- ಮಕ್ಕಳ ಜೀವಕ್ಕೆ ಅಪಾಯ ತಂದ ಕೆಮ್ಮಿನ ಸಿರಪ್ – ಪೋಷಕರಿಗೆ ಎಚ್ಚರಿಕೆ
- 2 ವರ್ಷದೊಳಗಿನ ಮಕ್ಕಳಿಗೆ ಔಷಧಿ ಕೊಡಬೇಡಿ ಎಂದು ಕೇಂದ್ರ ಸರ್ಕಾರ ಸ್ಪಷ್ಟ ಸೂಚನೆ
- ಕಲುಷಿತ ಸಿರಪ್ ಶಂಕೆ, ಆರೋಗ್ಯ ಇಲಾಖೆಯ ತುರ್ತು ಕ್ರಮ(Do not give cough syrup to children under 2 years)
ಇತ್ತೀಚೆಗೆ ಕೆಮ್ಮು ಮಕ್ಕಳನ್ನು ಕೊಲ್ಲುತ್ತಿದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ನಡೆದ ಘಟನೆಗಳು ದೇಶವನ್ನು ನಡುಗಿಸಿವೆ. ಒಂದಲ್ಲ ಎರಡಲ್ಲ ಕೆಲವೇ ಕೆಲವು ದಿನಗಳಲ್ಲೇ 12 ಮಕ್ಕಳು ಸಾ*ಗೀಡಾದ ಘಟನೆಗಳು
ವರದಿಯಾಗಿವೆ. ತನಿಖೆ ನಡೆಸಿದಾಗ, ಇವರಿಗೆ ಕೆಮ್ಮಿಗೆ ನೀಡಲಾದ ಸಿರಪ್ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಒಟ್ಟಾರೆ ಒಂಬತ್ತು ಮಕ್ಕಳು ಸಾ*ಗೀಡಾದರು.
ಇದೇ ರೀತಿಯ ದುಃಖದ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿಯೂ ವರದಿಯಾಗಿದೆ. ಈ ಇಬ್ಬರು ರಾಜ್ಯಗಳಲ್ಲಿ ಸಂಭವಿಸಿದ ಸಾವುಗಳಿಗೆ ಕಾರಣವಾಗಿ ಕಲುಷಿತ ಕೆಮ್ಮಿನ ಸಿರಪ್‌ಗಳ ಬಳಕೆ ಕಾರಣವಾಗಿರಬಹುದು ಎಂದು ಆರೋಗ್ಯಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ದುರ್ಘಟನೆಯ ನಂತರ, ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ (DGHS) ತಕ್ಷಣ ಕ್ರಮ ಕೈಗೊಂಡಿದೆ.
- 2 ವರ್ಷದೊಳಗಿನ ಮಕ್ಕಳಿಗೆ ಕೆಮ್ಮಿನ ಸಿರಪ್ ನೀಡಬಾರದು
- ಸಾಮಾನ್ಯವಾಗಿ 5 ವರ್ಷದೊಳಗಿನ ಮಕ್ಕಳಿಗೂ ಈ ಔಷಧ ಅಗತ್ಯವಿಲ್ಲ
- ವೈದ್ಯರ ಸಲಹೆಯಿದ್ದರೆ ಮಾತ್ರ, ಸೀಮಿತ ಪ್ರಮಾಣದಲ್ಲಿ ಮತ್ತು ಕಡಿಮೆ ಅವಧಿಗೆ ನೀಡಬಹುದು
ಅಲ್ಲದೆ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಕಳುಹಿಸಿ, ವೈದ್ಯರು ಬಳಸಿ ಎಂದರೆ ಮಾತ್ರ ಮಕ್ಕಳಿಗೆ ಸಿರಪ್ ಸೂಚಿಸಬೇಕು ಎಂದು ಎಚ್ಚರಿಕೆ ನೀಡಲಾಗಿದೆ.
ಸರ್ಕಾರವು ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳಿಗೆ ಸ್ಪಷ್ಟ ಸೂಚನೆ ನೀಡಿದೆ – GMP ಮಾನದಂಡದಲ್ಲಿ ತಯಾರಾದ ಸುರಕ್ಷಿತ ಔಷಧಿಗಳನ್ನು ಮಾತ್ರ ಬಳಸಬೇಕು.
ಜೊತೆಗೆ, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದೂ ಹೇಳಿದೆ. ಅಷ್ಟಕ್ಕೂ ಇದು ಹೊಸ ವಿಷಯವಲ್ಲ. ಗ್ಯಾಂಬಿಯಾ ಮತ್ತು ಉಜ್ಬೇಕಿಸ್ತಾನದಲ್ಲೂ ಭಾರತೀಯ ಕಂಪನಿಗಳ
ಕೆಮ್ಮಿನ ಸಿರಪ್‌ಗಳಿಂದ ಮಕ್ಕಳ ಸಾವು ಸಂಭವಿಸಿದ್ದನ್ನು ವಿಶ್ವದಾದ್ಯಂತ ಸುದ್ದಿಯಾಗಿ ವರದಿ ಮಾಡಲಾಗಿತ್ತು. ಈ ಹಿನ್ನೆಲೆ, ಈಗಿನ ಘಟನೆ ಇನ್ನಷ್ಟು ಆತಂಕ ಮೂಡಿಸಿದೆ.
ಇನ್ನು ವೈದ್ಯರ ಪ್ರಕಾರ, ಬಹುತೇಕ ಮಕ್ಕಳಿಗೆ ಜ್ವರ ಅಥವಾ ಕೆಮ್ಮು ಬಂದರೆ ಅದು ಸ್ವತಃ ಸರಿಯಾಗುತ್ತದೆ. ಮನೆಮಟ್ಟದಲ್ಲಿ ಸರಿಯಾದ ಆರೈಕೆ ಮಾಡಿದರೆ ಸಾಕು.
ಮಕ್ಕಳಿಗೆ ಬಿಸಿ ನೀರು ಕುಡಿಯಿಸಲು, ಸಾಕಷ್ಟು ವಿಶ್ರಾಂತಿ ನೀಡಲು ಮತ್ತು ಆಹಾರದಲ್ಲಿ ಅಗತ್ಯ ಜಾಗ್ರತೆ ವಹಿಸಲು ಪೋಷಕರು ಗಮನಹರಿಸಬೇಕು.
ಇದನ್ನು ಓದಿ : ಕೇರಳಕ್ಕೆ ಮೆದುಳು ತಿನ್ನುವ ರಕ್ಕಸ ಎಂಟ್ರಿ, ಅಮಿಬಾ ಸೋಂಕಿಗೆ 17 ಬಲಿ, 67 ಜನರಲ್ಲಿ ಸೋಂಕು ದೃಢ
ಇಂತಹ ಕ್ರಮಗಳು ಸಾಕಷ್ಟು ಪರಿಣಾಮಕಾರಿ ಆಗುವುದರಿಂದ, ಔಷಧಿ ನೀಡುವುದು ಕೊನೆಯ ಆಯ್ಕೆ ಮಾತ್ರವಾಗಿರಬೇಕು. (Do not give cough syrup to children under 2 years)