• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಮನರಂಜನೆ

ಲಹರಿ ಸಂಗೀತಕ್ಕೆ ವಜ್ರ ಸಂಭ್ರಮ

Sharadhi by Sharadhi
in ಮನರಂಜನೆ
ಲಹರಿ ಸಂಗೀತಕ್ಕೆ ವಜ್ರ ಸಂಭ್ರಮ
0
SHARES
0
VIEWS
Share on FacebookShare on Twitter

ಲಹರಿ, ಇದು ಕನ್ನಡಿಗರ ಮನೆ ಮಾತಾದ ಹೆಸರು. ಲಹರಿ ಅಂದಾಕ್ಷಣ ನೆನಪಾಗುವುದೆ ʼಲಹರಿ ಆಡಿಯೋ ಸಂಸ್ಥೆʼ ಯಾಕಂದ್ರೆ, ಸಿನಿಮಾ, ಭಾವಗೀತೆ ಹಾಗೂ ಭಕ್ತಿ ಗೀತೆಗಳ ಆಡಿಯೋ ಸಂಗೀತ ಕ್ಷೇತ್ರದಲ್ಲಿ ಲಹರಿ ಮ್ಯೂಜಿಕ್‌ಗೆ ಮಹತ್ತರ ಮೈಲುಗಲ್ಲು ಸ್ಥಾಪಿಸಿದ ಹೆಗ್ಗಳಿಕೆ ಇದೆ. ಅಷ್ಟು ಮಾತ್ರವೇ ಅಲ್ಲ, ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಲಹರಿ ಆಡಿಯೋ ಸಂಸ್ಥೆಯದ್ದು. ಅದರ ಸಾಧನೆಯ ಕಿರೀಟಕ್ಕೆ ಈಗಾಗಲೇ ಸಾಕಷ್ಟು ಪ್ರತಿಷ್ಟಿತ ಪ್ರಶಸ್ತಿಗಳು ಸಂದಿವೆ. ಆ ಸಾಲಿನಲ್ಲಿ ಈಗ ಅತೀ ಶ್ರೇಷ್ಟ ಎನ್ನಬಹುದಾದ ಗೌರವದ ಗರಿ ಮೂಡಿದೆ.

ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ಗೆ ಈಗ 1.18 ಕೋಟಿಯಷ್ಟು ಜನ ಚಂದದಾರಾಗಿದ್ದಾರೆ. ಇದು ಭಾರತೀಯ ಸಂಗೀತ ಕ್ಷೇತ್ರದ ಡಿಜಿಟಲ್‌ ಯುಗಕ್ಕೆ ಹೊಚ್ಚ ಹೊಸ ದಾಖಲೆಯೇ ಹೌದು. ಈ ಹಿನ್ನೆಲೆಯಲ್ಲಿ ಅಮೆರಿಕದ ನ್ಯೂಯಾರ್ಕ್‌ನಲ್ಲಿರುವ ಯುಟ್ಯೂಬ್‌ಸಂಸ್ಥೆಯಿಂದ ಲಹರಿ ಮ್ಯೂಜಿಕ್‌ಗೆ ಪ್ರತಿಷ್ಟಿತ ʼಡೈಮಂಡ್‌ ಅವಾರ್ಡ್‌ ʼ ಪ್ರಶಸ್ತಿ ಸಿಕ್ಕಿದೆ. ಸಹಜವಾಗಿಯೇ ಲಹರಿ ಸಂಸ್ಥೆಯ ಮಾಲೀಕರಾದ ಮನೋಹರ್‌ ನಾಯ್ಡು ಹಾಗೂ ಲಹರಿ ವೇಲು ಅವರ ಮುಖದಲ್ಲಿ ಸಂತಸದ ನಗೆ ಮೂಡಿಸಿದೆ.

ಇದು ನಮಗೆ ಸಿಕ್ಕ ಗೌರವವಲ್ಲ, ಸಮಸ್ತ ಕನ್ನಡಿಗರ ಸಹಕಾರದ ಫಲ. ಒಂದು ಸಣ್ಣ ಸಂಸ್ಥೆಯನ್ನು ಆರು ಕೋಟಿ ಕನ್ನಡಿಗರು ಪ್ರೋತಾಹಿಸಿ, ಬೆಳೆಸುತ್ತಾ ಬಂದಿದ್ದರ ಫಲದಿಂದಾಗಿಯೇ ಲಹರಿ ಸಂಸ್ಥೆ ಇವತ್ತು ದೊಡ್ಡ ಮಟ್ಟಕ್ಕೆ ಬೆಳೆದಿದೆ. ಹಾಗಾಗಿ ಇದು ಸಮಸ್ತ ಕನ್ನಡಿಗರಿಗೆ ಸಲಬೇಕಾದ ಗೌರವ. ಅವರಿಗೆ ಇದು ಅರ್ಪಣೆʼ ಎನ್ನುತ್ತಾರೆ ಲಹರಿ ಸಂಸ್ಥೆಯ ಮುಖ್ಯಸ್ಥರಾದ ಲಹರಿ ವೇಲು.

