ಪ್ರಪಂಚದಲ್ಲಿ ಮನುಷ್ಯನಷ್ಟೇ ಬುದ್ದಿಯನ್ನು ಹೊಂದಿರುವ ಪ್ರಾಣಿಗಳಲ್ಲಿ ಡಾಲ್ಫಿನ್(Dolphin) ಕೂಡ ಒಂದು. ಈ ಪ್ರಾಣಿಗಳು ಮನುಷ್ಯನ ಮಾತುಗಳನ್ನು ಸೂಕ್ಷ್ಮವಾಗಿ, ವೇಗವಾಗಿ ಅರ್ಥ ಮಾಡಿಕೊಳ್ಳುತ್ತವೆ.

ನೀರಿನಲ್ಲಿ ವಾಸಿಸುವ ಪ್ರಾಣಿಗಳಲ್ಲಿ ಪಳಗಿಸಬಹುದಾದ ಪ್ರಾಣಿ ಅಂದ್ರೆ ಡಾಲ್ಫಿನ್. ಇವು ತುಂಬಾ ಚುರುಕಾಗಿರುವ ಪ್ರಾಣಿಗಳು ಮತ್ತು ಮಾನವನ ಮಾತನ್ನು ಬೇಗ ಅರ್ಥೈಸುವ ಗುಣವನ್ನು ಹೊಂದಿರುವ ವಿಶಿಷ್ಟವಾದ ಪ್ರಾಣಿಗಳು ಅಂತಾನೇ ಹೇಳಬಹುದು. ಇವುಗಳ ಮತ್ತೊಂದು ವಿಶಿಷ್ಟವಾದ ಗುಣ ಅಂದ್ರೆ, ಇವುಗಳು ಎರಡೂ ಕಣ್ಣನ್ನು ಮುಚ್ಚಿ ಮಲಗುವುದಿಲ್ಲ. ಶತ್ರುವಿನಿಂದ ರಕ್ಷಣೆ ಪಡೆಯಲು ಒಂದು ಕಣ್ಣನ್ನು ಯಾವಾಗ್ಲೂ ತೆರೆದುಕೊಂಡು ಮಲಗುತ್ತವೆ, ಹಾಗೇ ನಿದ್ರೆ ಮಾಡಿಕೊಂಡೆ ಈಜುತ್ತವೆ.
ಡಾಲ್ಫಿನ್ಗಳು ಎಷ್ಟು ಚುರುಕು ಪ್ರಾಣಿಯೋ ಅಷ್ಟೇ ಮುಗ್ದ. ಇವುಗಳಿಗೆ ಬೇಸರವಾದರೆ ಮನುಷ್ಯನಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತವೆಯಂತೆ! ಹೌದು, ಇವು ಖಿನ್ನತೆಗೊಳಗಾದರೆ, ಆಹಾರ ಸೇವಿಸದೆ, ಸಮುದ್ರ ಬಂಡೆಗಳಿಗೆ ತಲೆಚಚ್ಚಿಕೊಂಡು ಅಥವಾ ಸಮುದ್ರ ತಟದಲ್ಲಿರುವ ಮಣ್ಣು ತಿಂದು ಆತ್ಮಹತ್ಯೆ ಮಾಡಿಕೊಳ್ಳುತ್ತವೆಯಂತೆ. ಮೇಲ್ನೋಟಕ್ಕೆ ಇಂತಹದೊಂದು ವಿಚಾರ ನಂಬಲು ಆಸಾಧ್ಯ ಅಂತ ಅನಿಸಿದರು, ಸಂಶೋಧನೆಯಿಂದ ಬಹಿರಂಗವಾಗಿದೆ. ವಿಕ್ ಸಿಂಪ್ಸನ್ (ಯುರೋಪಿಯನ್ ವೈಲ್ಡ್ ಲೈಫ್ ಅಸೋಸಿಯೇಷನ್) ಈ ಸಂಗತಿಯನ್ನು ಪ್ರಕಟಿಸಿದೆ.

ಇತ್ತೀಚೆಗೆ ಸೌತ್ ಕಾರ್ನ್ವೆಲ್ ನಲ್ಲಿರುವ ಸಮುದ್ರತಟದಲ್ಲಿ ಸಾವನಪ್ಪಿರುವ 26 ಡಾಲ್ಫಿನ್ಗಳು ಸಿಕ್ಕಿದ್ದವು. ಇವುಗಳನ್ನು ಮರಣೋತ್ತರ ಪರೀಕ್ಷೆ ನಡೆಸಿದಾಗ ಡಾಲ್ಫಿನ್ಗಳು ಆತ್ಮಹತ್ಯೆ ಮಾಡಿಕೊಂಡಿವೆ ಎಂದು ತಿಳಿದುಬಂದಿದೆ. ಇನ್ನು ನೀರೊಳಗಿನ ಸಮಸ್ಯೆಯಿಂದ ಡಾಲ್ಪಿನ್ಗಳು ಆತ್ಮಹತ್ಯೆ ಮಾಡಿಕೊಂಡಿರಬಹುದು. ಸತ್ತಿರುವ ಡಾಲ್ಪಿನ್ ಹೊಟ್ಟೆಯಲ್ಲಿ ಮಣ್ಣುಗಳು ಶೇಖರಣೆಯಾಗಿದ್ದವು ಎಂದು ಸಂಶೋಧನಾ ತಂಡ ತಿಳಿಸಿದೆ. ಡಾಲ್ಫಿನ್ಗಳು ಇದ್ದ ಸಮುದ್ರದಲ್ಲಿ ಸಬ್ಮೆರಿನ್ ನೌಕೆ ಚಲಿಸುತ್ತಿತ್ತಂತೆ.

ಹಾಗಾಗಿ ಇದರಿಂದಾಗಿ ಡಾಲ್ಫಿನ್ಗಳಿಗೆ ಜೀವಿಸಲು ತೊಂದರೆ ಯಾಗಿರಬಹುದೆಂದು ಕೆಲವರು ಹೇಳುತ್ತಾರೆ. ಆದ್ರೆ, ಸಂಶೋಧನೆಯ ಬಳಿಕ ಇದಕ್ಕೆ ಸರಿಯಾದ ಉತ್ತರ ದೊರಕಿದ್ದು, ಅವು ಕೂಡ ಮಾನಸಿಕ ಖಿನ್ನತೆಗೆ ಒಳಪಟ್ಟು ಸಾವನ್ನಪುತ್ತವೆ ಎಂದು. ಒಟ್ಟಾರೆ ಮಾನವರಂತೆ ಭಾವನೆಗಳ ವೈಪರಿತ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಾಣಿಗಳು ಇರುತ್ತವೆ ಅಂದ್ರೆ ನಿಜಕ್ಕೂ ಆಶ್ಚರ್ಯವೇ ಅಲ್ವಾ?
- ಪವಿತ್ರ ಸಚಿನ್