Bengaluru: ಇತ್ತೀಚಿಗೆ ಕೆಲವು ಜನರು ವೈದ್ಯರ ಬಗ್ಗೆ, ಅವರು ಸೂಚಿಸುವ ಔಷಧಿಗಳ ಬಗ್ಗೆ ಕೆಲವೊಂದು ಆರೋಪಗಳನ್ನು ಮಾಡ್ತಿದ್ದಾರೆ. ಅದೇನೆಂದರೆ ವೈದ್ಯರು ಕಡಿಮೆ ಬೆಲೆಯ ಅಥವಾ ಜೆನೆರಿಕ್ (Generic) ಔಷಧಗಳನ್ನು ಬರೆಯುವುದಿಲ್ಲ. ಬದಲಾಗಿ ಬ್ರ್ಯಾಂಡ್ (doctors not accepting Janaushadhi) ಔಷಧಗಳನ್ನೇ ಬರೆಯುತ್ತಾರೆ ಅಂತ ದೂರುತ್ತಾರೆ.

ಅಷ್ಟೇ ಅಲ್ಲ ಈ ವೈದ್ಯರು ದೊಡ್ಡ ದೊಡ್ಡ ಔಷಧ ಕಂಪನಿಗಳಿಂದ, ಮೆಡಿಕಲ್ ರೆಪ್ರೆಸೆಂಟೇಟಿವ್‌ಗಳಿಂದ (Representative) ದುಬಾರಿ ಉಡುಗೊರೆಗಳನ್ನು ಪಡೆದು,
ಕಂಪೆನಿ ಔಷಧಿಗಳನ್ನೇ ರೋಗಿಗಳಿಗೆ ಸೂಚಿಸುತ್ತಾರೆ. ಈಗ ಸರ್ಕಾರವೇ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ಬೆಲೆಯ ಜೆನೆರಿಕ್ (Generic) ಔಷಧಿಗಳನ್ನು
ಪೂರೈಸುತ್ತಿದೆ ಆದರೂ ಜೆನೆರಿಕ್ ಔಷಧಗಳನ್ನು ಬರೆಯುವುದಿಲ್ಲ ಎಂದು ಆರೋಪಿಸುತ್ತಿದ್ದಾರೆ. ಹಾಗಾದ್ರೆ ಈ ಆರೋಪದ ಹಿಂದೆ ಇರುವ ಸತ್ಯ ಏನು? ತಿಳಿಯೋಣ.
ಜೆನೆರಿಕ್ ಔಷಧ ಎಂದರೇನು?
ಜನರಿಗೆ ಸಾಮಾನ್ಯವಾಗಿ ಜೆನೆರಿಕ್ ಔಷಧಗಳ ಕುರಿತು ಮಾಹಿತಿ ಇರುವುದಿಲ್ಲ, ಇಂತಹ ಸಂದರ್ಭಗಳಲ್ಲಿ ವೈದ್ಯರು ಒಂದು ವೇಳೆ ಅವುಗಳನ್ನು ಸೂಚಿಸಿದರೆ ಅದರ ಬಗ್ಗೆ ಅನುಮಾನ ಪಡುವ ಸಾಧ್ಯತೆಗಳಿವೆ.
ಉದಾಹರಣೆಗೆ ಜ್ವರ ಅಥವಾ ನೋವಿಗೆ ಸಾಮಾನ್ಯವಾಗಿ ಜನರು ಬಳಸುವ ಮತ್ತು ತಿಳಿದಿರುವ ಔಷಧಿ ಎಂದರೆ ಕ್ರೋಸಿನ್ (Crocin) ಎಂಬ ಬ್ರ್ಯಾಂಡ್.
ಕ್ರೋಸಿನ್ ಬಗ್ಗೆ ತಿಳಿದಿರುವ ರೋಗಿಯ ಬಳಿ ವೈದ್ಯರು ಪ್ಯಾರಾಸಿಟಮಲ್ (Paracetamol) ಮಾತ್ರೆ ತೆಗೆದುಕೊಳ್ಳಲು ಸೂಚಿಸಿದರೆ ರೋಗಿಗೆ ನನ್ನ ಕಾಯಿಲೆಯನ್ನು ಈ ಮಾತ್ರೆ ಗುಣಪಡಿಸಬಹುದೇ ಎಂಬ ಅನುಮಾನ ಬರುತ್ತದೆ.
