- ಅಧಿಕಾರ ಹಂಚಿಕೆ ಗೊಂದಲದ (dk shivakumar tweet against siddaramaiah) ನಡುವೆ ಡಿಸಿಎಂ ಟ್ವೀಟ್ ಟಾಂಗ್
- ಮಾತು ಉಳಿಸಿಕೊಳ್ಳುವುದು ಅತಿದೊಡ್ಡ ಶಕ್ತಿ : ಡಿಕೆಶಿ ಪೋಸ್ಟ್ ವೈರಲ್
- ದೆಹಲಿ ಅಂಗಳದಲ್ಲಿ ಕರ್ನಾಟಕ ಪಾಲಿಟಿಕ್ಸ್ ಚರ್ಚೆ
Bengalore: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ, ನಾಯಕತ್ವ ಪ್ರಶ್ನೆ, ಹಾಗು ದೆಹಲಿ ಚರ್ಚೆಗಳ ನಡುವೆ,
(dk shivakumar tweet against siddaramaiah) ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಳಗ್ಗೆಯೇ ಮಾಡಿದ ಟ್ವೀಟ್ ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನ ಹುಟ್ಟಿಸಿದೆ.
“ಕೊಟ್ಟ ಮಾತು ಉಳಿಸಿಕೊಳ್ಳುವುದು ವಿಶ್ವದಲ್ಲಿರುವ ದೊಡ್ಡ ಶಕ್ತಿ” ಎಂಬ ಒಂದು ಸಾಲಿನ ಪೋಸ್ಟ್, ಈಗ ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ನಡುವಿನ ಅಧಿಕಾರ ಹಂಚಿಕೆ ತಕರಾರಿನ ನಡುವೆ ಈ ಟ್ವೀಟ್ ಮಾಡಿರುವುದರಿಂದ ಅದರ ಹಿಂದಿನ ಅರ್ಥವೇನು ಎಂದು ಎಲ್ಲರೂ ಪ್ರಶ್ನಿಸುವಂತಾಗಿದೆ.

ಪಕ್ಷದ ಉನ್ನತ ಮಟ್ಟದಲ್ಲಿ ನಡೆಯುತ್ತಿರುವ ಮಾತುಕತೆ, ಹೊಸ ಸಮಿಕರಣೆಗಳು, ಹಾಗು ಸಾಮರಸ್ಯದ ವಿಚಾರ—ಎಲ್ಲದರ ಮಧ್ಯೆ ಇಂತಹ ಪೋಸ್ಟ್, ಮತ್ತಷ್ಟು ರಾಜಕೀಯ ಸುಳಿಗಳನ್ನು ಎಬ್ಬಿಸಿದೆ.
ಡೆಲ್ಲಿ ಹೈಕಮಾಂಡ್ ಮಟ್ಟದಲ್ಲಿ ನಡೆಯುತ್ತಿರುವ (dk shivakumar tweet against siddaramaiah) ಪ್ರಮುಖ ಚರ್ಚೆಗಳು ಈಗ ತಾರಕಕ್ಕೇರಿವೆ.
ಮುಂದಿನ ಒಂದು ವರ್ಷದಲ್ಲಿ ಸರ್ಕಾರದ ಸ್ಥಿರತೆ ಹೇಗಿರಬೇಕು? ನಾಯಕತ್ವ ಬದಲಾವಣೆಯ ಮಾತು ನಿಜವೇ? ಅಧಿಕಾರ ಹಂಚಿಕೆಯಲ್ಲಿ ಮೊದಲೇ
ನಿಗದಿಯಾದಂತೆ ‘ಅರ್ಧಾವಧಿ ಸೂತ್ರ’ ಜಾರಿಗೆ ಬರುತ್ತದೆಯೇ? ಈ ಎಲ್ಲ ಪ್ರಶ್ನೆಗಳು ಮೂಡಿರುವ ನಡುವೆ ಡಿಕೆಶಿ ಅವರ ಟ್ವೀಟ್ ಕಾಣಿಸಿಕೊಂಡಿದೆ.
ಪಕ್ಷದ ಒಳಮಟ್ಟದಲ್ಲಿ ಈಗಾಗಲೇ ಹಲವು ನಾಯಕರ ನಡುವೆ ಚರ್ಚೆಗಳು ಮುಂದುವರೆದಿದ್ದು, ಅದರಲ್ಲಿಯೇ ಡಿಕೆಶಿ “ಕೊಟ್ಟ ಮಾತು” ಕುರಿತು ಹೇಳಿಕೆ
ನೀಡಿರುವುದು ಯಾದೃಚ್ಛಿಕವಲ್ಲ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷವಾಗಿ ಪಕ್ಷದ ವೇದಿಕೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಪಾಲಿಸುವ ಬಗ್ಗೆ ಯಾರಿಗೆ ಸೂಚನೆ ಎನ್ನುವುದು ಮುಖ್ಯ ಚರ್ಚೆಯಾಗಿದೆ.
