Health : ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಶೈಲಿಯಿಂದ ದೇಹಾರೋಗ್ಯ(Dissolving fat) ಕಾಪಾಡುವುದು ಕಷ್ಟವಾಗುತ್ತಿದೆ. ಕೇವಲ ದೇಹದ ಆರೋಗ್ಯವಷ್ಟೇ ಅಲ್ಲ, ಬೊಜ್ಜಿನ ನಿಯಂತ್ರಣವೂ ಕಷ್ಟಸಾಧ್ಯವಾಗಿದೆ. ಹೆಚ್ಚಿನವರಿಗೆ ಒತ್ತಡದ ಕಾರಣದಿಂದಾಗಿಯೇ ತೂಕ ತಗ್ಗಿಸಲು ಸಾಧ್ಯವಾಗುತ್ತಿರುವುದಿಲ್ಲ.

ಕೆಲವರು ಒತ್ತಡದಿಂದಲೇ ಅತಿಯಾಗಿ ತಿನ್ನಲಾರಂಭಿಸುತ್ತಾರೆ, ಇದರಿಂದ ಕ್ಯಾಲೋರಿ(calorie) ಹೆಚ್ಚಿ ತೂಕ ಹೆಚ್ಚಳವಾಗುತ್ತದೆ. ಅದರಲ್ಲೂ ಸ್ಟ್ರೆಸ್ ಆದಾಗ ತಿನ್ನಬೇಕೆನಿಸುವ ಆಹಾರವೆಲ್ಲ ಜಂಕ್ ಫುಡ್ ಆಗಿರುತ್ತದೆ.
ಸಕ್ಕರೆ, ಉಪ್ಪು ಹೆಚ್ಚಿರುವ, ಪ್ರೊಸೆಸ್ಡ್ ಆಹಾರ ಈ ಸಂದರ್ಭದಲ್ಲಿ ತಿನ್ನುವುದು ಹೆಚ್ಚು.
ಅಲ್ಲದೆ, ಸ್ಟ್ರೆಸ್ ದೇಹವು ಕಾರ್ಟಿಸೋಲ್ ಹಾರ್ಮೋನ್(Cortisol hormone) ಹೆಚ್ಚಾಗಿ ಉತ್ಪಾದಿಸುವಂತೆ ಮಾಡುತ್ತದೆ.
ಈ ಹಾರ್ಮೋನ್ ದೇಹ ಫ್ಯಾಟ್ ಹೆಚ್ಚಲು ಪ್ರೋತ್ಸಾಹಿಸಿ ತೂಕ ಕಳೆ ಇಳಿಸಲು ಕಷ್ಟವಾಗುವಂತೆ ಮಾಡುತ್ತದೆ.
ಈ ಕೆಳಗಿನ ಸಲಹೆ ಅನ್ನು ಅನುಸರಿಸಿ ಬೊಜ್ಜು ಕರಗಿಸಿ :
ಇದನ್ನೂ ಓದಿ : https://vijayatimes.com/clean-city-davangere/
ಹೆಚ್ಚು ನೀರು ಕುಡಿಯುವುದು ಉತ್ತಮ : ನೀರು ಕುಡಿಯುವುದರಿಂದ ಹೆಚ್ಚು ಕ್ಯಾಲೋರಿ ಬರ್ನ್ ಆಗುತ್ತದೆ. ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ಹಸಿವು ಕಡಿಮೆಯಾಗುತ್ತದೆ.
ಇದರಿಂದ ಶೇ. 13ರಷ್ಟು ಕ್ಯಾಲೋರಿ ತೆಗೆದುಕೊಳ್ಳುವುದು ಕಡಿಮೆಯಾಗುತ್ತದೆ. ನೀರು ಕ್ಯಾಲೋರಿ ಫ್ರೀ ಕೂಡಾ ಆಗಿರುವುದರಿಂದ ಆರಾಮಾಗಿ ಸಾಕಷ್ಟು ನೀರು ಕುಡಿಯಬಹುದು.
ಆಗ ಸಕ್ಕರೆ ಹೊಂದಿರುವ ಬೇರೆ ಪಾನೀಯಗಳನ್ನು ಕುಡಿಯಬೇಕೆಂದು ಅನಿಸುವುದೂ ಇಲ್ಲ.
ಪ್ರೋಟೀನ್ ಡಯಟ್: ತೂಕ ಇಳಿಸುವಿಕೆಯಲ್ಲಿ ಪ್ರೋಟೀನ್ ಮುಖ್ಯ ಪಾತ್ರ ವಹಿಸುತ್ತದೆ.
