Visit Channel

ಏಪ್ರಿಲ್‌ನಲ್ಲಿ `ಬೆಲ್ ಬಾಟಂ 2′ ಚಿತ್ರೀಕರಣ

WhatsApp Image 2021-01-30 at 2.36.38 PM

ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿರುವ `ಬೆಲ್ ಬಾಟಂ’ ಅದ್ಭುತ ಯಶಸ್ಸು, ಪ್ರಶಸ್ತಿ ಕಂಡ ಬಳಿಕ ಇದೀಗ ಅದರ ಎರಡನೇ ಭಾಗಕ್ಕೆ ಸಜ್ಜಾಗಿದ್ದಾರೆ ನಿರ್ದೇಶಕ ಜಯತೀರ್ಥ. ವಿಶೇಷ ಏನೆಂದರೆ ಮೊದಲ ಭಾಗದಲ್ಲಿ ಪಾತ್ರ ನಿರ್ವಹಿಸಿದ ಎಲ್ಲ ಕಲಾವಿದರು ಎರಡನೇ ಭಾಗದಲ್ಲಿ ಮರಳುತ್ತಿರುವುದರ ಜೊತೆಗೆ ತಾನ್ಯಾ ಹೋಪ್ ಮತ್ತೋರ್ವ ನಾಯಕಿಯಾಗಿ ಎಂಟ್ರಿ ನೀಡಿದ್ದಾರೆ.

ನಿರ್ಮಾಪಕ ಸಂತೋಷ್ ಅವರು ಎರಡನೇ ಭಾಗವನ್ನು `ಬೆಲ್ ಬಾಟಂ’ಗಿಂತ ನಾಲ್ಕರಷ್ಟು ದೊಡ್ಡ ಮಟ್ಟದಲ್ಲಿ ತೆರೆಗೆ ತರುವ ತಯಾರಿ ನಡೆಸಿದ್ದಾರೆ. ಅಂದಹಾಗೆ ಬಜೆಟ್ ದೊಡ್ಡದಾಗಿದೆ ಎಂದ ಮಾತ್ರಕ್ಕೆ ಇದನ್ನು ಪ್ಯಾನ್ ಇಂಡಿಯಾ ಮೂವಿಯಾಗಿ ಮಾಡುತ್ತಿಲ್ಲ. ನಾವು ಕನ್ನಡದಲ್ಲಿ ಮಾತ್ರ ತೆರೆಗೆ ತರುತ್ತಿದ್ದೇವೆ. ಉಳಿದ ಭಾಷೆಗಳಲ್ಲಿ ನೇರವಾಗಿ ಕನ್ನಡ ಅಥವಾ ಡಬ್ಬಿಂಗ್ ಮಾಡಿ ಪ್ರದರ್ಶಿಸಲಾಗುವುದು ಎಂದಿದ್ದಾರೆ ರಿಷಬ್. ಮೊದಲ ಚಿತ್ರದಲ್ಲಿದ್ದ ಗೆಟಪ್‌ಗೆ ಮರಳಲಿರುವುದಾಗಿ ರಿಷಬ್ ಹೇಳಿದ್ದಾರೆ. ಎಂಬತ್ತರ ಕಾಲಘಟ್ಟದ ಕತೆಯೇ ಮುಂದುವರಿಯುವ ಕಾರಣ, ಮತ್ತೆ ಅಂದಿನ ಕಾಲದ ಕಾಸ್ಟ್ಯೂಮ್ ಗಳ ಬಗ್ಗೆ ಅನ್ವೇಷಣೆ ನಡೆಸಿದ್ದೇನೆ ಎಂದಿದ್ದಾರೆ ರಿಷಬ್ ಪತ್ನಿ ಪ್ರಗತಿ ಶೆಟ್ಟಿ. ಅವರ ಚಿತ್ರದ ಕಾಸ್ಟ್ಯೂಮ್ ಡಿಸೈನರಾಗಿ ಕೆಲಸ ಮಾಡುತ್ತಿದ್ದಾರೆ. ನಾಯಕಿಯಾಗಿ ಹರಿಪ್ರಿಯಾ ಜೊತೆಗೆ ಬಸಣ್ಣಿ ಖ್ಯಾತಿಯ ತಾನ್ಯಾ ಹೋಪ್ ಕೂಡ ಅಭಿನಯಿಸುತ್ತಿರುವುದು ಎರಡನೇ ಭಾಗದ ವಿಶೇಷ. ಉಳಿದಂತೆ ಗುರುಪಾದ ಪಾತ್ರದಲ್ಲಿ ಪಿ.ಡಿ ಸತೀಶ್ಚಂದ್ರ, ಸೆಗಣಿ ಪಿಂಟೋ ಪಾತ್ರದಲ್ಲಿ ಸುಜಯ್ ಶಾಸ್ತ್ರಿ, ಹಿರಿಯ ನಿರ್ದೇಶಕ ಶಿವಮಣಿ ಮೊದಲಾದವರು ತಮ್ಮ ಪಾತ್ರಗಳಲ್ಲಿ ಮುಂದುವರಿಯಲಿದ್ದಾರೆ. ಕತೆ ಇನ್ನಷ್ಟು ಟ್ವಿಸ್ಟ್ ತೆಗೆದುಕೊಳ್ಳಲಿದೆ ಎಂದು ಕತೆಗಾರ ಟಿ.ಕೆ ದಯಾನಂದ ಹೇಳಿದ್ದಾರೆ.

ಬನಶಂಕರಿಯ ಧರ್ಮಗಿರಿ ಮಂಜುನಾಥ ದೇವಾಲಯದಲ್ಲಿ ನಡೆದ ಮುಹೂರ್ತ ಸಮಾರಂಭದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪಾಲ್ಗೊಂಡು ಕ್ಲ್ಯಾಪ್ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು. ನಿರ್ಮಾಪಕರ ತಾಯಿ ಕ್ಯಾಮೆರಾ ಸ್ವಿಚ್ ಆನ್ ಮಾಡಿದರು.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.