ತೆಲಂಗಾಣದ(Telangana) ಹೈದರಾಬಾದ್‌ನಲ್ಲಿರುವ(Hyderabad) ಅವೇರ್ ಗ್ಲೆನಿಗಲ್ಸ್ ಗ್ಲೋಬಲ್ ಆಸ್ಪತ್ರೆಯ(Glenigals Global Hospital) ವೈದ್ಯರು ಕೀಹೋಲ್(Keyhole) ಶಸ್ತ್ರಚಿಕಿತ್ಸೆಯ ಮೂಲಕ ರೋಗಿಯೊಬ್ಬರಿಂದ ಕೇವಲ ಒಂದು ಗಂಟೆ ಅವಧಿಯಲ್ಲಿ 206 ಮೂತ್ರಪಿಂಡದ ಕಲ್ಲುಗಳನ್ನು ತೆಗೆದುಹಾಕಿದ್ದಾರೆ.
ರೋಗಿಯು ಆರು ತಿಂಗಳಿಗೂ ಹೆಚ್ಚು ಕಾಲ ತನ್ನ ಎಡ ಸೊಂಟದಲ್ಲಿ ತೀವ್ರವಾದ ನೋವಿನಿಂದ ಬಳಲುತ್ತಿದ್ದ ಹಿನ್ನಲೆ, ಬೇಸಿಗೆಯ ತಿಂಗಳು ಪ್ರಾರಂಭವಾದಾಗಿನಿಂದ ತಾಪಮಾನದ ಪರಿಣಾಮ ಇದು ಮತ್ತಷ್ಟು ಉಲ್ಬಣಗೊಂಡಿದೆ. ಹೀಗಾಗಿ ಕೂಡಲೇ ಶಸ್ತ್ರಚಿಕಿತ್ಸೆಗೆ ಎಂದು ಬಂದ ರೋಗಿಗೆ ಕಾದಿದ್ದು ಆಶ್ಚರ್ಯವೇ, ವೈದ್ಯರಿಗೂ ಅಶ್ಚರ್ಯವೇ! ಏಪ್ರಿಲ್ 22 ರಂದು, ನಲ್ಗೊಂಡ ನಿವಾಸಿ 56 ವರ್ಷದ ವೀರಮಲ್ಲ ರಾಮಲಕ್ಷ್ಮಯ್ಯ ಅವರು ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ವೈದ್ಯರನ್ನು ಸಂಪರ್ಕಿಸಿ, ತಮ್ಮ ನೋವಿನ ಕಾರಣವನ್ನು ಹೇಳಿಕೊಂಡಿದ್ದಾರೆ.
ಸ್ಥಳೀಯ ಆರೋಗ್ಯ ವೈದ್ಯರು ಸೂಚಿಸಿದ ಕೆಲವು ಔಷಧಿಗಳನ್ನು ಬಳಸುತ್ತಿದ್ದರು, ಅದು ಅಲ್ಪಾವಧಿಯ ಪರಿಹಾರವನ್ನು ಮಾತ್ರ ನೀಡಿದೆ, ಆದರೆ ನೋವು ಅವರ ದಿನನಿತ್ಯ ಬೆಂಬಿಡದ ರೀತಿ ತೀವ್ರ ಪರಿಣಾಮ ಬೀರಿದೆ. ಈ ಪ್ರಕರಣ ಮತ್ತು ಚಿಕಿತ್ಸೆಯ ಕುರಿತು ಪ್ರತಿಕ್ರಿಯಿಸಿದ ಅವೇರ್ ಗ್ಲೆನೆಗಲ್ಸ್ ಗ್ಲೋಬಲ್ ಆಸ್ಪತ್ರೆಯ ಹಿರಿಯ ಸಲಹೆಗಾರ ಮೂತ್ರಶಾಸ್ತ್ರಜ್ಞ ಡಾ.ಪೂಲಾ ನವೀನ್ ಕುಮಾರ್, “ಕೆಲವು ಆರಂಭಿಕ ತನಿಖೆಗಳು ಮತ್ತು ಅಲ್ಟ್ರಾಸೌಂಡ್ ಸ್ಕ್ಯಾನ್‌ಗಳು ಅನೇಕ ಎಡ ಮೂತ್ರಪಿಂಡದ ಕ್ಯಾಲಿಕುಲಿ (ಎಡಭಾಗದಲ್ಲಿ ಮೂತ್ರಪಿಂಡದ ಕಲ್ಲುಗಳು) ಇರುವಿಕೆಯನ್ನು ಬಹಿರಂಗಪಡಿಸಿದವು ಮತ್ತು ಅದನ್ನು ಮರುದೃಢೀಕರಿಸಲಾಯಿತು.
ರೋಗಿಗೆ ಸಲಹೆ ನೀಡಲಾಯಿತು ಮತ್ತು ಒಂದು ಗಂಟೆಯವರೆಗೆ ಕೀಹೋಲ್ ಶಸ್ತ್ರಚಿಕಿತ್ಸೆಗೆ ಸಿದ್ಧತೆ ನಡೆಸಲಾಯಿತು.ಈ ಸಮಯದಲ್ಲಿ ಎಲ್ಲಾ ಕ್ಯಾಲಿಕುಲಿ (ಕಲ್ಲುಗಳು) ತೆಗೆದುಹಾಕಲಾಗಿದೆ, ಇದರ ಒಟ್ಟು ಸಂಖ್ಯೆಯಲ್ಲಿ 206 ರಷ್ಟಿತ್ತು. ಕಾರ್ಯವಿಧಾನದ ನಂತರ, ರೋಗಿಯು ಚೆನ್ನಾಗಿ ಚೇತರಿಸಿಕೊಂಡರು ಮತ್ತು ಎರಡನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಕೂಡ ಮಾಡಲಾಗಿದೆ ಎಂದು ಡಾ. ಪೂಲಾ ನವೀನ್ ಕುಮಾರ್ ಹೇಳಿದರು.
ಬೇಸಿಗೆಯ ದಿನಗಳಲ್ಲಿ ಹೆಚ್ಚಿನ ತಾಪಮಾನದೊಂದಿಗೆ, ಅನೇಕ ಜನರು ನಿರ್ಜಲೀಕರಣದಿಂದ ಬಳಲುತ್ತಿರುತ್ತಾರೆ, ಇದು ಮೂತ್ರಪಿಂಡದಲ್ಲಿ ಕಲ್ಲುಗಳ ಉತ್ಪತ್ತಿಯಾಗಲು ಪ್ರಮುಖ ಕಾರಣವಾಗಿರುತ್ತದೆ ಅಷ್ಟೇ ಎಂದು ಹೇಳಿದರು.