Visit Channel

ಊಟದ ನಂತರ ನೇರವಾಗಿ ಮಲಗಬೇಡಿ, 10 ನಿಮಿಷ ನಡೆಯಿರಿ..

vijaya-karnataka (1)

ಊಟ ಮಾಡಿದ ಮೇಲೆ ಹಾಸಿಗೆಯ ಕಡೆ ಓಡುವವರು ಹೆಚ್ಚಿನವರಿದ್ದಾರೆ. ಆದರೆ ಹೀಗೆ ಮಾಡುವುದು ಎಷ್ಟು ಅಪಾಯಕಾರಿ ಗೊತ್ತಾ? ಊಟವಾದ ಕೂಡಲೇ ಮಲಗುವುದರಿಂದ ನಿಮಗೆ ಎದೆಯುರಿ ಮತ್ತು ಅಸಿಡಿಟಿ ಉಂಟಾಗಬಹುದು. ಆದ್ದರಿಂದ ಊಟವಾದ ಬಳಿಕ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ನಿಯಂತ್ರಿಸಲು ಕೆಲವು ನಿಮಿಷಗಳ ಕಾಲ ನಡೆಯುವುದು ಉತ್ತಮ. ಊಟದ ಬಳಿಕ ಹೋಗುವ ವಾಕ್ ಹೊಟ್ಟೆಯ ಭಾರವನ್ನು ಕಡಿಮೆ ಮಾಡಲು ಸಹಾಯ ಮಾಡುವುದು. ಜೊತೆಗೆ ಹೃದಯ ಸಂಬಂಧಿ ಅಪಾಯವನ್ನು ತಡೆಯುವುದು. ಈ ಕುರಿತ ಸಂಪೂರ್ಣ ಮಾಹಿತಿಗಾಗಿ ಕೆಳಗೆ ಸ್ಕ್ರೋಲ್ ಮಾಡಿ.

ಅಧ್ಯಯನ ಏನು ಹೇಳುತ್ತದೆ?:
ಊಟದ ನಂತರ ನಡೆಯುವುದರಿಂದ ಹೃದಯ ಸಮಸ್ಯೆ ಅಪಾಯ ಕಡಿಮೆ ಆಗುವುದು ಎಂದು ನಿಮಗೆ ತಿಳಿದಿದೆಯೇ?. ಹೌದು, ಸರಿಸುಮಾರು 30,000 ವಯಸ್ಕರೊಂದಿಗೆ ನಡೆಸಿದ ಒಂದು ಅಧ್ಯಯನದಲ್ಲಿ, ಪ್ರತಿದಿನ 30 ನಿಮಿಷಗಳ ಕಾಲ ನಡೆಯುವುದು, 20% ರಷ್ಟು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. ಹಾಗಾದರೆ ವಾಕಿಂಗ್ ಹೇಗಿರಬೇಕು, ಯಾವ ಸಮಯದಲ್ಲಿ ನಡೆದರೆ ಉತ್ತಮ ಎಂಬುದನ್ನು ನೋಡೋಣ.

ವಾಕಿಂಗ್ ವೇಗ:
ನಿಮ್ಮ ಊಟದ ನಂತರ ಲಘು-ಮಧ್ಯಮ ವೇಗದಲ್ಲಿ ನಡೆಯುವುದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಮೊದಲ ವಿಷಯ. ತಿಂದ ಮೇಲೆ ವೇಗವಾಗಿ ನಡೆಯುವುದು, ಓಡುವುದು ಅಥವಾ ಜಾಗಿಂಗ್ ಮಾಡುವುದನ್ನು ತಪ್ಪಿಸಿ. ಹೀಗೆ ಮಾಡುವುದು ಹೊಟ್ಟೆನೋವಿಗೆ ಮತ್ತು ಹೊಟ್ಟೆ ಉಬ್ಬುವುದಕ್ಕೂ ಕಾರಣವಾಗಬಹುದು. ನಡಿಗೆ ಪ್ರಾರಂಭಿಸುವಾಗ ಸುಮಾರು 5-6 ನಿಮಿಷಗಳ ಕಾಲ ಮೆಲ್ಲ ನಡೆಯಿರಿ. ಕೆಲವು ದಿನಗಳ ನಂತರ, ಸಮಯವನ್ನು ಮಧ್ಯಮ ವೇಗವನ್ನು 10 ನಿಮಿಷಗಳಿಗೆ ಹೆಚ್ಚಿಸಬಹುದು. ಹೊರಗೆ ನಡೆಯಲು ಆಗದಿದ್ದರೆ, ಮನೆಯೊಳಗೇ ನಡೆಯಬಹುದು. ಒಂದು ಕೊಠಡಿಯಿಂದ ಮತ್ತೊಂದು ಕೋಣೆಗೆ ಮತ್ತು ಮನೆಯ ಸುತ್ತಲೂ 10 ನಿಮಿಷಗಳ ಕಾಲ ನಡೆಯಿರಿ.

