UttarPradesh : ವಿಷಪೂರಿತ ಹಾವಿನ ಕಡಿತದಿಂದ ತನ್ನ ಮಾಲೀಕನನ್ನು ರಕ್ಷಿಸಲು ನಾಯಿಯೊಂದು ತನ್ನ ಪ್ರಾಣವನ್ನೇ ತ್ಯಾಗ ಮಾಡಿರುವ ಘಟನೆ ಉತ್ತರ ಪ್ರದೇಶ(Dog Saved His Owner) ರಾಜ್ಯದ ಝಾನ್ಸಿಯಲ್ಲಿ ಸಂಭವಿಸಿದೆ.
ದಾರಿಯಲ್ಲಿ ಮಾಲೀಕನೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ದಾಳಿ ಮಾಡಲು ಬಂದ ಹಾವಿನಿಂದ ತನ್ನ ಮಾಲೀಕನನ್ನು ರಕ್ಷಿಸಿದೆ.

ಶ್ವಾನವನ್ನು ಸಾಕಿದ ಅಮಿತ್ ರೈ ಅವರು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಯುಪಿಯ ಝಾನ್ಸಿ ಜಿಲ್ಲೆಯ ಗಡಿಗೆ ಹೊಂದಿಕೊಂಡಿರುವ ಮಧ್ಯಪ್ರದೇಶದ(Dog Saved His Owner) ಪ್ರತಾಪಪುರದಲ್ಲಿ ವಾಸವಾಗಿದ್ದರು ಎನ್ನಲಾಗಿದೆ.
ಶ್ವಾನಗಳೆಂದರೆ ಅಚ್ಚುಮೆಚ್ಚಿನ ಅಮಿತ್ ಸುಮಾರು ಐದು ವರ್ಷಗಳ ಹಿಂದೆ ಅಮೆರಿಕದ ಬುಲ್ಲಿ ನಾಯಿಯನ್ನು ತಂದು ಗಬ್ಬರ್ ಎಂದು ಹೆಸರಿಟ್ಟಿದ್ದರು.
ಅಮಿತ್ ಗಬ್ಬರ್ ಅನ್ನು ಇತರ ನಾಯಿಗಳಿಗಿಂತ ಸ್ವಲ್ಪ ಹೆಚ್ಚು ಪ್ರೀತಿಸುತ್ತಿದ್ದರು. ಗಬ್ಬರ್ ಕೂಡ ತನ್ನ ನೆಚ್ಚಿನ ಮಾಲಿಕ ಅಮಿತ್ ಅವರನ್ನು ಅಷ್ಟೇ ಪ್ರೀತಿಸುತ್ತಿತ್ತು.
ಗಬ್ಬರ್ ಬಹಳ ಗಡಸು, ಶಕ್ತಿಶಾಲಿ, ಬುದ್ದಿವಂತ ಶ್ವಾನವಾಗಿತ್ತು. ತನ್ನ ಮಾಲಿಕ ಅಮಿತ್ ಅವರ ಅನುಮತಿಯಿಲ್ಲದೆ ಯಾರನ್ನೂ ಅವರ ಹತ್ತಿರಕ್ಕೆ ಬಿಡುತ್ತಿರಲಿಲ್ಲ ಎಂಬ ಸಂಗತಿಯನ್ನು ನೆರೆಹೊರೆಯವರು ತಿಳಿಸಿದ್ದಾರೆ.
ಇದನ್ನೂ ಓದಿ : https://vijayatimes.com/facts-of-eyes-tears/
ಬುಧವಾರ ಪ್ರತಾಪ್ ಪುರದಲ್ಲಿರುವ ತಮ್ಮ ಫಾರ್ಮ್‌ಹೌಸ್‌ಗೆ ಅಮಿತ್ ತನ್ನ ನಾಯಿಯೊಂದಿಗೆ ವಾಕಿಂಗ್‌ಗೆ ತೆರಳಿದ ಸಮಯದಲ್ಲಿ,
ದೈತ್ಯ ವಿಷಕಾರಿ ಹಾವು ಎಂದೇ ಕರೆಯಲ್ಪಡುವ ರಸ್ಸೆಲ್ಸ್ ವೈಪರ್(Russells Viper) ತನ್ನ ಮಾಲೀಕನ ಕಡೆಗೆ ಬರುತ್ತಿರುವುದನ್ನು ನಾಯಿ ಗಮನಿಸಿದೆ. ಅದು ಮಾಲಿಕ ಅಮಿತ್‌ಗೆ ತಿಳಿದಿಲ್ಲ.
ತನ್ನ ಪ್ರೀತಿಯ ಮಾಲಿಕನಿಗೆ ನಿಷ್ಠನಾಗಿದ್ದ ಗಬ್ಬರ್ ಅಮಿತ್‌ನನ್ನು ರಕ್ಷಿಸಲು ತಕ್ಷಣವೇ ಹಾವಿನ ಮೇಲೆ ದಾಳಿ ಮಾಡಿದೆ. ಕೆಲ ಕಾಲ ಹಾವಿನೊಂದಿಗೆ ಕಾಳಗ ನಡೆಸಿದ ಗಬ್ಬರ್,
ವಿಷಪೂರಿತ ಹಾವನ್ನು ಎರಡು ತುಂಡುಗಳಾಗಿ ಕಚ್ಚಿ ಕೊಂದು ಹಾಕುವಲ್ಲಿ ಯಶಸ್ವಿಯಾಗಿದೆ. ಆದ್ರೆ, ಕಾಳಗದ ಮಧ್ಯೆ ಮಂಡಲ ಹಾವಿನ ವಿಷ ಗಬ್ಬರ್ ದೇಹದೊಳಗೆ ಹರಡಿದ್ದರಿಂದ,
ಇದನ್ನೂ ಓದಿ : https://vijayatimes.com/health-tips-for-lungs/
ಹಾವನ್ನು ಕೊಂದ ಕೆಲ ನಿಮಿಷಗಳಲ್ಲೇ ಗಬ್ಬರ್ ಪ್ರಾಣ ಕಳೆದುಕೊಂಡಿದೆ. ತನಗಾಗಿ ಪ್ರಾಣವನ್ನೇ ತ್ಯಾಗ ಮಾಡಿದ ಪ್ರೀತಿಯ ಸಾಕು ಶ್ವಾನ ಗಬ್ಬರ್ ಅನ್ನು ನೆನೆದು ಅಮಿತ್ ಹಾಗೂ ಆತನ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.