ಲಹರಿ ಮ್ಯೂಜಿಕ್‌ಗೆ ಈಗಾಗಲೇ ಯುಟ್ಯೂಬ್‌ಸಂಸ್ಥೆಯಿಂದ ಎರಡು ಅವಾರ್ಡ್‌ಸಿಕ್ಕಿವೆ. ಯೂಟ್ಯೂಬ್‌ ಚಾನೆಲ್‌ಗೆ ಚಂದದಾರರ ಬಳಗವೂ ದಾಖಲೆಯಲ್ಲಿ ಜತೆಯಾದಂತೆಯೇ ಯುಟ್ಯೂಬ್‌ ಸಂಸ್ಥೆಯ ಕಡೆಯಿಂದ ಸಿಲ್ವರ್‌ ಹಾಗೂ ಗೋಲ್ಡನ್‌ ಅವಾರ್ಡ್‌ ಬಂದಿರುವುದು ಅದರ ಸಾಧನೆಯ ಸಿಕ್ಕ ಗರಿಮೆ. ಒಂದು ಲಕ್ಷ, 50 ಲಕ್ಷ ಹಾಗೂ 1 ಕೋಟಿಯಷ್ಟು ಜನರು ಕ್ರಮವಾಗಿ ಲಹರಿ ಮ್ಯೂಜಿಕ್‌ಗೆ ಚಂದದಾರರು ಆದಂತೆಲ್ಲ, ಯುಟ್ಯೂಬ್‌ ಸಂಸ್ಥೆ ದಾಖಲೆಯ ಗೌರವಗಳನ್ನು ನೀಡುತ್ತಾ ಬಂದಿದೆ.

ಈಗ ಲಹರಿ ಮ್ಯೂಜಿಕ್‌ ಯುಟ್ಯೂಬ್‌ ಸಾಧನೆಯಲ್ಲಿʼ ಡೈಮಂಡ್‌ ಅವಾರ್ಡ್‌ʼ ಪ್ರಾಪ್ತಿ ಆಗಿದೆ. ಆ ಮೂಲಕ ದಕ್ಷಿಣ ಭಾರತದ ಸಂಗೀತ ಕ್ಷೇತ್ರದಲ್ಲಿಯೇ ಲಹರಿ ಮ್ಯೂಜಿಕ್‌ ಅಗ್ರಗಣ್ಯ ಸ್ಥಾನಕ್ಕೇರಿದೆ.
ʼನನಗೆ ಗೊತ್ತಿರುವ ಹಾಗೆ ಇದು ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿಯೇ ಮೊದಲು. ತೆಲುಗು, ತಮಿಳು, ಮಲಯಾಳಂ ಸೇರಿದಂತೆ ಯಾವುದೇ ಭಾಷೆಯಲ್ಲೂ ಇಷ್ಟು ಚಂದದಾರರ ಬಳಗವನ್ನು ಸಂಪಾದಿಸಿಕೊಂಡ ಮ್ಯೂಜಿಕ್‌ ಯುಟ್ಯೂಬ್‌ ಚಾನೆಲ್‌ಇಲ್ಲ. ಅಂತಹ ಹೊಸ ದಾಖಲೆ ಲಹರಿ ಮ್ಯೂಜಿಕ್‌ಗೆ ಸಿಕ್ಕಿದೆ ಎನ್ನುವುದೇ ನಮ್ಮ ಸಂಸ್ಥೆಯ ಹೆಮ್ಮೆ. ಅದಕ್ಕೆ ಕಾರಣಕರ್ತರು ನಾವು ಎನ್ನುವುದಕ್ಕಿಂತ ಸಮಸ್ತ ಕನ್ನಡಿಗರು. ಸಿನೆಮಾ ನಿರ್ಮಾಪಕರು, ನಿರ್ದೇಶಕರು, ಕಲಾವಿದರು. ಕಾರ್ಮಿಕರು, ವಿಶೇಷವಾಗಿ ಸಂಗೀತ ನಿರ್ದೇಶಕರು, ಗಾಯಕರು, ಸಾಹಿತಿಗಳು , ಜತೆಗೆ ಮಾಧ್ಯಮದ ಮಿತ್ರರು ಕಾರಣರು. ಅವರು ನೀಡಿದ ಅಭೂತ ಪೂರ್ವ ಬೆಂಬಲದಿಂದಲೇ ಇದೆಲ್ಲ ಸಾಧ್ಯವಾಗಿದೆʼ ಎನ್ನುತ್ತಾರೆ ಲಹರಿ ವೇಲು.

