ಕಾಂಗ್ರೆಸ್ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ (DKSH gives special task )
ಯುವ ನಾಯಕರಿಗೆ ಡಿಕೆಶಿ ಟಾಸ್ಕ್
ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಗೌಡ ಆಯ್ಕೆ
ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DK Sivakumar) ಪಕ್ಷದ ಯುವ ನಾಯಕರಿಗೆ ವಿಶೇಷ ಟಾರ್ಗೆಟ್ ನೀಡಿದ್ದಾರೆ.ಯುವ ಕಾಂಗ್ರೆಸ್ ಪದಾಧಿಕಾರಿಗಾಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಯುವ ನಾಯಕರು ಪಕ್ಷದ ಜವಾಬ್ದಾರಿ ವಹಿಸಕೊಂಡು ನೀವು ಕೆಲಸವನ್ನು ತಪ್ಪದೆ ಮಾಡಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ನ (Karnataka Region Youth Congress) ನೂತನ ಅಧ್ಯಕ್ಷರಾಗಿ ಮಂಜುನಾಥ್ ಗೌಡ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಮಂಜುನಾಥ್ ಆಯ್ಕೆಯಾಗಿದ್ದು ಶಿಷ್ಯನಿಗೆ ಅಧಿಕಾರವಾನ್ನು ಡಿಕೆಶಿ ನೀಡಿದ್ದಾರೆ.
ಯುವ ಕಾಂಗ್ರೆಸ್ ನಾಯಕರಾಗಿ ಬೂತ್ ಮಟ್ಟದಲ್ಲಿ ಬಿಜೆಪಿ (BJP) ವಿರುದ್ಧ ಹೋರಾಟ ಮಾಡುವುದು, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವವನು ಮಾತ್ರ ನಿಜವಾದ ನಾಯಕ ಎನಿಸಿಕೊಳ್ಳುತ್ತಾನೆ. ಇಲ್ಲಿ ಚುನಾವಣೆಯಲ್ಲಿ ಗೆದ್ದಿರುವವರಷ್ಟೇ ನಮ್ಮ ಪಾಲಿನ ನಾಯಕರಲ್ಲ. ನಿಮ್ಮ ಪರವಾಗಿ ಕೆಲಸ ಮಾಡಿ ನಿಮ್ಮನ್ನು ಗೆಲ್ಲಿಸಿರುವ ಕಾರ್ಯಕರ್ತರು ನಮ್ಮ ನಿಜವಾದ ನಾಯಕರು.

ಅವೆರೆಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ನಿಮ್ಮ ಚುನಾವಣೆ ಮುಗಿದಿದೆ. ಇದು ಆಂತರಿಕ ಚುನಾವಣೆಯಷ್ಟೇ ಎಂದು ಕಿವಿಮಾತು ಹೇಳಿದ್ದಾರೆ.ನಿಮ್ಮ ಹೋರಾಟ ಏನೇ ಇದ್ದರೂ ಮುಂಬರುವ ಜಿಲ್ಲಾ ಪಂಚಾಯಿತಿ,ತಾಲ್ಲೂಕು ಪಂಚಾಯಿತಿ,ಬಿಬಿಎಂಪಿ (BBMP) ಚುನಾವಣೆಗಳಲ್ಲಿ ತೋರಿಸಬೇಕು.2028 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು (Congress party) ಅಧಿಕಾರಕ್ಕೆ ಮತ್ತೆ ತರುವಂತೆ ನೀವೆಲ್ಲಾ ಯುವ ನಾಯಕರು ಮಾಡಬೇಕು.
