ಮ್ಯಾಜಿಕ್ ಯುಗದ ವೆಬ್ 3.O ! ಇದು ಸೋಷಿಯಲ್ ಮಿಡಿಯಾಗೆ ಕೊನೆ ಹಾಡಲಿದೆಯಾ?

ಇದು ಎಂಡ್ ಆಫ್ ಸೋಷಿಯಲ್ ಮಿಡಿಯಾ ಆಗಲಿದೆಯಾ?ವೆಬ್ 3.O ತಾಂತ್ರಿಕ ಕ್ಷೇತ್ರಕ್ಕೆ ವರವೋ ? ಶಾಪವೋ? ಜನರಿಗೆ ಈ ವೆಬ್ 3.O ಉಪಯೋಗವಾದರೂ ಏನು? ಈ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಓದುಗರೇ ಇಂಟರ್ನೆಟ್ ಹಾಗೂ ಸೋಷಿಯಲ್ ಮೀಡಿಯಾ ರೀತಿಯ ಫ್ಲಾಟ್ ಫಾರ್ಮ್ ನಲ್ಲಿ ಬಹಳ ಚರ್ಚೆಗೆ ಗುರಿಯಾಗಿರುವ ವಿಷಯವೆಂದರೇ ಅದು ವೆಬ್ 3.O ಈ ಪಾಯಿಂಟ್ ಕೆಲ ಜನರ ಅಭಿಪ್ರಾಯದಂತೆ ಇದು ಸೋಷಿಯಲ್ ಮಿಡಿಯಾಗೆ ಕೊನೆ ಹಾಡಲಿದೆ ಅಂತ. ಹಾಗಾದ್ರೆ ಈ ವೆಬ್ 3.O ಪಾಯಿಂಟ್ O ಅಂದರೇನು? ಇದರ ಅನುಕೂಲ ಹಾಗೂ ಅನಾನುಕೂಲವಾದರೂ ಏನು? ಇವೆಲ್ಲಾ ಮಾಹಿತಿ ತಿಳಿಯಲು ಮುಂದೆ ಒದಿ.

ವೆಬ್ 3.O ಸಾಮಾಜಿಕ ಜಾಲತಾಣಕ್ಕೆ ದಿ ಎಂಡ್ ಎಂದು ನೀಡುತ್ತಿರುವ ಸೂಚನೆ ಅನ್ನೋ ಮಾತು ಕೇಳಿ ಬರುತ್ತಿದೆ. ಈ ಚರ್ಚೆ ಯಾಕೆ ಬಂತು? ಇದನ್ನು ತಿಳಿಯುವ ಮುಂಚೆ ನಾವು ವೆಬ್ 3.O, ಅದಕ್ಕಿಂತಲೂ ಮುಂಚೆ ವೆಬ್ 1.O ಹಾಗೂ ವೆಬ್ 2.O ಅಂದ್ರೆ ಏನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುವುದು ಸಹಜ. ಈ ವೆಬ್ 1.O ಅನ್ನುವುದು 90ರ ದಶಕದಲ್ಲಿ ಚಾಲನೆಗೆ ಬಂದಿತ್ತು. ಇದು ಇಂಟರ್ನೆಟ್ಟಿನ ಅಂಶವಾಗಿದ್ದು , ಇದರಲ್ಲಿ ನಾವು ಮಾಹಿತಿಗಳನ್ನು ಮಾತ್ರ ಓದಬಹುದಾಗಿತ್ತು. ಆದರೆ ನಮ್ಮ ಮಾಹಿತಿಯನ್ನು ಅಲ್ಲಿ ಹಂಚಿಕೊಳ್ಳುತ್ತಿರಲಿಲ್ಲ. ಇದು ರೀಡ್ ಓನ್ಲಿ ಟೈಪ್ ಆಫ್ ಇಂಟರ್ ನೆಟ್. ಇದರಲ್ಲಿ ಬಳಸುತ್ತಿದ್ದ ಕಂಪ್ಯೂಟರ್ ಗಳ ಗಾತ್ರ ಬಹಳ ದೊಡ್ಡದಾಗಿತ್ತು ಮತ್ತು ಇದರಲ್ಲಿ 5 ರಿಂದ 6 mb ಮಾತ್ರದ ಸ್ಟೋರೇಜ್ ಇತ್ತು. ಇದರಲ್ಲಿ ಕಡಿಮೆ ಇನ್ ಪುಟ್ಸ್ ಗಳನ್ನು ಕೊಡಬಹುದಾಗಿದ್ದು. ಈ ಎಲ್ಲಾ ಸಮಸ್ಯೆಗಳನ್ನು ದೂರಮಾಡಲು ಟೆಕ್ನಾಲಜಿ ಕ್ಷೇತ್ರಕ್ಕೆ ಕಾಲಿಟ್ಟಿದ್ದು ವೆಬ್ 2.O

