ಬಾಹ್ಯಕಾಶ : ಬ್ರಹ್ಮಾಂಡದ ಅತ್ಯಂತ ನಿಗೂಢ ಮತ್ತು ಅಚ್ಚರಿಯ ಸನ್ನಿವೇಶಗಳಿಗೆ ಸಾಕ್ಷಿಯಾಗಿರುವ ಎರಡು ಗ್ರಹಗಳೆಂದರೆ ಯುರೇನಸ್(Uranus) ಮತ್ತು ನೆಪ್ಚೂನ್(Neptune).
ಸಾಮಾನ್ಯವಾಗಿ, ಮಂಗಳ, ಬುಧ, ಗುರು, ಶುಕ್ರ ಮತ್ತು ಶನಿ ಗ್ರಹಗಳ ಬಗ್ಗೆ ಹೆಚ್ಚಿನವರಿಗೆ ಮಾಹಿತಿಯಿದೆ. ಹಾಗಾಗಿ, ಸದ್ಯ ಯುರೇನಸ್ ಮತ್ತು ನೆಫ್ಚೂನ್ ಗ್ರಹಗಳು ಸಂಶೋಧನೆಯ ಮುಖ್ಯ ಗುರಿಗಳಾಗಿವೆ.

ಭೂಮಿಯಲ್ಲಿ ನೀರಿನ ಮಳೆಯಾಗುವಂತೆ, ಯುರೇನಸ್ ಮತ್ತು ನೆಫ್ಚೂನ್ ಗ್ರಹಗಳಲ್ಲಿ ಉಂಟಾಗುವ ವಜ್ರದ ಮಳೆ ಈ ಗ್ರಹಗಳ ಬಗ್ಗೆ ಕುತೂಹಲ ಹೆಚ್ಚಲು ಕಾರಣವಾಗಿವೆ.
ನೆಪ್ಚೂನ್ ಗ್ರಹವು ಭೂಮಿಗಿಂತ 15 ಪಟ್ಟು ಮತ್ತು ಯುರೇನಸ್ ಗಿಂತ 17 ಪಟ್ಟು ದೊಡ್ಡದಾಗಿದೆ. ಈ ಗ್ರಹಗಳಲ್ಲಿ ಬೀಳುತ್ತಿರುವ ಡೈಮಂಡ್ ರೈನ್(Diamond Rain) ಗೆ ಕಾರಣ ಆಘಾತಕಾರಿಯೂ ಆಗಿದೆ.
ಯುರೇನೆಸ್ ಮತ್ತು ನೆಪ್ಚೂನ್‌ಗಳಲ್ಲಿ ಭಾರಿ ಪ್ರಮಾಣದ ಮೀಥೇನ್ ಅನಿಲವಿದೆ(Methane gas). ಈ ಅನಿಲಗಳು ಜಲಜನಕ ಮತ್ತು ಇಂಗಾಲಗಳನ್ನು ಒಳಗೊಂಡ ಸಿಎಚ್4(CH4) ಅನ್ನು ಒಳಗೊಂಡಿವೆ.
ಭೂಮಿಯಲ್ಲಿ ವಾತಾವರಣದ ಒತ್ತಡದಿಂದ ನೀರು ಆವಿಯಾಗುತ್ತದೆ, ಅದು ಘನೀಕರಿಸಿ ಮೋಡಗಳ ರೂಪ ತಾಳಿ ಮಳೆಯಾಗಿ ಮತ್ತೆ ಭೂಮಿಗೆ ಬೀಳುತ್ತದೆ.
ಇದನ್ನೂ ಓದಿ : https://vijayatimes.com/clean-city-davangere/
ಇದೇ ರೀತಿಯ ಪ್ರಕ್ರಿಯೆಯನ್ನು ನೆಪ್ಚೂನ್ ಮತ್ತು ಯುರೆನಸ್‌ಗಳಲ್ಲಿ ಕೂಡ ಕಾಣಬಹುದಾಗಿದೆ.
ಮೀಥೇನ್ ಮೇಲೆ ಒತ್ತಡ ರೂಪುಗೊಂಡಂತೆ, ಜಲಜನಕ(Hydrogen) ಮತ್ತು ಇಂಗಾಲದ(Carbon) ಬಂಧಗಳು ಒಡೆಯುತ್ತವೆ.
ಇದರ ಬಳಿಕ ಇಂಗಾಲವು ವಜ್ರದ ಸ್ವರೂಪ ಪಡೆದುಕೊಳ್ಳುತ್ತದೆ. ಈ ಕಾರಣದಿಂದ ಇಲ್ಲಿ ವಜ್ರದ ಮಳೆ ಸುರಿಯುತ್ತದೆ.
ಈ ಗ್ರಹಗಳು ಭೂಮಿಯಿಂದ ಅತಿ ಹೆಚ್ಚು ದೂರದಲ್ಲಿವೆ. ಇಲ್ಲಿನ ತಾಪಮಾನ ಮೈನಸ್ 200 ಡಿಗ್ರಿ ಸೆಲ್ಸಿಯಸ್ ಇರುತ್ತದೆ.
