Bangalore : ಈ ಡಿಜಿಟಲ್ ಅರೆಸ್ಟ್ (Digital arrest) ಬಗ್ಗೆ ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕು.ಯಾಕಂದ್ರೆ ಯಾರು ಯಾವಾಗ ಬೇಕಾದ್ರೂ ಈ ಡಿಜಿಟಲ್ ಅರೆಸ್ಟ್ಗೆ ಒಳಗಾಗಬಹುದು,ಒಳಗಾಗಿ ತಮ್ಮ ಬದುಕನ್ನೇ ಬರ್ಬಾದ್ ಮಾಡಿಕೊಳ್ಳಬಹುದು (Ruined life) . ಹಾಗಾದ್ರೆ ಡಿಜಿಟಲ್ ಅರೆಸ್ಟ್ ಅಂದ್ರೇನು? ಡಿಜಿಟಲ್ ಅರೆಸ್ಟ್ ಅಂದ್ರೆ ಅದು ಒಂದು ಬಗೆಯ ಸೈಬರ್ ವಂಚನೆ (Cyber fraud) . ಆನ್ಲೈನ್ ಕಳ್ಳರು ತಾವು ಈಡಿಯವರು, ಸಿಬಿಐಯವರು (CBI) ಅಥವಾ ಇತರ ತನಿಖಾ ಸಂಸ್ಥೆಯ ಅಧಿಕಾರಿಗಳು ಅಂತ ಕರೆ ಮಾಡಿ, ಸುಳ್ಳು ಸುಳ್ಳು ಆರೋಪ ಹೊರಿಸಿ, ಹೆದರಿಸಿ, ಬೆದರಿಸಿ, ಹಣಕ್ಕೆ ಬೇಡಿಕೆ ಇಟ್ಟು ಕರೆ ಸ್ವೀಕರಿಸಿದವರ ಬ್ಯಾಂಕ್ ಅಕೌಂಟ್ನಲ್ಲಿದ್ದ (Bank account) ಹಣವನ್ನೆಲ್ಲಾ ದೋಚುವ ಕರಾಳ ಪ್ಲಾನೇ ಡಿಜಿಟಲ್ ಅರೆಸ್ಟ್ (Digital arrest) . ಇವರ ವಂಚನಾ ಜಾಲಕ್ಕೆ ಯಾರು ಬೇಕಾದ್ರೂ ಬೀಳಬಹುದು. ದುರಂತ ಅಂದ್ರೆ ಇವರು ಟಾರ್ಗೆಟ್ ಮಾಡುತ್ತಿರುವುದೇ ವಿದ್ಯಾವಂತರನ್ನೇ .

ಸೈಬರ್ ಖದೀಮರು ಮೊದಲು ತಾವು ಟಾರ್ಗೆಟ್ ಮಾಡಿದವರನ್ನು ಫೋನ್ ಮೂಲಕ (Phone) ಸಂಪರ್ಕಿಸ್ತಾರೆ. ಆ ಬಳಿಕ ನಾವು ಸಿಬಿಐ (CBI) , ಈಡಿ, ನಾರ್ಕೋಟಿಕ್ಸ್ (Narcotics) ಅಥವಾ ತೆರಿಗೆ ಅಧಿಕಾರಿಗಳೆಂದು ಪರಿಚಯ ಮಾಡಿಕೊಳ್ಳುತ್ತಾರೆ. ನಂತರ ನೀವು ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ್ದೀರಾ , ನಿಮಗೆ ಸರ್ಕಾರದಿಂದ ಬ್ಯಾನ್ ಆಗಿರುವ ಅಥವಾ ನಿಷೇಧಿತ ವಸ್ತುಗಳು ಕೊರಿಯರ್ ನಲ್ಲಿ ಬಂದಿವೆ ಅಥವಾ ನೀವೇ ನಿಷೇಧಿತ ವಸ್ತುಗಳನ್ನ ಕೊರಿಯರ್ ಮೂಲಕ ಕಳಿಸಿದ್ದೀರಾ ಎಂದು