ಟ್ವೀಟ್‌ನಲ್ಲಿರುವ ಸಂದೇಶ ಒಂದು ಕಡೆ ಸಾಮಾನ್ಯವಾದರೂ, ಇನ್ನೊಂದು ಕಡೆ ನೇರವಾಗಿ ಯಾರಿಗೋ ತಾಕುವಂತಹ ಅರ್ಥವನ್ನು ಹೊಂದಿದೆ.
ಡಿಕೆಶಿ ಅವರು ಹೇಳಿದಂತೆ, “ನ್ಯಾಯಾಧೀಶರಾಗಲಿ, ಅಧ್ಯಕ್ಷರಾಗಲಿ, ಅಥವಾ ನಾನು ಸೇರಿದಂತೆ ಯಾರೇ ಆಗಿರಲಿ, ಕೊಟ್ಟ ಮಾತನ್ನು
ಉಳಿಸಿಕೊಳ್ಳಬೇಕು” ಎಂಬ ವಾಕ್ಯ, ನಾಯಕತ್ವ ಪ್ರಶ್ನೆಯ ಸಂದರ್ಭದಲ್ಲಿ ವಿಶೇಷ ಅರ್ಥ ಪಡೆದುಕೊಂಡಿದೆ.
ಈ ಹೇಳಿಕೆ ಮೂಲಕ ಡಿಕೆಶಿ ಯಾವುದೇ ನಾಯಕನಾಗಲಿ, ಯಾವ ಸ್ಥಾನದಲ್ಲಿರಲಿ, ಮಾತಿನ ಮೇಲೆ ನಿಲ್ಬೇಕು ಎಂದು ಒತ್ತಿ ಹೇಳುತ್ತಿರುವಂತಿದೆ.
ಇದನ್ನು ಕೆಲವರು “ಸಿದ್ದರಾಮಯ್ಯ ಅವರು ಹೈಕಮಾಂಡ್‌ಗೆ ಕೊಟ್ಟ ವಾಗ್ದಾನ ನೆನಪಿಸುವ ಸೂಚನೆ” ಎಂದು ವ್ಯಾಖ್ಯಾನಿಸುತ್ತಿದ್ದರೆ, ಕೆಲವರು ಡಿಕೆಶಿ
ತಮ್ಮ ವಚನಬದ್ಧತೆ ತೋರಿಸಲು ಮಾಡಿರುವ ಪೋಸ್ಟ್ ಎಂದೂ ಹೇಳುತ್ತಿದ್ದಾರೆ.
ಮಂತ್ರಿಮಂಡಲ ಸಭೆಯ ದಿನದಂದೇ ಈ ಸಂದೇಶ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದೇ ಸಂದರ್ಭದಲ್ಲಿ ರಾಜ್ಯ ಸರ್ಕಾರದಲ್ಲಿ ಹಲವಾರು ತೀರ್ಮಾನಗಳು, ಯೋಜನೆಗಳ ಅನುಷ್ಠಾನ ಮತ್ತು ಹೊಸ ಯೋಜನೆಗಳ ಕುರಿತಂತೆ
ನಡೆಯಬೇಕಿರುವ ಚರ್ಚೆಗಳ ಹೊತ್ತಲ್ಲೇ ಈ ಟ್ವೀಟ್ ಬಂದಿರುವುದು ರಾಜಕೀಯ ತೇಜಸ್ಸನ್ನು ಮತ್ತಷ್ಟು ಹೆಚ್ಚಿಸಿದೆ.
ಪಕ್ಷದೊಳಗೆ ಶಾಂತಿ ಮತ್ತು ಒಗ್ಗಟ್ಟು ಕಾಪಾಡಲು ಹೈಕಮಾಂಡ್ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಕೆಳಮಟ್ಟದ ನಾಯಕರು, ಶಾಸಕರು ಹಾಗೂ
ಬೆಂಬಲಿಗರ ಮಟ್ಟದಲ್ಲಿ “ಯಾರು ಮುಂದಿನ ಸಿಎಂ?” ಎಂಬ ಚರ್ಚೆ ತಣ್ಣಗಾಗುವುದೇ ಇಲ್ಲ.
ಮುಂಬರುವ ಚುನಾವಣೆಗಳು, ಜನಪರ ಕಾರ್ಯಕ್ರಮಗಳು, ಸರ್ಕಾರಿ ಯೋಜನೆಗಳ ವೇಗ ಇವೆಲ್ಲವೂ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ
ಎಂಬುದರ ಮೇಲೆ ನಿಂತಿದೆ. ಇವೆಲ್ಲದರ ನಡುವೆ ಡಿಕೆಶಿ ಅವರ ಸಂದೇಶ, ಪಕ್ಷದ ಶಿಸ್ತು ಮತ್ತು ಮಾತಿನ ಮೌಲ್ಯವನ್ನು ಒತ್ತಿ ಹೇಳಿದಂತಿದೆ.
ಇದನ್ನು ಓದಿ : 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ : ರಾಜ್ಯ ಸರ್ಕಾರದಿಂದ ಮಹತ್ವಾಕಾಂಕ್ಷಿ ಹೆಜ್ಜೆ