The Central Government Aims to Create Digital ID cards for 11 crore Farmers by 2027
New Delhi: ದಿನದಿಂದ ದಿನಕ್ಕೆ ರೈತರ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ರೈತ ಸಮುದಾಯವನ್ನು ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ 2027ರೊಳಗೆ 11 ಕೋಟಿ ರೈತರಿಗೆ ಡಿಜಿಟಲ್ ಐಡಿ ಕಾರ್ಡ್ (Digital ID Card) ಸೃಷ್ಟಿಸುವ ಗುರಿ ಹೊಂದಿದೆ. ಇದು ಆಧಾರ್ ಕಾರ್ಡ್ನಂತೆಯೇ ಇದ್ದು ಇದನ್ನು ಪ್ರತಿಯೊಬ್ಬ ರೈತರು ಹೊಂದಿರಬೇಕು ಎಂದು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ.
ರೈತರಿಗೆ ಪ್ರಮುಖ ಸೇವೆಗಳು ಮತ್ತು ಯೋಜನೆಗಳನ್ನು ತಲುಪಿಸುವ ರೈತ ಕೇಂದ್ರಿತ ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (DPI)ದಂತೆ ರಚಿಸಿರುವ ಅಗ್ರಿಸ್ಟಾಕ್ ಉಪಕ್ರಮದ ಭಾಗವಾಗಿರುವುದು ಇದರ ಗುರಿಯಾಗಿದೆ. ಆಧಾರ್ ಕಾರ್ಡ್ನಂತೆಯೇ (Aadhar Card) ರೈತರಿಗೆ ರೈತ ಗುರುತಿನ ಚೀಟಿ ಪರಿಚಯಿಸುವುದು ಅಗ್ರಿಸ್ಟ್ಯಾಕ್ನ ಪ್ರಮುಖ ವೈಶಿಷ್ಟ್ಯವಾಗಿದೆ.
2024-25ರ ಹಣಕಾಸು ವರ್ಷದಲ್ಲಿ 6 ಕೋಟಿ, 2025-26ರ ಹಣಕಾಸು ವರ್ಷದಲ್ಲಿ 3 ಕೋಟಿ ಮತ್ತು 2026-27ನೇ ಸಾಲಿನಲ್ಲಿ 2 ಕೋಟಿ ಡಿಜಿಟಲ್ ಐಡಿಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.ರಾಜ್ಯ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳಿಂದ ರಚಿಸಲ್ಪಟ್ಟ ಮತ್ತು ನಿರ್ವಹಿಸಲ್ಪಡುವ ಈ ಗುರುತಿನ ಚೀಟಿಗಳಲ್ಲಿ ಭೂ ದಾಖಲೆಗಳು, ಜಾನುವಾರುಗಳ ಮಾಲೀಕತ್ವ, ಬಿತ್ತಿದ ಬೆಳೆಗಳು ಮತ್ತು ಪಡೆದ ಪ್ರಯೋಜನಗಳು ಸೇರಿದಂತೆ ವಿವಿಧ ರೈತ-ಸಂಬಂಧಿತ ಡೇಟಾವನ್ನು ಲಿಂಕ್ (Data Link) ಮಾಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ .
2024-25 ರಲ್ಲಿ 400 ಜಿಲ್ಲೆಗಳು ಮತ್ತು 2025-26 ರಲ್ಲಿ ಎಲ್ಲಾ ಜಿಲ್ಲೆಗಳನ್ನು ಒಳಗೊಳ್ಳುವ ಡಿಜಿಟಲ್ ಬೆಳೆ ಸಮೀಕ್ಷೆಯನ್ನು ಎರಡು ವರ್ಷಗಳಲ್ಲಿ ರಾಷ್ಟ್ರವ್ಯಾಪಿ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ.ಇದು ಹಣಕಾಸು, ಆರೋಗ್ಯ, ಶಿಕ್ಷಣ (Finance, Health, Education) ಮತ್ತು ಚಿಲ್ಲರೆ ವ್ಯಾಪಾರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಡಿಜಿಟಲ್ ಪೂರಕ ಪರಿಸರಕ್ಕೆ ಹಾದಿ ಸುಗಮಗೊಳಿಸಲಿದೆ.
ಕೃಷಿ ಕ್ಷೇತ್ರದಲ್ಲಿ ಇದೇ ರೀತಿಯ ಪರಿವರ್ತನೆಗಾಗಿ, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟವು 2,817 ಕೋಟಿ ರೂಪಾಯಿಗಳ ಗಣನೀಯ ಹಣಕಾಸಿನ ವೆಚ್ಚದೊಂದಿಗೆ ಡಿಜಿಟಲ್ ಅಗ್ರಿಕಲ್ಚರ್ ಮಿಷನ್’ (Digital Agriculture Mission) ಗೆ ಅನುಮೋದನೆ ನೀಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವಿನ ಸಹಭಾಗಿತ್ವದ ಮೂಲಕ ಅಗ್ರಿಸ್ಟಾಕ್ ಅನುಷ್ಟಾನ ಪ್ರಗತಿಯಲ್ಲಿದ್ದು, 19 ರಾಜ್ಯಗಳು ಈ ಕೃಷಿ ಸಚಿವಾಲಯದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿ ಒಪ್ಪಿಗೆ ಸೂಚಿಸಿವೆ.
Digital ID Cards for 11Crore Farmers by 2027
New Delhi: In order to empower the farming community in view of the financial condition of farmers deteriorating day by day, the central government aims to create digital ID cards for 11 crore farmers by 2027. It is similar to Aadhaar card and the central government is preparing a plan that every farmer should have it.
It aims to be part of the Agristock initiative, created as a farmer-centric Digital Public Infrastructure (DPI) that delivers key services and projects to farmers. A key feature of Agristack is to introduce a farmer identity card to farmers similar to Aadhar Card.
The central government has said that it aims to create 6 crore digital IDs in the financial year 2024-25, 3 crore in the financial year 2025-26 and 2 crore in the year 2026-27. These ID cards, created and maintained by the state government and Union Territories, include land records, ownership of cattle, sowing Various farmer-related data including crops and benefits received will be linked (Data Link), the government said.
The government plans to launch a nationwide digital crop survey covering 400 districts in 2024-25 and all districts in 2025-26 in two years. This will pave the way for digitally enabled environment in various sectors including finance, health, education and retail.
For a similar transformation in the agriculture sector, the Union Cabinet chaired by Prime Minister Narendra Modi has approved the ‘Digital Agriculture Mission’ with a substantial financial outlay of Rs 2,817 crore. Agristock initiative is progressing through partnership between central and state governments and 19 states have signed MoUs with the Ministry of Agriculture.