- ಇನ್ಮುಂದೆ ತಿರುಮಲದಲ್ಲಿ ಲಡ್ಡು (Digital security for Laddu Prasad) ಪ್ರಸಾದಕ್ಕೆ ಡಿಜಿಟಲ್ ಭದ್ರತೆ
- ಮಾನವ ಮೂಗು-ನಾಲಿಗೆ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಎಲೆಕ್ಟ್ರಾನಿಕ್ ಸಾಧನಗಳ ಅಳವಡಿಕೆ
- ₹25 ಕೋಟಿ ವೆಚ್ಚದ ಅತ್ಯಾಧುನಿಕ ಪ್ರಯೋಗಾಲಯ ತಿರುಮಲದಲ್ಲಿ ಸ್ಥಾಪನೆ
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ದರ್ಶನಮಾಡಿ ಪ್ರಸಿದ್ಧ ಲಡ್ಡು ಪ್ರಸಾದ (Digital security for Laddu Prasad) ಸ್ವೀಕರಿಸಿದರೆ ಮಾತ್ರ ಭಕ್ತಾಧಿಗಳಿಗೆ ಅದೇನೋ ಸಂತೋಷ.ಆದರೆ ಇತ್ತೀಚಿನ ದಿನಗಳಲ್ಲಿ ಲಡ್ಡು ತುಪ್ಪದ ಗುಣಮಟ್ಟ ಕುರಿತು ಉಂಟಾದ ಚರ್ಚೆಗಳು ಭಕ್ತರಲ್ಲಿ ಆತಂಕ ಮೂಡಿಸಿದ್ದವು.
ಈ ಹಿನ್ನೆಲೆ ದೇವಸ್ಥಾನ ಆಡಳಿತವು ಮಹತ್ವದ ಹೆಜ್ಜೆ ಇಟ್ಟಿದ್ದು, ಅತ್ಯಾಧುನಿಕ ಆಹಾರ ಗುಣಮಟ್ಟ ಪರೀಕ್ಷಾ ತಂತ್ರಜ್ಞಾನಗಳನ್ನು ಅಳವಡಿಸಲು ಮುಂದಾಗಿದೆ.

ಫ್ರಾನ್ಸ್‌ನಿಂದ ಸುಮಾರು ₹3.5 ಕೋಟಿ ವೆಚ್ಚದಲ್ಲಿ ‘ಇ-ಟಂಗ್’ (Electronic Tongue) ಮತ್ತು ‘ಇ-ನೋಸ್’ (Electronic Nose) ಯಂತ್ರಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ.
ಸುಮಾರು ₹25 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನವೀನ ಆಹಾರ ಪ್ರಯೋಗಾಲಯದಲ್ಲಿ ಈ ಸಾಧನಗಳನ್ನು ಸ್ಥಾಪಿಸಲಾಗುತ್ತಿದ್ದು, ಲಡ್ಡು ಪ್ರಸಾದದ ಶುದ್ಧತೆ
ಮತ್ತು ಗುಣಮಟ್ಟವನ್ನು ವೈಜ್ಞಾನಿಕವಾಗಿ ಪರಿಶೀಲಿಸಲಾಗುತ್ತದೆ. ಇದರಿಂದ ಭಕ್ತರಿಗೆ “ಕಲಬೆರಕೆ” ಬಗ್ಗೆ ಯಾವುದೇ ಶಂಕೆ ಉಳಿಯದಂತೆ ನೋಡಿಕೊಳ್ಳಬಹುದಾಗಿದೆ.
‘ಇ-ನೋಸ್’ ಮತ್ತು ‘ಇ-ಟಂಗ್’ ಎಂಬ ಹೆಸರುಗಳು ಕೇಳಲು ಹೊಸದಾಗಿದ್ದರೂ, ಅವುಗಳ ಕಾರ್ಯಪದ್ಧತಿ ಮಾನವ ದೇಹದ ಸಂವೇದನಾ ವ್ಯವಸ್ಥೆಯನ್ನು ಅನುಸರಿಸಿದೆ.
‘ಇ-ನೋಸ್’ ಮಾನವ ಮೂಗಿನ ಘ್ರಾಣ ವ್ಯವಸ್ಥೆಯನ್ನು ಮಾದರಿಯಾಗಿಸಿಕೊಂಡು ಅಭಿವೃದ್ಧಿಪಡಿಸಲಾದ ಗ್ಯಾಸ್ ಮತ್ತು ವಾಸನೆ ಸೆನ್ಸಾರ್‌ಗಳ ಸಮೂಹವಾಗಿದೆ.
