Bengaluru : ಎಸ್. ನಿಜಲಿಂಗಪ್ಪನವರ ನಂತರ ಕಾಂಗ್ರೆಸ್(Congress) ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರೊಬ್ಬರು ಆಯ್ಕೆಯಾಗಿರುವುದು(DKS Inspired) ನಮ್ಮ ಪಾಲಿಗೆ ಸೌಭಾಗ್ಯ. ರಾಜ್ಯದ ಪರವಾಗಿ ಮಲ್ಲಿಕಾರ್ಜುನ್ ಖರ್ಗೆ(Mallikarjun Kharge) ಅವರಿಗೆ ಅಭಿನಂದನೆಗಳು.

ಪಕ್ಷಕ್ಕೆ ನಿಷ್ಠರಾಗಿ ಶ್ರಮಿಸಿದರೆ ಯಾವ ಹಂತದವರೆಗೆ ಬೇಕಾದರೂ ಬೆಳೆಯಬಹುದು ಎಂಬುದಕ್ಕೆ ಖರ್ಗೆ ಅವರೇ ಸಾಕ್ಷಿ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ(State Congress President) ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್(Tweet) ಮಾಡಿರುವ ಅವರು, ಎಸ್. ನಿಜಲಿಂಗಪ್ಪನವರ ನಂತರ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗರೊಬ್ಬರು ಆಯ್ಕೆಯಾಗಿರುವುದು ನಮ್ಮ ಪಾಲಿಗೆ ಸೌಭಾಗ್ಯ.
ಶ್ರೀಮತಿ ಸೋನಿಯಾ ಗಾಂಧಿ(Sonia Gandhi) ಅವರು ಕಷ್ಟಕಾಲದಲ್ಲಿ ಪಕ್ಷದ ಜವಾಬ್ದಾರಿ ವಹಿಸಿ ಯುಪಿಎ ಸರ್ಕಾರ(UPA Government) ಬರಲು ಕಾರಣರಾಗಿದ್ದರು.
ಆ ಮೂಲಕ ಪಕ್ಷಕ್ಕೆ, ದೇಶಕ್ಕೆ ಶಕ್ತಿ ತುಂಬಿದ್ದರು. ಲೋಕಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾದಾಗ ರಾಹುಲ್ ಗಾಂಧಿ ಅವರು ನೈತಿಕ ಹೊಣೆ ಹೊತ್ತು ಅಧ್ಯಕ್ಷ ಸ್ಥಾನ ತ್ಯಜಿಸಿ ಈಗ ಈ ಚುನಾವಣೆ ನಡೆಸಿದ್ದಾರೆ.
ಕಾಂಗ್ರೆಸ್ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟು, ಪ್ರಜಾಪ್ರಭುತ್ವದ(DKS Inspired) ಉಳಿವಿಗಾಗಿ ನಿರಂತರ ಶ್ರಮಿಸಿದೆ. ಅದಕ್ಕೆ ಪಕ್ಷದ ಈ ಆಂತರಿಕ ಚುನಾವಣೆ ಸಾಕ್ಷಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಇನ್ನು ಈ ಸಂದರ್ಭದಲ್ಲಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ ರಾಜ್ಯದ ಜನತೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಮಲ್ಲಿಕಾರ್ಜುನ್ ಖರ್ಗೆ ಅವರ ಸುದೀರ್ಘ ರಾಜಕೀಯ ಅನುಭವ, ಅಧ್ಯಯನ, ಜ್ಞಾನ, ಬದ್ಧತೆಗಳು ಕಾಂಗ್ರೆಸ್ ಪಕ್ಷವನ್ನು ಸೈದ್ದಂತಿಕವಾಗಿ ಹಾಗೂ ರಾಜಕೀಯವಾಗಿ ಇನ್ನಷ್ಟು ಗಟ್ಟಿಯಾಗಿ ಕಟ್ಟುವಲ್ಲಿ ಸಹಕಾರಿಯಾಗಲಿದೆ ಎಂದರು.
ಇದೇ ವೇಳೆ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಖರ್ಗೆಯವರನ್ನು ಅಭಿನಂದಿಸಿ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್,

1969ರಲ್ಲಿ ಗುಲ್ಬರ್ಗಾ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷದ ಜವಾಬ್ದಾರಿ ನಿರ್ವಹಿಸುವುದರಿಂದ ಹಿಡಿದು ಕೆಪಿಸಿಸಿ ಅಧ್ಯಕ್ಷರಾಗಿ ಈಗ ಎಐಸಿಸಿ ಅಧ್ಯಕ್ಷರಾಗುವವರೆಗೆ ಖರ್ಗೆ ಅವರ ಪಕ್ಷದ ಸೇವೆ ಅನನ್ಯ ಹಾಗೂ ನಿರಂತರವಾದುದು.
ಪಕ್ಷ ನಿಷ್ಠೆ, ಸೈದ್ದಂತಿಕ ಬದ್ಧತೆ, ನಿಷ್ಕಳಂಕ ಬದುಕು, ಜನಪರ ಕಾಳಜಿ, ಸೇವೆಗಳೇ ಖರ್ಗೆಯವರ ಶಕ್ತಿಯಾಗಿದೆ.
ಇದನ್ನೂ ಓದಿ : https://vijayatimes.com/homeremedies-for-uti/
ವಿದ್ಯಾರ್ಥಿ ಜೀವನದಲ್ಲೇ ಹೋರಾಟದ ಹಾದಿ ಹಿಡಿದು, ಕಾರ್ಮಿಕ ನಾಯಕರಾಗಿ, ವಕೀಲರಾಗಿ ಜನಪರ ಸೇವೆ ಸಲ್ಲಿಸಿದ ಖರ್ಗೆ ಅವರ ಸಾಧನೆಗಳ ಪಟ್ಟಿ ಬಹುದೊಡ್ಡದಿದೆ.
ಎಸ್.ನಿಜಲಿಂಗಪ್ಪನವರ ನಂತರ ಎಐಸಿಸಿ ಅಧ್ಯಕ್ಷ ಸ್ಥಾನ ಕರ್ನಾಟಕದ ನಾಯಕರಾದ ಖರ್ಗೆಯವರಿಗೆ ಒಲಿದಿದ್ದು ಕನ್ನಡಿಗರಿಗೆ ಸಂಭ್ರಮಿಸುವ ಸಂಗತಿಯಾಗಿದೆ ಎಂದಿದೆ.
- ಮಹೇಶ್.ಪಿ.ಎಚ್