India : ರೈಲುಗಳೇ(Train) ಇಲ್ಲದ ಭಾರತವನ್ನು ಕಲ್ಪಿಸಿಕೊಳ್ಳಿ ನೋಡೋಣ, ಅಬ್ಬಬ್ಬಾ ಎಷ್ಟೊಂದು ಜನ, ಎಷ್ಟೊಂದು ಸರಕು, ಎಷ್ಟು ಲಾರಿ ಬಸ್ಸುಗಳನ್ನು ತಂದರೂ ತುಂಬಲು ಸಾಧ್ಯವೇ? ನಾನಾ ಭಾಷೆ, ಜಾತಿ, ಧರ್ಮಗಳ ಜನ .ನಾನಾ ಸಂಸ್ಕೃತಿಗಳ ಸಮ್ಮಿಲನ. ರೈಲು ಎನ್ನುವುದು ಕೇವಲ ಬಂಡಿಯಲ್ಲ, ಪ್ರಯಾಣ, ಹೊಟ್ಟೆಪಾಡು, ಉದ್ಯೋಗ, ಪ್ರವಾಸ, ಮನರಂಜನೆ, ನೆನಪುಗಳ ಬಂಡಿ(Diamond Crossing In India).
ಭಾರತವನ್ನು(India) ಸರಿಯಾಗಿ ನೋಡುವುದು ಎಂದರೆ ರೈಲನ್ನು ಸರಿಯಾಗಿ ಗಮನಿಸುವುದೇ ಆಗಿದೆ. ಇನ್ನು, ರೈಲು ಹಳಿಗಳಂತೂ ಭಾರತದ ನರನಾಡಿಗಳೇ ಆಗಿಬಿಟ್ಟಿವೆ(Diamond Crossing In India).
ಭಾರತೀಯ ರೈಲು(Indian Railways) ವ್ಯವಸ್ಥೆಯಲ್ಲಿ ಎರಡು ಹಳಿಗಳ ನಡುವಿನ ಅಂತರ ನಾಲ್ಕು ಬಗೆಯದಾಗಿದೆ.
ಇದನ್ನೂ ಓದಿ : https://vijayatimes.com/mallikarjun-kharge-to-contest/
ಬಹಳ ಹಿಂದೆ ಇದ್ದ ನ್ಯಾರೋ ಗೇಜ್ ಹಳಿಗಳ ನಡುವಿನ ಅಂತರ ಎರಡು ಅಡಿ ಆರು ಇಂಚು. ನಂತರ ಮೀಟರ್ ಗೇಜ್ನಲ್ಲಿ ಅಂತರ ಮೂರು ಅಡಿ ಮೂರು ಇಂಚು.
ಆದರೆ ಬಹಳ ದಿನಗಳವರೆಗೆ ಚಾಲನೆಯಲ್ಲಿದ್ದ ಸ್ಟ್ಯಾಂಡರ್ಡ್ ಗೇಜ್ನಲ್ಲಿದ್ದ ಅಂತರ ನಾಲ್ಕು ಅಡಿ ಎಂಟೂವರೆ ಇಂಚು. ಈಗಿರುವ ಬ್ರಾಡ್ಗೇಜ್ನಲ್ಲಿ ಅಂತರ ಐದು ಅಡಿ ಆರು ಇಂಚು.
ಹಾಗಾದರೆ, ಸ್ಟ್ಯಾಂಡರ್ಡ್ ಗೇಜ್ ನ ಅಂತರ ನಾಲ್ಕು ಅಡಿ ಎಂಟೂವರೆ ಇಂಚು ಆಗಿರುವುದರ ಹಿನ್ನೆಲೆ ಏನಿರಬಹುದು ಗೊತ್ತೇ? ಕುದುರೆಗಳ ಹಿಂಭಾಗದ ಗಾತ್ರದ ಮೇಲೆ ನಿರ್ಮಾಣವಾದದ್ದು ರೋಮನ್ರ ಕುದುರೆಗಾಡಿ.
ಅದೇ ಅಳತೆಯನ್ನು ಬಳಸಿ ಇಂಗ್ಲೆಂಡಿನ ಕುದುರೆಗಾಡಿಗಳು ನಿರ್ಮಾಣವಾದವು.
ಕುದುರೆ ಗಾಡಿಗಳನ್ನು ಮಾಡಿದವರೇ ಟ್ರ್ಯಾಮ್ನ ಗಾಲಿಗಳನ್ನು ಮಾಡಿದರು. ಅದನ್ನೇ ಮಾದರಿಯಾಗಿಟ್ಟುಕೊಂಡು ಇಂಗ್ಲೆಂಡಿನ ರೈಲು ಬಂದಿತು. ಇದೇ ಜನ ಅಮೇರಿಕದಲ್ಲಿ ರೈಲು ಮಾಡಿದರು ಅದೇ ಅಳತೆ ಉಳಿಯಿತು.
ಇಂಗ್ಲೆಂಡಿನ ಜನರೇ ಭಾರತದಲ್ಲೂ ರೈಲ್ವೆ ವ್ಯವಸ್ಥೆಯ ಉಗಮಕ್ಕೆ ಕಾರಣರಲ್ಲವೇ? ಹಾಗಾಗಿ, ಇಲ್ಲಿಯೂ ಅದೇ ಅಳತೆಯೂ ಉಳಿದುಕೊಂಡಿತು.
ಇದನ್ನೂ ಓದಿ : https://vijayatimes.com/bharat-jodo-yatra-enters-karnataka/
ಹೌದು, ಪ್ರಪಂಚದ ಅತಿದೊಡ್ಡ ಅತ್ಯುತ್ತಮ ಹಾಗೂ ಪ್ರಗತಿಶೀಲವಾದ ಸಾಗಾಣಿಕೆಯ ವ್ಯವಸ್ಥೆಯಾದ ರೈಲ್ವೆಯ ಹಳಿಗಳ ಅಂತರದ ಮೂಲ ಎರಡು ಕುದುರೆಗಳ ಹಿಂಭಾಗದ ಅಳತೆ! ಇದು ಆಗಿನ ಕಥೆಯಾದರೆ, ಈಗಿನ ರೈಲು ಹಳಿಗಳಲ್ಲಿಯೂ ಹಲವಾರು ವಿಶೇಷತೆಗಳಿವೆ.
ಇಂತಹ ವಿಶಿಷ್ಟ ರೈಲು ಹಳಿಗಳಲ್ಲಿ ಒಂದಾದ, ‘ಡೈಮಂಡ್ ಕ್ರಾಸಿಂಗ್’ ಬಗ್ಗೆ ಇಲ್ಲಿದೆ ಮಾಹಿತಿ. ಜಗತ್ತಿನಲ್ಲಿಯೇ ಏಕೈಕ ಡೈಮಂಡ್ ಕ್ರಾಸಿಂಗ್ ಇರುವುದು ನಮ್ಮ ಭಾರತದಲ್ಲಿ ಮಾತ್ರ.
ಹೌದು, ಇದು ಇರುವುದು ಮಹಾರಾಷ್ಟ್ರದ(Maharashtra) ಉಪರಾಜಧಾನಿಯಾದ ನಾಗಪೂರ್ ನಲ್ಲಿ.
ನಾಗಪೂರ್ ಪಟ್ಟಣ ದೇಶದ ಕೇಂದ್ರಸ್ಥಾನದಲ್ಲಿದೆ. ಅದರಲ್ಲೂ ಈ ‘ಡೈಮಂಡ್ ಕ್ರಾಸಿಂಗ್’ ಸಹ ದೇಶದ ಮಧ್ಯಭಾಗದಲ್ಲಿಯೇ ಇದ್ದಂತಿದೆ.
ಹೌದು, ಇಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ರೈಲು ಮಾರ್ಗಗಳು ಒಂದಕ್ಕೊಂದು ಸಂಧಿಸಿವೆ. ಇಲ್ಲಿ ದೆಹಲಿ-ಚೆನ್ನೈ ಮತ್ತು ಮುಂಬಯಿ–ಕೋಲ್ಕತಾ ಈ ರೈಲು ಮಾರ್ಗಗಳು ಒಂದನ್ನೊಂದು ಛೇದಿಸುತ್ತವೆ.
ಇದನ್ನೂ ಓದಿ : https://youtu.be/Q3d-exudhek COVER STORY PROMO | ಪೋಷಕರೇ ಎಚ್ಚರ!
ಇನ್ನು, ಈ ಡೈಮಂಡ್ ಕ್ರಾಸಿಂಗ್ ನ ವಿಶೇಷತೆಯ ಬಗ್ಗೆ ಹೇಳಬೇಕಾದರೆ ಇದು ಜಗತ್ತಿನ ಏಕೈಕ ರೈಲು ಮಾರ್ಗವಾಗಿದೆ. ಇಲ್ಲಿ ಎರಡು ರೈಲು ಮಾರ್ಗಗಳು ಒಂದನ್ನೊಂದು ಛೇದಿಸು.
ಎರಡು ರೈಲು ಮಾರ್ಗಗಳು ಛೇದಿಸಿದ ಈ ಸ್ಥಳಕ್ಕೆ ಡೈಮಂಡ್ ಕ್ರಾಸಿಂಗ್ ಎಂದು ಕರೆಯಲಾಗುತ್ತದೆ.