ಈ ವೆಬ್ 2.O 2002ರಲ್ಲಿ ಚಾಲನೆಗೆ ಬಂದಿದ್ದು, ಇದು ವೆಬ್ 1.O ಗಿಂತಲೂ ಸ್ವಲ್ಪ ವಿಭಿನ್ನ. ಏಕೆಂದರೆ ಇದರಲ್ಲಿ ಮಾಹಿತಿಗಳನ್ನು ತೆಗೆದುಕೊಳ್ಳುವುದು ಮಾತ್ರವಲ್ಲ, ನಾವು ಕೂಡ ಮಾಹಿತಿಯನ್ನು ಇಂಟರ್ನೆಟ್ಟಿಗೆ ಕಳಿಸಬಹುದಾಗಿತ್ತು. ಈ ವೆಬ್ 2.O ಅನ್ನು ಇಂಟರ್ನೆಟ್ ಆಫ್ ಟಾರ್ಗೆಟೆಡ್ ಆ್ಯಪ್ ಎಂದು ಕೂಡ ಕರೆಯಲಾಗುತ್ತದೆ. ನಾವು ಇಂದು ಬಳಸುತ್ತಿರುವ ಫೇಸ್ಬುಕ್, ಟ್ವಿಟ್ಟರ್ ,ಇನ್ಸ್ಟಾಗ್ರಾಮ್ ಎಲ್ಲವೂ ಈ ವೆಬ್ 2.O ಅಡಿಯಲ್ಲಿ ಬರುತ್ತದೆ. ನಾವು ಇಂದು ಜೀವಿಸುತ್ತಿರುವ ಜಗತ್ತನ್ನು 2.O ಎರಾ ಎಂದು ಕೂಡ ಕರೆಯಲಾಗುತ್ತದೆ. ಆದರೆ ಇದರಲ್ಲಿ ಪ್ರೈವಸಿ ಲೀಕ್ ಆಗುವ ಸಮಸ್ಯೆ ಇರುವುದರಿಂದ ನಾವು ವೆಬ್ 3.O ಟೆಕ್ನಾಲಜಿ ಕಡೆ ಮುಖ ಮಾಡಿದ್ದೇವೆ.

ವೆಬ್ 3.o ಎಂದರೇನು? :

ಈ ವೆಬ್ 3.O ಟೆಕ್ನಾಲಜಿಯನ್ನು ಬ್ರೀಡ್ ಆಫ್ ಇಂಟರ್ ನೆಟ್ ಎಂದೇ ಕರೆಯಲಾಗುತ್ತದೆ. ಇದರಲ್ಲಿ ನಮ್ಮ ಮಾಹಿತಿ ಯಾವುದೇ ರೀತಿಯಲ್ಲಿ ಸೋರಿಕೆಯಾಗುವುದಿಲ್ಲ. ನಮ್ಮ ಮಾಹಿತಿಗಳನ್ನು ಗೂಗಲ್ ಹಾಗೂ ಆ್ಯಪಲ್ ಗಳಂತಹ ಸಂಸ್ಥೆಗಳು ಓದುವುದಿಲ್ಲ. ಇದರ ಉದ್ದೇಶ ಬಂದರೆ ಡಿಸೆಂಟ್ರಲೈಸ್ಡ್ ವರ್ಶನ್ ಆಫ್ ಡಿಜಿಟಲ್ ವರ್ಲ್ಡ್. ಈ ತಂತ್ರಜ್ಞಾನದಲ್ಲಿ ಸೆಂಟ್ರಲೈಸ್ಡ್ ಹಾಗೂ ಡಾಟಾ ಸ್ಪೆಸಿಫಿಕ್ ಸರ್ವರ್ಸ್ ಇಲ್ಲದೆಯೂ ಕೂಡ ನಾವು ಇಂಟರ್ ಆಕ್ಟ್ ಹಾಗೂ ಕೊಲಾಬರೇಟರ್ ಗಳನ್ನು ಮಾಡಿಕೊಳ್ಳಬಹುದು. ಈ ಟೆಕ್ನಾಲಜಿಯನ್ನು ನಾವು ಬ್ಲಾಕ್ ಚೈನ್ ಸಹಾಯದಿಂದ ಪಡೆದುಕೊಳ್ಳುತ್ತಿದ್ದೇವೆ. ಈ ಟೆಕ್ನಾಲಜಿ ಬರುವುದರಿಂದ ನಮ್ಮ ಎಲ್ಲಾ ಮಾಹಿತಿಗಳನ್ನು ವಿವಿಧ ಕಂಪ್ಯೂಟರ್ ಗಳಲ್ಲಿ ಸ್ಟೋರ್ ಮಾಡಬಹುದು. ಈ ಟೆಕ್ನಾಲಜಿ ಬ್ಲಾಕಿಂಗ್, ಹ್ಯಾಕಿಂಗ್ ಡಿಪೆಂಡೆನ್ಸಿಯ ಅಂಶವನ್ನು ತಡೆಯುತ್ತದೆ. ಇದರಲ್ಲಿ ನೂರರಷ್ಟು ಪ್ರೈವೆಸಿಯನ್ನು ಬಳಕೆದಾರರು ಪಡೆದುಕೊಳ್ಳಬಹುದು.

