ಸ್ಮಾರ್ಟ್ ಮೀಟರ್ ಹೆಸರಲ್ಲಿ ಸಾಮಾನ್ಯರ ಸುಲಿಗೆಗಿಳಿದ BESCOM
ಬೆಸ್ಕಾಂ ಹೊಸ ವಿದ್ಯುತ್ ಸಂಪರ್ಕಕ್ಕೆ ಸ್ಮಾರ್ಟ್ ಮೀಟರ್ ಕಡ್ಡಾಯ !(Double hike in electricity)
ಇನ್ಮುಂದೆ ವಿದ್ಯುತ್ ಸಂಪರ್ಕ ದುಬಾರಿ, ನಿರ್ವಹಣಾ ಶುಲ್ಕದ ಹೊರೆಯೂ ಹೆಚ್ಚು
Bengaluru: ಈಗಾಗಲೇ ಬೆಲೆ ಏರಿಕೆಯಿಂದ ಕಂಗೆಟ್ಟಿದ್ದ ಜನತೆಗೆ BESCOM ಗಾಯದ ಮೇಲೆ ಬರೆ ಎಳೆಯ ಹೊರಟಿದೆ. ಕೆಲ ದಿನಗಳ ಹಿಂದಷ್ಟೇ ಬೆಸ್ಕಾಂ (ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ) ಸಂಸ್ಥೆ ತನ್ನ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ಹೊಸ ವಿದ್ಯುತ್ ಸಂಪರ್ಕ ಪಡೆಯಲು ಸ್ಮಾರ್ಟ್ ಮೀಟರ್ (Smart meter) ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ.
ವಿವಿಧ ದರ ಏರಿಕೆಗಳಿಂದ ತತ್ತರಿಸಿರುವ ಸಾರ್ವಜನಿಕರಿಗೆ ಇದೀಗ ವಿದ್ಯುತ್ ಮೀಟರ್ ದರ ಶೇ.400 ರಿಂದ ಶೇ.800 ರಷ್ಟು ಏರಿಕೆ ಮಾಡಿ ಬಿಗ್ ಶಾಕ್ ನೀಡಿದೆ. ಜನವರಿ 15 ರಿಂದ ಬೆಸ್ಕಾಂ (BESCOM) ವ್ಯಾಪ್ತಿಯಲ್ಲಿ ತೆಗೆದುಕೊಳ್ಳುವ ಎಲ್ಲಾ ತಾತ್ಕಾಲಿಕ ವಿದ್ಯುತ್ ಸಂಪರ್ಕಕ್ಕೂ ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ (Prepaid Smart Meter) ಕಡ್ಡಾಯಗೊಳಿಸಲಾಗಿದೆ.
ಇನ್ನು ಹೊಸ ಕಾಯಂ ಸಂಪರ್ಕಕ್ಕೂ ಸ್ಮಾರ್ಟ್ ಮೀಟರ್ ಕಡ್ಡಾಯಗೊಳಿಸಿದ್ದು, ಪ್ರಿಪೇಯ್ಡ್ ಅಥವಾ ಪೋಸ್ಟ್ ಪೇಯ್ಡ್ (Post Paid) ಎಂಬ ಆಯ್ಕೆಯನ್ನು ಸಹಾ ನೀಡಿದೆ.ಇನ್ನು ಸಾಮಾನ್ಯ ಮೀಟರ್‌ಗಿಂತ ಹೊಸ ಮೀಟರ್ ಶೇ.400 ರಿಂದ 800 ರಷ್ಟು ದುಬಾರಿಯಾಗಿದ್ದು, ಜನಸಾಮಾನ್ಯರು ವಿದ್ಯುತ್ ಸಂಪರ್ಕ (Electrical connection) ಪಡೆಯುವುದೇ ಕಷ್ಟವಾಗಿದೆ.

