ಕಾಮನ್ವೆಲ್ತ್ ಗೇಮ್ಸ್ 2022ನೇ(Commonwealth Games 2022) ಆವೃತ್ತಿ ಮುಕ್ತಾಯವಾಗಿದೆ. ಇಂಗ್ಲೆಂಡ್(England) ದೇಶದ ಬರ್ಮಿಂಗ್ಹ್ಯಾಮ್ ನಲ್ಲಿ(Burminghyam) ಅದ್ಧೂರಿಯಾಗಿ ನಡೆದ ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ 2022 ಪಂದ್ಯಾವಳಿಯಲ್ಲಿ, ಭಾರತ ನಿರೀಕ್ಷೆಯಂತೆಯೇ ಐತಿಹಾಸಿಕ ಸಾಧನೆ ಮಾಡಿದೆ.
ಒಟ್ಟು 22 ಚಿನ್ನ, 16 ಬೆಳ್ಳಿ, 23 ಕಂಚಿನ ಪದಕಗಳ ಜೊತೆ ಒಟ್ಟು 61 ಪದಕಗಳನ್ನು ಪಡೆದು, ಪದಕ ಪಟ್ಟಿಯಲ್ಲಿ ಭಾರತ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಕ್ರೀಡಾಪಟುಗಳು ಅದ್ಭುತವಾದ ಪ್ರದರ್ಶನವನ್ನು ಜಗತ್ತಿನೆದುರು ನೀಡಿದ್ದಾರೆ. ಈ ಬಾರಿಯ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಮಹಿಳಾ ಆಟಗಾರರು ಸಾಕಷ್ಟು ಸಾಧನೆ ಮಾಡಿರುವುದು ಗಮನ ಸೆಳೆದಿದೆ.
ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್(Dinesh Karthik) ಪತ್ನಿ, ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ. ದೀಪಿಕಾ ಮತ್ತು ಸೌರವ್ ಘೋಷಾಲ್ ಜೋಡಿ ಕಂಚಿನ ಪದಕಕ್ಕಾಗಿ ನಡೆದ ಪಂದ್ಯವನ್ನು ಗೆದ್ದುಕೊಂಡಿತು. ಪತ್ನಿಯ ಸಾಧನೆ ಬಗ್ಗೆ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೆಮ್ಮೆಯಿಂದ ತಮ್ಮ ಸೋಷಿಯಲ್ ಮೀಡಿಯಾದ(Social Media) ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
‘ನಿಮ್ಮಿಬ್ಬರ ಪ್ರಯತ್ನ, ಪರಿಶ್ರಮಕ್ಕೆ ತಕ್ಕ ಫಲ ಸಿಕ್ಕಿದೆ. ನಿಮ್ಮ ಬಗ್ಗೆ ನನಗೆ ತುಂಬಾ ಹೆಮ್ಮೆಯಿದೆ’ ಎಂದು ದಿನೇಶ್ ಕಾರ್ತಿಕ್ ಪತ್ನಿ ದೀಪಿಕಾ ಪಲ್ಲಿಕಲ್ ಮತ್ತು ಸೌರವ್ ಘೋಷಾಲ್ ಗೆ ಅಭಿನಂದಿಸಿದ್ದಾರೆ. ಭಾರತ ತಂಡದ ವಿಕೆಟ್ ಕೀಪರ್, ಬ್ಯಾಟ್ಸ್’ಮನ್ ದಿನೇಶ್ ಕಾರ್ತಿಕ್ ಅವರನ್ನು 2015 ರಲ್ಲಿ ಮದುವೆಯಾಗಿದ್ದ ದೀಪಿಕಾ ಪಲ್ಲಿಕಲ್, 2021ರ ಅಕ್ಟೋಬರ್ 18 ರಂದು ಅವಳಿ ಮಕ್ಕಳಿಗೆ ಜನ್ಮ ನೀಡಿದರು.
ದಿನೇಶ್ ಕಾರ್ತಿಕ್ -ದೀಪಿಕಾ ದಂಪತಿ ತಮ್ಮ ಅವಳಿ ಮಕ್ಕಳಿಗೆ ಕಬೀರ್ ಮತ್ತು ಝಿಯಾನ್ ಎಂದು ಹೆಸರಿಟ್ಟಿದ್ದಾರೆ. ಮಕ್ಕಳು ಜನಿಸಿದ ಆರೇ ತಿಂಗಳಲ್ಲಿ ವಿಶ್ವ ಸ್ಕ್ವಾಷ್ ಡಬಲ್ಸ್ ಚಾಂಪಿಯನ್ಶಿಪ್ ನಲ್ಲಿ ದೀಪಿಕಾ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.
- ಕುಮಾರ್, ಬೆಂಗಳೂರು