ವೆಬ್ 3.o ಅನುಕೂಲಗಳು :

ಎಂಡ್ ಯೂಸರ್ ಈ ಅಪ್ಲಿಕೇಶನ್ ಇಂದ ಬಹಳ ಉಪಯೋಗವನ್ನು ಪಡೆದುಕೊಳ್ಳುತ್ತಾರೆ. ಈ ಡಾಟಾವನ್ನು ರಕ್ಷಿಸಲು ಡೇಟಾ ಎನ್ಕ್ರಿಪ್ಷನ್ ಅತ್ಯಂತ ಮಹತ್ವವಾದದ್ದು .ನಮ್ಮ ಯಾವುದೇ ಮಾಹಿತಿಯನ್ನು ದೊಡ್ಡ ಕಂಪನಿಗಳಾದ ಗೂಗಲ್ ಹಾಗೂ ಆ್ಯಪಲ್ ಗಳಂತಹ ಸಂಸ್ಥೆಗಳು ಇನ್ನು ಮುಂದೆ ಓದುವುದಿಲ್ಲ. ಇದರಿಂದ ಬಳಕೆದಾರರ ಮಾಹಿತಿ ಸಂಪೂರ್ಣವಾಗಿ ಸುರಕ್ಷಿತದಿಂದ ಇರುತ್ತದೆ.

ಯಾವುದೇ ನಿರ್ಬಂಧವಿರುವುದಿಲ್ಲ :

ಈ ಬ್ಲಾಕ್ ಚೇನ್ ನೆಟ್ವರ್ಕ್ ಎಲ್ಲರಿಗೂ ಸುಲಭವಾಗಿ ಆ್ಯಕ್ಸಿಸ್ ಆಗಿರುವ ಕಾರಣ, ಬಳಕೆದಾರರು ತಮ್ಮದೇ ಆದ ಅಡ್ರಸ್ ಗಳನ್ನು ರಚಿಸಿಕೊಳ್ಳಬಹುದು ಮತ್ತು ನೆಟ್ ವರ್ಕ್ಗಳ ಜೊತೆಗೆ ನೇರವಾಗಿ ಸಂಪರ್ಕಿಸಬಹುದು. ಬಳಕೆದಾರರನ್ನು ಅವರ ಲಿಂಗಾ, ಆದಾಯ ಅಥವಾ ಸಾಮಾಜಿಕ ಅಂಶಗಳ ಆಧಾರದ ಮೇಲೆ ಈ ನೆಟ್ ವರ್ಕ್ ಗಳನ್ನು ನಿರ್ಬಂಧಿಸಲಾಗುವುದಿಲ್ಲ. ಈ ಫೀಚರ್ ಲಭ್ಯ ಇರುವುದರಿಂದ ಬಳಕೆದಾರರು ತಮ್ಮ ಸ್ವತ್ತು ಅಥವಾ ಸಂಪತ್ತನ್ನು ಪ್ರಪಂಚದಾದ್ಯಂತ ಯಾವುದೇ ಸಮಯದಲ್ಲಾದರೂ ಸುಲಭವಾಗಿ ವರ್ಗಾಯಿಸಬಹುದು.