ಇದು ಜೀರ್ಣಕ್ರಿಯೆ ಆಗುವಾಗ ಹೆಚ್ಚು ಕ್ಯಾಲೋರಿ ಬರ್ನ್ ಆಗುವಂತೆ ಮಾಡುವ ಜೊತೆಗೆ ತೆಳುವಾದ ಮಸಲ್ಸ್ ಬೆಳವಣಿಗೆಗೆ ಕಾರಣವಾಗುತ್ತದೆ.
ಜೊತೆಗೆ ಪ್ರೋಟೀನ್ ಬೇಗ ಹೊಟ್ಟೆ ತುಂಬಿದ ಫೀಲಿಂಗ್ ನೀಡುತ್ತದೆ. ಕಾರ್ಬೋಹೈಡ್ರೇಟ್‌ನಂತೆ ಪ್ರೋಟೀನ್(protein) ಬೇಗ ಜೀರ್ಣವಾಗುವುದಿಲ್ಲ, ಇದು ನಮ್ಮ ಮೆಟಾಬಾಲಿಸಂ ಹೆಚ್ಚಿಸುತ್ತದೆ. ಹಾಗಾಗಿ, ಆಹಾರದಲ್ಲಿ ಪ್ರೋಟೀನ್ ಹೆಚ್ಚಿಸಿ.

ಗ್ರೀನ್ ಟೀ ಕುಡಿಯಿರಿ: ಗ್ರೀನ್ ಟೀ ಅತ್ಯಂತ ಆರೋಗ್ಯಕರ ಪಾನೀಯ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ಸಸ್ಯ ಜನ್ಯ ಪದಾರ್ಥಗಳು ಆರೋಗ್ಯಕ್ಕೆ ಲಾಭ ತಂದುಕೊಡುತ್ತವೆ.
ಒಂದು ಲೋಟ ಗ್ರೀನ್ ಟೀ ಕುಡಿಯುವುದರಿಂದ ರಕ್ತದಲ್ಲಿ ಆ್ಯಂಟಿ ಆಕ್ಸಿಡೆಂಟ್ಸ್(Antioxidant) ಹೆಚ್ಚುವುದನ್ನು ಅಧ್ಯಯನಗಳು ಸಾಬೀತುಪಡಿಸಿವೆ. ಗ್ರೀನ್ ಟೀ ವಿಶ್ರಾಂತಿಯಲ್ಲಿರುವಾಗ ಕೂಡಾ ಹೆಚ್ಚು ಕ್ಯಾಲೋರಿ ಕರಗಿಸುತ್ತವೆ.
ಕೊಬ್ಬರಿ ಎಣ್ಣೆ ಬಳಕೆ: ಕೊಬ್ಬರಿ ಎಣ್ಣೆಯು ತೂಕ ಇಳಿಕೆ ಬಹಳ ಪರಿಣಾಮಕಾರಿ. ಇತರೆ ಎಣ್ಣೆಗಳ ಫ್ಯಾಟ್‌ನಂಥಲ್ಲ ಇದು. ನಿಮ್ಮ ಆಹಾರದಲ್ಲಿ ಕೊಬ್ಬರಿ ಎಣ್ಣೆ ಬಳಕೆ ಹೆಚ್ಚಿಸಿ ಇತರೆ ಎಣ್ಣೆಗಳ ಬಳಕೆ ಕಡಿಮೆ ಮಾಡಿದಲ್ಲಿ ಹೊಟ್ಟೆಯ ಭಾಗದ ಆ ಕೆಟ್ಟ ಅಪಾಯಕಾರಿ ಫ್ಯಾಟ್ ಕರಗುತ್ತದೆ.
ಇದರಲ್ಲಿರುವ ಫ್ಯಾಟಿ ಆ್ಯಸಿಡ್ಸ್ ನೇರವಾಗಿ ಡೈಜೆಸ್ಟಿವ್ ಟ್ರ್ಯಾಕ್‌ನಿಂದ ಲಿವರ್‌ಗೆ ಹೋಗಿ ಅಲ್ಲಿ ತಕ್ಷಣ ಎನರ್ಜಿಗಾಗಿ ಬಳಕೆಯಾಗುತ್ತವೆ.ಕೀಟೋಜೆನಿಕ್ ಡಯಟ್ ಮಾಡುವವರು ಕೀಟೋನ್ ಮಟ್ಟ ಹೆಚ್ಚಿಸಲು ಈ ಎಣ್ಣೆ ಬಳಸಬಹುದು. ಇದು ಹಸಿವು ತಗ್ಗಿಸಿ, ನೀವು ಪ್ರಯತ್ನಿಸದೆಯೇ ಕಡಿಮೆ ತಿನ್ನುವಂತೆ ಮಾಡುತ್ತದೆ.
- ಪವಿತ್ರ