
ಕೊಟ್ಟಿದ್ದ ಭರವಸೆಗಳು ಆರು ನೂರು , ಆಗಿದ್ದು ಮೂರು. ವಚನಭ್ರಷ್ಟತೆ ಹಾಗೂ ಅಭಿವೃದ್ಧಿ ವೈಫಲ್ಯತೆಯನ್ನ ಮರೆಮಾಚುತ್ತಿರುವ ಬಿಜೆಪಿ(BJP) ರಾಜ್ಯದ ಜನರಿಗೆ ಉತ್ತರಿಸುವ ಸಮಯವಿದು.
ನುಡಿದಂತೆ ನಡೆದಿದ್ದೀರಾ? ಎಂದು ಕಾಂಗ್ರೆಸ್ (CONGRESS) ರಾಜ್ಯ ಬಿಜೆಪಿ ಸರ್ಕಾರವನ್ನು ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ (Twitter) ಮಾಡಿರುವ ರಾಜ್ಯ ಕಾಂಗ್ರೆಸ್, ನಿಮ್ಮ ಪ್ರಣಾಳಿಕೆಯಲ್ಲಿ ಸಹಕಾರಿ – ರಾಷ್ಟ್ರೀಕೃತ ಬ್ಯಾಂಕಿನ (Nationalized Bank) 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ ಮಾಡುವ ಭರವಸೆ ನೀಡಿದ್ದಿರಿ.
https://vijayatimes.com/bjp-congress-sarcasm-with-each-other/
ಆದರೆ, ಡಬಲ್ ಎಂಜಿನ್ (Double engine) ಸರ್ಕಾರದಿಂದ ರೈತರ ಸಾಲ ಮನ್ನಾ ಸಾಧ್ಯವಾಗಲಿಲ್ಲ, ರೈತರ ಆದಾಯವೂ ದ್ವಿಗುಣವಾಗಲಿಲ್ಲ,ಆಗಿದ್ದು ಬೆಲೆ ಏರಿಕೆ ಮಾತ್ರ ಇಂತಹ ಹೊಣೆಗೇಡಿತನ ಏಕೆ?
ಕೊಟ್ಟ 90% ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾದ ಬಿಜೆಪಿ ಸರ್ಕಾರದ ‘ವಚನ ವಂಚನೆ’ಗೆ ಉತ್ತರ ಕೊಡುವ ಸಮಯ ಬಂದಿದೆ. ನೇಮಕಾತಿ (Recruitment) ಅಕ್ರಮ, ಭ್ರಷ್ಟಾಚಾರ,
https://vijayatimes.com/bjp-congress-sarcasm-with-each-other/
ಕಮಿಷನ್ ದಂಧೆಯಲ್ಲಿ ಮುಳುಗಿರುವ ಬಿಜೆಪಿ ಸರ್ಕಾರಕ್ಕೆ ರಾಜ್ಯದ ಜನಸಾಮಾನ್ಯರ ಧ್ವನಿಯಾಗಿ ನಮ್ಮ ನೇರ ಪ್ರಶ್ನೆಗಳು, ಉತ್ತರಿಸುವ ಧೈರ್ಯವಿದೆಯೇ? ಎಂದು ಪ್ರಶ್ನಿಸಿದೆ.
ಇನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು, ಬಿಜೆಪಿ ಸರ್ಕಾರದ ಎಲ್ಲಾ ಕೆಲಸಗಳಲ್ಲೂ ಭ್ರಷ್ಟಾಚಾರ, ಕಮಿಷನ್ (#40commission) ದಂಧೆ ನಡೆಯುತ್ತಿದೆ. ಸಚಿವ ಮಾಧುಸ್ವಾಮಿ ಅವರೇ, ಸರ್ಕಾರ ನಡೆಯುತ್ತಿಲ್ಲ,

ಕೇವಲ ಮ್ಯಾನೇಜ್ ಮಾಡುತ್ತಿದ್ದೇವೆ ಎಂದಿದ್ದಾರೆ. ಇಂತಹ ಭ್ರಷ್ಟ ಸರ್ಕಾರಕ್ಕೆ ಕೆಲವು ಪ್ರಶ್ನೆಗಳನ್ನು ಮುಂದಿಟ್ಟು, ಉತ್ತರ ನೀಡಿ ಎಂದು ಕೇಳುತ್ತಿದ್ದೇವೆ. ಸಹಕಾರಿ ರಾಷ್ಟ್ರೀಕೃತ ಬ್ಯಾಂಕುಗಳ 1 ಲಕ್ಷದ ವರೆಗಿನ ರೈತರ ಸಾಲ ಮನ್ನಾ (loan waiver) ಮಾಡುವ ಭರವಸೆ ನೀಡಿದ್ದರು.