬ್ಲೋಯಿಂಗ್ ಟರ್ನ್
ರಣವೀರ್-ಮಾಧವನ್ ಕಾಂಬಿನೇಶನ್‌ಗೆ ಥಿಯೇಟರ್‌ನಲ್ಲಿ ಭರ್ಜರಿ ಪ್ರತಿಕ್ರಿಯೆ
ಕಥೆ, ಕ್ರಾಫ್ಟ್ ಮತ್ತು ಕ್ಲೈಮ್ಯಾಕ್ಸ್ ಎಲ್ಲವೂ ಪರ್ಫೆಕ್ಟ್ ಎಂದ ಪ್ರೇಕ್ಷಕ ಪ್ರಭುಗಳು
ಬಾಲಿವುಡ್‌ನಲ್ಲಿ ಭಾರೀ ನಿರೀಕ್ಷೆ ಮೂಡಿಸಿದ್ದ ಧುರಂಧರ್ 2 ಸಿನಿಮಾ ಕೊನೆಗೂ (Dhurandhar 2 release) ತೆರೆಗೆ ಬಂದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.
ನಿರ್ದೇಶಕ ಆದಿತ್ಯ ಧರ್ ತಮ್ಮ ಹಿಂದಿನ ಭಾಗದ ಯಶಸ್ಸನ್ನು ಮುಂದುವರಿಸುತ್ತಾ, ಇನ್ನಷ್ಟು ಗಟ್ಟಿಯಾದ ಕಥಾ ನಿರ್ಮಾಣದೊಂದಿಗೆ ಈ ಸೀಕ್ವೆಲ್‌ನ್ನು (Sequel) ತಂದಿದ್ದಾರೆ.
ರಣವೀರ್ ಸಿಂಗ್ ಮತ್ತು ಮಾಧವನ್ ಅಭಿನಯ ಈ ಸಿನಿಮಾದ ಪ್ರಮುಖ ಆಕರ್ಷಣೆಯಾಗಿದ್ದು, ಇಬ್ಬರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಟ್ರೈಲರ್‌ನಲ್ಲಿ ಸಾಮಾನ್ಯವಾಗಿದ್ದ ಅನಿಸಿಕೆ, ಸಿನಿಮಾವನ್ನು ನೋಡಿದ ಮೇಲೆ ಸಂಪೂರ್ಣವಾಗಿ ಬದಲಾಗುತ್ತದೆ. ಮೊದಲ ಭಾಗದಲ್ಲಿ ಕಂಡ ರಾಜಕೀಯ, ಅಂಡರ್‌ವರ್ಡ್ (Underword) ಮತ್ತು ಟೆರರಿಸಂ ವಿಷಯಗಳನ್ನು ಇನ್ನಷ್ಟು ಆಳವಾಗಿ ಅನಾವರಣಗೊಳಿಸುವ ಪ್ರಯತ್ನ ಇಲ್ಲಿ ಗೋಚರಿಸುತ್ತದೆ.
ಸಿನಿಮಾ ರೆಹಮಾನ್ ಎಂಬ ಡಕಾಯಿತನ ಅಂತ್ಯ ಸಂಸ್ಕಾರದಿಂದ (Dhurandhar 2 release) ಪ್ರಾರಂಭವಾಗುತ್ತದೆ. ಇದರಿಂದಲೇ ಕಥೆ ಗಂಭೀರ ತಿರುವು ಪಡೆಯುತ್ತದೆ.
ಲೆಹಾರಿ ಗದ್ದುಗೆ ಯಾರಿಗೆ ಸಿಗಲಿದೆ, ಪವರ್ ಪಾಲಿಟಿಕ್ಸ್ (Politics) ಹೇಗೆ ಕೆಲಸ ಮಾಡುತ್ತದೆ ಎಂಬ ಅಂಶಗಳನ್ನು ಕಥೆಯಲ್ಲಿ ಸೂಕ್ಷ್ಮವಾಗಿ ಜೋಡಿಸಲಾಗಿದೆ.
ಮೊದಲಾರ್ಧ ಸ್ವಲ್ಪ ನಿಧಾನಗತಿಯಲ್ಲಿದ್ದರೂ, ಕಥೆಯ ವಿವಿಧ ಅಧ್ಯಾಯಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದ್ದಂತೆ ಪ್ರೇಕ್ಷಕರಿಗೆ ಎಲ್ಲಾ ಸಂಪರ್ಕಗಳು ಸ್ಪಷ್ಟವಾಗುತ್ತವೆ.
ನಿರ್ದೇಶಕರು ಕಥೆಯನ್ನು ಕಟ್ಟಿಕೊಡುವ ವಿಧಾನ ವಿಶೇಷವಾಗಿ ಗಮನ ಸೆಳೆಯುತ್ತದೆ. ಉಜೈರ್ ಬಲೋಚ್ (Uzair Baloch) ಎಂಬ ಪಾತ್ರವನ್ನು ಬಳಸಿಕೊಂಡು ಹಂಸ ಮಾಡುವ ಪ್ಲಾನಿಂಗ್ ಮತ್ತು ಎಲಿಮಿನೇಷನ್ ಸನ್ನಿವೇಶಗಳು ಥ್ರಿಲ್ಲಿಂಗ್ (Thrilling) ಅನುಭವ ನೀಡುತ್ತವೆ.
