ತಂದೆ ಮತ್ತು ಪ್ರೇಯಸಿಯ ಕೊಲೆಗೆ ಬಿಗ್ ಟ್ವಿಸ್ಟ್‌ !

  ಮೈಸೂರು: ಮೈಸೂರಿನ ಹೊರವಲಯದಲ್ಲಿ ಜೋಡಿ ಕೊಲೆಯಾಗಿದೆ. ಮಗನಿಂದಲೇ ತಂದೆ ಮತ್ತು ತಂದೆಯ ಪ್ರೇಯಸಿ ಕೊಲೆ ನಡೆದ ಘಟನೆ ಮೈಸೂರಿನ ಶ್ರೀನಗರದಲ್ಲಿ ನಡೆದಿದೆ.

ಕೆ.ಜಿ ಕೊಪ್ಪಲು ನಿವಾಸಿ ಶಿವಪ್ರಕಾಶ್ (56) ಮತ್ತು ಶ್ರೀನಗರದ ನಿವಾಸಿ ಲತಾ (48) ಕೊಲೆಯಾದವರು. ಕೊಲೆಗೈದ ಆರೋಪಿ ಸಾಗರ್ ನಾಪತ್ತೆಯಾಗಿದ್ದಾನೆ. ಲತಾ ಮನೆಗೆ ನುಗ್ಗಿದ್ದ ಸಾಗರ್ ಮಚ್ಚಿನಿಂದ ಬರ್ಬರವಾಗಿ ಹತ್ಯೆ ನಡೆಸಿದ್ದಾನೆ. ಮೊದಲು ತಂದೆಯನ್ನು ಕೊಲೆ ಮಾಡಿದ ಸಾಗರ್ ನಂತರ ಲತಾಳಿಗೆ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆಗೈದಿದ್ದಾನೆ. ಲತಾ ಮೇಲೆ ಹಲ್ಲೆ ನಡೆಸುವಾಗ  ಆಕೆಯ ಪುತ್ರ ನಾಗಾರ್ಜುನ್ ಗೂ ಗಾಯಗಳಾಗಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುಮಾರು 56 ವರ್ಷ ಪ್ರಾಯಾದ ವ್ಯಕ್ತಿಯ ಹೆಸರು ಶಿವಪ್ರಕಾಶ್ ಅಲಿಯಾಸ್ ಸೀಮೆಎಣ್ಣೆ ಪ್ರಕಾಶ ಮೈಸೂರಿನ ಕನ್ನೇಗೌಡನಕೊಪ್ಪಲು ನಿವಾಸಿ. ಟ್ರಾವಲ್ಸ್ ಉದ್ಯಮಿಯಾದ ಪ್ರಕಾಶ್‌ನನ್ನು ಆತನ ಮಗ ಸಾಗರ್ ಕೊಲೆ ಮಾಡಿದ್ದಾನೆ. ಕೊಲೆಗೆ ತಂದೆಯ ಅನೈತಿಕ ಸಂಬಂಧ ಕಾರಣ ಎನ್ನಲಾಗುತ್ತಿದ್ದರೂ, ದುಶ್ಚಟಗಳಿಗೆ ಬಲಿಯಾಗಿದ್ದ ಮಗ ಹಣಕ್ಕಾಗಿ ಪೀಡಿಸಿ ತಂದೆಯನ್ನು ಕೊಂದಿದ್ದಾನೆ ಎನ್ನಲಾಗುತ್ತಿದೆ. ಗುರುವಾರ ರಾತ್ರಿ 9.30ರ ಸಮಯದಲ್ಲಿ ಕೊಲೆ ನಡೆದಿದ್ದು, ತಂದೆ ಮತ್ತೊಬ್ಬ ಮಹಿಳೆಯ ಮನೆಯಲ್ಲಿ ಉಳಿದುಕೊಂಡಿದ್ದ ಸಂದರ್ಭದಲ್ಲಿ ಕೊಲೆ ಮಾಡಲಾಗಿದೆ.