ಆಹಾರದಲ್ಲಿರುವ ಸುಗಂಧ ಅಂಶಗಳನ್ನು ವಿಶ್ಲೇಷಿಸಿ, ಯಾವುದೇ ಅಸಾಮಾನ್ಯ (Digital security for Laddu Prasad) ವಾಸನೆ ಅಥವಾ ಕೆಟ್ಟ ಗುಣಮಟ್ಟವನ್ನು ಕ್ಷಣಾರ್ಧದಲ್ಲಿ ಪತ್ತೆಹಚ್ಚುತ್ತದೆ.
ಅದೇ ರೀತಿ ‘ಇ-ಟಂಗ್’ ಮಾನವ ನಾಲಿಗೆಯ ರುಚಿ ಗ್ರಹಣ ವ್ಯವಸ್ಥೆಯನ್ನು ಅನುಕರಿಸಿ ಕಾರ್ಯನಿರ್ವಹಿಸುತ್ತದೆ. ಸಿಹಿ, ಉಪ್ಪು, ಕಹಿ, ಹುಳಿ ಹಾಗೂ ಉಮಾಮಿ
ಎಂಬ ಐದು ಮೂಲಭೂತ ರುಚಿಗಳನ್ನು ವಿಶ್ಲೇಷಿಸಿ, ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸವಿದೆಯೇ ಎಂಬುದನ್ನು ಗುರುತಿಸುತ್ತದೆ.
ಸಾಂಪ್ರದಾಯಿಕ ಪ್ರಯೋಗಾಲಯ ಪರೀಕ್ಷೆಗಳಿಗಿಂತ ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಫಲಿತಾಂಶ ನೀಡುವ ಸಾಮರ್ಥ್ಯ ಈ ಸಾಧನಗಳಲ್ಲಿದೆ.
ಈ ತಂತ್ರಜ್ಞಾನಗಳ ಪ್ರಮುಖ ವಿಶೇಷತೆ ಎಂದರೆ, ಅವು ಆಹಾರದ “ಫಿಂಗರ್‌ಪ್ರಿಂಟ್ ಪ್ರೊಫೈಲ್” (Fingerprint profile) ಸೃಷ್ಟಿಸುವುದು. ಉದಾಹರಣೆಗೆ, ಲಡ್ಡುವಿನ
ನಿಜವಾದ ಗುಣಮಟ್ಟಕ್ಕೆ ಹೊಂದುವ ವಾಸನೆ ಮತ್ತು ರುಚಿಯ ಡೇಟಾವನ್ನು ಮೊದಲು ಡೇಟಾಬೇಸ್‌ನಲ್ಲಿ ಸಂಗ್ರಹಿಸಲಾಗುತ್ತದೆ.
ಬಳಿಕ ಪ್ರತಿಯೊಂದು ಬ್ಯಾಚ್‌ನ ಲಡ್ಡುವನ್ನು ಈ ಯಂತ್ರಗಳ ಮೂಲಕ ಪರೀಕ್ಷಿಸಿ, ಹಳೆಯ ಡೇಟಾ ಜೊತೆ ಹೋಲಿಕೆ ಮಾಡಲಾಗುತ್ತದೆ.
ಏನಾದರೂ ವ್ಯತ್ಯಾಸ ಕಂಡುಬಂದರೆ ತಕ್ಷಣವೇ ಅಲರ್ಟ್ ನೀಡುತ್ತದೆ. ಈ ವಿಧಾನ ಸಂಪೂರ್ಣವಾಗಿ ನಾಶಕಾರಿಯಲ್ಲದ (non-destructive) ಪರೀಕ್ಷೆಯಾಗಿರುವುದರಿಂದ,
ಆಹಾರದ ಮಾದರಿಯನ್ನು ಹಾಳು ಮಾಡದೇ ಗುಣಮಟ್ಟ ಪರಿಶೀಲಿಸಬಹುದು.
ಹೀಗಾಗಿ ತಾಜಾತನ, ತುಪ್ಪದ ಗುಣಮಟ್ಟ, ರುಚಿಯ ಸ್ಥಿರತೆ ಹಾಗೂ ಯಾವುದೇ ಕಲಬೆರಕೆಯ ಲಕ್ಷಣಗಳನ್ನು ಶೀಘ್ರವಾಗಿ ಪತ್ತೆಮಾಡಬಹುದು.
