download app

FOLLOW US ON >

Monday, August 8, 2022
Breaking News
ನೋಯ್ಡಾ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ ಬುಲ್ಡೋಜರ್ ಕ್ರಮ!“ರಮೇಶ್ ಕುಮಾರ್‍ಗೆ ಸ್ವಂತ ಶಕ್ತಿಯಿಂದ ರಾಜಕೀಯ ಮಾಡುವ ಯೋಗ್ಯತೆ ಇಲ್ಲ” : ಬಿಜೆಪಿಹೆಣ ಕಂಡರೆ ಓಡೋಡಿ ಬರುವ ಶೋಭಾ ಕರಂದ್ಲಾಜೆ, ಸಮಸ್ಯೆಗಳಿಗೆ ಬಾಯಿ ಬಿಡದಿರುವುದೇಕೆ? : ಕಾಂಗ್ರೆಸ್‌ಆಮ್ಲಜನಕ ಕೊರತೆ ; ಮಾರ್ಗಸೂಚಿ ಪಾಲಿಸುವಲ್ಲಿ ಸಿಬ್ಬಂದಿಯ ವಿಫಲವೆಂದ ಬಿ.ಎ ಪಾಟೀಲ್ ವರದಿ : `ದ ಫೈಲ್ಸ್’ಹಿಟ್ಲರ್ ಕೂಡಾ ಚುನಾವಣೆಗಳನ್ನು ಗೆಲ್ಲುತ್ತಿದ್ದ : ರಾಹುಲ್‌ ಗಾಂಧಿಅರ್ಪಿತಾ ಮುಖರ್ಜಿ ಪ್ರಾಣಕ್ಕೆ ಅಪಾಯವಿದೆ ; ಆಹಾರ ಮತ್ತು ನೀರನ್ನು ಪರೀಕ್ಷಿಸಬೇಕು : ನ್ಯಾಯಾಲಯಕ್ಕೆ ಇ.ಡಿ ಮನವಿಕಾಮನ್ ವೆಲ್ತ್ ಗೇಮ್ಸ್ 2022 : ಕೇವಲ 1 ಗಂಟೆ ಅಂತರದಲ್ಲಿ ಹ್ಯಾಟ್ರಿಕ್ ಚಿನ್ನ ಗೆದ್ದ ಕುಸ್ತಿ ವೀರರುಜ್ಯೂಸ್ ಬಾಟಲಿಯನ್ನೇ ಮೈಕ್ ಮಾಡಿಕೊಂಡು ಶಾಲೆಯ ದುಸ್ಥಿತಿಯನ್ನು ವರದಿ ಮಾಡಿದ ಬಾಲಕ ; ವೀಡಿಯೋ ವೈರಲ್ಸಚಿವ ಸುನೀಲ್‌ ಕುಮಾರ್‌ಗೆ ಇಂಥಾ ಗುಲಾಮಿ ಮನಸ್ಥಿತಿ ಬರಬಾರದಿತ್ತು : ಸಿದ್ದರಾಮಯ್ಯಮೋದಿ-ಮಮತಾ ಬ್ಯಾನರ್ಜಿ ಭೇಟಿ : ಪಶ್ಚಿಮ ಬಂಗಾಳಕ್ಕೆ ಹಣ ಬಿಡುಗಡೆಗೆ ಒತ್ತಾಯ!
English English Kannada Kannada

ಊಟ ಮಾಡಿದ ತಕ್ಷಣ ಟೀ ಕುಡಿಯುವುದರಿಂದ ಆಗುವ ಸಮಸ್ಯೆಗಳಾವುವು ಗೊತ್ತಾ?

ಊಟವಾದ ಕೂಡಲೇ ಚಹಾ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ.

ದಿನವನ್ನು ಪ್ರಾರಂಭಿಸಲು ಅಥವಾ ಇಡೀ ದಿನದ ಆಯಾಸದಿಂದ ಹೊರಬರಲು ಚಹಾದ ಮೊರೆ ಹೋಗುವವರು ಸಾಕಷ್ಟು ಜನ. ಆದರೆ ಊಟ ಮಾಡಿದ ತಕ್ಷಣ ಚಹಾ ಕುಡಿಯಲು ಇಷ್ಟಪಡುವ ಜನರಲ್ಲಿ ನೀವೂ ಇದ್ದರೆ, ಈ ಅಭ್ಯಾಸವನ್ನು ಇಂದಿನಿಂದಲೇ ನಿಲ್ಲಿಸಿ. ಹೌದು, ಚಹಾದಲ್ಲಿರುವ ಕೆಫೀನ್ ದೇಹದಲ್ಲಿ ಕಾರ್ಟಿಸೋಲ್ ಅಥವಾ ಸ್ಟೀರಾಯ್ಡ್ ಹಾರ್ಮೋನ್ ಅನ್ನು ಹೆಚ್ಚಿಸುವ ಮೂಲಕ ಆರೋಗ್ಯಕ್ಕೆ ಅನೇಕ ಹಾನಿ ಉಂಟುಮಾಡುತ್ತದೆ.

ಊಟವಾದ ಬಳಿಕ  ಚಹಾ ಕುಡಿಯುವುದರಿಂದ ಆರೋಗ್ಯಕ್ಕೆ ಏನಾಗುತ್ತದೆ ಎಂಬುದನ್ನು ಈ ಕೆಳಗೆ ವಿವರಿಸಿದ್ದೇವೆ, ನೋಡಿ:

ರಕ್ತದೊತ್ತಡ ಹೆಚ್ಚಾಗಬಹುದು:

ಊಟ ಮಾಡಿದ ನಂತರ ಚಹಾ ಕುಡಿಯುವ ಅಭ್ಯಾಸವು ನಿಮ್ಮನ್ನು ರಕ್ತದೊತ್ತಡ ರೋಗಿಯನ್ನಾಗಿ ಮಾಡುತ್ತದೆ. ವಾಸ್ತವವಾಗಿ, ಚಹಾದಲ್ಲಿ ಕೆಫೀನ್ ಇರುತ್ತದೆ. ಆದ್ದರಿಂದ ಊಟದ ನಂತರ ಚಹಾ ಸೇವಿಸುವುದರಿಂದ ರಕ್ತದೊತ್ತಡದ ತೊಂದರೆ ಉಂಟಾಗುತ್ತದೆ. ಅಧಿಕ ರಕ್ತದೊತ್ತಡ ಹೊಂದಿರುವ ರೋಗಿಗಳು ಊಟದ ನಂತರ ಚಹಾವನ್ನು ಸೇವಿಸಬಾರದು.

ಹೃದಯಕ್ಕೆ ಅಪಾಯ:

ಊಟವಾದ ತಕ್ಷಣ ಟೀ ಕುಡಿಯುವುದರಿಂದ ನಿಮಗೆ ಹೃದಯ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ನಿಮ್ಮ ಈ ಅಭ್ಯಾಸವು ತ್ವರಿತ ಹೃದಯ ಬಡಿತಕ್ಕೂ ಕಾರಣವಾಗುತ್ತದೆ.  ಆದ್ದರಿಂದ ಈಗಾಗಲೇ ಹೃದಯ ಸಮಸ್ಯೆ ಇರುವವರು ಈ ಅಭ್ಯಾಸವನ್ನು ಬಿಡಬೇಕು. ಅಷ್ಟು ಟೀ ಪ್ರಿಯರಾಗಿದ್ದರೆ, ಸ್ವಲ್ಪ ಸಮಯದ ಬಳಿಕ ಚಹಾ ಕುಡಿಯಬಹುದು, ಆದರೆ ತಕ್ಷಣ ಕುಡಿಯುವುದು ನಿಮ್ಮ ಹೃದಯಕ್ಕೆ ಹಾನಿ ಮಾಡುತ್ತದೆ.

