Bengaluru: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣವು (Prajwal Revanna Pendrive Case) ತೀವ್ರ ಸ್ವರೂಪ ಪಡೆದುಕೊಳ್ತಿದ್ದಂತೆ, ತನಿಖೆ ಮತ್ತಷ್ಟು ಚುರುಕುಗೊಂಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ SIT ವಶದಲ್ಲಿರುವ ಬಿಜೆಪಿ ಮುಂಖಡ, ವಕೀಲ ದೇವರಾಜೇಗೌಡ ಅವರು ನಿನ್ನೆ ಇದೆರೆಲ್ಲದರ ಹಿಂದೆ ಡಿ.ಕೆ.ಶಿವಕುಮಾರ್ (D K Shivakumar) ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಡಿಕೆಶಿ ಅವರು, ದೇವರಾಜೇಗೌಡ ಏನು ಬೇಕಾದರೂ ಮಾತನಾಡಿಕೊಳ್ಳಲಿ. ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ನಾನು ದೇವರಾಜೇಗೌಡ (Devarajegowda) ಜತೆ ಯಾವುದೇ ಮಾತುಕತೆ ನಡೆಸಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ, ತಲೆಕೆಡಿಸಿಕೊಳ್ಳುವುದಿಲ್ಲ. ಆತ ತಲೆಕೆಟ್ಟವನು, ಆಸ್ಪತ್ರೆಗೆ ಸೇರಿಸಬೇಕು. ನನ್ನ ಹೆಸರನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಪಕ್ಷ ಎಂದ ಮೇಲೆ ಸಾವಿರಾರು ಜನ ಭೇಟಿಯಾಗಿ ಹೋಗುತ್ತಾರೆ. ಯಾವ ಹುತ್ತದಲ್ಲಿ ಯಾವ ಹಾವು ಇರುತ್ತೋ ಯಾರಿಗೆ ಗೊತ್ತು ಎಂದು ಬೆಂಗಳೂರಿಲ್ಲಿ (Bengaluru) ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಆರೋಪ ಮಾಡಬೇಕು ಮಾಡುತ್ತಾರೆ. ಏನೇನೊ ಆಗುತ್ತೆ ನೀವು ದೊಡ್ಡದಾಗಿ ಮಾಡುತ್ತಿದ್ದೀರಿ. ಮಾಧ್ಯಮಗಳಿಗೆ ನಿಮ್ಮದೇ ಆದ ಇಮೇಜ್ ಇದೆ. ಮುಖಪುಟದಲ್ಲಿ ನ್ಯೂಸ್ ಕೂಡ ಆಗಿದೆ. ಅವರ ಬಗ್ಗೆ ಅಲ್ಲ, ನಿಮ್ಮ ಬಗ್ಗೆ ಬೇಜಾರ್ ಆಗುತ್ತಿದೆ ಎಂದು ಹೇಳಿದ್ದಾರೆ. ಪೆನ್ಡ್ರೈವ್ ಬಗ್ಗೆ ಹೆಚ್.ಡಿ.ದೇವೇಗೌಡ (H D Devegowda) ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ದೇವೇಗೌಡರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತೇನೆ. ದೇವರು ಸಂತೋಷ ನೀಡಲಿ, ಆಯಸ್ಸು ನೀಡಲಿ. ಸರ್ಕಾರದ ಪರ ದೇವೇಗೌಡರಿಗೆ ಶುಭ ಹಾರೈಸುತ್ತೇನೆ ಎಂದರು.