Visit Channel

ಯುದ್ಧ ದಾಖಲೆಗಳನ್ನು ಬಹಿರಂಗಗೊಳಿಸುವ ನೀತಿ: ರಾಜನಾಥ್ ಸಿಂಗ್ ಅನುಮೋದನೆ

file7g6fswd5qwgzcapl6m41623487521

ನವದೆಹಲಿ, ಜೂ. 12: ರಕ್ಷಣಾ ಸಚಿವಾಲಯ ಕೈಗೊಂಡಿರುವ ಕಾರ್ಯಾಚರಣೆಗಳು, ಯುದ್ಧಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಗೊಳಿಸುವುದು, ಅವುಗಳನ್ನು ಸಂರಕ್ಷಿಸುವುದು ಹಾಗೂ ಸಂಗ್ರಹಿಸುವ ನೀತಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಶನಿವಾರ ಅನುಮೋದನೆ ನೀಡಿದ್ದಾರೆ.

ಯುದ್ಧ ಹಾಗೂ ಇತರ ಕಾರ್ಯಾಚರಣೆಗಳ ಕುರಿತ ಮಾಹಿತಿ ಸಕಾಲದಲ್ಲಿ ಪ್ರಕಟವಾಗಬೇಕು. ಇದರಿಂದ, ಯುದ್ಧದಂತಹ ಘಟನೆಗಳಿಗೆ ಕಾರಣಗಳೇನು ಎಂಬುದು ಜನರಿಗೆ ತಿಳಿಸಿದಂತಾಗುತ್ತದೆ. ಸಂಶೋಧನೆಗೆ ಅಧಿಕೃತ ಮಾಹಿತಿ ನೀಡಿದಂತಾಗುತ್ತದೆ. ಜೊತೆಗೆ, ಐತಿಹಾಸಿಕ ಘಟನೆಗಳ ಕುರಿತ ಮಿಥ್ಯೆಗಳನ್ನು ಅಲ್ಲಗಳೆಯಲು ಸಹ ಸಾಧ್ಯವಾಗಲಿದೆ ಎಂದು ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಈ ಹೊಸ ನೀತಿಯ ಪ್ರಕಾರ, ಮೂರು ಭದ್ರತಾಪಡೆಗಳು, ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್, ಅಸ್ಸಾಂ ರೈಫಲ್ಸ್ ಮತ್ತು ಇಂಡಿಯನ್‌ ಕೋಸ್ಟ್‌ ಗಾರ್ಡ್‌ ಸೇರಿದಂತೆ ರಕ್ಷಣಾ ಸಚಿವಾಲಯದಡಿ ಬರುವ ಸಂಸ್ಥೆಗಳು ಯುದ್ಧದ ದಿನಚರಿಗಳು, ಕಲಾಪಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಕಾರ್ಯಾಚರಣೆಯ ದಾಖಲೆ ಪುಸ್ತಕಗಳನ್ನು ಸಚಿವಾಲಯದ ಇತಿಹಾಸ ವಿಭಾಗಕ್ಕೆ ವರ್ಗಾಯಿಸಬೇಕು.

Latest News

Pakistan
ದೇಶ-ವಿದೇಶ

ಪಾಕಿಸ್ತಾನ : ಗರ್ಭಿಣಿ ಮಹಿಳೆ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ; ಭಾರೀ ಆಕ್ರೋಶ

ನೋಮನ್ ಗ್ರ್ಯಾಂಡ್ ಸಿಟಿ ಅಪಾರ್ಟ್ಮೆಂಟ್ ಕಟ್ಟಡದ ಹೊರಗೆ ಭದ್ರತಾ ಸಿಬ್ಬಂದಿ ಗರ್ಭಿಣಿ ಮಹಿಳೆಯನ್ನು ಥಳಿಸಿದ್ದಾರೆ ಎಂದು ಪಾಕ್ ಮೂಲದ ಜಿಯೋ ನ್ಯೂಸ್ ವರದಿ ಮಾಡಿದೆ.

Culprits
ಪ್ರಮುಖ ಸುದ್ದಿ

ಹಾಲಿನ ವ್ಯಾಪಾರದ ಸೋಗಿನಲ್ಲಿ ಖೋಟಾ ನೋಟು ದಂಧೆ ; ಬಿಜೆಪಿ ಮುಖಂಡ ಸೇರಿ ಮೂವರ ಬಂಧನ

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತು ಪೊಲೀಸರು ತನಿಖೆ ಮುಂದುವರೆಸಿದ್ದು, ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

rss
ರಾಜಕೀಯ

RSS ಭಾರತದಲ್ಲಿನ ತಾಲಿಬಾನ್ ಇದ್ದಂತೆ : ಕಾಂಗ್ರೆಸ್‌

ಆರ್‌ಎಸ್‌ಎಸ್‌ ಎಂದಿಗೂ ಭಾರತೀಯತೆಯನ್ನು ಒಪ್ಪಿಲ್ಲ, ಮುಂದೆಯೂ ಒಪ್ಪುವುದಿಲ್ಲ. ಪ್ರತ್ಯೇಕ ಐಡೆಂಟಿಟಿಯಲ್ಲಿ ಇರಲು ಭಯಸುವ ಆರ್‌ಎಸ್‌ಎಸ್‌, ಭಾರತದಲ್ಲಿನ ತಾಲಿಬಾನ್ ಇದ್ದಂತೆ.