- ಇ-ಸ್ಟ್ಯಾಂಪ್ ಕಾಗದಗಳಿಗೆ ಡಿಜಿಟಲ್ ಸ್ಪರ್ಶ(digital e-stamping will be further strengthened)
- ಸರಳ, ಭದ್ರ ಮತ್ತು ಕಾಗದರಹಿತ ವ್ಯವಹಾರ ಗುರಿಯೊಂದಿಗೆ ರಾಜ್ಯ ಸರ್ಕಾರದ ಹೊಸ ಡಿಜಿಟಲ್ ಸ್ಟ್ಯಾಂಪಿಂಗ್ ಕ್ರಮ ಜಾರಿಗೆ
- ಆಧಾರ್ OTP ದೃಢೀಕರಣದೊಂದಿಗೆ 24×7 ಲಭ್ಯವಿರುವ ಸುಗಮ, ವೇಗವಾದ ಮತ್ತು ಪಾರದರ್ಶಕ ಸ್ಟಾಂಪಿಂಗ್ ವ್ಯವಸ್ಥೆ
Bengaluru: ಕರ್ನಾಟಕದಲ್ಲಿ ಸ್ಟಾಂಪಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಪರಿವರ್ತನೆ ಜಾರಿಯಾಗಿದೆ. ಇನ್ನು ಮುಂದೆ ಪರಂಪರೆಯ ಇ-ಸ್ಟ್ಯಾಂಪ್ ಕಾಗದಗಳು ಅಗತ್ಯವಿಲ್ಲ; ಬದಲಿಗೆ ರಾಜ್ಯ ಸರ್ಕಾರ ಸಂಪೂರ್ಣ ಡಿಜಿಟ್ಟಲ್ ಮಾದರಿಯ ‘ಡಿಜಿಟಲ್ ಇ-ಸ್ಟ್ಯಾಂಪ್’ ವ್ಯವಸ್ಥೆಯನ್ನು ಅಧಿಕೃತವಾಗಿ ಜಾರಿಗೆ ತಂದಿದೆ.

ಕಳೆದ ಅಕ್ಟೋಬರ್‌ನಿಂದಲೇ ಈ ವ್ಯವಸ್ಥೆ ರಾಜ್ಯಾದ್ಯಂತ ಕಾರ್ಯಾರಂಭ ಮಾಡಿದ್ದು, (digital e-stamping will be further strengthened) ಸ್ಟಾಂಪ್ ಕಾಗದಗಳ ಮುದ್ರಣ, ಮಾರಾಟ ಮತ್ತು ಹಸ್ತಚಾಲಿತ
ವಹಿವಾಟಿನಲ್ಲಿ ನಡೆಯುತ್ತಿದ್ದ ಅನೇಕ ದುರ್ಬಳಕೆಗಳಿಗೆ ಅಂತ್ಯ ಹಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು, ಈ ಹೊಸ
ವ್ಯವಸ್ಥೆಯ ಮಹತ್ವ, ಭದ್ರತಾ ಅಂಶಗಳು ಹಾಗೂ ನಾಗರಿಕರಿಗೆ ದೊರೆಯುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಅವರ ಪ್ರಕಾರ, ಡಿಜಿಟಲ್ ಸ್ಟಾಂಪಿಂಗ್ (Digital stamping) ಜಾರಿಗೆ ಬರುವುದರಿಂದ ಆಡಳಿತಾತ್ಮಕ
ದಕ್ಷತೆ ಹೆಚ್ಚುವುದು ಮಾತ್ರವಲ್ಲ, ಸಂಪೂರ್ಣ ಕಾಗದರಹಿತ ವಹಿವಾಟಿನ ದಿಕ್ಕಿನಲ್ಲಿ ರಾಜ್ಯವು ಮಹತ್ತರ ಹೆಜ್ಜೆಯನ್ನಿಟ್ಟಿದೆ ಹೊಸ ವ್ಯವಸ್ಥೆಯ ಅಡಿಯಲ್ಲಿ ನಾಗರಿಕರು ಮನೆಯಲ್ಲಿಯೇ ಕುಳಿತು ಸ್ಟಾಂಪ್ ಡ್ಯೂಟಿ ಪಾವತಿಸಿ
ತಕ್ಷಣವೇ ಡಿಜಿಟಲ್ ಇ-ಸ್ಟ್ಯಾಂಪ್ (Digital e-stamp) ಅನ್ನು ಪಡೆಯಬಹುದಾಗಿದೆ. ಹಿಂದಿನಂತೆ ಏಜೆಂಟ್‌ರನ್ನು (Agents) ಸಂಪರ್ಕಿಸುವುದು, ಪರವಾನಗಿ ಪಡೆದ ಮಾರಾಟಗಾರರ ಬಳಿ ಹೋಗಿ ಕಾಗದವನ್ನು
ತೆಗೆಯುವುದು ಅಥವಾ ನಕಲಿ ಚಲನ್ ಸಿಕ್ಕಿಹಾಕಿಕೊಳ್ಳುವ ಭಯ—ಇವೆಲ್ಲವೂ ಮಾಯವಾಗಲಿದೆ. ಸಂಪೂರ್ಣ ಪ್ರಕ್ರಿಯೆ ಆನ್‌ಲೈನ್‌ನಲ್ಲಿರುವುದರಿಂದ (online) ಇದು ದೇಶದ ಎಲ್ಲೆಡೆಯಿಂದಲೂ 24×7 ಲಭ್ಯವಾಗುತ್ತದೆ.
