ನವದೆಹಲಿ ಡಿ 28 : ವೈದರ ಮೇಲಿನ ಪೊಲೀಸರ ದಬ್ಬಾಳಿಕೆಯನ್ನು ಖಂಡಿಸಿ ದೇಶಾದ್ಯಂತ ಡಿ 29ರಂದು ವೈದ್ಯಕೀಯ ಸೇವೆ ಬಂದ್ ಆಗಲಿದೆ ನೀಟ್ ಸ್ನಾತಕೋತ್ತರ ಪರೀಕ್ಷೆಯ ನಂತರ ಕಾಲೇಜು ಹಂಚಿಕೆ ವಿಳಂಬವನ್ನು ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆ ಮೇಲೆ ದೆಹಲಿ ಪೊಲೀಸರು ನಡೆಸಿರುವ ದಬ್ಬಾಳಿಕೆ ವಿರುದ್ಧ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ಕಿಡಿಕಾರಿದೆ.
ಈ ಬಗ್ಗೆ ಫೆಡರೇಶನ್ ಆಫ್ ಆಲ್ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ (ಎಫ್‌ಎಐಎಂಎ) ತನ್ನ ಎಲ್ಲಾ ಆರ್‌ಡಿಎಗಳು ಮತ್ತು ಇತರ ವೈದ್ಯರ ಸಂಘಗಳಿಗೆ ಈ ಸಂಬಂಧ ಸೂಚನೆ ಹೊರಡಿಸಿದೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಎಫ್‌ಎಐಎಂಎ, ನೀಟ್ ಸ್ನಾತಕೋತ್ತರ ಪರೀಕ್ಷೆಯ ನಂತರ ಕಾಲೇಜು ಹಂಚಿಕೆ ವಿಳಂಬವನ್ನು ವಿರೋಧಿಸಿ ನಮ್ಮ ವೈದ್ಯರುಗಳು ದೆಹಲಿಯಲ್ಲಿ ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ದೆಹಲಿ ಪೊಲೀಸರು ಪ್ರತಿಭಟನಾನಿರತ ವೈದ್ಯರುಗಳ ಮೇಲೆ ಲಾಠಿ ಚಾರ್ಚ್ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಗಳು ಎಂದೂ ಪರಿಗಣಿಸದೆ ಹಲ್ಲೆ ನಡೆಸಿದ್ದಾರೆ. ಇದು ಪೊಲೀಸರಿಗೆ ನಾಚೀಕೆಗೇಡಿನ ಸಂಗತಿ ಎಂದು ಪ್ರಕಟಣೆ ಮೂಲಕ ಕಿಡಿಕಾರಿದ್ದು, ಪೊಲೀಸರ ದಬ್ಬಾಳಿಕೆ ಖಂಡಿಸಿ, 29 ರ ಬುಧವಾರ 8 ಗಂಟೆಯಿಂದ ದೇಶದಾದ್ಯಂತ ತನ್ನ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದೆ.