ಅಮೆರಿಕ ಮಧ್ಯಂತರ (Dominance of Indians in US Elections) ಚುನಾವಣೆ
ಅಮೆರಿಕ ಚುನಾವಣಾ ಅಖಾಡದಲ್ಲಿ ಭಾರತೀಯರ ಹವಾ
ವಿವೇಕ್ ರಾಮಸ್ವಾಮಿ ಸೇರಿ ಹಲವು ದೇಸಿ ನಾಯಕರ ಕಣಕ್ಕೆ
Washington : ಅಮೆರಿಕದ ಮಧ್ಯಂತರ ಚುನಾವಣೆ ಕಣ ಈ ಬಾರಿ ಭಾರತೀಯ (Dominance of Indians in US Elections) ಮೂಲದ ಅಭ್ಯರ್ಥಿಗಳ ಸ್ಪರ್ಧೆಯಿಂದ ವಿಶೇಷ ಗಮನ ಸೆಳೆಯುತ್ತಿದೆ.
ನವೆಂಬರ್ 3ರಂದು ನಡೆದ ಚುನಾವಣೆಯಲ್ಲಿ ವಿವಿಧ ರಾಜ್ಯಗಳಿಂದ ಭಾರತೀಯ ಮೂಲದ ಹಲವು ನಾಯಕರು ಪ್ರಮುಖ ಹುದ್ದೆಗಳಿಗಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಓಹಿಯೋ ಗವರ್ನರ್ ಸ್ಥಾನದಿಂದ ಹಿಡಿದು ಅಮೆರಿಕದ ಕಾಂಗ್ರೆಸ್ ಹಾಗೂ ನ್ಯೂಯಾರ್ಕ್ ಅಟಾರ್ನಿ ಜನರಲ್ (Attorney General) ಹುದ್ದೆಯವರೆಗೆ ಭಾರತೀಯ ಮೂಲದ ಅಭ್ಯರ್ಥಿಗಳು ತಮ್ಮ ರಾಜಕೀಯ ಸಾಮರ್ಥ್ಯ ಪ್ರದರ್ಶಿಸಲು ಸಜ್ಜಾಗಿದ್ದಾರೆ.
ಅಮೆರಿಕದ ರಾಜಕೀಯದಲ್ಲಿ ಭಾರತೀಯ ಮೂಲದವರ ಪ್ರಾತಿನಿಧ್ಯ ಹೆಚ್ಚುತ್ತಿರುವ ನಡುವೆಯೇ ಈ ಚುನಾವಣೆ ಮಹತ್ವ ಪಡೆದುಕೊಂಡಿದೆ. ವಿಶೇಷವಾಗಿ ರಿಪಬ್ಲಿಕನ್
ಪಕ್ಷದ ವಿವೇಕ್ ರಾಮಸ್ವಾಮಿ (Vivek Ramaswamy) ಅವರ ಸ್ಪರ್ಧೆ ರಾಜಕೀಯ ವಲಯದಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದೆ.
ಈ ಬಾರಿಯ ಚುನಾವಣೆಯಲ್ಲಿ ಪ್ರಮುಖವಾಗಿ ಗಮನ ಸೆಳೆಯುತ್ತಿರುವುದು ಓಹಿಯೋ (Ohio) ಗವರ್ನರ್ ಹುದ್ದೆಯ ಸ್ಪರ್ಧೆ. 2024ರಲ್ಲಿ ರಿಪಬ್ಲಿಕನ್ ಪಕ್ಷದ
ಅಧ್ಯಕ್ಷೀಯ ಅಭ್ಯರ್ಥಿಯಾಗಲು ಪ್ರಯತ್ನಿಸಿದ್ದ ಭಾರತೀಯ ಮೂಲದ ನಾಯಕ ವಿವೇಕ್ ರಾಮಸ್ವಾಮಿ ಇದೀಗ ಗವರ್ನರ್ ಸ್ಥಾನಕ್ಕಾಗಿ ಕಣಕ್ಕಿಳಿದಿದ್ದಾರೆ.
ಅವರು ಡೆಮಾಕ್ರಟಿಕ್ ಪಕ್ಷದ ಆಮಿ ಆಕ್ಟನ್ (Amy Acton) ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಗುರುತಿಸಿಕೊಂಡಿರುವ ವಿವೇಕ್ ರಾಮಸ್ವಾಮಿ ಅವರಿಗೆ ಈ ಚುನಾವಣೆ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ.
ಮತ್ತೊಂದೆಡೆ, ಭಾರತೀಯ ಮೂಲದ ನಾಲ್ವರು ಡೆಮಾಕ್ರಟಿಕ್ ನಾಯಕರು ಕೂಡ ತಮ್ಮ ಹಾಲಿ ಸ್ಥಾನಗಳನ್ನು ಉಳಿಸಿಕೊಳ್ಳಲು ಮರುಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ.
ರೋ ಖನ್ನಾ, ಪ್ರಮೀಳಾ ಜಯಪಾಲ್ (Pramila Jayapal) , ಅಮಿ ಬೇರಾ ಹಾಗೂ ಸುಹಾಸ್ ಸುಬ್ರಮಣ್ಯಂ ಅವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ಗೆ (House of Representatives) ಮರು ಆಯ್ಕೆಯಾಗುವ ಗುರಿ ಹೊಂದಿದ್ದಾರೆ.
ಇನ್ನು ಈ ಬಾರಿಯ ಚುನಾವಣೆಯಲ್ಲಿ ಭಾರತೀಯ ಮೂಲದ ಅಭ್ಯರ್ಥಿಗಳ ನಡುವೆಯೇ ನೇರ ಹಣಾಹಣಿಯೂ ನಡೆಯುತ್ತಿದೆ. ಕ್ಯಾಲಿಫೋರ್ನಿಯಾದಲ್ಲಿ (California)
ರಿಪಬ್ಲಿಕನ್ ಪಕ್ಷದ ರಿತೇಶ್ ಟಂಡನ್ (Ritesh Tandon) ಅವರು ಹಾಲಿ ಡೆಮೋಕ್ರಾಟಿಕ್ ಸಂಸದ ರೋ ಖನ್ನಾ ಅವರನ್ನು ಎದುರಿಸುತ್ತಿದ್ದಾರೆ.
ವಾಷಿಂಗ್ಟನ್ ರಾಜ್ಯದಲ್ಲಿ ರಿಪಬ್ಲಿಕನ್ ಅಭ್ಯರ್ಥಿ ನೀರವ್ ಶೇತ್ (Nirav Sheth) ಅವರು ಪ್ರಮೀಳಾ ಜಯಪಾಲ್ ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ಇದೇ ವೇಳೆ
ಅರಿಜೋನಾದ ಮೊದಲ ಕಾಂಗ್ರೆಷನಲ್ ಜಿಲ್ಲೆಯಲ್ಲಿ ಡೆಮೋಕ್ರಾಟ್ ಅಮಿಶ್ ಶಾ (Democrat Amish Shah) ಅವರು ರಿಪಬ್ಲಿಕನ್ ಅಭ್ಯರ್ಥಿ ಜೇ ಫೀಲಿ ವಿರುದ್ಧ ಕಣದಲ್ಲಿದ್ದಾರೆ.
ಫ್ಲೋರಿಡಾದ 22ನೇ ಕಾಂಗ್ರೆಷನಲ್ ಜಿಲ್ಲೆಯಲ್ಲಿ ಪಿಯಾ ದಾಂಡಿಯಾ ಅವರು ರಿಪಬ್ಲಿಕನ್ ಅಭ್ಯರ್ಥಿ ಕೇಸಿ ಆಸ್ಕರ್ (Casey Oscar) ಅವರನ್ನು ಎದುರಿಸುತ್ತಿದ್ದಾರೆ.
ಹೀಗೆ ವಿವಿಧ ರಾಜ್ಯಗಳಲ್ಲಿ ಭಾರತೀಯ ಮೂಲದ ನಾಯಕರು ಬೇರೆ ಬೇರೆ ಪಕ್ಷಗಳ ಮೂಲಕ ರಾಜಕೀಯ ಪೈಪೋಟಿಗೆ ಇಳಿದಿದ್ದಾರೆ.
ನ್ಯೂಯಾರ್ಕ್‌ನ ಅಟಾರ್ನಿ ಜನರಲ್ ಹುದ್ದೆಯ ಸ್ಪರ್ಧೆಯೂ ಕುತೂಹಲ ಮೂಡಿಸಿದೆ. ರಿಪಬ್ಲಿಕನ್ ಅಭ್ಯರ್ಥಿ ಸರಿತಾ ಕೋಮತಿ ರೆಡ್ಡಿ (Sarita Komati Reddy) ಅವರು ಹಾಲಿ ಡೆಮೋಕ್ರಾಟಿಕ್ ಅಟಾರ್ನಿ ಜನರಲ್ ಲೆಟಿಟಿಯಾ ಜೇಮ್ಸ್ (Letitia James) ವಿರುದ್ಧ ಸ್ಪರ್ಧಿಸುತ್ತಿದ್ದಾರೆ.
ವಿಶೇಷವೆಂದರೆ, ಸರಿತಾ ಕೋಮತಿ ರೆಡ್ಡಿ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಬೆಂಬಲ ಮತ್ತು ಅನುಮೋದನೆ ದೊರೆತಿದೆ.
ಮತ್ತೊಂದೆಡೆ, ಭಾರತೀಯ ಮೂಲದ ಅಮೆರಿಕನ್ನರ ಮತದಾನದ ಒಲವು ಡೆಮೋಕ್ರಾಟಿಕ್ ಅಭ್ಯರ್ಥಿಗಳ ಕಡೆ ಹೆಚ್ಚಿರುವುದಾಗಿ ಸಮೀಕ್ಷೆಯೊಂದು ಸೂಚಿಸಿದೆ.
ಅಮೆರಿಕದ ಹೌಸ್ ಚುನಾವಣೆಯಲ್ಲಿ ಶೇ.66ರಷ್ಟು ಭಾರತೀಯ-ಅಮೆರಿಕನ್ನರು ಡೆಮೋಕ್ರಾಟಿಕ್ ಅಭ್ಯರ್ಥಿಗಳಿಗೆ ಆದ್ಯತೆ ನೀಡಿದ್ದರೆ, ಶೇ.18ರಷ್ಟು ಮಂದಿ ರಿಪಬ್ಲಿಕನ್ ಅಭ್ಯರ್ಥಿಗಳನ್ನು
ಬೆಂಬಲಿಸಿದ್ದಾರೆ ಎಂದು ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಒಟ್ಟಾರೆಯಾಗಿ, ಈ ಮಧ್ಯಂತರ ಚುನಾವಣೆ ಅಮೆರಿಕದ ರಾಜಕೀಯ ಭವಿಷ್ಯ ನಿರ್ಧರಿಸುವ ಪ್ರಮುಖ ಘಟ್ಟವಾಗಿದೆ.
ಹಣದುಬ್ಬರ, ಉದ್ಯೋಗಾವಕಾಶಗಳು, ಆರೋಗ್ಯ ಸೇವೆ ಮತ್ತು ಶಿಕ್ಷಣದಂತಹ ವಿಚಾರಗಳು ಮತದಾರರ ಚರ್ಚೆಯಲ್ಲಿ ಪ್ರಮುಖ ಸ್ಥಾನ ಪಡೆದಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಅವರ ಆಡಳಿತಾವಧಿಯ ಕೊನೆಯ ಎರಡು ವರ್ಷಗಳಲ್ಲಿ ಕಾಂಗ್ರೆಸ್‌ನ ನಿಯಂತ್ರಣ ಯಾರ ಕೈ ಸೇರಲಿದೆ ಎಂಬುದನ್ನು ಈ ಚುನಾವಣೆ ನಿರ್ಧರಿಸಲಿದೆ.
ಭಾರತೀಯ ಮೂಲದ ಅಭ್ಯರ್ಥಿಗಳ ಪಾಲಿಗೆ ಇದು ಕೇವಲ ವೈಯಕ್ತಿಕ ಗೆಲುವಿನ ಪ್ರಶ್ನೆಯಲ್ಲ; ಅಮೆರಿಕದ ಆಡಳಿತ ವ್ಯವಸ್ಥೆಯಲ್ಲಿ ಭಾರತೀಯ ಸಮುದಾಯದ ರಾಜಕೀಯ ಪ್ರಾತಿನಿಧ್ಯ ಮತ್ತು ಪ್ರಭಾವ ಎಷ್ಟರ ಮಟ್ಟಿಗೆ ಹೆಚ್ಚಲಿದೆ ಎಂಬುದರ ಪರೀಕ್ಷೆಯೂ ಹೌದು.
ಹೀಗಾಗಿ ಅಮೆರಿಕದ ಚುನಾವಣಾ ಕಣದಲ್ಲಿ ಭಾರತೀಯ ಮೂಲದ ನಾಯಕರ ಸಾಧನೆ ಹಾಗೂ ಫಲಿತಾಂಶದ ಮೇಲೆ ಜಗತ್ತಿನ ಗಮನ ನೆಟ್ಟಿದೆ.