• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

RSS ಧ್ಯೇಯಗೀತೆ ಹಾಡಿದ ಡಿಸಿಎಂ ಡಿಕೆ ಶಿವಕುಮಾರ್‌: ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿದ ಅಸಮಾಧಾನ

Shwetha Mohan by Shwetha Mohan
in ಪ್ರಮುಖ ಸುದ್ದಿ, ರಾಜಕೀಯ, ರಾಜ್ಯ, ವಿಜಯ ಟೈಮ್ಸ್‌
RSS ಧ್ಯೇಯಗೀತೆ ಹಾಡಿದ ಡಿಸಿಎಂ ಡಿಕೆ ಶಿವಕುಮಾರ್‌: ಕಾಂಗ್ರೆಸ್ ಪಕ್ಷದಲ್ಲಿ ಹೆಚ್ಚಿದ ಅಸಮಾಧಾನ
0
SHARES
19
VIEWS
Share on FacebookShare on Twitter
  • ಆರ್ ಎಸ್‌ ಎಸ್ ಗೀತೆ ಹಾಡಿದ ಡಿಸಿಎಂ ಡಿಕೆ ಶಿವಕುಮಾರ್‌
  • ಡಿಕೆಶಿ ಏನೇ ಮಾಡಿದರೂ ಸರಿ, ನಮ್ಮದಾದ್ರೆ ತಪ್ಪು: ರಾಜಣ್ಣ ಗುಡುಗು (DK Shivakumar sang the RSS theme song)
  • RSS ಸಂಘಟನೆಯನ್ನು ಕಾಂಗ್ರೆಸ್‌ ಶತ್ರುವಾಗಿಯೇ ನೋಡುತ್ತೆ: ಖರ್ಗೆ

Bengaluru: ಕಾಂಗ್ರೆಸ್‌ನ ಕರ್ನಾಟಕ ಘಟಕದ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(D.K. Shivakumar) ವಿಧಾನಸಭೆಯ ಅಧಿವೇಶನದಲ್ಲಿ

ಆರ್‌ಎಸ್‌ಎಸ್‌ನ(RSS) ಧ್ಯೇಯಗೀತೆ “ನಮಸ್ತೇ ಸದಾ ವತ್ಸಲೇ ಮಾತೃಭೂಮೇ” ಅನ್ನು ಹಾಡಿದ ಘಟನೆ ಇದೀಗ ರಾಜ್ಯ ರಾಜಕೀಯದ(State politics) ಕೇಂದ್ರಬಿಂದುವಾಗಿದೆ.

ಡಿಕೆಶಿಯ ಈ ನಡೆ ರಾಜ್ಯದಲ್ಲಿ ಮಾತ್ರವಲ್ಲದೆ ರಾಷ್ಟ್ರಮಟ್ಟದಲ್ಲಿಯೂ ಚರ್ಚೆಗೆ ಕಾರಣವಾಗಿದೆ.ಡಿಕೆಶಿಯ ಈ ಹೆಜ್ಜೆ, ಪಕ್ಷದ ಒಳಗಿನ ವಿರೋಧಿ ಶಿಬಿರಕ್ಕೆ ದೊಡ್ಡ ಅವಕಾಶವನ್ನು ಒದಗಿಸಿದೆ.

ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧ ಗಟ್ಟಿಯಾದ ಅಸಮಾಧಾನ ವ್ಯಕ್ತವಾಗುತ್ತಿದ್ದ ಪರಿಸ್ಥಿತಿಯಲ್ಲಿ, ಈ ಘಟನೆ ಹೈಕಮಾಂಡ್(High Command) ಗಮನ ಸೆಳೆಯಲು ಬಳಸಿಕೊಳ್ಳಲು ಬಣ ತಂತ್ರ ರೂಪಿಸುತ್ತಿದೆ.

“ಸಂಘದ ಗೀತೆ ಹಾಡುವುದು ಕಾಂಗ್ರೆಸ್‌ನ ಮೂಲ ಸಿದ್ಧಾಂತಗಳಿಗೆ ವಿರುದ್ಧ” ಎಂಬ ಅಲೆಯು ಈಗ ಪಕ್ಷದ ಒಳಗೆ ಹೆಚ್ಚುತ್ತಿದೆ.