ಯಾಕೆಂದರೆ ಜನರಿಗೆ ಪ್ಯಾರಾಸಿಟಮಲ್ ಎನ್ನುವ ಮಾತ್ರೆಯು ಕ್ರೋಸಿನ್ ಮಾತ್ರೆಯ ಜೆನೆರಿಕ್ ಹೆಸರು ಎಂಬ ಅರಿವಿರುವುದಿಲ್ಲ.
ಆದ್ದರಿಂದ ರೋಗಿಗಳಿಗೆ ಇಂತಹ ಮಾಹಿತಿ ಗೊತ್ತಿಲ್ಲದೇ ಇರುವುದರಿಂದ ವೈದ್ಯರು ಸಾಮಾನ್ಯವಾಗಿ ಬ್ರಾಂಡೆಡ್ ಔಷಧಗಳನ್ನು ಸೂಚಿಸುತ್ತಾರೆ.

ವೈದ್ಯರು ಜೆನೆರಿಕ್ ಔಷಧಗಳನ್ನು ಸೂಚಿಸದಿರಲು ಕಾರಣ ಏನಿರಬಹುದು?
- ಮುಖ್ಯ ಕಾರಣವೆಂದರೆ ಔಷಧಗಳ ಲಭ್ಯತೆ. ಬಹುತೇಕ ಜನೌಷಧಿ ಕೇಂದ್ರಗಳಲ್ಲಿ ಜೆನೆರಿಕ್ ಔಷಧಗಳ ಬಗ್ಗೆ ಅತ್ಯಂತ ಕಡಿಮೆ ಮಾಹಿತಿಯಿರುತ್ತದೆ. ಇಲ್ಲಿ ಜೆನೆರಿಕ್ ಔಷಧಗಳ ಸಂಗ್ರಹ ಇಟ್ಟಿರುವುದಿಲ್ಲ. ಆದ್ದರಿಂದ ರೋಗಿಗಳು ಒಂದೊಂದು ಔಷಧಗಳನ್ನು ಹುಡುಕಿಕೊಂಡು ಬೇರೆ ಬೇರೆ ಔಷಧ ಮಳಿಗೆಗಳಿಗೆ ತೆರಳುತ್ತಾರೆ.ಇದರಿಂದ ಸುಸ್ತಾಗುತ್ತದೆ ಹಾಗಾಗಿ ಇಂತಹ ಸಮಸ್ಯೆಯೇ ಬೇಡವೆಂದು ರೋಗಿಗಳು ಮುಂದಿನ ಬಾರಿ ಔಷಧ ಕೊಡುವಾಗ ಸ್ಥಳೀಯವಾಗಿ ಲಭ್ಯವಿರುವ ಔಷಧಗಳನ್ನು ಕೊಡುವಂತೆ ವೈದ್ಯರ ಬಳಿ ಕೇಳಿಬಿಡುತ್ತಾರೆ.
- ಇನ್ನು ಎಲ್ಲಾ ವೈದ್ಯರೂ ಒಂದೇ ರೀತಿಯಾಗಿರುವುದಿಲ್ಲ. ಯಾಕೆಂದರೆ ಕೆಲವೇ ಕೆಲವು ವೈದ್ಯರು ಜೆನೆರಿಕ್ ಔಷಧಗಳನ್ನು ಬರೆದು ಕೊಡುತ್ತಾರೆ.
3.ಇನ್ನು ಕೆಲವು ವೈದ್ಯರು ಇತರ ಔಷಧ ಕಂಪನಿಗಳೊಡನೆ (Company) ಅಥವಾ ರೆಪ್ರೆಸೆಂಟೇಟಿವ್‌ಗಳಿಂದ (Representative) ಸಹಯೋಗ ಹೊಂದಿರುತ್ತಾರೆ.
