ಚಾಮರಾಜನಗರ, ಡಿ. 25: ನಟ ಪುನೀತ್ರಾಜ್ ಕುಮಾರ್ ಅವರು ತಮ್ಮ ತಂದೆ, ವರನಟ ಡಾ. ರಾಜ್ ಕುಮಾರ್ ಅವರ ಹುಟ್ಟೂರು ದೊಡ್ಡ ಗಾಜನೂರಿಗೆ ಭೇಟಿ ನೀಡಿದ್ದರು.
ವನ್ಯಜೀವಿಗಳ ಕುರಿತಂತೆ ನಿರ್ಮಿಸಲಾಗುತ್ತಿರುವ ಸಾಕ್ಷ್ಯಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಪವರ್ ಸ್ಟಾರ್, ಚಿತ್ರೀಕರಣದ ಬಿಡುವಿನ ನಡುವೆ ತಮ್ಮ ತಂದೆಯ ಹುಟ್ಟೂರಿಗೆ ಭೇಟಿ ನೀಡಿದ್ದರು. ಈ ವೇಳೆ ರಾಜ್ ಕುಮಾರ್ ಅವರು ಹುಟ್ಟಿದ ಮನೆ, ಓಡಾಡಿದ ದೊಡ್ಡ ಆಲದಮರ ಇನ್ನಿತರ ಜಾಗಗಳಿಗೆ ಭೇಟಿ ನೀಡಿ ಅಪ್ಪನ ಬಾಲ್ಯದ ನೆನಪುಗಳನ್ನು ಕಣ್ತುಂಬಿಕೊಂಡರು.
ತಮ್ಮ ಸೋದರತ್ತೆ ನಾಗಮ್ಮ ಜೊತೆ ಪುನೀತ್ ರಾಜ್ ಕುಮಾರ್ ದೊಡ್ಡ ಗಾಜನೂರಿಗೆ ಬಂದಿರುವ ವಿಷಯ ಗೊತ್ತಾಗುತ್ತಿದ್ದಂತೆ ಸನಿಹದ ಚಾಮರಾಜನಗರ ಇನ್ನಿತರ ಕಡೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳು ಸ್ಥಳಕ್ಕೆ ಆಗಮಿಸಿದ್ದರು. ಅಲ್ಲದೇ ತಮ್ಮ ನೆಚ್ಚಿನ ನಟನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದರು.
ವನ್ಯಜೀವಿಗಳ ಬಗ್ಗೆ ನಿರ್ಮಿಸಲಾಗುತ್ತಿರುವ ಸಾಕ್ಷ್ಯಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ನಟ ಪುನೀತ್
ಮಂಗಳವಾರದಿಂದಲೂ ಚಿತ್ರೀಕರಣದಲ್ಲಿ ತೊಡಗಿದ್ದು, ಇಲ್ಲೇ ವಾಸ್ತವ್ಯ ಹೂಡಿದ್ದರು. ಸಾಕ್ಷ್ಯಚಿತ್ರ ಚಿತ್ರೀಕರಣ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಪುಣಜನೂರು, ಬೂಡಿಪಡಗ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆದಿದೆ.