India : ಹಲವು ದಶಕಗಳ ಪ್ರಯತ್ನದ ನಂತರ 70 ವರ್ಷಗಳ ಹಿಂದೆ ಭಾರತದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಚೀತಾಗಳನ್ನು(Difference between cheetah and leopard) ಭಾರತಕ್ಕೆ ತರಲಾಗಿದೆ.

ಆಫ್ರಿಕಾದ(Africa) ನಮೀಬಿಯಾ(Namibia) ದೇಶದಿಂದ ಎಂಟು ಚೀತಾಗಳನ್ನು ಭಾರತದ ಮಧ್ಯಪ್ರದೇಶ(MadhyaPradesh) ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ(Kuno National Park) ಬಿಡಲಾಗಿದೆ.
ಇನ್ನು ಈಗಾಗಲೇ ಭಾರತದಲ್ಲಿರುವ ಚಿರತೆ ಮತ್ತು ನಮೀಬಿಯಾದಿಂದ ಆಗಮಿಸಿರುವ ಚೀತಾಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ಅದರ ಮಾಹಿತಿ ಇಲ್ಲಿದೆ ನೋಡಿ.
ಇದನ್ನೂ ಓದಿ : https://vijayatimes.com/president-of-india-attends-queens-funeral/
ಚೀತಾಗಳು ಸರಿಸುಮಾರು 80-110 ಪೌಂಡ್ಗಳಷ್ಟು ತೂಕವಿರುತ್ತದೆ. ಆದರೆ ಚಿರತೆಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಚೀತಾಗಳು ಸಣ್ಣ ಮತ್ತು ದುಂಡಗಿನ ತಲೆಯನ್ನು ಹೊಂದಿರುತ್ತವೆ. ಚಿರತೆಗಳು ದೊಡ್ಡದಾದ, ಉದ್ದವಾದ ತಲೆಯನ್ನು ಹೊಂದಿರುತ್ತವೆ. ಜಾಗ್ವಾರ್ಗಳು, ಚಿರತೆಗಳು ಮತ್ತು ಚೀತಾಗಳಲ್ಲಿ ಜಾಗ್ವಾರ್ಗಳು(Jaguar) ದೊಡ್ಡದಾಗಿದೆ.

ಹುಲಿ ಮತ್ತು ಸಿಂಹದ ನಂತರ ಅವುಗಳನ್ನು ವಿಶ್ವದ ಮೂರನೇ ಅತಿದೊಡ್ಡ ಪ್ರಾಣಿ ಎಂದು ಪರಿಗಣಿಸಲಾಗಿದೆ. ಜಾಗ್ವಾರ್ಗಳು ತಮ್ಮ ದೇಹದ ಮೇಲೆ ಗುಲಾಬಿ-ಆಕಾರದ ಚುಕ್ಕೆಗಳನ್ನು ಹೊಂದಿರುತ್ತವೆ. ಜಾಗ್ವಾರ್ಗಳು ಭಾರತದಲ್ಲಿ ಕಂಡುಬರುವುದಿಲ್ಲ. ಭೂಮಿಯ ಮೇಲೆ ಅತ್ಯಂತ ವೇಗವಾಗಿ ಓಡುವ ಪ್ರಾಣಿ ಚೀತಾ.
ಆದರೆ ಚಿರತೆ ಚೀತಾಗಿಂತ ಬಲಿಷ್ಠವಾಗಿದ್ದು, ಪ್ರಾಣಿಗಳನ್ನು ಬೇಟೆಯಾಡಿ ಮರದ ಮೇಲೆ ಎಳೆದುಕೊಂಡು ಹೋಗಿ ತಿನ್ನುತ್ತದೆ. ಚೀತಾಗಳು ದುಂಡಗಿನ ಕಲೆಗಳನ್ನು ಮೈಮೇಲೆ ಹೊಂದಿದ್ದರೆ, ಚಿರತೆಗಳು ರೋಸೆಟ್-ಶೈಲಿಯ ಗುರುತುಗಳನ್ನು ಮೈಮೇಲೆ ಹೊಂದಿರುತ್ತವೆ.

ಚಿರತೆಗಳು ಘರ್ಜಿಸುತ್ತವೆ, ಗೊರಕೆ ಹೊಡೆಯುತ್ತವೆ ಆದರೆ ಚೀತಾಗಳು ಘರ್ಜಿಸುವುದಿಲ್ಲ ಮತ್ತು ಹೆಚ್ಚು ಸದ್ದು ಮಾಡುವುದಿಲ್ಲ. ಚೀತಾಗಳು ಹಗಲಿನಲ್ಲಿ ಬೇಟೆಯಾಡಿದರೆ, ಚಿರತೆಗಳು ರಾತ್ರಿಯಲ್ಲಿ ಬೇಟೆಯಾಡುತ್ತವೆ. ಚೀತಾಗಳು ಕಪ್ಪು ‘ಕಣ್ಣೀರಿನ ಗುರುತುಗಳನ್ನು’ ಹೊಂದಿದ್ದು, ಈ ಗುರುತು ಕೆನ್ನೆಗಳ ಕೆಳಗೆ ಬೀಳುತ್ತವೆ.
ಇದನ್ನೂ ಓದಿ : https://vijayatimes.com/boy-plays-and-sleeps-with-the-python/
ಆದರೆ ಚಿರತೆಗಳಿಗೆ ಯಾವುದೇ ಕಣ್ಣೀರಿನ ಗುರುತುಗಳಿಲ್ಲ. ಚಿರತೆಗಳು ಪರಭಕ್ಷಕಗಳಾಗಿದ್ದು, ಒಂಟಿಯಾಗಿ ಬದುಕಲು ಒಲವು ತೋರುತ್ತವೆ. ಆದರೆ ಚೀತಾ ಸಾಮಾನ್ಯವಾಗಿ ಒಡಹುಟ್ಟಿದ ಚೀತಾ ಜೊತೆ ಅಥವಾ ಏಕಾಂಗಿಯಾಗಿ ಬದುಕುತ್ತವೆ.
- ಮಹೇಶ್.ಪಿ.ಎಚ್