- ಹೊಸ ಟ್ರೆಂಡಿಂಗ್ Gemini ai ಟೂಲ್‌ನಲ್ಲಿ ಫೋಟೋ ಎಡಿಟ್ ಮಾಡ್ಬೇಡಿ
- ಜೀನ್ಸ್ ಪ್ಯಾಂಟ್ ಹಾಕಿರುವ ಫೋಟೋಗೆ ಸೀರೆ ಉಟ್ಟ ಹಾಗೆ ಕ್ರಿಯೇಟ್
- ಫೊಟೋ ದುರ್ಬಳಕೆ ಆಗುತ್ತೆ ಸೈಬರ್ ಪೊಲೀಸರಿಂದ ಎಚ್ಚರಿಕೆ (Do not Create Photos in Gemini AI)
Gemini ai ಟ್ರೆಂಡಿಂಗ್ ಟೂಲ್‌ನಲ್ಲಿ ಫೋಟೋ ಎಡಿಟ್, ಸದ್ಯಕ್ಕೆ ಎಲ್ಲಾ ಕಡೆ ಸಿಕ್ಕಾಪಟ್ಟೆ ಟ್ರೆಂಡಿಂಗ್‌ನಲ್ಲಿರುವ Ai ಕ್ರಿಯೇಶನ್ ಇದು.
ಜೀನ್ಸ್ ಪ್ಯಾಂಟ್ ಹಾಕಿರುವ ಫೋಟೋಗೆ ಸೀರೆ ಉಟ್ಟ ಹಾಗೆ ಕ್ರಿಯೇಟ್ ಮಾಡು ಅಂದ್ರೆ ಜೆಮಿನಿ ಸೀರೆ ಉಡಿಸುತ್ತೆ, ಮಾಡ್ರನ್ ಲುಕ್, ರೆಟ್ರೋ ಲುಕ್ ಹೀಗೆ ನಾವು ಕೇಳಿದ ರೀತಿಯಲ್ಲಿ
ನಮ್ಮ ಫೋಟೋವನ್ನ ಬಳಸಿ gemini ಫೋಟೋ ಕ್ರಿಯೇಟ್ ಮಾಡಿಕೊಡ್ತಿದೆ. ನೀವೂ ಕೂಡ ಈ ಟ್ರೆಂಡಿಂಗ್ ಟೂಲ್ ಬಳಸಿ ಫೋಟೋ ಕ್ರಿಯೇಟ್ ಮಾಡ್ತಿದ್ದೀರಾ? ಹಾಗಾದ್ರೆ ಬೀ ಕೇರ್ ಫುಲ್.
ಟ್ರೆಂಡಿಂಗ್ ಮಾರುಹೋಗಿ ನಿಮ್ಮ ಖಾಸಗಿತನಕ್ಕೆ ಧಕ್ಕೆ ತಂದುಕೊಳ್ಳದಿರಿ. ಜೆಮಿನಿಯಲ್ಲಿ ಫೋಟೋ ಸೃಷ್ಟಿಸುವುದು ಅಪಾಯಕಾರಿ.

ಸಾಮಾಜಿಕ ಜಾಲತಾಣ ಬಂದ ಮೇಲೆ ಒಂದು ಹಂತದ ಬದಲಾವಣೆಗಳು ದಿನನಿತ್ಯ ಹಾಗುತ್ತಲೇ ಇವೆ, ಇದೀಗ ಕೃತಕ ಬುದ್ಧಿಮತ್ತೆ (AI) ಬಳಕೆಗೆ ಸಿಕ್ಕ ಮೇಲೆ ಪ್ರತಿನಿತ್ಯವು ಒಂದಿಲ್ಲೊಂದು ವಿಷಯಗಳು ಟ್ರೆಂಡ್ ಆಗುತ್ತಿವೆ.