ಸಚಿವರ ಮಾತಿನಂತೆ, ಡಿಜಿಟಲ್ ಛಾಪಾ (Digital printing) ಕಾಗದಗಳಿಗೆ ಕಾನೂನಾತ್ಮಕ ಮಾನ್ಯತೆ ನೀಡಲು 2025ರ ಕರ್ನಾಟಕ ಸ್ಟಾಂಪು ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲಾಗಿದೆ.
ಇದರಿಂದ ಡಿಜಿಟಲ್ ಸಹಿಗೆ ಹೆಚ್ಚು ಬಲ ದೊರೆತಿದ್ದು, ವಹಿವಾಟುಗಳ ಸ್ಪಷ್ಟತೆ ಮತ್ತು ಸುರಕ್ಷತೆಯನ್ನು ಇನ್ನಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ನಾಗರಿಕರು ಆಧಾರ್ OTP ದೃಢೀಕರಣದ ಮೂಲಕ ಡಿಜಿಟಲ್ ಅಗ್ರಿಮೆಂಟ್‌ಗಳನ್ನು
ತಕ್ಷಣ ಪೂರೈಸುವ ವ್ಯವಸ್ಥೆಯೂ ಅಳವಡಿಸಲಾಗಿದೆ. ಈ ವ್ಯವಸ್ಥೆಯ ಪ್ರಮುಖ ಉದ್ದೇಶಗಳಲ್ಲಿ ಒಂದು — ಸ್ಟಾಂಪ್ ದುರ್ಬಳಕೆಯ ಮೂಲಗಳನ್ನು ನಿರ್ಮೂಲ ಮಾಡುವುದು. ತೆಲಗಿ ಹಗರಣದ ನಂತರ ರಾಜ್ಯವು ಭೌತಿಕ
ಸ್ಟಾಂಪ್ ಪೇಪರ್‌ಗಳ ಮುದ್ರಣವನ್ನು ನಿಲ್ಲಿಸಿ, SHCIL ಮೂಲಕ ಇ-ಸ್ಟ್ಯಾಂಪ್ ಪೇಪರ್‌ಗಳನ್ನು ನೀಡುವ ಪದ್ದತಿಯನ್ನು ಅಳವಡಿಸಿಕೊಳ್ಳಲಾಗಿತ್ತು. ಆದರೆ ನಕಲುಗಳು, ತಪ್ಪು ವರ್ಗೀಕರಣ ಮತ್ತು ಸ್ಟಾಂಪ್ ಡ್ಯೂಟಿ
(Stamp duty) ವಂಚನೆಗಳಂತಹ ಸಮಸ್ಯೆಗಳು ನಿರಂತರವಾಗಿ ಮುಂದುವರಿದೇ ಇವೆ. ಡಿಜಿಟಲ್ ಸ್ಟಾಂಪಿಂಗ್ ಆಗಮನದಿಂದ ಈ ಅಕ್ರಮಗಳನ್ನು ಮೂಲದಿಂದಲೇ ತಡೆಗಟ್ಟುವ ಸಾಧ್ಯತೆ ಹೆಚ್ಚಿದೆ. ಡಿಜಿಟಲ್ ಸ್ಟಾಂಪ್
ದಾಖಲೆಗೇ ಸೇರಿಬಿಡುವುದರಿಂದ ಮರುಬಳಕೆ ಅಥವಾ ನಕಲು ಮಾಡಲು ಯಾವಾಗಲೂ ಸಾಧ್ಯವಿಲ್ಲ. ಜೊತೆಗೆ, ಆಧಾರ್ ಆಧಾರಿತ ಇ-ಸೈನ್ ಅಥವಾ DSC ಬಳಸಿ ದಸ್ತಾವೇಜುಗಳನ್ನು ಡಿಜಿಟಲ್ ಸಹಿ ಮಾಡುವ ಅವಕಾಶದಿಂದ ದಾಖಲೆಗಳ ಭದ್ರತೆಯನ್ನು ಹೊಸ ಮಟ್ಟಕ್ಕೆ ಕೊಂಡೊಯ್ಯುತ್ತದೆ.