ವಾದಿಸುತ್ತಾರೆ. ಜೊತೆಗೆ ಸೈಬರ್ ಆರೋಪಗಳನ್ನು (Cyber allegations) ನಿಮ್ಮ ಮೇಲೆ ಹೊರಿಸುತ್ತಾರೆ. ಒಂದು ವೇಳೆ ನೀವು ಭಯಭೀತರಾದ್ರೆ ನಂತರ ವಿಡಿಯೋ ಕರೆ ಅಥವಾ ವಾಟ್ಸಾಪ್ ಕರೆ ಮಾಡಿ ನಿಮ್ಮನ್ನು ಸಂಪರ್ಕದಲ್ಲಿರಿಸಿ,ನಿಮ್ಮನ್ನ ಅಕ್ರಮದ ಹೆಸರಲ್ಲಿ ವಿಚಾರಣೆಗಾಗಿ ಬಂಧಿಸಲಾಗಿದೆ, ಕಂಪ್ಯೂಟರ್ ಮೊಬೈಲ್ ಪರದೆಗೆ ಕಾಣುವಂತೆ ಒಂದು ಕೊಠಡಿಯಲ್ಲಿ ಅಥಾವ ಒಂದೇ ಜಾಗದಲ್ಲಿ ಕೂರುವಂತೆ ಬೆದರಿಕೆ ಹಾಕುತ್ತಾರೆ. ಸಂತ್ರಸ್ತರನ್ನ ನಂಬಿಸುವ ಸಲುವಾಗಿ ತಾವು ಯಾವ ತನಿಖಾ ಸಂಸ್ಥೆಯ (Investigative agency) ಅಧಿಕಾರಿಗಳೆಂದು ತಿಳಿಸಿರುತ್ತಾರೋ ಆ ಕಚೇರಿಯ ವಾತಾವರಣವನ್ನು ಸೃಷ್ಟಿಸಿಕೊಂಡು ಅಧಿಕಾರಿಗಳೆಂದು ನಿರೂಪಿಸಿಕೊಳ್ಳಲು ನಕಲಿ ID ಕಾರ್ಡ್ ಗಳನ್ನ ತೋರಿಸುತ್ತಾರೆ. ಕೆಲ ಸಂದರ್ಭಗಳಲ್ಲಿ ವಾರಂಟ್ ಪ್ರತಿಗಳನ್ನ ತೋರಿಸಿ ಸಂತ್ರಸ್ತರಿಗೆ ವಿಡಿಯೋ ಮೂಲಕ ನಂಬಿಸುತ್ತಾರೆ.
ನಿಮ್ಮ ಫೋನ್ ಅಕ್ರಮಕ್ಕೆ (phone is illegal) ಬಳಸಲಾಗಿದೆ. ನೀವು ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದೀರಾ ಎಂದು ಹೇಳುತ್ತಾ ಜೈಲು, ಗಲ್ಲು ಶಿಕ್ಷೆಯ (Death penalty) ಹೆಸರಲ್ಲಿ ಸಂತ್ರಸ್ತರನ್ನ ಹೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಮುಂದುವರೆದು ಈ ಪ್ರಕರಣದಿಂದ ನಿಮನ್ನ ಪಾರು ಮಾಡಲು ಇಂತಿಷ್ಟು ಹಣ (Some Money) ಕೊಡಬೇಕಾಗುತ್ತದೆ ಈ ಸಂದರ್ಭದಲ್ಲಿ ಯಾರನ್ನು ಸಂಪರ್ಕಿಸ ಬಾರದು ಅಂತ ಹೇಳಿ ಮೂರನೇ ವ್ಯಕ್ತಿಯ ಬ್ಯಾಂಕ್ ಖಾತೆಗೆ (Bank Account) ಆನ್ಲೈನ್ ಮೂಲಕ ಹಣ ವರ್ಗಾವಣೆ ಮಾಡಿಸಿಕೊಳ್ಳುತ್ತಾರೆ. ಹಣ ವರ್ಗಾವಣೆಯಾಗುತ್ತಿದ್ದಂತೆ ಕಳ್ಳರ ನಂಬರ್ಗಳು ಸ್ವಿಚ್ ಆಫ್ ಆಗುತ್ತೆ. ನೀವು ಏನು ಆಗ್ತಿದೆ ಅಂತ ತಿಳಿಯುವ ಮುನ್ನವೇ ಎಲ್ಲವನ್ನು ಕಳೆದುಕೊಂಡು ಬರ್ಬಾದ್ ಆಗ್ತೀರಾ ಎಚ್ಚರ.