DK Shivakumar sang the RSS theme song
DCM DK Shivakumar
ಕಾಂಗ್ರೆಸ್ ಪಕ್ಷವು ಸಂಪ್ರದಾಯವಾಗಿ ಆರ್‌ಎಸ್‌ಎಸ್ ವಿರುದ್ಧ ಹೋರಾಟ ನಡೆಸಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ಅನೇಕ

ನಾಯಕರು ಸಂಘದ ತತ್ವವನ್ನು ತೀವ್ರವಾಗಿ ಟೀಕಿಸುತ್ತಾರೆ. ರಾಜ್ಯದಲ್ಲಿಯೂ ಸಿಎಂ ಸಿದ್ದರಾಮಯ್ಯ(CM Siddaramaiah), ಬಿ.ಕೆ. ಹರಿಪ್ರಸಾದ್, ಪ್ರಿಯಾಂಕ್ ಖರ್ಗೆ ಮುಂತಾದವರು RSS ನಿಲುವಿಗೆ ವಿರೋಧಿಗಳು.

ಇಂತಹ ಸಂದರ್ಭದಲ್ಲಿ ಡಿಕೆಶಿಯ ನಡೆ ಪಕ್ಷದ ಒಳಸಮರಕ್ಕೆ ಬಣ್ಣ ತುಂಬಿದೆ.ಡಿಕೆಶಿ ಧ್ಯೇಯಗೀತೆ ಹಾಡಿದ ಸುದ್ದಿ ಹೊರಬಂದ ತಕ್ಷಣವೇ ಸಾಮಾಜಿಕ ಜಾಲತಾಣದಲ್ಲಿ

ಪ್ರಿಯಾಂಕ್ ಖರ್ಗೆ(Priyank Kharge) ಪ್ರತಿಕ್ರಿಯಿಸಿ RSS ವಿರುದ್ಧ ಕಿಡಿಕಾರಿದ್ದಾರೆ. ಅದೇ ರೀತಿ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ಕೂಡಾ ಡಿಕೆಶಿಯ ಹೆಜ್ಜೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕಾರಣದಿಂದ ಕಾಂಗ್ರೆಸ್ ಶಿಬಿರದಲ್ಲಿ ಅಸಮಾಧಾನದ ವಾತಾವರಣ ತೀವ್ರಗೊಂಡಿದೆ.

ಕುಂಭಮೇಳದ ಸಂದರ್ಭದಲ್ಲೂ ಇಂತಹ ಸನ್ನಿವೇಶ ನಿರ್ಮಾಣವಾಗಿತ್ತು. ಆಗ ಖರ್ಗೆ ಬಿಜೆಪಿ ಮತ್ತು RSS ವಿರುದ್ಧ ಕಿಡಿಕಾರಿದ್ದರೆ, ಡಿಕೆಶಿ ಗಂಗಾನದಿಯಲ್ಲಿ ಪವಿತ್ರ ಸ್ನಾನ ಮಾಡಿ

ಅದರ ಫೋಟೋಗಳನ್ನು ಹಂಚಿಕೊಂಡಿದ್ದರು. ಇದರಿಂದ ಖರ್ಗೆ ಮತ್ತು ಡಿಕೆಶಿಯ ನಿಲುವುಗಳಲ್ಲಿ ವ್ಯತ್ಯಾಸವಿದೆ ಎಂದು ಬಿಜೆಪಿ(BJP) ನಾಯಕರೇ ಪ್ರಶ್ನಿಸಿದ್ದರು.

ಈಗ RSS ಧ್ಯೇಯಗೀತೆ ಹಾಡಿರುವುದು ಮತ್ತೊಂದು ವಿವಾದಕ್ಕೆ ದಾರಿ ಮಾಡಿಕೊಟ್ಟಂತಾಗಿದೆ.ಡಿಕೆಶಿಯ ನಡೆ ರಾಷ್ಟ್ರಮಟ್ಟದ ಸುದ್ದಿಯಾಗಿ ಪರಿಣಮಿಸಿರುವುದರಿಂದ,