ಜನರಿಗೆ ದೊರಕುವ ಸೌಲಭ್ಯಗಳ ವಿಚಾರದಲ್ಲಿ, ಡಿಜಿಟಲ್ ಇ-ಸ್ಟ್ಯಾಂಪ್ ಎಲ್ಲ ವಿಧದ ಅಗ್ರಿಮೆಂಟ್‌ಗಳಲ್ಲಿ (Agreements) ಅನ್ವಯವಾಗುವುದರಿಂದ ಇದು ಸಾಮಾನ್ಯ
ನಾಗರಿಕರಿಂದ ರಿಯಲ್ ಎಸ್ಟೇಟ್ (Realestate) ವಲಯದವರೆಗೂ ಎಲ್ಲರಿಗೂ ಉಪಯುಕ್ತವಾಗಲಿದೆ. ಹಿಂದಿನಂತೆ ಸ್ಟಾಂಪ್ ಕಾಗದ ಕಳೆದುಹೋದರೂ ಸಮಸ್ಯೆ, ಮರುಪಡೆಯಲು ತೊಂದರೆ, ದಾಖಲೆ ಸಿಗದ ಭೀತಿ—
ಇವೆಲ್ಲವೂ ಈಗ ಇಲ್ಲ. ಒಮ್ಮೆ ಡಿಜಿಟಲ್ ಅಗ್ರಿಮೆಂಟ್ ಮಾಡಿಸಿದರೆ, ದಾಖಲೆ ಸುರಕ್ಷಿತವಾಗಿ ವ್ಯವಸ್ಥೆಯಲ್ಲೇ ಲಭ್ಯವಿರುತ್ತದೆ. ಯೂನಿಕ್ ನಂಬರ್ (Unique number) ಮತ್ತು QR ಕೋಡ್ ಹೊಂದಿರುವ ಈ ಡಿಜಿಟಲ್
ಛಾಪಾ ಕಾಗದ ಭದ್ರತೆ, (digital e-stamping will be further strengthened) ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುತ್ತದೆ.ಅಲ್ಲದೇ, ಸೇವಾ ಶುಲ್ಕ ಹೆಚ್ಚಾಗದ ಕಾರಣ ನಾಗರಿಕರಿಗೆ
ಹೆಚ್ಚುವರಿ ಬಾಧೆಯೂ ಆಗುವುದಿಲ್ಲ. ಸಚಿವ ಕೃಷ್ಣಬೈರೇಗೌಡ ಅವರು ಶೀಘ್ರದಲ್ಲೇ ರಾಜ್ಯಾದ್ಯಂತ ಡಿಜಿಟಲ್ ಇ-ಸ್ಟ್ಯಾಂಪ್ ಬಳಕೆಯನ್ನು ಸಂಪೂರ್ಣವಾಗಿ ಕಡ್ಡಾಯಗೊಳಿಸಲಾಗುವುದಾಗಿ ಸಚಿವರು ತಿಳಿಸಿದರು.
ಈ ಮಹತ್ವದ ಪರಿವರ್ತನೆಯ ಪರಿಣಾಮವಾಗಿ Karnataka ಸಂಪೂರ್ಣ ಡಿಜಿಟಲೀಕರಣದ (Digitalization) ನೋಂದಣಿ ವ್ಯವಸ್ಥೆಯತ್ತ ಹೆಜ್ಜೆ ಹಾಕುತ್ತಿದೆ. ದಾಖಲೆಗಳಲ್ಲಿ ವಂಚನೆ, ಸಮಯದ ನಷ್ಟ, ಮಧ್ಯವರ್ತಿಗಳ
ಅವಲಂಬನೆ ಹಾಗೂ ಅನಾವಶ್ಯಕ ಕಾಗದ ಪ್ರಕ್ರಿಯೆಗಳು—ಇವೆಲ್ಲವೂ ಬಹುತೇಕ ಅಡಿಗಲ್ಲಾಗಲಿವೆ. ಡಿಜಿಟಲ್ ಇ-ಸ್ಟ್ಯಾಂಪ್ ಅಳವಡಿಕೆಯಿಂದ ಭದ್ರತೆ ಮತ್ತು ವ್ಯವಹಾರ ಕ್ಲೀನ್ಲಿನೆಸ್ (Cleanliness) ಎರಡೂ ಹೊಸ
ಮಟ್ಟಕ್ಕೆ ಏರಲಿವೆ. ಇದರಿಂದ ಆದಾಯ ಸೋರಿಕೆಯ ನಿಯಂತ್ರಣ, ವೆಚ್ಚ ಉಳಿತಾಯ ಮತ್ತು ಆಡಳಿತದ ಪಾರದರ್ಶಕತೆ ಎಲ್ಲ ಸೇರಿ ಕಂದಾಯ ಇಲಾಖೆಗೆ ದೀರ್ಘಾವಧಿಯಲ್ಲಿ ದೊಡ್ಡ ಲಾಭ ತರುವ ನಿರೀಕ್ಷೆಯಿದೆ.
ಇದನ್ನು ಓದಿ : ರಾಜ್ಯದ ಐದು ಕಡೆಗಳಲ್ಲಿ ವಿಶ್ವ ದರ್ಜೆಯ ಏರೋಸ್ಪೇಸ್, ಡಿಪೆನ್ಸ್ ಪಾರ್ಕ್ ನಿರ್ಮಾಣ : ಡಿಸಿಎಂ ಡಿಕೆ ಶಿವಕುಮಾರ್