ಒಂದೇ ಪ್ರೊಫೈಲ್ ಗಳನ್ನು ಉಪಯೋಗಿಸಬಹುದು :

ಬಳಕೆದಾರರು ವಿಭಿನ್ನ ಫ್ಲಾಟ್ ಫಾರ್ಮ್ ಗಳಿಗೆ ವಿವಿಧ ಪ್ರೊಫೈಲ್ ಗಳನ್ನು ರಚಿಸುವ ಅಗತ್ಯ ಇನ್ನೂ ಇರುವುದಿಲ್ಲ. ನಿಮ್ಮ ಒಂದೇ ಪ್ರೊಫೈಲ್ ಅನ್ನು ಎಲ್ಲಾ ಫ್ಲಾಟ್ ಫಾರ್ಮ್ ಗಳಲ್ಲಿ ಸುಲಭವಾಗಿ ಉಪಯೋಗಿಸಬಹುದು ಮತ್ತು ಮಾಹಿತಿಗಳು ಕೂಡ ಗೌಪ್ಯವಾಗಿರುತ್ತದೆ. ಬಳಕೆದಾರರ ಅನುಮತಿ ಇಲ್ಲದೆ ಯಾವುದೇ ನಿಗಮ ಅಥವಾ ಡಾಟವನ್ನು ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಬಳಕೆದಾರರು ತಮ್ಮ ಪ್ರೊಫೈಲ್ ಗಳನ್ನು ಹಂಚಿಕೊಳ್ಳಲು ಮತ್ತು ಬ್ರ್ಯಾಂಡ್ ಗಳಾಗಿ ಮಾರಾಟ ಮಾಡಲು ಸ್ವಯಂ ಹಕ್ಕನ್ನು ಹೊಂದಿರುತ್ತಾರೆ.

ವೆಬ್ 3.o ಅನಾನುಕೂಲಗಳು :

ಲೆಸ್ ಅಡ್ವಾನ್ಸ್ಡ್ ಕಂಪ್ಯೂಟರ್ ಗಳಲ್ಲಿ ವೆಬ್ 3.0 ಗಳನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ತಂತ್ರಜ್ಞಾನವನ್ನು ನಾವು ಉಳಿಸಬೇಕು ಎಂದರೆ ಹೆಚ್ಚು ಬೆಲೆ ಬಾಳುವ ಕಂಪ್ಯೂಟರ್ ಗಳನ್ನು ನಾವು ಖರೀದಿಸಬೇಕು. ಈ ಟೆಕ್ನಾಲಜಿಯನ್ನು ಸೀಮಿತ ಸಂಖ್ಯೆಯ ಜನರಷ್ಟೇ ಬಳಸಬಹುದು.

ವೆಬ್ 1.0 ವೆಬ್ಸೈಟ್ ಬಳಕೆಯಾಗುವುದಿಲ್ಲ :

ವೆಬ್ 3.0 ಇಂಟರ್ನೆಟ್ ಪೂರ್ಣ ಪ್ರಮಾಣದ್ದಾಗಿರುವುದರಿಂದ ವೆಬ್ ಒನ್ ಪಾಯಿಂಟ್ ತಂತ್ರಜ್ಞಾನವನ್ನು ಆಧರಿಸಿದ ವೆಬ್ ಸೈಟ್ ಗಳು ಬಳಕೆಯಾಗುವುದಿಲ್ಲ. ಹಳೆಯ ತಂತ್ರಜ್ಞಾನ ಹೊಸ ತಂತ್ರಜ್ಞಾನಕ್ಕೆ ಒಂದಿಕೆ ಮಾಡುವುದು ಬಹಳ ಕಷ್ಟವಾದ ಕೆಲಸ ಇದರಿಂದ ಓಲ್ಡ್ ವೆಬ್ ಸೈಟ್ ಗಳನ್ನು ನಾವು ಅಪ್ ಡೇಟ್ ಮಾಡಲು ಆಗುವುದಿಲ್ಲ ಮತ್ತು ಉಪಯೋಗಕ್ಕೂ ಬರುವುದಿಲ್ಲ.