ಶಿವಪ್ರಕಾಶ್‌ಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಒಬ್ಬಳು ಮಗಳು ಹಾಗೂ ಮತ್ತೊಬ್ಬ ಮಗ ಸಾಗರ್. ಸಾಕಷ್ಟು ಹಣವಂತನಾಗಿದ್ದ ಶಿವಪ್ರಕಾಶ್ ಕಳೆದ 20 ವರ್ಷಗಳಿಂದ ಲತಾ ಮತ್ತೊಬ್ಬ ಮಹಿಳೆ ಜೊತೆ ಸಂಬಂಧ ಬೆಳೆಸಿದ್ದ. ಲತಾ ಮೂಲತಃ ಹೆಚ್‌ಡಿ.ಕೋಟೆ ತಾಲೂಕು ಹೊಸಳ್ಳಿ ಗ್ರಾಮದವಳು. ಲತಾ ಗಂಡ ನಾಗರಾಜು ಈಗ ಕೊಲೆ ಆಗಿರುವ ಶಿವಪ್ರಕಾಶ್ ಬಳಿ ಕಾರು ಚಾಲಕನಾಗಿದ್ದ. ಆಗಿಂದಲೂ ಶಿವಪ್ರಕಾಶ್ ನಾಗರಾಜು ಮನೆಗೆ ಬಂದು ಹೋಗುವ ಪರಿಪಾಠ ಬೆಳೆಸಿಕೊಂಡಿದ್ದಾನೆ. 20 ವರ್ಷಗಳ ಹಿಂದೆಯೇ ಲತಾ ಗಂಡ ನಾಗರಾಜು ಅನಾರೋಗ್ಯದಿಂದ ಸಾವನ್ನಪ್ಪಿದ್ದ. ನಾಗರಾಜು ಸಾವನ್ನಪ್ಪಿದ ನಂತ ಲತಾ ಹಾಗೂ ಶಿವಪ್ರಕಾಶ್ ಒಟ್ಟಿಗೆ ದಿನ ಕಳೆಯಲು ಆರಂಭಿಸಿದ್ದಾರೆ. ಈಗಾಗಿ ಹೆಚ್‌.ಡಿ.ಕೋಟೆಯ ಹೊಸಳ್ಳಿಯಲ್ಲಿ ಲತಾ ಕುಟುಂಬವನ್ನು ಮೈಸೂರಿಗೆ ತಂದು ಇರಿಸಿದ್ದ ಶಿವಪ್ರಕಾಶ್.

ತಂದೆ ಮೇಲೆ ಮಗ ಸಿಟ್ಟಾಗಲು ಹಣಕಾಸಿನ ವಿಚಾರವೂ ಕಾರಣ ಎನ್ನಲಾಗಿದೆ. ಶಿವಪ್ರಕಾಶ್ ಮಗ ಸಾಗರ್ ಜೂಜಾಟದ ಚಟಕ್ಕೆ ಬಲಿಯಾಗಿದ್ದ ಎನ್ನಲಾಗಿದೆ. ಐಪಿಲ್ ದಂದೆಯಲ್ಲಿ ಸುಮಾರು‌ 70 ಲಕ್ಷ ಹಣ ಸಾಲ ಮಾಡಿಕೊಂಡಿದ್ದನಂತೆ. ಆದರೆ ತಂದೆ ಶಿವಪ್ರಕಾಶ್ ಮಗನ ಈ ಸಾಲವನ್ನೂ ಇತ್ತೀಚೆಗೆ ತೀರಿಸಿದ್ದ. ಸಾಲ ತೀರಿಸಿದ ನಂತರವೂ ಮಗ ಹಣಕ್ಕಾಗಿ ಪದೇ ಪದೇ ತಂದೆಯನ್ನು ಪೀಡಿಸುತ್ತಿದ್ದನಂತೆ. ಈ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲ ನನಗೆ ಸೇರಬೇಕಾದ ಹಣವನ್ನೆಲೆ ನೀನು ಬೇರೆಯವರಿಗೆ ಸುರಿಯುತ್ತಿದ್ದೀಯೆ ಎಂದು ದೊಡ್ಡ ಗಲಾಟೆ ಮಾಡುತ್ತಿದ್ದನಂತೆ. ರಾತ್ರಿಯೂ ಇದೇ ಗಲಾಟೆ ವಿಕೋಪಕ್ಕೆ ತಿರುಗಿ ತಂದೆ ಹಾಗೂ ಆತನ ಪ್ರೇಯಸಿಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಸಾಗರ್ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. 

