Karnataka: ರಾಜ್ಯದ ಸಾವಿರಾರು ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸಿಸ್ ಸೆಂಟರ್‌ಗಳು (Diagnosis centre without AERB) ಕೇಂದ್ರ ಸರಕಾರ ಅಧೀನದ ಪರಮಾಣು
ಶಕ್ತಿ ನಿಯಂತ್ರಣ ಮಂಡಳಿ (ಎಇಆರ್‌ಬಿ) (Atomic Energy Regulatory Board) ನಿಯಮಗಳನ್ನು ಗಾಳಿಗೆ ತೂರಿ ಮನಬಂದಂತೆ ಕ್ಷ ಕಿರಣ, ಸಿಟಿ ಸ್ಕ್ಯಾನ್, ಹಾಗೂ ಮ್ಯಾಮೊಗ್ರಾಫಿ
ಯಂತ್ರಗಳನ್ನು ಆರಂಭಿಸುತ್ತಿರುವ ಆರೋಪ (Diagnosis centre without AERB) ಕೇಳಿಬಂದಿದೆ.

ಅಂದಾಜು 20 ಸಾವಿರ ಖಾಸಗಿ ಆಸ್ಪತ್ರೆಗಳು ಮತ್ತು ಡಯಾಗ್ನಸಿಸ್ ಸೆಂಟರ್‌ಗಳು ನಮ್ಮ ರಾಜ್ಯದಲ್ಲಿ ಇದೆ. ಅಲ್ಲದೆ ಇದನ್ನು ಯಾರಾದರೂ ಹೊಸದಾಗಿ ಪ್ರಾರಂಭಿಸುವ ಮುನ್ನ
ಎಇಆರ್‌ಬಿ ಅನುಮತಿ ಪಡೆಯುವುದು ಕಡ್ಡಾಯ. ಅಷ್ಟೇ ಅಲ್ಲದೆ, ಪರವಾನಗಿ ಪಡೆಯಬೇಕು, ಈ ಯಂತ್ರಗಳ ಅಳವಡಿಕೆಗೆ 350 ಚದರ ಅಡಿ ಜಾಗವಿರಬೇಕು, ಪ್ರತಿ ಐದು ವರ್ಷಕ್ಕೊಮ್ಮೆ
ಪರವಾನಗಿ ನವೀಕರಿಸಬೇಕು ಮತ್ತು ಪ್ರತಿ ಎರಡು ವರ್ಷಕ್ಕೊಮ್ಮೆ ಗುಣಮಟ್ಟ ಪರಿಶೀಲಿಸುವುದು ಸೇರಿ ಇತರ ಪ್ರಮಾಣಪತ್ರ ಕೂಡ ಪಡೆಯಬೇಕು. ಇದರೊಂದಿಗೆ ಪ್ರಾಮಾಣಿತ ಕಾರ್ಯಾಚರಣೆ
ವಿಧಾನದಲ್ಲಿ (ಎಸ್‌ಒಪಿ)(SOP) ಕಾರ್ಯನಿರ್ವಹಿಸಬೇಕು. ಆದರೆ ಖಾಸಗಿ ಆಸ್ಪತ್ರೆಗಳು ಮತ್ತು ಡಯಾಗ್ನಸಿಸ್ ಸೆಂಟರ್‌ಗಳು ಇದ್ಯಾವ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ : ಡೆಂಘೀ ಪ್ರಕರಣ ಹೆಚ್ಚಳ: ರಕ್ತನಿಧಿ ಕೇಂದ್ರಗಳಲ್ಲಿ ಬಿಳಿ ರಕ್ತಕಣಗಳ ಸಂಗ್ರಹವಿಲ್ಲ!
ಆರೋಗ್ಯ ಸಮಸ್ಯೆಗಳ ಸಂಬಂಧ ಪಟ್ಟಂತೆ ಎಕ್ಸ್ ರೇ ಪರೀಕ್ಷೆ ಮಾಡಿಸುವ ಸಂದರ್ಭದಲ್ಲಿ ಇದರಿಂದಾಗಿ ಈ ಯಂತ್ರಗಳಿಂದ ಹೊರಸೂಸುವ ವಿಕಿರಣಗಳಿಂದ ರೋಗಿಗಳು ಚರ್ಮರೋಗ, ಕ್ಯಾನ್ಸರ್,
ಹೃದಯ,ಶ್ವಾಸಕೋಶ ಸೇರಿ ಇತರ ಅನೇಕ ಗಂಭೀರ ಕಾಯಿಲೆಗಳಿಗೆ ತುತ್ತಾಗುವಂತಾಗಿದೆ. ಅದರಲ್ಲೂ ಇನ್ನು ಕೆಲವರು ನಕಲಿ ಯಂತ್ರಗಳ ಅಳವಡಿಸಿಕೊಂಡು ರೋಗಿಗಳಿಗೆ ಸೇವೆ
ನೀಡುತ್ತಿರುವ ಬಗ್ಗೆಯೂ ಈಗಾಗಲೇ ಅನೇಕ ಆರೋಪಗಳು ಕೇಳಿ ಬಂದಿವೆ.