ಇದರಿಂದ ಸಿಗುವ ಪ್ರಯೋಜನಗಳು:
ಊಟದ ನಂತರ ನೀವು ಜಡ ಅನುಭವಿಸುತ್ತಿದ್ದರೆ, ವಾಕ್ ಮಾಡಲು ಹೋಗುವುದು ಉತ್ತಮ. ವಾಕಿಂಗ್ ಜೀರ್ಣಕ್ರಿಯೆಯ ಪ್ರಕ್ರಿಯೆಯನ್ನು ಉತ್ತಮವಾಗಿಡುವುದು. ಊಟ ಮಾಡಿದ ನಂತರ ನೀವು ಮಲಗಿದರೆ, ಆಸಿಡ್ ರಿಫ್ಲಕ್ಸ್ ಮತ್ತು ಗ್ಯಾಸ್ಟ್ರಿಕ್ ನಂತಹ ಹೊಟ್ಟೆಯ ತೊಂದರೆಗಳನ್ನು ಪಡೆಯಬಹುದು.

ಊಟದ ನಂತರ ಸಣ್ಣ ವಾಕ್ ಹೋಗುವುದು ಚಯಾಪಚಯವನ್ನು ಉತ್ತೇಜಿಸುತ್ತದೆ ಮತ್ತು ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಊಟದ ನಂತರ ಏನಾದರೂ ಸಿಹಿ ತಿನ್ನಬೇಕೆನ್ನುವ ಬಯಕೆಯನ್ನು ಕಡಿಮೆ ಮಾಡುವುದು ಎಂದು ಹೇಳಲಾಗುತ್ತದೆ. ಸಕ್ಕರೆ ತಿನ್ನಬೇಕೆನ್ನುವ ಬಯಕೆ ನಿಮ್ಮ ದೇಹದಾದ್ಯಂತ ರಕ್ತ ಪರಿಚಲನೆ ಹೆಚ್ಚಿಸುತ್ತದೆ.

ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆ ಕಂಡುಬರುತ್ತದೆ, ಏಕೆಂದರೆ ನಿಮ್ಮ ದೇಹವು ಆಹಾರವನ್ನು ಒಡೆಯಲು ಪ್ರಾರಂಭಿಸುತ್ತದೆ. ವಿಶೇಷವಾಗಿ ಮಧುಮೇಹ ರೋಗಿಗಳು ಊಟ ಮಾಡಿದ ನಂತರ 10 ನಿಮಿಷಗಳ ಕಾಲ ನಡೆಯುವುದು ಒಳ್ಳೆಯದು. ಇದು ಸಕ್ಕರೆಯ ಏರಿಕೆಯಾಗುವುದನ್ನು ತಡೆಯುವುದು.

ನಡಿಗೆಗೆ ಸೂಕ್ತ ಸಮಯ:
ಊಟದ ಮಾಡಿದ ನಡೆಯುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾದರೆ ಎಷ್ಟು ಸಮಯದವರೆಗೆ ನಡೆಯಬೇಕು? ಸಾಮಾನ್ಯವಾಗಿ, ಪ್ರತಿ ಆಹಾರ ಸೇವಿಸಿದ ನಂತರ 10 ನಿಮಿಷಗಳ ನಡಿಗೆ ನಿಮ್ಮ ದೇಹಕ್ಕೆ ಸಾಕು. ಇದು ಪ್ರತಿದಿನ 30 ನಿಮಿಷಗಳ ನಡಿಗೆಯನ್ನು ಒಳಗೊಳ್ಳುವುದು. ಅಂದರೆ ಬೆಳಗಿನ ಉಪಾಹಾರ, lಮಧ್ಯಾಹ್ನದ ಊಟ ಮತ್ತು ರಾತ್ರಿ ಊಟಕ್ಕೆ ತಲಾ 10 ನಿಮಿಷಗಳು. ನಿಮ್ಮ ಅಗತ್ಯಕ್ಕೆ ಅನುಗುಣವಾಗಿ, ನೀವು ಅದನ್ನು ತಲಾ 15 ನಿಮಿಷಗಳಿಗೆ ಹೆಚ್ಚಿಸಬಹುದು, ಆದರೆ ಅತಿಯಾಗಿ ನಡೆಯುವುದು ಬೇಡ. ಸರಳವಾಗಿ ಹೇಳುವುದಾದರೆ, ಜೀರ್ಣಕ್ರಿಯೆಯನ್ನು ಹೆಚ್ಚಿಸಲು, ತೂಕ ಇಳಿಸಲು ಸಹಾಯ ಮಾಡಲು ಮತ್ತು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸಲು ನಿಮ್ಮ ದೇಹಕ್ಕೆ ಸಣ್ಣ ವೇಗದಲ್ಲಿ 10 ನಿಮಿಷಗಳ ನಡಿಗೆ ಉತ್ತಮವಾಗಿದೆ.

Latest News

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).

Lal Singh Chadda
ಮನರಂಜನೆ

ಲಾಲ್ ಸಿಂಗ್ ಚಡ್ಡಾ ನಷ್ಟಕ್ಕೆ ವಿತರಕರಿಗೆ ಪರಿಹಾರ ಕೊಡಲು ಸಜ್ಜಾದ್ರಾ ನಟ ಅಮೀರ್ ಖಾನ್?

ಚಿತ್ರದ ವಿತರಕರಿಗೆ ಪರಿಹಾರದ ಮಾದರಿಯನ್ನು ರೂಪಿಸಲು ನಟ ಅಮೀರ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.