Latest News

ಮಾಹಿತಿ

ITR ಸಲ್ಲಿಕೆ ಗಡುವು ಜುಲೈ 31 ಅಂತ್ಯ ; ದಂಡ ಶುಲ್ಕವಿಲ್ಲದೆ ಯಾರೆಲ್ಲಾ ITR ಸಲ್ಲಿಸಬಹುದು ಗೊತ್ತಾ?

ಗಡುವು ಮುಗಿದರೂ ಯಾರೆಲ್ಲ ದಂಡ ಶುಲ್ಕವಿಲ್ಲದೆ ಐಟಿಆರ್‌ ಸಲ್ಲಿಸಬಹುದು, ಇದಕ್ಕೆ ಸಂಬಂಧಿಸಿದಂತೆ ನಿಯಮ ಏನು ಹೇಳುತ್ತದೆ ಎನ್ನುವ ವಿವರ ಇಲ್ಲಿದೆ. ಮುಂದೆ ಓದಿ,

ದೇಶ-ವಿದೇಶ

“ನನ್ನ ಮಕ್ಕಳಿಗೆ ಆಹಾರ ನೀಡಬೇಕೇ? ಅಥವಾ ಅವರನ್ನು ಕೊಲ್ಲಬೇಕೇ?”: ಬೆಲೆ ಏರಿಕೆ ಬಗ್ಗೆ ಪಾಕ್ ಮಹಿಳೆ ಆಕ್ರೋಶ!

ನನ್ನ ಮಕ್ಕಳಿಗೆ ಹಾಲು ಮತ್ತು ಔಷಧಿಗಳನ್ನು ಖರೀದಿಸುವುದು, ನನ್ನ ಮಕ್ಕಳಿಗೆ ಆಹಾರ ನೀಡುವುದು ಯಾವುದು ನನ್ನಿಂದ ಸಾಧ್ಯವಾಗುತ್ತಿಲ್ಲ.

ಮಾಹಿತಿ

ಬುದ್ದಿವಂತರು ಜಗಳವನ್ನು ಹೇಗೆ ತಪ್ಪಿಸುತ್ತಾರೆ ಗೊತ್ತೇ? ; ಈ ಅಚ್ಚರಿ ಮಾಹಿತಿ ಓದಿ

ಕೆಟ್ಟ ವಾಗ್ವಾದವನ್ನು ತಡೆಯುವುದು ಹೇಗೆ ಮತ್ತು ಅದನ್ನು ಸರಿಯಾಗಿ ರೀತಿಯಲ್ಲಿ ಹೇಗೆ ನಿಭಾಯಿಸಬಹುದು ಎನ್ನುವುದಕ್ಕಾಗಿ ಕೆಲವು ಉಪಾಯಗಳು ಇಲ್ಲಿವೆ ನೋಡಿ.

ರಾಜಕೀಯ

ನಿತೀಶ್‌ ಕುಮಾರ್‌ ಪ್ರಧಾನಿಯಾಗುವ ಭ್ರಮೆಯಲ್ಲಿದ್ದಾರೆ, ಅದಕ್ಕಾಗಿ ವಿಪಕ್ಷಗಳ ಕೂಟ ಸೇರಿದ್ದಾರೆ : ಬಿಜೆಪಿ

ಇದು ‘ಆಯಾ ರಾಮ್, ಗಯಾ ರಾಮ್ʼ ಕಾಯಿಲೆಗೆ ಉದಾಹರಣೆ. ಹಡಗು ಜಿಗಿದು ದಾಖಲೆ ನಿರ್ಮಿಸಿದ್ದಾರೆ. ಅವರು ಉನ್ನತ ಕುರ್ಚಿಗೆ ಹಾತೊರೆಯುತ್ತಿದ್ದಾರೆ.