ಕನ್ನಡ ರಿಯಾಲಿಟಿ ಶೋಗಳಲ್ಲಿಯೇ ಅತೀ ದೊಡ್ಡ ರಿಯಾಲಿಟಿ ಶೋ ಎಂದರೆ ಅದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡುವ ಬಿಗ್‌ಬಾಸ್ ರಿಯಾಲಿಟಿ ಶೋ. ಹೌದು, ಕನ್ನಡದ ರಿಯಾಲಿಟಿ ಅಗ್ರಸ್ಥಾನದಲ್ಲಿ ಹೆಚ್ಚು ಖ್ಯಾತಿ ಹಾಗೂ ಜನರನ್ನು ತನ್ನತ್ತ ಸೆಳೆಯುವ ಸೆಲೆಬ್ರಿಟಿ ಶೋಗಳಲ್ಲಿ ಬಿಗ್‌ಬಾಸ್ ಪ್ರಮುಖವಾದದ್ದು. ಈ ಕಾರ್ಯಕ್ರಮದ ಸೀಸನ್ ೦೮ರ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಸುರೇಶ್ ಅವರು ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟಕ್ಕೂ ಅಪಘಾತ ಸಂಭವಿಸಿದ್ದು ಹೇಗೆ.?
ಬಿಗ್ ಬಾಸ್ ಸೀಸನ್ ೦೮ರಲ್ಲಿ ಸ್ಪರ್ಧಿಯಾಗಿದ್ದ ನಟಿ ದಿವ್ಯಾ ಸುರೇಶ್, ಮೊದಲನೇ ಹಂತದಲ್ಲಿ ಅಷ್ಟು ಜನಪ್ರಿಯತೆ ಗಳಿಸದಿದ್ದರೂ, ಎರಡನೇ ಹಂತದಲ್ಲಿ ಬಹಳ ಜನಪ್ರಿಯತೆಯನ್ನು ಗಳಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಬಿಗ್‌ಬಾಸ್ ಕಳೆದ ಬಳಿಕ ಅಷ್ಟಾಗಿ ಕಾಣಿಸಿಕೊಳ್ಳದ ದಿವ್ಯಾ ಸುರೇಶ್, ತಮ್ಮ ಸ್ಕೂಟರ್‌ನಲ್ಲಿ ಸೋಮವಾರ ಲಸಿಕೆ ಹಾಕಿಸಿಕೊಂಡು ಮನೆಗೆ ಹಿಂದಿರುಗುವಾಗ, ಉತ್ತರಹಳ್ಳಿಯ ಮುಖ್ಯ ರಸ್ತೆಯಲ್ಲಿದ್ದ ನಾಯಿಗಳು ಜಗಳವಾಡಿಕೊಳ್ಳುತ್ತಿದ್ದವು. ಈ ವೇಳೆ ದಿವ್ಯಾ ಬರುತ್ತಿದ್ದ ಹಾದಿಯಲ್ಲಿ ನಾಯಿಗಳು ಮಧ್ಯಕ್ಕೆ ಬಂದಿವೆ. ಈ ವೇಳೆ ಗಾಬರಿಗೊಂಡ ದಿವ್ಯಾ ಸುರೇಶ್ ಏಕಾಏಕಿ ಬಿದ್ದಿದ್ದು, ದಿವ್ಯಾ ಅವರ ಮುಖಕ್ಕೆ ಹಾಗೂ ಕೈಗೆ ಗಂಭೀರ ಗಾಯಗಳಾಗಿವೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಈ ಕುರಿತು ದಿವ್ಯಾ ಸುರೇಶ್ ಪರವಾಗಿ ಅವರ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಮಂಗಳವಾರ ದಿವ್ಯಾ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಚ್ ಮಾಡಲಾಗಿದೆ ಎಂದು ತಿಳಿಸಿದೆ. ಸದ್ಯ ಅವರಿಗೆ ಒಂದು ತಿಂಗಳ ವಿಶ್ರಾಂತಿ ಅಗತ್ಯವಿದೆ. ಎಲ್ಲರಿಗೂ ಈ ಮೂಲಕ ಬೇಸರದಿಂದ ತಿಳಿಸಲು ಇಚ್ಚಿಸುತ್ತೇವೆ. ಸದ್ಯದ ಮಟ್ಟಿಗೆ ಕೆಲ ದಿನಗಳ ಸಮಯ ಅವರು ಇನ್ಟಾಗ್ರಾಂ ಖಾತೆಯಲ್ಲಿ ಎಂದಿನಂತೆ ಸಕ್ರಿಯರಾಗಿರುವುದಿಲ್ಲ.! ದಯವಿಟ್ಟು ಎಲ್ಲರು ಸಹಕರಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ನಿಮ್ಮ ಪ್ರೀತಿ, ಹಾರೈಕೆ ದಿವ್ಯಾ ಸುರೇಶ್ ಅವರ ಮೇಲಿರಲಿ ಎಂದು ಕೇಳಿಕೊಳ್ಳುತ್ತೇವೆ ಎಂದು ಬರೆಯಲಾಗಿದೆ.