ಇದೀಗ ರೆಟ್ರೋ ಶೈಲಿಯಲ್ಲಿ ಮಹಿಳೆಯರು ಎಐ ಕ್ರಿಯೆಟ್ ಫೋಟೋಗಳಲ್ಲಿ ಮಿಂಚುತ್ತಿದ್ದಾರೆ. ಯುವಕ ಯುವತಿಯಯರ ಫೋಟೋಗಳನ್ನು 90 ರ ದಶಕದ ಬಾಲಿವುಡ್ ಶೈಲಿಯ ಎಡಿಟ್ ರೀತಿಯಲ್ಲಿ ಪರಿವರ್ತನೆಗೊಂಡಿವೆ.
ಅದೇ ರೀತಿ ಪುರುಷರು ಸಹ ಗೂಗಲ್ ಜೆಮಿನಿ (Google Gemini AI Trend) ಎಐ ಪ್ರಾಂಪ್ಟ್ ಬಳಿಸಿ ಫೋಟೋಗಳನ್ನು ಎಟಿಟ್ ಮಾಡಿ ಪೋಸ್ಟ್ ಮಾಡುವುದು ಟ್ರೆಂಡ್ ಆಗುತ್ತಿದೆ.
ಹಾಗೆ ಎಡಿಟ್ ಮಾಡಿದ ಫೋಟೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಖುಷಿಪಡುತ್ತಿದ್ದಾರೆ. ಸದ್ಯ ಇವೆಲ್ಲವು ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಆಗುತ್ತಿವೆ.
ಈ ಫೋಟೋಗಳು ದುರ್ಬಳಕೆ ಆಗುವ ಸಾಧ್ಯತೆಯಿದೆ. ಜೆಮಿನಿಯಲ್ಲಿ ನಾವು ಅಪ್‌ಲೋಡ್ ಮಾಡುವ ಫೋಟೋಗಳನ್ನ AI ತನ್ನ ತರಬೇತಿಗೆ ಬಳಸಲಿದೆ,
ಅಲ್ಲದೆ ಬಯೋಮೆಟ್ರಿಕ್ ಡೇಟಾ ಬಳಸಿಕೊಂಡು ಜೆಮಿನಿ ಮುಖಚರ್ಯೆ ಅಧ್ಯಯನ ಮಾಡುತ್ತದೆ. ಇದು ನಮ್ಮ ಗೌಪ್ಯತೆಗೆ ಧಕ್ಕೆ ತರಲಿದೆ. ಜೊತೆಗೆ ನಮ್ಮ ಫೋಟೋ ಗುರುತು ಕಳವಾಗಲಿದೆ.
ಈ ಫೋಟೋಗಳೆಲ್ಲಾ ಬಹಳ ಸುಲಭವಾಗಿ ಸೈಬರ್ ವಂಚಕರ ಪಾಲಾಗಲಿದೆ. ಈ ಫೋಟೋವನ್ನ ಸೈಬರ್ ವಂಚಕರು ಮಿಸ್ ಯೂಸ್ ಮಾಡಲಿದ್ದಾರೆ.
ನಿಮ್ಮ ಬಟ್ಟೆ ಬದಲಿಸಿ ಫೋಟೋ ಕ್ರಿಯೇಟ್ ಮಾಡುವ geminige AI ಗೆ ನಿಮ್ಮ ಫೋಟೋವನ್ನ ಬೆತ್ತಲೆಯಾಗಿ ಕ್ರಿಯೇಟ್ ಮಾಡುವುದು ದೊಡ್ಡ ವಿಷಯವಲ್ಲ.
ಇದನ್ನು ಓದಿ : ಮೊಬೈಲ್ ಬಳಕೆದಾರರೇ ಎಚ್ಚರ, ಹೆಚ್ಚಾಗುತ್ತಿದೆ e-SIM ವಂಚನೆ ಪ್ರಕರಣಗಳು
ಹೀಗಾಗಿ ಸ್ನೇಹಿತರೇ ಈ ಟ್ರೆಂಡಿಂಗ್ ಫೋಟೋ ಕ್ರಿಯೇಟ್ ಮಾಡದಿರಿ, ನಿಮ್ಮ ಫೋಟೋ ದುರ್ಬಳಕೆ ಆಗುವುದನ್ನ ತಪ್ಪಿಸಿ. (Do not Create Photos in Gemini AI)