ಕಾಂಗ್ರೆಸ್ ಪಕ್ಷದಲ್ಲಿ(Congress Party) ಉತ್ಸವ ರಾಜಕೀಯ(DKS request to his fans) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.
ಸಿದ್ದರಾಮೋತ್ಸವ ಕಾರ್ಯಕ್ರಮದ ಕುರಿತು ಪರೋಕ್ಷವಾಗಿ ಅಸಮಾಧಾನಗೊಂಡಿರುವ ಕಾಂಗ್ರೆಸ್ ರಾಜ್ಯಾಧ್ಯಕ್ಷ(State President) ಡಿ.ಕೆ ಶಿವಕುಮಾರ್(DKS request to his fans) ಇದೀಗ ನನಗಾಗಿ ಯಾವ ಉತ್ಸವಗಳನ್ನು ಮಾಡದಂತೆ ಬೆಂಬಲಿಗರಿಗೆ ಮನವಿ ಮಾಡಿದ್ದಾರೆ.
ಸಿದ್ದರಾಮೋತ್ಸವಕ್ಕೆ ಪರ್ಯಾಯವಾಗಿ `ಕೆಂಪೇಗೌಡ ಉತ್ಸವʼ ಮಾಡಲು ಡಿ.ಕೆ ಶಿವಕುಮಾರ್ ಬೆಂಬಲಿಗರು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದ್ದವು.

ಈ ಕುರಿತು ಟ್ವೀಟ್(Tweet) ಮೂಲಕ ಸ್ಪಷ್ಟನೆ ನೀಡಿರುವ ಡಿ.ಕೆ ಶಿವಕುಮಾರ್ ಅವರು, ನನ್ನ ಹಿತೈಷಿಗಳಲ್ಲಿ ನನ್ನದೊಂದು ಮನವಿ, ಅಭಿಮಾನಿಗಳು ನನ್ನ ಉತ್ಸವ ಮಾಡಲು ಮುಂದಾಗಿದ್ದೀರಿ ಎಂದು ಮಾಧ್ಯಮಗಳಿಂದ ತಿಳಿದುಕೊಂಡೆ. https://vijayatimes.com/state-congress-tweets-against-bc-nagesh/
ತಮ್ಮಲ್ಲಿ ಪ್ರಾರ್ಥಿಸುವುದೇನೆಂದರೆ ನನಗಾಗಿ ಯಾವ ಉತ್ಸವ, ಹಬ್ಬ ಮಾಡುವುದು ಬೇಡ. ನನಗೆ ಅದರಲ್ಲಿ ಆಸಕ್ತಿಯೂ ಇಲ್ಲ. ಕಾಂಗ್ರೆಸ್ ಪಕ್ಷದ ಜಯವೇ ಉತ್ಸವವಾಗಲಿ. ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬುದು ನನ್ನ ಗುರಿ. ಪಕ್ಷದ ಬಗ್ಗೆ ನಿಷ್ಠೆ ಇರಲಿ ಅದುವೇ ದೊಡ್ಡ ಪೂಜೆ, ಉತ್ಸವ.
ಆಗಸ್ಟ್ 15 ರಂದು ಸ್ವತಂತ್ರ ಭಾರತದ 75ನೇ ಹುಟ್ಟುಹಬ್ಬದ ಅಂಗವಾಗಿ ನಡೆಯಲಿರುವ ಐತಿಹಾಸಿಕ ಯಾತ್ರೆಯಲ್ಲಿ ಪಾಲ್ಗೊಳ್ಳಿ. ಇದು ತಮ್ಮಲ್ಲಿ ನನ್ನ ಕೋರಿಕೆ ಎಂದಿದ್ದಾರೆ. ಇನ್ನು ದಾವಣಗೆರೆ(Davangere) ನಗರದಲ್ಲಿ ಸಿದ್ದರಾಮಯ್ಯ(Siddaramaiah) ಅವರ ೭೫ ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಆರಂಭದಲ್ಲಿ ಸಿದ್ದರಾಮೋತ್ಸವʼ ಎಂದು ಹೆಸರಿಡಲಾಗಿತ್ತು. ಈ ರೀತಿಯ ಕಾರ್ಯಕ್ರಮಗಳಿಂದ ವ್ಯಕ್ತಿ ಪೂಜೆ ಮಾಡಿದಂತಾಗುತ್ತದೆ ಎಂಬ ಟೀಕೆ ಕಾಂಗ್ರೆಸ್ ಪಕ್ಷದೊಳಗಿನಿಂದಲೇ ಕೇಳಿ ಬಂದಾಗ ಅನಿವಾರ್ಯವಾಗಿ ಕಾರ್ಯಕ್ರಮದ ಹೆಸರನ್ನು,
