ಫ್ಯಾಂಟಮ್ ಚಿತ್ರ “ವಿಕ್ರಾಂತ್ ರೋಣ” ಆಗಲು ಕಾರಣ ಏನೆಂದು ಬಿಚ್ಚಿಟ್ಟ ನಿರ್ದೇಶಕ ಅನೂಪ್ ಭಂಡಾರಿ

ಬೆಂಗಳೂರು, ಜ. 24: ಅಭಿನಯ ಚಕ್ರವರ್ತಿ ಕಿಚ್ಚ‌ ಸುದೀಪ್‌ ಅಭಿನಯದ ಫ್ಯಾಂಟಮ್ ಚಿತ್ರದ ಟೈಟಲ್ ಬದಲಾಗಲು ಕಾರಣ ಏನೆಂಬುದನ್ನು ಚಿತ್ರದ ನಿರ್ದೇಶಕ ಅನೂಪ್ ಭಂಡಾರಿ ಬಹಿರಂಗಪಡಿಸಿದ್ದಾರೆ.

ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ ಫ್ಯಾಂಟಮ್ ‌ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ. ಈ ನಡುವೆ ಚಿತ್ರದ‌ ಟೈಟಲ್ ಬದಲಿಸಲು ನಿರ್ಧರಿಸಿದ ಚಿತ್ರತಂಡ ಫ್ಯಾಂಟಮ್ ಚಿತ್ರವನ್ನು “ವಿಕ್ರಾಂತ್ ರೋಣ” ಎಂದು ಬದಲಿಸಿದೆ. ಅಲ್ಲದೆ ಜ.31ರಂದು ದುಬೈನ ಬುರ್ಜ್ ಖಲೀಫಾದಲ್ಲಿ ಚಿತ್ರದ ಟೈಟಲ್ ಲಾಂಚ್‌ ಮಾಡುವುದಾಗಿ ಘೋಷಿಸಿದೆ.

ಇದೀಗ ಚಿತ್ರದ ಟೈಟಲ್ ಬದಲಿಸಲು ಕಾರಣ ಏನೆಂಬುದನ್ನು ತಿಳಿಸಿರುವ ನಿರ್ದೇಶಕ ಅನೂಪ್ ಭಂಡಾರಿ, ಫ್ಯಾಂಟಮ್ ಚಿತ್ರದ ಹೆಸರನ್ನು ವಿಕ್ರಾಂತ್ ರೋಣ ಎಂದು ಬದಲಿಸಲು ಅಭಿಮಾನಿಗಳೇ ಕಾರಣವಾಗಿದ್ದಾರೆ. ಚಿತ್ರದ ಚಿತ್ರೀಕರಣ ಶುರುವಾದ ನಂತರದಲ್ಲಿ ಫ್ಯಾಂಟಮ್ ಹೆಸರಿಗಿಂತಲೂ ವಿಕ್ರಾಂತ್ ರೋಣ ಹೆಸರು ದೊಡ್ಡದಾಗಿ ಸದ್ದು ಮಾಡಿತು. ಅಭಿಮಾನಿಗಳು ಮನಸಾರೆ ಇಷ್ಟಪಟ್ಟ ಹೆಸರನ್ನು ವಿಕ್ರಾಂತ್ ರೋಣ ಹೆಸರಿನಲ್ಲಿ ಪರಿಚಯಿಸಬೇಕೆಂಬ ಕಾರಣದಿಂದ ಚಿತ್ರದ ಟೈಟಲ್ ಬದಲಿಸಿರುವುದಾಗಿ ತಿಳಿಸಿದ್ದಾರೆ.

Latest News

ದೇಶ-ವಿದೇಶ

ರೇಷನ್ ಕಾರ್ಡ್ ಹೊಂದಿರುವ ಬಡವರಿಗೆ ರಾಷ್ಟ್ರಧ್ವಜ ಖರೀದಿಸುವಂತೆ ಒತ್ತಾಯಿಸುತ್ತಿದ್ದಾರೆ : ರಾಹುಲ್ ಗಾಂಧಿ

ಇದು ಬಿಜೆಪಿ ಸರ್ಕಾರದ ಪ್ರಚಾರ ಪಿತೂರಿ. ಈ ರೀತಿ ಮಾಡುವ ಮೂಲಕ ಬಿಜೆಪಿಯು “ರಾಷ್ಟ್ರೀಯತೆ”ಯನ್ನು ಮಾರಾಟ ಮಾಡುತ್ತಿದೆ ಮತ್ತು ಬಡವರ ಆತ್ಮಗೌರವಕ್ಕೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ.

ರಾಜಕೀಯ

`ಬ್ಲ್ಯಾಕ್‌ ಮೇಲ್‌ ಕುಮಾರಸ್ವಾಮಿʼ ; ಕಣ್ಣೀರ ಕೋಡಿಯಿಂದ ಕುಟುಂಬಕ್ಕೆ ಲಾಭವೇ ಹೊರತು ಜನತೆಗೇನು ಲಾಭ? : ಅಶ್ವಥ್ ನಾರಾಯಣ್‌

ನೀವು ಈವರೆಗೆ ಹೇಳಿದ ಸುಳ್ಳುಗಳನ್ನು ಎಣಿಸಲು ಸಾಧ್ಯವೇ? ಎಂದು ಸಚಿವ(Minister) ಅಶ್ವಥ್‌ ನಾರಾಯಣ್(Ashwath Narayan) ಪ್ರಶ್ನಿಸಿದ್ದಾರೆ.

ದೇಶ-ವಿದೇಶ

ಇಬ್ಬರು ಭಯೋತ್ಪಾದಕರನ್ನು ಹತ್ಯೆಗೈದ ಭಾರತೀಯ ಸೇನೆ ; ದಾಳಿಯಲ್ಲಿ ಮೂವರು ಯೋಧರು ಹುತಾತ್ಮ!

ಸ್ವಾತಂತ್ರ್ಯ ದಿನಾಚರಣೆ(Independence Day) ಸಂದರ್ಭದಲ್ಲಿ ಉಗ್ರರು ದೇಶದ ವಿವಿಧ ಭಾಗಗಳಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ದೇಶ-ವಿದೇಶ

‘ಡಾನಿ’ ಬುಡಕಟ್ಟು ಜನಾಂಗದಲ್ಲಿ ಬೆರಳನ್ನು ಕತ್ತರಿಸುವುದೇ ಸಂಪ್ರದಾಯವಂತೆ!

ಇಂಡೋನೇಷ್ಯಾದ, ಪಪುವಾ ಗಿನಿಯಾ ದ್ವೀಪದಲ್ಲಿ ವಾಸಿಸುವ ಎಲ್ಲಾ ಡಾನಿ ಬುಡಕಟ್ಟಿನ ಮಹಿಳೆಯರನ್ನು ಕತ್ತರಿಸಿದ ಬೆರಳುಗಳಿಂದ ಬದುಕಲು ಒತ್ತಾಯಿಸಲಾಗುತ್ತದೆ.