ರಾಜ್ಯದಲ್ಲಿ 25 ಲಕ್ಷ ಯುವ ಕಾಂಗ್ರೆಸ್ (Youth Congress) ಸದಸ್ಯತ್ವ ಮಾಡಲಾಗಿದೆ ಎಂದು ವರದಿ ಬಂದಿದೆ ಆದರೆ ಇಲ್ಲಿ ಕೇವಲ 20 ಸಾವಿರ ಸದಸ್ಯರಷ್ಟೆ ಬಂದಿದ್ದೀರಿ ಉಳಿದವರು ಎಲ್ಲಿ ಹೋದರು ಎಂದು ಕೇಳಬಯಸುತ್ತೇನೆ ಎಂದು ವೇದಿಕೆ ಮೇಲೆಯೆ ಯುವ ನಾಯಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ತಾಲೂಕು ಮಟ್ಟದ ಅಧ್ಯಕ್ಷರು ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ (Assembly constituency) ಇದೇ ತರಹದ ಪದಗ್ರಹಣ ಕಾರ್ಯಕ್ರಮವನ್ನು ಮಾಡಬೇಕು.ಇನ್ನು ಕಾಂಗ್ರೆಸ್ ಸದಸ್ಯತ್ವ ಪಡೆದವರಿಗೆ ಅಭಿನಂದನೆ ಸಲ್ಲಿಸುತ್ತೇನೆ,ಸದಸ್ಯತ್ವ ಪಡೆದವರಿಂದ ಮತ ಹಾಕಿಸಿಕೊಂಡು ನಂತರ ಅವರನ್ನು ಪಕ್ಷ ಬಿಡುವುದಿಲ್ಲ.ಸದಸ್ಯತ್ವ ಪಡೆದವರು ಕಾಂಗ್ರೆಸ್ ಲೆಕ್ಕದಲ್ಲಿರಬೇಕು.
ಇದನ್ನೂ ಓದಿ: KPCC ಅಧ್ಯಕ್ಷ ಸ್ಥಾನದಿಂದ ಶೀಘ್ರವೇ ಕೆಳಗಿಳಿಯುತ್ತೇನೆ, ಕಾಯುತ್ತಿರಿ : ಹೊಸ ಸಂಚಲನ ಮೂಡಿಸಿರುವ ಡಿ. ಕೆ ಶಿವಕುಮಾರ್ ಹೇಳಿಕೆ
ರಾಜಕೀಯದಲ್ಲಿ ಚುನಾವಣೆ ಗೆಲುವು ಸೋಲು ಸಹಜ. ಚುನಾವಣೆಯಲ್ಲಿ ಸ್ಪರ್ಧಿಸಿದವರೆಲ್ಲಾ ಗೆಲ್ಲಲು ಆಗುವುದಿಲ್ಲ. ಚುನಾವಣೆಯಲ್ಲಿ ಗೆದ್ದವರೆಲ್ಲಾ ನಾಯಕರಲ್ಲ. ಯಾರು ಪ್ರಾಮಾಣಿಕವಾಗಿ ಪಕ್ಷವನ್ನು ಶಿಸ್ತಿನಿಂದ ಸಂಘಟನೆ ಮಾಡುತ್ತಾರೋ, ಕಾಂಗ್ರೆಸ್ ತತ್ವ ಸಿದ್ಧಾಂತ ಬೆಳೆಸಿಕೊಂಡು, ದೇಶದ ಸಮಗ್ರತೆ, ಐಕ್ಯತೆ ಕಾಪಾಡಿಕೊಂಡು ಸಂವಿಧಾನ (Constitution), ರಾಷ್ಟ್ರಧ್ವಜ, ರಾಷ್ಟ್ರಗೀತಿ ಕಾಪಾಡುವವರು ನಿಜವಾದ ನಾಯಕ.
ಅವರೇ ನಿಜವಾದ ಕಾಂಗ್ರೆಸಿಗ ಎಂದು ಡಿಸಿಎಂ ಹೇಳಿದ್ದಾರೆ.. ನನಗೆ ವಿಶ್ವಾಸವಿದೆ 2028ರಲ್ಲಿ (DKSH gives special task ) ರಾಜ್ಯದಲ್ಲಿ ಹಾಗೂ 2029ರಲ್ಲಿ ರಾಷ್ಟ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ. ರಾಹುಲ್ ಗಾಂಧಿ (Rahul Gandhi) ಹಾಗೂ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ನಾಯಕತ್ವದಲ್ಲಿ ದೇಶದಲ್ಲಿ ಕಾಂಗ್ರೆಸ್ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.