ಈ ಮೊದಲು ಸಿಂಗಲ್ ಫೇಸ್‌ನ ಒಂದು ಸಾಮಾನ್ಯ ಮೀಟರ್ ಬೆಲೆ ಕೇವಲ 980 ರು. ಇತ್ತು. ಇದೀಗ ಸಿಂಗಲ್ ಫೇಸ್ ಸ್ಮಾರ್ಟ್ ಮೀಟರ್‌ಗೆ ಜಿಎಸ್ಟಿ ಸೇರಿ 4,998 ರು. ಪಾವತಿಸಬೇಕಾದ ಅನಿವಾರ್ಯತೆ ಎದುರಾಗಿದೆ.ಇನ್ನು 2450 ರು.ಗೆ ಸಿಗುತ್ತಿದ್ದ ಎಸ್‌ಪಿ-2 ಮೀಟರ್‌ಗೆ ಇದೀಗ ಸ್ಮಾರ್ಟ್ ಮೀಟರ್ ರೂಪದಲ್ಲಿ 8,880 ರು. ತೆರಬೇಕಾಗಿದೆ. (Double hike in electricity) ಕೇವಲ 3,450 ರು. ಇದ್ದ 3ಫೇಸ್ ಮೀಟರ್‌ಗೆ ಬರೋಬ್ಬರಿ 28,080 ರು. ಪಾವತಿಸಬೇಕಾಗಿದೆ.
ಇದರಿಂದ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಾವಣಗೆರೆ, ಚಿತ್ರದುರ್ಗ, ರಾಮನಗರ ಭಾಗದ ಗ್ರಾಮೀಣ ಭಾಗದ ಜನರಿಗೆ (Rural people) ಏ.1ರಿಂದ ಅನ್ವಯವಾಗುವ ವಿದ್ಯುತ್ ದರ ಏರಿಕೆ ಶಾಕ್‌ಗೆ ಮೊದಲೇ ಹೊಸ ಶಾಕ್ ನೀಡಿದೆ.]
ಇದನ್ನು ಓದಿ: ಬೇಸಿಗೆ ಮುಗಿಯುವವರೆಗೆ ಬೆಂಗಳೂರು ನಗರದಲ್ಲಿ ಬೋರ್‌ವೆಲ್ ಕೊರೆಸುವಂತಿಲ್ಲ: ಜಲಮಂಡಳಿ ವಾರ್ನಿಂಗ್
ಇನ್ನು ಸ್ಮಾರ್ಟ್ ಮೀಟರ್ ನಿರ್ವಹಣೆ ಬಗ್ಗೆ ಬೆಸ್ಕಾಂ ಮಾರ್ಗಸೂಚಿ (Guideline) ಹೊರಡಿಸಿದ್ದು, ಪ್ರಿಪೇಯ್ಡ್ ಗ್ರಾಹಕರು ಕನಿಷ್ಠ 100 ರು. ಅಥವಾ ಒಂದು ವಾರದ ಸರಾಸರಿ ಬಳಕೆಗೆ ಸಮಾನವಾದ ಮೊತ್ತವನ್ನು ಕನಿಷ್ಠ ರಿಚಾರ್ಜ್ ಮಾಡಿಸಬೇಕು. ಗರಿಷ್ಠ ರಿಚಾರ್ಜ್‌ಗೆ ಯಾವುದೇ ಮಿತಿ ಇರುವುದಿಲ್ಲ. ಇದಲ್ಲದೆ ಮಾಸಿಕ ನಿಗದಿತ ಶುಲ್ಕವನ್ನು ತಿಂಗಳ ಮೊದಲ ದಿನವೇ ಕಡಿತ ಮಾಡಲಾಗುತ್ತದೆ.
ಬ್ಯಾಲೆನ್ಸ್ ಶೂನ್ಯವಾದರೆ (balance is zero) ಸಂಪರ್ಕ ಕಡಿತಗೊಳಿಸಲಾಗುತ್ತದೆ.ಈ ಬಗ್ಗೆ ಅಲರ್ಟ್ ಕೊಡಿಸಿ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆ ನಡುವೆಯೇ ವಿದ್ಯುತ್ ಸಂಪರ್ಕ ಕಟ್ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹೀಗಾಗಿ ಎಎಂಐ ಸಾಫ್ಟ್‌ವೇರ್ ಮೂಲಕವೇ ಬೆಸ್ಕಾಂ ಸಂಪರ್ಕ ಕಡಿತ ಮಾಡಲಿದೆ. ಹಾಗಾಗಿ ಸ್ಮಾರ್ಟ್ ಮೀಟರ್‌ಗೆ ಜನಸಾಮಾನ್ಯರಿಂದಲೂ ದುಬಾರಿ ಮೊತ್ತ ವಸೂಲಿ ಮಾಡುವ ಬೆಸ್ಕಾಂ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.