New Delhi : ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ವಿಜ್ಞಾನಿಗಳು ಭಾರತದಲ್ಲಿ 65,000ಕ್ಕೂ ಹೆಚ್ಚು ಜಾನುವಾರುಗಳನ್ನು(Cow) ಕೊಂದಿರುವ ಚರ್ಮದ ವೈರಸ್ ಅನ್ನು ಮಾನವ(Does Lumpy Virus Spreads to Human??) ಜನಸಂಖ್ಯೆಗೆ ಹರಡುವ ಸಾಧ್ಯತೆಯಿದೆಯೇ ಎಂದು ಕಂಡುಹಿಡಿಯಲು ಅಧ್ಯಯನ(Reasearch) ನಡೆಸುತ್ತಿದ್ದಾರೆ.
ಅಪಾಯಕಾರಿ ವೈರಸ್ನಿಂದ ಸೋಂಕಿತ ಜಾನುವಾರುಗಳ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿದೆ.
ಸದ್ಯ ಭಾರತದಲ್ಲಿ 18 ರಾಜ್ಯಗಳಲ್ಲಿ 1.5 ಮಿಲಿಯನ್ ಲಂಪಿ ವೈರಸ್ ಪ್ರಕರಣಗಳು ವರದಿಯಾಗಿದ್ದರೂ ಸಹ, ಯಾವುದೇ ಜಾನುವಾರುಗಳಿಂದ ಮನುಷ್ಯನಿಗೆ ಹರಡುವುದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ.
ಇನ್ನು ಗುರು ಅಂಗದ್ ದೇವ್ ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ ವಿಶ್ವವಿದ್ಯಾನಿಲಯದ ತಜ್ಞರು ಸಂಶೋಧನೆ ನಡೆಸಿ, ಈ ವೈರಸ್ ದನಗಳಿಂದ ಮನುಷ್ಯರಿಗೆ ಹರಡುವುದಿಲ್ಲ.
ನೇರ ಸಂಪರ್ಕದ ಮೂಲಕ ಅಥವಾ ಪೀಡಿತ ಪ್ರಾಣಿಗಳ ಹಾಲನ್ನು ಸೇವಿಸುವುದರಿಂದ ವೈರಸ್ ಸೋಂಕು ಮನುಷ್ಯರಿಗೆ(Does Lumpy Virus Spreads to Human??) ತಗುಲುವುದಿಲ್ಲ. ಆದರೆ, ಹಾಲು ಕುಡಿಯುವ ಮೊದಲು ಕುದಿಸಿ ಕುಡಿಯುವುದು ಉತ್ತಮ ಎಂದು ಹೇಳಿದ್ದಾರೆ.
ಇದನ್ನೂ ಓದಿ : https://vijayatimes.com/last-wadiyar-to-ride-on-ambari/
ಇನ್ನು ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್ಐ) ಜಂಟಿ ನಿರ್ದೇಶಕ ಅಶೋಕ್ ಕುಮಾರ್ ಮೊಹಂತಿ ಮಾತನಾಡಿ, ಸೋಂಕಿತ ಜಾನುವಾರುಗಳಿಂದ ಹಾಲು ಸೇವಿಸುವುದು ಸುರಕ್ಷಿತವಾಗಿದೆ.
ಹಾಲು ಕುದಿಸಿದ ನಂತರ ಅಥವಾ ಕುದಿಸದೆ ಇದ್ದರೂ ಅದರ ಗುಣಮಟ್ಟದಲ್ಲಿ ಯಾವುದೇ ತೊಂದರೆ ಇಲ್ಲ. https://youtu.be/NIbQmBVUfDo
ಅಕ್ಟೋಬರ್ 7ರ ವೇಳೆಗೆ, IVRI ಸಂಶೋಧಕರು 850 ಮಾದರಿಗಳನ್ನು ಪರೀಕ್ಷಿಸಿದ್ದಾರೆ. ಈ ವೈರಸ್ ಸೋಂಕು ಮನುಷ್ಯರಿಗೂ ತಗುಲುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.
ಎಮ್ಮೆ, ಹಸು, ಮೇಕೆ, ಕುರಿಗಳಿಗೆ ಮಾತ್ರ ರೋಗ ತಗಲುತ್ತದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ.
ನೊಣಗಳು, ಸೊಳ್ಳೆಗಳು, ಮತ್ತು ಉಣ್ಣಿಗಳಂತಹ ರಕ್ತ ಪೋಷಿಸುವ ಕೀಟಗಳಿಂದ ಈ ವೈರಸ್ ಹರಡುತ್ತದೆ. ಇದರ ಆರಂಭಿಕ ಲಕ್ಷಣಗಳೆಂದರೆ, ದೇಹದಲ್ಲಿ ಆಯಾಸ, ಜ್ವರ ನಂತರ, ಇದು ಸೋಂಕಿತ ಜಾನುವಾರುಗಳ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ.
ಇದನ್ನೂ ಓದಿ : https://vijayatimes.com/pm-reminds-old-politics/
ಅದರ ಉಸಿರಾಟದ ಅಂಗಗಳನ್ನು ಕೊಲ್ಲುತ್ತದೆ. ಸೋಂಕಿತ ಪ್ರಾಣಿಗಳಲ್ಲಿ ಗರ್ಭಪಾತಗಳು ಕಂಡುಬಂದಿವೆ. ಜತೆಗೆ ಹಾಲಿನ ಇಳುವರಿಯೂ ಕುಸಿದಿದೆ ಎನ್ನಲಾಗಿದೆ.
- ಮಹೇಶ್.ಪಿ.ಎಚ್