ಈ ಗ್ರಹಗಳಲ್ಲಿರುವ ಮೀಥೇನ್ ಅನಿಲವು ಮಂಜುಗಡ್ಡೆಯಂತೆ ಘನೀಕರಿಸುತ್ತದೆ, ಗಾಳಿ ಜೋರಾಗಿ ಬೀಸಿದಾಗ ಅದು ಮೋಡಗಳಂತೆ ಹಾರುತ್ತದೆ.
ಇಲ್ಲಿನ ಮೇಲ್ಮೈ ಸಂಪೂರ್ಣ ಸಮತಟ್ಟಾಗಿದ್ದು ಗಾಳಿಯು ಸೂಪರ್ ಸಾನಿಕ್ ವೇಗದಲ್ಲಿ,

ಗಂಟೆಗೆ 1500 ಮೈಲಿ ವೇಗದಲ್ಲಿ ಬೀಸುತ್ತದೆ. ಈಗಾಗಲೇ ಹೇಳಿದಂತೆ, ಇಲ್ಲಿನ ವಾತಾವರಣ ಘನೀಕರಿಸಿದ ಇಂಗಾಲವನ್ನು ಹೊಂದಿದೆ. ಇದರಿಂದ ವಜ್ರದ ಮಳೆ ಸುರಿಯುತ್ತದೆ, ಇಲ್ಲಿನ ವಜ್ರಗಳನ್ನು ಪಡೆದುಕೊಳ್ಳುವುದು ಯಾರಿಗೂ ಸಾಧ್ಯವಿಲ್ಲ.
ಏಕೆಂದರೆ ಇಲ್ಲಿರುವುದು ಅತ್ಯಂತ ಶೀತಲ ಹವಾಮಾನ, ಇದರಿಂದ ತಪ್ಪಿಸಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ.
https://fb.watch/gBSs0Pahrm/ ವಿಜಯನಗರ ಬಿ ಡಿ ಎ ಅಂಡರ್ ಪಾಸ್ ಆಗಿದೆ ಸ್ಲಂ
ಎಲ್ಲಕ್ಕಿಂತ ಹೆಚ್ಚಾಗಿ, ಅಲ್ಲಿಗೆ ತಲುಪುವುದು ಇನ್ನೂ ಕಷ್ಟಕರ. ಈ ಗ್ರಹಗಳಲ್ಲಿನ ಅಚ್ಚರಿಯನ್ನು ಭೇದಿಸಲು ಜೇಮ್ಸ್ ವೆಬ್ ಸ್ಪೇಸ್ ಟೆಲಿಸ್ಕೋಪ್(James Webb Space Telescope) ಶೀಘ್ರದಲ್ಲಿಯೇ ಕೆಲಸ ಆರಂಭಿಸಲಿದೆ.
ತಾಪಮಾನ ಮತ್ತು ಒತ್ತಡ ಸನ್ನಿವೇಶವು ಈ ಗ್ರಹಗಳಲ್ಲಿ ವಿಪರೀತವಾಗಿರುವುದರಿಂದ,
ಕಾರ್ಬನ್ ಕಣಗಳು ಅಲ್ಲಿನ ವಾತಾವರಣದಲ್ಲಿ ವಜ್ರದ ಹರಳುಗಳಂತೆ ಪುಡಿಯಾಗಿರಬಹುದು ಎನ್ನುವುದು ವಿಜ್ಞಾನಿಗಳು ನಂಬಿಕೆ. ಮೊತ್ತ ಮೊದಲು ವಿಜ್ಞಾನಿಗಳು 2017ರಲ್ಲಿ ಈ ವಿಸ್ಮಯವನ್ನು ಭೇದಿಸಲು ಪ್ರಯೋಗವೊಂದನ್ನು ನಡೆಸಿದ್ದರು.
ವರ್ಷಗಳ ಬಳಿಕ ಈ ವಜ್ರಗಳು ನಿಜಕ್ಕೂ ಹೇಗೆ ರೂಪುಗೊಳ್ಳುತ್ತವೆ ಎಂಬುದನ್ನು ಕೊನೆಗೂ ಪತ್ತೆ ಮಾಡಿದ್ದಾರೆ.
ಇದನ್ನೂ ಓದಿ : https://vijayatimes.com/controversy-with-kumar-swamy-and-jds/
ಅಲ್ಲಿನ ಬೃಹತ್ ಮಂಜುಗಡ್ಡೆಗಳು ವಜ್ರದಂತೆ ಮಳೆಯ ರೂಪದಲ್ಲಿ ಸುರಿಯುತ್ತವೆ ಎಂದು ನಿರಂತರ ಸಂಶೋಧನೆಗಳ ಬಳಿಕ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.
ಈಗಲೂ ಕೂಡ ಈ ವಜ್ರದ ಮಳೆ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿ ಮಾಹಿತಿ ಪಡೆಯಲು ನಾಸಾ ವಿಜ್ಞಾನಿಗಳು ಪ್ರಯತ್ನಿಸುತ್ತಿದ್ದಾರೆ.
- ಪವಿತ್ರ