ಜೀರ್ಣಾಂಗ ವ್ಯವಸ್ಥೆಗೆ ತೊಂದರೆಗಳು:

ಊಟವಾದ ಕೂಡಲೇ ಚಹಾ ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ದೇಹದಲ್ಲಿ ಆಮ್ಲ ಅಥವಾ ಆಸಿಡಿಕ್ ಪ್ರಮಾಣವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ವ್ಯಕ್ತಿಯು ಆಹಾರವನ್ನು ಜೀರ್ಣಿಸಿಕೊಳ್ಳಲು ತೊಂದರೆ ಅನುಭವಿಸುತ್ತಾನೆ. ಜೀರ್ಣ ಪ್ರಕ್ರಿಯೆ ವಿಳಂಬವಾಗಬಹುದು. ಅಜೀರ್ಣ ಸಮಸ್ಯೆ ಕಾಡಬಹುದು.

ಕಬ್ಬಿಣದ ಕೊರತೆ:

ಊಟ ಮಾಡಿದ ನಂತರ ಚಹಾ ಕುಡಿಯುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆಯೂ ಉಂಟಾಗುತ್ತದೆ. ಚಹಾದಲ್ಲಿ ಕಂಡುಬರುವ ಫೀನಾಲಿಕ್ ಸಂಯುಕ್ತವು ಆಹಾರದಲ್ಲಿನ ಕಬ್ಬಿಣದ ಅಂಶ ದೇಹ ಹೀರಿಕೊಳ್ಳುವುದನ್ನು ಅಡ್ಡಿಪಡಿಸುತ್ತದೆ. ಜೊತೆಗೆ ಜೊತೆಗೆ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ, ಇದು ರಕ್ತಹೀನತೆಯ ಸಮಸ್ಯೆಗೆ ಕಾರಣವಾಗಬಹುದು.

ತಲೆನೋವು ಸಮಸ್ಯೆ:

ಸಾಮಾನ್ಯವಾಗಿ ಜನರು ತಲೆನೋವು ಬಂದಾಗ ಚಹಾ ಸೇವಿಸುತ್ತಾರೆ. ತಲೆನೋವನ್ನು ಕಡಿಮೆಮಾಡಲು ಇದು ಅತ್ಯುತ್ತಮ ಮನೆಮದ್ದು ಎಂದು ಪರಿಗಣಿಸಲಾಗಿದೆ. ಆದರೆ ಊಟದ ನಂತರ ಚಹಾ ಸೇವಿಸಿದರೆ ದೇಹದಲ್ಲಿ ಗ್ಯಾಸ್ ಅಥವಾ ಅನಿಲ ಉತ್ಪತ್ತಿಯಾಗುವುದರಿಂದ  ತಲೆನೋವಿನ ಸಮಸ್ಯೆ ಉದ್ಭವಿಸಬಹುದು.

ವಿಷಯಗಳನ್ನು ನೆನಪಿನಲ್ಲಿಡಿ:

ನಿಮಗೆ ಚಹಾ ಇಷ್ಟವಾಗಿದ್ದರೆ , ಊಟ ಮಾಡಿದ 1-2 ಗಂಟೆಗಳ ನಂತರ ಕುಡಿಯಬಹುದು. ಆಗ ಮೇಲಿನ ಸಮಸ್ಯೆಗಳು ಉದ್ಭವಿಸುವುದು ಕಡಿಮೆಯಾಗುವುದು. ಇದು ಊಟ ಮಾಡಿದ ತಕ್ಷಣ ಟೀ ಬೇಕು ಎನ್ನುವವರಿಗಾಗಿ ಕಿವಿ ಮಾತು.

Share News on

Share on facebook
Facebook
Share on google
Google+
Share on twitter
Twitter
Share on linkedin
LinkedIn
Share on whatsapp
WhatsApp
error: Content is protected !!

Submit Your Article