ಯಾರಾದ್ರೂ ನಿಮಗೆ ತನಿಖಾ ಸಂಸ್ಥೆ ಅಧಿಕಾರಿಗಳು ಅಂತ ಹೇಳಿ ಕರೆ ಮಾಡಿದರೆ, ವಿಚಲಿತರಾಗದೆ, ವಿವರವಾಗಿ ಪರಿಶೀಲಿಸಿ (Check in detail) . ಅಪರಿಚಿತ ಮತ್ತು ಅಂತರಾಷ್ತ್ರೀಯ ಕರೆಗಳ ಬಗ್ಗೆ ಎಚ್ಚರ ವಹಿಸಿ. ನೀವು ಪ್ರಮುಖವಾಗಿ ಗಮನಿಸಬೇಕಾದ ಅಂಶ ಅಂದ್ರೆ ತನಿಖಾ ಅಧಿಕಾರಿಗಳು ಎಂದೂ ಫೋನ್ ಕರೆಗಳ ಮೂಲಕ ಹಣಕ್ಕೆ ಬೇಡಿಕೆ ಇಡುವುದಿಲ್ಲ. ಅಲ್ಲದೆ ನಮ್ಮ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಎಂಬ ಕಾನೂನೇ ಇಲ್ಲ. ಇನ್ನು ಈ ವಂಚರ ಬಗ್ಗೆ ಅನುಮಾನ ಬಂದರೆ ಕೂಡಲೇ ಸೈಬರ್ ಸಹಾಯವಾಣಿ (Cyber Helpline) ನಂಬರ್ ೧೯೩೦ (1930) ಅಥವಾ ಪೊಲೀಸರನ್ನ ಕೂಡಲೇ ಸಂಪರ್ಕಿಸಿ.

ಒಂದು ವೇಳೆ ನೀವು ಡಿಜಿಟಲ್ ಅರೆಸ್ಟ್ ಗೆ (Digital Arrest) ಒಳಗಾಗಿ ಹಣ ಕಳೆದುಕೊಂಡರೆ ಭಯಪಡದೆ, ಮೊದಲು ನಿಮ್ಮ ಬ್ಯಾಂಕ್ ಗೆ ಸಂಪರ್ಕಿಸಿ ನಿಮ್ಮ ಖಾತೆಯನ್ನು ಸ್ಥಗಿತಗೊಳಿಸಿ (Suspend the account.) . ಸೈಬರ್ ಸಹಾಯ ವಾಣಿ ೧೯೩೦ ಸಂಪರ್ಕಿಸಿ. ನಂತರ ನ್ಯಾಷನಲ್ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್ (Cyber Crime Reporting Portal) ನಲ್ಲಿ ದೂರು ದಾಖಲಿಸಿ. ನೆನಪಿಡಿ, ವಂಚನೆಗೊಳಗಾಗಿ ದೂರು ದಾಖಲಿಸುವ ಬದಲು, ವಂಚನೆಗೊಳಗಾಗದಂತೆ ಎಚ್ಚರ ವಹಿಸಿ. ಅಪರಿಚಿತ ಕರೆಗಳನ್ನು ಸ್ವೀಕರಿಸದಿರಿ. ತನಿಖಾಧಿಕಾರಿಗಳು ಅಂತ ಕರೆ ಮಾಡಿದ್ರೆ ಭಯ ಬೀಳದಿರಿ. ಡಿಜಿಟಲ್ ಅರೆಸ್ಟ್ ಅನ್ನುವುದೇ ಇಲ್ಲ ಅನ್ನುವುದನ್ನು ಮೊದಲು ತಿಳಿದುಕೊಳ್ಳಿ.