ಕಾಂಗ್ರೆಸ್(Congress) ಹೈಕಮಾಂಡ್ ಯಾವ ರೀತಿಯ ಕ್ರಮ ಕೈಗೊಳ್ಳಲಿದೆ ಎಂಬ ಕುತೂಹಲ ಎಲ್ಲೆಡೆ ವ್ಯಕ್ತವಾಗುತ್ತಿದೆ. ಪಕ್ಷಕ್ಕೆ ತತ್ವಸ್ಪಷ್ಟತೆ ನೀಡಲು ಪ್ರಯತ್ನಿಸುತ್ತಿರುವ

ರಾಹುಲ್ ಗಾಂಧಿಯವರ(Rahul Gandhi) ನಿಲುವು RSS ವಿರುದ್ಧ ಕಠಿಣವಾಗಿರುವ ಸಂದರ್ಭದಲ್ಲಿ, ಡಿಕೆಶಿಯ ನಡೆ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ.

RSS ಧ್ಯೇಯಗೀತೆ ಹಾಡಿದ ಘಟನೆ ಕಾಂಗ್ರೆಸ್ ಒಳರಾಜಕೀಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಒಳಬಾಳಿಕೆ ಮೇಲೆ ಪರಿಣಾಮ ಬೀರಲಿದೆ ಎಂಬುದು ಸ್ಪಷ್ಟವಾಗಿದೆ.

ಇದನ್ನು ಓದಿ :  ಪ್ರಧಾನಿ, ಸಿಎಂ,ರಾಜಕಾರಣಿಗಳು ಜೈಲಿಗೆ ಹೋದರೆ ಹುದ್ದೆಯಿಂದ ವಜಾ, 30 ದಿನ ಜೈಲಿನಲ್ಲಿದ್ದರೆ ಅಧಿಕಾರ ಕಳೆದುಕೊಳ್ತಾರೆ

ಡಿಕೆಶಿ ವಿರುದ್ಧ ಈಗಾಗಲೇ ಅಸಮಾಧಾನವಿದ್ದ ವಿರೋಧಿ ಪಾಳಯ ಈ ಘಟನೆಯನ್ನು ‘ಬ್ರಹ್ಮಾಸ್ತ್ರ’ವಾಗಿ ಬಳಸಿಕೊಂಡು ಹೈಕಮಾಂಡ್ ಗಮನ ಸೆಳೆಯಲು ಸಜ್ಜಾಗಿದೆ. ಹೀಗಾಗಿ ಕಾಂಗ್ರೆಸ್ ಶಿಬಿರದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ರಾಜಕೀಯ(politics) ಕುತೂಹಲ ಮೂಡಿಸಿದೆ. (DK Shivakumar sang the RSS theme song)

Tags: bjpD.K. ShivakumarKarnataka CongressLegislative Assembly sessionPriyank KhargeRSSRSS theme songState politics

Related News

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026
100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ
ಪ್ರಮುಖ ಸುದ್ದಿ

100 ದಿನ ಪೂರೈಸಿದ ಡಿ.ಕೆ. ಶಿವಕುಮಾರ್ ಸರ್ಕಾರ: ಬಡವರಿಗೆ 5 ಲಕ್ಷ ನಿವೇಶನ, ರೈತರಿಗೆ ‘ಚೈತನ್ಯ’ ಸೇರಿ ಹಲವು ಜನಪರ ಯೋಜನೆಗಳಿಗೆ ಚಾಲನೆ

September 10, 2026
ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ
ಪ್ರಮುಖ ಸುದ್ದಿ

ಐಫೋನ್ ಪ್ರಿಯರಿಗೆ ಗುಡ್‌ನ್ಯೂಸ್: ಹೊಸ ತಂತ್ರಜ್ಞಾನದೊಂದಿಗೆ ಐಫೋನ್ 18 ಪ್ರೊ ಸರಣಿ ಬಿಡುಗಡೆ

September 10, 2026
ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ
ದೇಶ-ವಿದೇಶ

ಹಾರ್ಮುಜ್‌ನಲ್ಲಿ ಇರಾನ್‌ನ ಆರ್ಭಟ: 20ಕ್ಕೂ ಹೆಚ್ಚು ಹಡಗುಗಳ ಮೇಲೆ ದಾಳಿ, ‘ನೋ-ಗೋ ಝೋನ್’ ವಿಸ್ತರಣೆ

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.