Wide spread ಅಳವಡಿಕೆ ಇಲ್ಲ :

ವೆಬ್ 3.o ತಂತ್ರಜ್ಞಾನವು ಹೆಚ್ಚು ಬುದ್ಧಿವಂತ ಮತ್ತು ಪರಿಣಾಮಕಾರಿಯಾಗಿದ್ದರೂ ಕೂಡ ಈ ತಂತ್ರಜ್ಞಾನ ವ್ಯಾಪಕವಾದ ಅಳವಡಿಕೆಗೆ ಸಿಗುವುದಿಲ್ಲ. ಬಳಕೆದಾರರ ಗೌಪ್ಯತೆ ಪ್ರಗತಿಯನ್ನು ಕಾಪಾಡಲು ಈ ತಂತ್ರಜ್ಞಾನ ಹೆಚ್ಚಿನ ಕೆಲಸ ಮಾಡಬೇಕಾಗುತ್ತದೆ. ಇವಿಷ್ಟು ವೆಬ್ 3.o ಅನುಕೂಲ ಹಾಗೂ ಅನಾನುಕೂಲಗಳ ಬಗೆಗಿನ ಮಾಹಿತಿ.

  • ಪ್ರೀತು ಮಹೇಂದರ್, ವಿಜಯ ಟೈಮ್ಸ್.

Latest News

ಆರೋಗ್ಯ

ಸಕ್ಕರೆ ಖಾಯಿಲೆ ಇರುವವರು ಈ ಹಣ್ಣುಗಳನ್ನು ಸೇವಿಸಬಹುದು ; ತಪ್ಪದೇ ಈ ಮಾಹಿತಿ ಓದಿ

ತಜ್ಞರ ಪ್ರಕಾರ, ಸಕ್ಕರೆ ಕಾಯಿಲೆ ಇರುವವರು ಈ 5 ವಿಧದ ಹಣ್ಣುಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಅಂತಹ ಹಣ್ಣುಗಳ ವಿವರ ಇಲ್ಲಿದೆ ನೋಡಿ.

ದೇಶ-ವಿದೇಶ

ದೇಶದ ಹೆಮ್ಮೆ ತ್ರಿವರ್ಣ ಧ್ವಜವೂ ಕೂಡ ಬಿಜೆಪಿಗೆ ವ್ಯಾಪಾರದ ಸರಕಾಗಿದೆ : ಬಿ.ಕೆ.ಹರಿಪ್ರಸಾದ್

38×11,80,000=4.484 ಕೋಟಿ, ಹೇಗಿದೆ ಮೋದಿ ಸರ್ಕಾರದ ಲೂಟಿ? ಕೇಂದ್ರದ ಮೋದಿ ಸರ್ಕಾರ ವಸೂಲಿ ಬಾಜಿತನಕ್ಕೆ ರಾಷ್ಟ್ರಧ್ವಜವನ್ನ ಬಳಸಿಕೊಂಡಿರುವುದು ಅಕ್ಷಮ್ಯ ಅಪರಾಧ

ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌ 2022 ; ಕಂಚಿನ ಪದಕ ಗೆದ್ದ ಪತ್ನಿಯನ್ನು ಅಭಿನಂದಿಸಿದ ದಿನೇಶ್ ಕಾರ್ತಿಕ್

ಭಾರತದ ಸ್ಕ್ವ್ಯಾಶ್ ಆಟಗಾರ್ತಿ ದೀಪಿಕಾ ಪಲ್ಲಿಕ್ಕಲ್(Deepika Pallikal) ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಕಂಚಿನ ಪದಕ(Bronze Medal) ಗೆದ್ದುಕೊಂಡಿದ್ದಾರೆ.

ಆರೋಗ್ಯ

ದೇಹ ನೀಡುವ `ಈ’ ಸೂಚನೆಗಳು ಕಿಡ್ನಿ ವೈಪಲ್ಯವನ್ನು ಸೂಚಿಸುತ್ತವೆ ; ಇಲ್ಲಿದೆ ಮಾಹಿತಿ ಓದಿ

ಕಿಡ್ನಿ(Kidney) ನಮ್ಮ ದೇಹದ ಪ್ರಮುಖ ಅಂಗವಾಗಿದೆ. ದೇಹದಲ್ಲಿ ಶುದ್ಧ ರಕ್ತವನ್ನು ಪರಿಚಲನೆ ಮಾಡುವಲ್ಲಿ ಮೂತ್ರಪಿಂಡಗಳು ಮುಖ್ಯ ಪಾತ್ರವಹಿಸುತ್ತವೆ.