ಲಹರಿ ಯುಟ್ಯೂಬ್‌ ಚಾನೆಲ್‌ ಶುರುವಾಗಿ ಇಲ್ಲಿಗೆ 10ವರ್ಷ. ಇಷ್ಟು ಕಡಿಮೆ ಅವದಿಯಲ್ಲಿ ಅದು 1.18 ಕೋಟಿ ಚಂದದಾರರ ಬಳಗ ಹೊಂದಿದೆ. ಕನ್ನಡಕ್ಕೆ ಮಾತ್ರ ಸೀಮಿತವಾಗದೆ ತೆಲುಗು, ತಮಿಳು ಹಾಗೂ ಮಲಯಾಳಂಗೂ ವಿಸ್ತರಣೆ ಗೊಂಡಿದೆ. ಪ್ರತಿ ಭಾಷೆಯಲ್ಲೂ ಒಂದೊಂದು ತಂಡ ಹೊಂದಿದೆ. ಪ್ರತಿ ತಂಡದಲ್ಲೂ 20ರಿಂದ 25ಮಂದಿ ಕೆಲಸ ಗಾರರಿದ್ದಾರೆ. ಇದು ಲಹರಿ ಮ್ಯೂಜಿಕ್‌ನ ಶಕ್ತಿ. ಇನ್ನು ಲಹರಿ ಆಡಿಯೋ ಸಂಸ್ಥೆ ಆಲದ ಮರದಂತೆ ಬೆಳೆದು ನಿಂತಿದೆ. ಕನ್ನಡದ ಹಿರಿಮೆ-ಗರಿಮೆ ಹೆಚ್ಚಾಗುವಂತೆ ಅದು ಕನ್ನಡದ ಚಿತ್ರಗೀತೆ ಮತ್ತು ಭಾವಗೀತೆಗಳನ್ನು ಜಗತ್ತಿನಾದ್ಯಂತ ಸಂಗೀತ ಪ್ರಿಯರಿಗೆ ಉಣಬಡಿಸುತ್ತಿದೆ. .ಆ ಮೂಲಕ ಲಹರಿ ಆಡಿಯೋ ಸಂಸ್ಥೆಯ ಮಾಲೀಕರಾದ ಮನೋಹರ್‌ನಾಯ್ಡು ಹಾಗೂ ಲಹರಿ ವೇಲು ಇಬ್ಬರು ಕರ್ನಾಟಕ ಸರ್ಕಾರದ ಪ್ರತಿಷ್ಟಿತ ಗೌರವʼ ರಾಜ್ಯೋತ್ಸವ ಪ್ರಶಸ್ತಿʼಗೆ ಪಾತ್ರವಾಗಿದ್ದು ಲಹರಿ ಸಂಸ್ಥೆಯ ಸಾಧನೆಗೆ ಸಂದ ಬಹುದೊಡ್ಡ ಗೌರವ. ಹಾಗೆಯೇ ಕನ್ನಡದ ಹೆಮ್ಮೆಯೂ ಹೌದು.

Related News

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’
ಪ್ರಮುಖ ಸುದ್ದಿ

ಸೂಪರ್‌ಸ್ಟಾರ್ ರಜನಿಕಾಂತ್, ಶಿವರಾಜ್‌ಕುಮಾರ್ ನಟನೆಯ ಜೈಲರ್’ ಶೂಟಿಂಗ್ ಮುಕ್ತಾಯ ; ‘ಥಿಯೇಟರ್‌ನಲ್ಲಿ ಸಿಗೋಣ..’ ಎಂದ ‘ತಲೈವಾ’

June 3, 2023
ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ
Vijaya Time

ರಾಮ್ ಚರಣ್ ನಿರ್ಮಾಣದ ವೀರ ಸಾವರ್ಕರ್ ಜೀವನ ಆಧರಿಸಿದ ಹೊಸ ಚಿತ್ರ : ಶುರುವಾಯ್ತು ಚರ್ಚೆ

May 30, 2023
ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ
Vijaya Time

ಜೂನ್ನಲ್ಲಿ ಅಭಿಷೇಕ್ ಅಂಬರೀಷ್ – ಅವಿವಾ ಬಿದ್ದಪ್ಪ ವಿವಾಹ : ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಆರತಕ್ಷತೆ

May 30, 2023
ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ
Sports

ಕೊಹ್ಲಿಗೆ Instagram 25 ಕೋಟಿ ಫಾಲೋವರ್ಸ್‌! ಏಷ್ಯಾದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ವ್ಯಕ್ತಿ

May 26, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.