ಬೆಂಗಳೂರು ಸೆ 2 : ನಗರದ ಹೊರವಲಯದ ಆನೇಕಲ್ ಸಮೀಪ ಜೋಡಿ ಕೊಲೆಯಾಗಿದ್ದು, ಈ ಕೊಲೆಯಿಂದ ಪಟ್ಟಣವೇ ಬೆಚ್ಚಿಬಿದ್ದಿದೆ. ಕುಡಿದ ಮತ್ತಿನಲ್ಲಿ ಇಬ್ಬರನ್ನು ಮಾರಕಾಸ್ತ್ರಗಳು ಮತ್ತು ದೊಣ್ಣೆಯಿಂದ ಬಡಿದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ ತಾಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿಂಗಸಂದ್ರದ ಖಾಲಿ ನಿವೇಶನದಲ್ಲಿ ನಡೆದಿದೆ. ಕೊಲೆಯಾಗಿರುವವರು ಯಾರುಎಂಬ ಬಗ್ಗೆ ಇನ್ನೂ ಸುಳಿವು ಸಿಕ್ಕಿಲ್ಲ.
ಕೊಲೆಯಾದವರನ್ನು ಉತ್ತರ ಭಾರತ ಮೂಲದ ಕೂಲಿ ಕಾರ್ಮಿಕರು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತದೇಹಗಳು ಪತ್ತೆಯಾಗಿರುವ ಸ್ಥಳದಲ್ಲಿ ಮದ್ಯದ ಬಾಟಲಿಗಳು ದೊರೆತಿವೆ. ಹೀಗಾಗಿ ಕೊಲೆಯಾದವರ ಜತೆ ಕುಡಿದು ಪಾರ್ಟಿ ಮಾಡಿದ ಸ್ನೇಹಿತರೇ ಈ ಜೋಡಿ ಕೊಲೆ ಮಾಡಿರಬಹುದು ಎಂಬ ಗುಮಾನಿ ಮೇರೆಗೆ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಘಟನಾ ಸ್ಥಳಕ್ಕೆ ಐಜಿಪಿ ಚಂದ್ರಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.