4.ಇನ್ನು ಕೆಲವೊಂದು ಸಂದರ್ಭಗಳಲ್ಲಿ ವೈದ್ಯರ ಸಂಬಂಧಿಗಳೇ ಔಷಧ ಅಂಗಡಿಗಳನ್ನು ನಡೆಸುತ್ತಿರುತ್ತಾರೆ ಅಂತಹ ಸಂದರ್ಭಗಳಲ್ಲಿ ವೈದ್ಯರು ಅಲ್ಲಿಗೆ ಚೀಟಿ ಕೊಡುವುದು ಸಹಜವಾಗಿರುತ್ತದೆ.
ಭಾರತೀಯ ಜನೌಷಧಿ ಯೋಜನೆ ಎಂದರೇನು?
ನವೆಂಬರ್ 2008ರಲ್ಲಿ ರೋಗಿಗಳಿಗೆ ಕಡಿಮೆ ಬೆಲೆಯ, ಪರಿಣಾಮಕಾರಿ ಔಷಧಿಗಳನ್ನು ಒದಗಿಸಬೇಕೆಂಬ ನಿಟ್ಟಿನಲ್ಲಿ ಪ್ರಧಾನ್ ಮಂತ್ರಿ ಭಾರತೀಯ ಜನೌಷಧಿ ಜಾರಿಗೆ ಬಂದಿತು,
ಈ ಯೋಜನೆಯು 1,759 ಔಷಧ ಹಾಗೂ 280 ಸರ್ಜಿಕಲ್ ಉಪಕರಣಗಳನ್ನು ಒಳಗೊಂಡಿದೆ.ಅಕ್ಟೋಬರ್ 2022ರ ವರದಿಗಳ ಪ್ರಕಾರ, ದೇಶಾದ್ಯಂತ ಒಟ್ಟು 8,819 ಜನೌಷಧಿ ಕೇಂದ್ರಗಳು ಈಗ ಕಾರ್ಯಾಚರಿಸುತ್ತಿವೆ.
ಜನೌಷಧಿ ಕೇಂದ್ರಗಳಲ್ಲಿ ಸಿಗುವ ಔಷಧಗಳು ಇತರ ಬ್ರ್ಯಾಂಡ್‌ಗಳ ಔಷಧಗಳಷ್ಟೇ ಉತ್ತಮ ಗುಣಮಟ್ಟ ಹೊಂದಿವೆ ಎಂದು ನಡೆಸಲಾದ ಕೆಲವು ಅಧ್ಯಯನಗಳಲ್ಲಿ ತಿಳಿದು ಬಂದಿದೆ.
ಜನೌಷಧಿ ಕೇಂದ್ರಗಳಲ್ಲಿ ಔಷಧಗಳು ಯಾಕೆ ಕಡಿಮೆ ಬೆಲೆ ಹೊಂದಿವೆ?
ಜನೌಷಧಿ ಕೇಂದ್ರದಲ್ಲಿ ಔಷಧಗಳನ್ನು ಬ್ರ್ಯಾಂಡ್ (Brand) ಹೆಸರಿಲ್ಲದೆ ಮಾರಾಟ ಮಾಡಲಾಗುತ್ತದೆ. ಆದ್ದರಿಂದ ಜನೌಷಧಿ ಕೇಂದ್ರದ ಔಷಧಗಳು ಸದ್ಯದ ಮಾರುಕಟ್ಟೆಯ
ಇತರ ಬ್ರ್ಯಾಂಡ್‌ಗಳ ಔಷಧಗಳಿಂದ ಕನಿಷ್ಠ 50% ಕಡಿಮೆ ಬೆಲೆಯನ್ನು ಹೊಂದಿರುತ್ತವೆ. ಇನ್ನು ಕೆಲವು ಔಷಧಗಳಂತೂ 80% – 90% ಕಡಿಮೆ ಬೆಲೆ ಹೊಂದಿರುತ್ತವೆ.
ಇನ್ನು ಔಷಧಿಯ ಮಾರಾಟ ಬೆಲೆಯ 20%ದಷ್ಟು ಲಾಭಾಂಶವು ಜನೌಷಧಿ ಕೇಂದ್ರಗಳ ಮಾಲಕರಿಗೆಸಿಗುತ್ತದೆ
ರಶ್ಮಿತಾ ಅನೀಶ್