ಎರಡನೇ ಭಾಗದಲ್ಲಿ ಕಥೆ ಇನ್ನಷ್ಟು ವೇಗ ಪಡೆದು, ಹಂಸನ ಪವರ್ ಪ್ಲೇ ಸ್ಪಷ್ಟವಾಗಿ ಮೂಡಿ ಬರುತ್ತದೆ. ರಣವೀರ್ ಸಿಂಗ್ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ (Screen space) ನೀಡಲಾಗಿದ್ದು, ಅವರು ತಮ್ಮ ಪಾತ್ರವನ್ನು ಶಕ್ತಿಯಾಗಿ ನಿರ್ವಹಿಸಿದ್ದಾರೆ.
ಮತ್ತೊಂದೆಡೆ ಮಾಧವನ್ ಅವರು ಅಜಯ್ ಸನ್ಯಾಲ್ ಪಾತ್ರದಲ್ಲಿ ದಿಟ್ಟ ಅಭಿನಯ ತೋರಿಸಿದ್ದು, ಅವರ ಡೈಲಾಗ್‌ಗಳು ಮತ್ತು ಎಕ್ಸ್‌ಪ್ರೆಷನ್‌ಗಳು ಪ್ರೇಕ್ಷಕರಿಂದ ಭರ್ಜರಿ ಚಪ್ಪಾಳೆ ಪಡೆಯುತ್ತವೆ. ಇಬ್ಬರ ನಡುವೆ ನಡೆಯುವ ಸನ್ನಿವೇಶಗಳು ಸಿನಿಮಾಗೆ ಮತ್ತಷ್ಟು ತೂಕ ನೀಡುತ್ತವೆ.
ಸೆಕೆಂಡ್ ಹಾಫ್ ಸಂಪೂರ್ಣವಾಗಿ ಎಂಗೇಜಿಂಗ್ ಆಗಿದ್ದು, ಪ್ರೇಕ್ಷಕರನ್ನು ಕುತೂಹಲದಲ್ಲಿ ಇಡುತ್ತದೆ.
ಸಿನಿಮಾದ ಮತ್ತೊಂದು ಪ್ರಮುಖ ಹೈಲೈಟ್ ಎಂದರೆ ಬಿಜಿಎಂ ಮತ್ತು ಆ್ಯಕ್ಷನ್ ಸೀಕ್ವೆನ್ಸ್‌ಗಳು. ಹಲವು ದೃಶ್ಯಗಳಲ್ಲಿ ಡೈಲಾಗ್‌ಗಿಂತಲೂ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ (Background music) ಹೆಚ್ಚಿನ ಪ್ರಭಾವ ಬೀರುತ್ತದೆ. ಎಮೋಷನಲ್ ಸನ್ನಿವೇಶಗಳಲ್ಲಿ ಸಂಗೀತವನ್ನು ಪರಿಣಾಮಕಾರಿಯಾಗಿ ಬಳಸಿರುವುದು ಕಥೆಗೆ ಇನ್ನಷ್ಟು ತೀವ್ರತೆಯನ್ನು ನೀಡುತ್ತದೆ.
ಜೊತೆಗೆ ಪ್ರೀತಿ, ಕುಟುಂಬ ಮತ್ತು ತ್ಯಾಗದ ಎಮೋಷನಲ್ (Emotional) ಅಂಶಗಳು ಪ್ರೇಕ್ಷಕರ ಮನಸ್ಸನ್ನು ಸ್ಪರ್ಶಿಸುತ್ತವೆ. ವಿಶೇಷವಾಗಿ, ಒಬ್ಬ ಏಜೆಂಟ್ ತನ್ನ ದೇಶಕ್ಕಾಗಿ ಎಲ್ಲವನ್ನೂ ಕಳೆದುಕೊಳ್ಳುವ ಕ್ಷಣಗಳು ಹೃದಯವಿದ್ರಾವಕವಾಗಿ ಮೂಡಿ ಬರುತ್ತವೆ. ಈ ಭಾಗದಲ್ಲಿ ಸಿನಿಮಾ “ರಾಝಿ” ಚಿತ್ರದ ಕ್ಲೈಮ್ಯಾಕ್ಸ್ ನೆನಪಿಸುವಂತೆ ಕಾಣುತ್ತದೆ.
ಒಟ್ಟಿನಲ್ಲಿ, ಧುರಂಧರ್ 2 ಸಿನಿಮಾ ತಾಂತ್ರಿಕವಾಗಿ ಮತ್ತು ಕಥೆಯ ದೃಷ್ಟಿಯಿಂದ ಬಲಿಷ್ಠವಾಗಿದೆ. ಸಿನಿಮಾಟೋಗ್ರಫಿ, ಆ್ಯಕ್ಷನ್, ಸಂಗೀತ ಎಲ್ಲವೂ ಸಮತೋಲನದಿಂದ ನಿರ್ಮಾಣವಾಗಿದ್ದು, ಯಾವುದೇ ದೊಡ್ಡ ದೋಷ ಕಾಣಿಸದು.
ಪ್ರೇಕ್ಷಕರ ನಿರೀಕ್ಷೆಗಳನ್ನು ತಲುಪುವಲ್ಲಿ ಸಿನಿಮಾ ಯಶಸ್ವಿಯಾಗಿದ್ದು, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ದಾಖಲೆ ಮಾಡುವ ಸಾಧ್ಯತೆ ಇದೆ. 2000 ಕೋಟಿ ಕ್ಲಬ್ ಸೇರೋ ಸಾಧ್ಯತೆ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. 2026ರಲ್ಲಿ ಬಾಲಿವುಡ್‌ನ ದೊಡ್ಡ ಹಿಟ್ ಆಗುವ ಎಲ್ಲಾ ಲಕ್ಷಣಗಳನ್ನು ಈ ಸಿನಿಮಾ ಹೊಂದಿದೆ.
ಇದನ್ನು ಓದಿ : https://vijayatimes.com/atm-new-rules/