ಸೇವೆ ಸ್ಥಗಿತಗೊಳಿಸಲು ಅವಕಾಶ:
ಖಾಸಗಿ ಆಸ್ಪತ್ರೆಗಳು ಹಾಗೂ ಡಯಾಗ್ನಸಿಸ್ ಸೆಂಟರ್‌ಗಳು ಕ್ಷ ಕಿರಣ (X Ray), ಸಿಟಿ ಸ್ಕ್ಯಾನ್ (CT Scan), ಹಾಗೂ ಮ್ಯಾಮೊಗ್ರಾಪಿ ಯಂತ್ರಗಳನ್ನು (Mammography Machine) ಅಳವಡಿಸಿ
ರೋಗಿಗಳಿಗೆ ಸೇವೆ ನೀಡುತ್ತಿರುವ ಸಂದರ್ಭಗಳಲ್ಲಿ ಒಂದು ವೇಳೆ ಎಇಆರ್‌ಬಿ ನಿಯಮ ಪಾಲಿಸದಿದ್ದರೆ ಅಂತಹ ಸಂದರ್ಭಗಳಲ್ಲಿ ಮೊದಲು ಮತ್ತು ಎರಡನೇ ಬಾರಿ ಒಟ್ಟು 1,500 ರು. ದಂಡ
ಹಾಕಿ ಸೂಚನೆ ಪತ್ರ ನೀಡಲಾಗುತ್ತದೆ. ಸತತವಾಗಿ 3 ನೇ ಬಾರಿಯೂ ನಿಯಮ ಉಲ್ಲಂಘನೆಯಾದರೆ ಇಂತಹ ಸೆಂಟರ್ ಗಳನ್ನು ಶಾಶ್ವತವಾಗಿ ಮುಚ್ಚಿಸಿ ಕೇವಲ ಐದು ಸಾವಿರ ರು.ದಂಡ
ವಿಧಿಸಲಾಗುತ್ತದೆ. ಆದರೆ, ಈ ಪ್ರಕ್ರಿಯೆ ಎಲ್ಲಿಯೂ ನಡೆಯುತ್ತಿಲ್ಲ ಎಂದು ತಿಳಿದುಬಂದಿದೆ.
ಕಾರ್ಯಾಚರಣೆ ಅತ್ಯಗತ್ಯ
2018ರ ಡಿ.22ರಂದು ಎಇಆರ್‌ಬಿ ಸಂಸ್ಥೆ ಹಾಗೂ ಆರೋಗ್ಯ ಇಲಾಖೆಯ ನಡುವೆ ಆಗಿರುವ ಒಪ್ಪಂದದಂತೆ ಕ್ಷಕಿರಣ ವಿಕಿರಣ ಸುರಕ್ಷತಾ ನಿರ್ದೇಶನಾಲಯವನ್ನು ಸ್ಥಾಪಿಸಲಾ ಗಿದೆ.
ಇದನ್ನು ಆರೋಗ್ಯ ಇಲಾಖೆ ವ್ಯಾಪ್ತಿಗೆ ಈಗಾಗಲೇ ತರಲಾಗಿದೆ. ರಾಜ್ಯದಲ್ಲಿರುವ ಸಿಟಿ ಸ್ಕ್ಯಾನ್, ಕ್ಷ ಕಿರಣ ಕೇಂದ್ರಗಳು, ಮತ್ತು ಮ್ಯಾಮೊಗ್ರಾಪಿ ಕೇಂದ್ರಗಳು ಎಇಆರ್ ಬಿಯಿಂದ ಅನುಮತಿ
ಪಡೆದು ಕಾರ್ಯಾಚರಣೆ ಮಾಡುತ್ತಿದೆಯೋ ಅಥವಾ ಇಲ್ಲವೋ ಎಂಬುದರ ಬಗ್ಗೆ ಪರಿಶೀಲನೆ, ಇವುಗಳ ನೋಂದಣಿ ಪರಿಶೀಲನೆ,ನಿಯಮಗಳ ಪಾಲಿಸುವಂತೆ ನೋಡಿಕೊಳ್ಳುವುದು,ಎಇಆರ್‌ಬಿ
ಕ್ರಮ ಪಾಲಿಸುವಂತೆ ಕ್ರಮ ಕೈಗೊಳ್ಳುವುದು, ಕ್ಷ ಕಿರಣ ಯಂತ್ರಗಳ ಪರಿವೀಕ್ಷಣೆ, ಈಗಾಗಲೇ ಸೂಚನೆ ಪತ್ರ ನೀಡಿ ಕಾಲಾವಕಾಶ ನೀಡಿದ್ದರೂ ನಿಯಮ ಪಾಲಸದಿರುವ ಕೇಂದ್ರಗಳನ್ನು ಕೂಡಲೇ
ಸ್ಥಗಿತಗೊಳಿಸುವುದು, ಕ್ಷ ಕಿರಣ ಯಂತ್ರಗಳಿಂದ ಹೊರಸೂಸುವ ವಿಕಿರಣಗಳಿಂದ ಅಪಾಯ ತಡೆಯುವುದು ಮುಂತಾದವುಗಳು ನಿರ್ದೇಶನಾಲಯದ ಜವಾಬ್ದಾರಿ ಯಾಗಿದೆ.
ಈ ಕಾರ್ಯವನ್ನು ಆದರೆ, ನಿರ್ದೇಶನಾಲಯ ಸಮರ್ಪಕವಾಗಿ ನಡೆಸುತ್ತಿಲ್ಲ ಎಂಬ ಕೇಳಿಬಂದಿದೆ.
ರಶ್ಮಿತಾ ಅನೀಶ್