Bengaluru: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿಯಿದ್ದು, ಚುನಾವಣೆಗೆ (DKS shift for CM House) ಈಗಾಗಲೇ ಮೂರು ಪಕ್ಷಗಳಿಂದ ಸಿದ್ಧತೆಗಳು ತೀವ್ರಗೊಂಡಿವೆ. ಇದರ ನಡುವೆ
ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (D K Shivakumar) ತಮ್ಮ ಪೂರ್ಣ ಅವಧಿಯನ್ನು ಚುನಾವಣಾ ಸಿದ್ಧತೆಗಾಗಿ ಇರಿಸಲು ತೀರ್ಮಾನ ಮಾಡಿದ್ದಾರೆ.
ಸದಾಶಿವನಗರ (Sadashiva Nagar)ದಲ್ಲಿದ್ದ ಗೃಹ ಕಚೇರಿಯನ್ನು ಶಿವಾನಂದ ಸರ್ಕಲ್ ಬಳಿ ಇರುವ ಸರ್ಕಾರಿ ಬಂಗಲೆಗೆ ಶಿಫ್ಟ್ ಮಾಡಲು ನಿರ್ಧಾರ ಮಾಡಿದ್ದಾರೆ. ಸಿದ್ದರಾಮಯ್ಯ (Siddaramaiah) ನವರು
ವಿಪಕ್ಷ ನಾಯಕರಾಗಿದ್ದಾಗ ಇದೇ ಬಂಗಲೆಯಲ್ಲಿ ಇದ್ದರು. ರಾಜ್ಯ ಬಿಜೆಪಿಯು (BJP) ಮತ್ತೊಮ್ಮೆ ಮೋದಿ ಅಭಿಯಾನ ಪ್ರಾರಂಭಿಸಿದ್ದು, ಕಾಂಗ್ರೆಸ್ ಪ್ರಚಾರಕ್ಕೂ ವೇಗ ನೀಡಲು ಕೆಪಿಸಿಸಿ ಅಧ್ಯಕ್ಷರೂ ಆಗಿರುವ
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DKS shift for CM House) ಯೋಜನೆ ಹಾಕಿಕೊಂಡಿದ್ದಾರೆ.
ತಮ್ಮ ಗೃಹ ಕಚೇರಿಯನ್ನು ಇನ್ನೆರಡು ದಿನಗಳಲ್ಲಿ ಅವರು ಸರ್ಕಾರಿ ಬಂಗಲೆಗೆ (Bungalow) ಶಿಫ್ಟ್ ಮಾಡಲಿದ್ದು, ಈ ಬಂಗಲೆಯಲ್ಲಿ ಈ ಹಿಂದೆ ಸಿಎಂ ಸಿದ್ದರಾಮಯ್ಯ ಅವರು ವಾಸ್ತವ್ಯ ಹೂಡಿದ್ದರು.
ಈ ಸರ್ಕಾರಿ ನಿವಾಸ ಅದೃಷ್ಟದ ನಿವಾಸ ಎಂದೇ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿದ್ದು, ಸಿಎಂ ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಈ ಬಂಗಲೆಯಲ್ಲೇ ವಾಸ್ತವ್ಯ ಹೂಡಿದ್ದರು.
ಗೃಹ ಕಚೇರಿ ಸದಾಶಿವ ನಗರದಲ್ಲಿರುವ ಡಿಕೆ ಶಿವಕುಮಾರ್ ಅವರ ಖಾಸಗಿ ನಿವಾಸದ ಪಕ್ಕದಲ್ಲೇ ಇತ್ತು. ನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿ ಜನರು ಸೇರುತ್ತಿರುವ ಹಿನ್ನೆಲೆಯಲ್ಲಿ ಇದೀಗ ಸರ್ಕಾರಿ ನಿವಾಸಕ್ಕೆ
ಕಚೇರಿ ಸ್ಥಳಾಂತರ ಮಾಡಿದ್ದಾರೆ. ಅಲ್ಲದೆ ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಕಾರ್ಯಕರ್ತರ ಜೊತೆಗೆ ನಿರಂತರ ಸಂಪರ್ಕ ಹಾಗೂ ಸಭೆಗಳನ್ನು ನಡೆಸುವ ಹಿನ್ನೆಲೆಯಲ್ಲಿ ಅವರು ತಮ್ಮ
ಗೃಹ ಕಚೇರಿಯನ್ನು ಬದಲಾವಣೆ ಮಾಡಿದ್ದಾರೆ.
ಕೆಪಿಸಿಸಿ (KPCC) ಅಧ್ಯಕ್ಷರಾಗಿ ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು, ಅದರಲ್ಲೂ ರಾಜ್ಯದಲ್ಲಿ ಕಾಂಗ್ರೆಸ್ (Congress) ಆಡಳಿತ ನಡೆಸುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ
ನಿಟ್ಟಿನಲ್ಲೂ ಹೈಕಮಾಂಡ್ ನಿರೀಕ್ಷೆ ಇಟ್ಟುಕೊಂಡಿದೆ. ಹಾಗಾಗಿ ಲೋಕಸಭೆ ಚುನಾವಣೆಗೆ ತಯಾರಿ ನಡೆಸುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಚೇರಿಯಲ್ಲೂ ಅವರು ಹೆಚ್ಚಿನ ಸಮಯವನ್ನು ವ್ಯಯಿಸಲು ನಿರ್ಧಾರ
ಮಾಡಿದ್ದಾರೆ.ಇನ್ನು ದಿನನಿತ್ಯ ಕೆಪಿಸಿಸಿ ಕಚೇರಿಗೆ ಬಂದು ಕಾರ್ಯಕರ್ತರ ಜೊತೆಗೆ ನಿತಂತರ ಸಂಪರ್ಕ ಸಭೆಗಳನ್ನು ನಡೆಸಲಿದ್ದು, ಚುನಾವಣಾ ಕಾರ್ಯತಂತ್ರಗಳನ್ನು ಹೂಡಲು ನಿರ್ಧಾರ ಮಾಡಿದ್ದಾರೆ.
ಬಹಿರಂಗವಾಗಿಯೂ ಕಾರ್ಯಕರ್ತರಲ್ಲಿ ಈ ವಿಚಾರವಾಗಿ ಅವರು ಮನವಿಯನ್ನು ಮಾಡಿದ್ದು, ಚುನಾವಣೆಯ ಸಿದ್ಧತೆಗೆ ಹೆಚ್ಚಿನ ಸಮಯ ನೀಡುವಂತೆಯೂ ಕೇಳಿಕೊಂಡಿದ್ದಾರೆ.
ಇದನ್ನು ಓದಿ: ಬಿಟ್ ಕಾಯಿನ್ ದಂಧೆ: ವಿಚಾರಣೆ ವೇಳೆ ಇಬ್ಬರು ಪೊಲೀಸರನ್ನು ವಶಕ್ಕೆ ಪಡೆದ ಎಸ್ಐಟಿ
- ಭವ್ಯಶ್ರೀ ಆರ್ ಜೆ