ಆಹಾರ ಉದ್ಯಮದಲ್ಲಿ ಗುಣಮಟ್ಟವೇ ವಿಶ್ವಾಸದ ಮೂಲ. ವಿಶೇಷವಾಗಿ ತಿರುಮಲದಂತಹ ಪವಿತ್ರ ಕ್ಷೇತ್ರದಲ್ಲಿ ಪ್ರಸಾದದ ಶುದ್ಧತೆ ಅತ್ಯಂತ ಮಹತ್ವದ್ದು.
ಇತ್ತೀಚಿನ ವಿವಾದಗಳು ಭಕ್ತರಲ್ಲಿ ಅನುಮಾನ ಮೂಡಿಸಿದ್ದರೂ, ಈ ಹೊಸ ತಂತ್ರಜ್ಞಾನವು ಆ ಶಂಕೆಗಳಿಗೆ ಸಂಪೂರ್ಣ ತೆರೆ ಎಳೆಯುವ ಸಾಧ್ಯತೆ ಇದೆ.
ಡೈರಿ ಮತ್ತು ಆಹಾರ ವಲಯಗಳಲ್ಲಿ ಈಗಾಗಲೇ ಬಳಕೆಯಾಗುತ್ತಿರುವ ಈ ಸಾಧನಗಳು ಉತ್ಪನ್ನದ ಸ್ಥಿರ ಗುಣಮಟ್ಟ ಕಾಪಾಡಲು ಸಹಾಯಕವಾಗಿವೆ.
ದೇವಸ್ಥಾನ ಆಡಳಿತವು ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡಿರುವುದು ಪಾರದರ್ಶಕತೆ ಮತ್ತು ಹೊಣೆಗಾರಿಕೆಗೆ ಒತ್ತು ನೀಡಿದಂತಾಗಿದೆ. ಇದರಿಂದ ಭಕ್ತರು ಲಡ್ಡು ಪ್ರಸಾದವನ್ನು ಆತ್ಮವಿಶ್ವಾಸದಿಂದ ಸ್ವೀಕರಿಸುವಂತಾಗುತ್ತದೆ.
ಒಟ್ಟಾರೆ, ತಿರುಮಲದಲ್ಲಿ ‘ಇ-ಟಂಗ್’ ಮತ್ತು ‘ಇ-ನೋಸ್’ ತಂತ್ರಜ್ಞಾನಗಳ ಅಳವಡಿಕೆ ಧಾರ್ಮಿಕ ಕ್ಷೇತ್ರದಲ್ಲಿ ಡಿಜಿಟಲ್ ಪರಿವರ್ತನೆಯ ಹೊಸ ಅಧ್ಯಾಯವಾಗಿದೆ.
ಭಕ್ತಿ ಮತ್ತು ವಿಜ್ಞಾನ ಕೈಜೋಡಿಸಿದ ಉದಾಹರಣೆಯಾಗಿ ಇದು ಕಾಣಿಸುತ್ತದೆ. ಲಡ್ಡು ಪ್ರಸಾದದ ಗುಣಮಟ್ಟವನ್ನು ಕ್ಷಣಾರ್ಧದಲ್ಲಿ ಪರಿಶೀಲಿಸುವ ವ್ಯವಸ್ಥೆ ಜಾರಿಗೆ ಬಂದಿರುವುದು ಭಕ್ತರಿಗೆ ಭರವಸೆಯ ಸಂದೇಶವಾಗಿದೆ.
ಮುಂದಿನ ದಿನಗಳಲ್ಲಿ ಇಂತಹ ತಂತ್ರಜ್ಞಾನಗಳು ಇತರ ದೇವಸ್ಥಾನಗಳು ಹಾಗೂ ದೊಡ್ಡ ಆಹಾರ ಉತ್ಪಾದನಾ ಘಟಕಗಳಲ್ಲಿಯೂ ಅಳವಡಿಕೆಯಾಗುವ ಸಾಧ್ಯತೆ ಇದೆ. ಶುದ್ಧತೆ, ಪಾರದರ್ಶಕತೆ ಮತ್ತು ತ್ವರಿತ ಪರೀಕ್ಷೆ—ಈ ಮೂರು ಅಂಶಗಳನ್ನು ಒಟ್ಟುಗೂಡಿಸುವ ಈ ಕ್ರಮ, ಪ್ರಸಾದದ ಗುಣಮಟ್ಟಕ್ಕೆ ಡಿಜಿಟಲ್ ಕವಚ ಒದಗಿಸುವ ಮಹತ್ವದ ಹೆಜ್ಜೆಯಾಗಿದೆ.
ಇದನ್ನು ಓದಿ : https://vijayatimes.com/government-implement-ulms-scheme/